ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಮತ್ತು ಯುನೈಟೆಡ್ ಕಿಂಗ್‌ಡಂನ ಬ್ರಾಡ್‌ಫೋರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ‘ರೀಸೆಂಟ್ ಅಡ್ವಾನ್ಸಸ್ ಇನ್ ಬಯೋ-ನ್ಯಾನೋ ಕಾಂಪೋಸೈಟ್ಸ್ ಫಾರ್ ಎನಾನ್ಸಿಂಗ್ ಹ್ಯುಮನ್ ಹೆಲ್ತ್’ (ಆರ್‌ಎಬಿಎನ್‌ಹೆಚ್24ಜಿಯುಕೆ) ವಿಷಯ ಕುರಿತು ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನವನ್ನು ಜ. 8 ಮತ್ತು 9, 2024 ರಂದು ಜ್ಞಾನಗಂಗಾ ಆವರಣದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲು ಪೂರ್ವ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.
ಕಾರ್ಯಸೌಧದ ರಾಧಾಕೃಷ್ಣ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಸಮ್ಮೇಳನದ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿ ಈ ಸಮ್ಮೇಳನವು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಹಾಗೂ ಬ್ರಿಟಿಷ್ ಕೌನ್ಸಿಲನ ಜ್ಞಾನ ನಾಯಕತ್ವದಲ್ಲಿ ಭಾರತೀಯ ಮೈಕ್ರೋಬಯಲಾಜಿಸ್ಟ್ ಸೊಸೈಟಿ, ಅಸೋಸೊಯೇಷನ್ ಆಪ್ ಮೈಕ್ರೋಬಯಲಾಜಿಸ್ಟ್ ಆಪ್ ಇಂಡಿಯಾ ಮತ್ತು ಭಾರತೀಯ ಬಯೋಟೆಕ್ ರೀಸರ್ಚ್ ಸೊಸೈಟಿಯ ಜ್ಞಾನ ಪ್ರಚಾರಕತ್ವದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಹಾಗೂ ಬ್ರಾಡ್‌ಫೋರ್ಡ್ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಸಿರ್ಲೆ ಕಂಡೋನ್ ಮುಖ್ಯ ಪೋಷಕತ್ವದಲ್ಲಿ ಜರುಗಲಿದೆ.
ಈ ಎರಡು ವಿಶ್ವವಿದ್ಯಾಲಯಗಳು ಬೋಧನೆ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳಲ್ಲಿ ಹೊಸ ಹೆಜ್ಜೆಗೆ ಮುನ್ನಡಿ ಬರೆಯಲಿದೆ. ಆಧುನಿಕತೆಯ ನಾಗಲೋಟದಲ್ಲಿ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳು ಮನುಕುಲವನ್ನು ಬಾಧಿಸುತ್ತಿವೆ. ಔಷಧಗಳ ವಿಪರೀತ ಬಳಕೆಯಿಂದ ಅಡ್ಡಪರಿಣಾಮ ಉಂಟಾಗಿ ದೈಹಿಕ ಸಾಮರ್ಥ್ಯ ಕುಸಿಯುತ್ತಿದೆ. ಮಾನವನ ಆರೋಗ್ಯದಲ್ಲಿ ಉಂಟಾಗುತ್ತಿರುವ ಅಡ್ಡ ಪರಿಣಾಮಗಳನ್ನು ತಡೆದು ಮನುಕುಲದ ಆರೋಗ್ಯ ಸಂರಕ್ಷಣೆಗೆ ಬಯೋ-ನ್ಯಾನೋ ಸಂಯೋಜಿತ ಕ್ಷೇತ್ರದಲ್ಲಿನ ಅವಿಷ್ಕಾರಗಳನ್ನು ಮುಕ್ತವಾಗಿ ಸಮಾಜಕ್ಕೆ ತಲುಪಿಸುವುದು ಈ ಅಂತರಾಷ್ಟ್ರೀಯ ಸಮ್ಮೇಳನದ ಉದ್ದೇಶವಾಗಿದೆ ಎಂದರು.
ಜಗತ್ತಿನ ಶ್ರೇಷ್ಠ ವಿಜ್ಞಾನಿಗಳು, ಸಂಶೋಧಕರು, ವೈದ್ಯರು, ಔಷಧ ಉತ್ಪಾದಕರು ಮತ್ತು ಮಾರಾಟಗಾರರು, ತಂತ್ರಜ್ಞರು ಸೇರದಂತೆ ಯುವ ಸಂಶೋಧಕರು ಭಾಗವಹಿಸಿ ಮಾನವವ ಆರೋಗ್ಯ ಮತ್ತು ಕ್ಷೇಮಾಭಿವೃದ್ದಿಗೆ ಅಗತ್ಯವಿರುವ ಸತ್ಯ ಸಂಗತಿಗಳನ್ನು ಪ್ರತಿಪಾದಿಸಲಿದ್ದಾರೆ, ಜಗತ್ತಿನ ಪ್ರಮುಖ ವಿಜ್ಞಾನಿಗಳು ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. ಸಮ್ಮೇಳನ ಯಸಸ್ವಿಯಾಗಿ ಆಯೋಜಿಸಲು 12 ಉಪಸಮಿತಿಗಳನ್ನು ರಚಿಸಲಾಗಿದ್ದು, ಸಮಿತಿಗಳ ಸಂಚಾಲಕರು, ಸದಸ್ಯರು ಈಗಾಗಲೇ ಪೂರ್ವಸಿದ್ಧತೆಗಳನ್ನು ಪೂರೈಸುತ್ತಿದ್ದಾರೆ ಎಂದರು.
ಅಂತರಾಷ್ಟ್ರೀಯ ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಹಾಗೂ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಜಿ. ಎಂ. ವಿದ್ಯಾಸಾಗರ ಮಾತನಾಡಿ “ಸಸ್ಯ ಮತ್ತು ಸೂಕ್ಷ್ಮಜೀವಿಯ ಅಣುಗಳ ಪರಿಶೋಧನೆ ಮತ್ತು ಮಾನವ ಯೋಗಕ್ಷೇಮಕ್ಕಾಗಿ ಜೈವಿಕ-ನ್ಯಾನೊ ಸಂಯೋಜನೆಗಳ ವಿನ್ಯಾಸ” ಸಮ್ಮೇಳನದ ಪ್ರಮುಖ ವಿಷಯವಾಗಿದ್ದು, ಮಾನವನಿಗೆ ಜೈವಿಕ ಅಣುಗಳು ಮತ್ತು ನ್ಯಾನೊ ವಸ್ತು ಸಂಯೋಜನೆಗಳ ಉದಯೋನ್ಮುಖ ತಂತ್ರಜ್ಞಾನಗಳು ಎಂಬ ಉಪ ವಿಷಯಗಳಲ್ಲಿ – ಸೂಕ್ಷ್ಮಜೀವಿಯ ಸೋಂಕುಗಳು, ಕ್ಯಾನ್ಸರ್ ಮತ್ತು ಚರ್ಮದ ಆರೈಕೆ, ಟಿಶ್ಯೂ ಇಂಜಿನಿಯರಿಂಗ್ ಮತ್ತು ದುರಸ್ತಿ, ಮಧುಮೇಹ ಮತ್ತು ಇತರ ಕಾಯಿಲೆಗಳು ವಿಷಯಗಳನ್ನು ಕುರಿತ ವೈಜ್ಞಾನಿಕ ಸಂಶೊಧನಾ ಉಪಕ್ರಮಗಳನ್ನು ಒಳಗೊಂಡಂತೆ ಮುಖ್ಯ ಭಾಷಣ, ಉಪ ವಿಷಯಗಳನ್ನು ಒಳಗೊಂಡ ತಾಂತ್ರಿಕ ಗೋಷ್ಠಿಗಳಲ್ಲಿ ಸಮಗ್ರ ಪ್ರಸ್ತುತಿ, ಪ್ರಮುಖ ಉಪನ್ಯಾಸಗಳು ಮತ್ತು ಮೌಖಿಕ ಪ್ರಸ್ತುತಿಗಳನ್ನು ಒಳಗೊಂಡಿದ್ದು ನಾಲ್ಕು ಉಪ ವಿಷಯಗಳ ಮೇಲೆ ಪ್ರಬಂಧ ಮಂಡನೆಯಾಗಲಿವೆ ಎಂದರು.
ಕಾರ್ಯಕ್ರಮದಲ್ಲಿ ಕುಲಸಚಿವ ಡಾ.ಬಿ. ಶರಣಪ್ಪ, ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ಧಮ್ಮ ಪ್ರಕಾಶ್, ವಿಜ್ಞಾನ ತಂತ್ರಜ್ಞಾನ ನಿಕಾಯದ ಡೀನ್ ಪ್ರೊ. ಕೆ. ಲಿಂಗಪ್ಪ, ಶಿಕ್ಷಣ ನಿಕಾಯದ ಡೀನ್ ಪ್ರೊ. ಬಾಬಣ್ಣ ಹೂವಿನಬಾವಿ, ವಾಣಿಜ್ಯ ಮತ್ತು ನಿರ್ವಹಣ ನಿಕಾಯದ ಡೀನ್ ಪ್ರೊ. ಬಿ. ವಿಜಯ್, ಕಾನೂನು ನಿಕಾಯದ ಡೀನ್ ಪ್ರೊ. ದೇವಿದಾಸ ಮಾಲೆ, ಪ್ರೊ. ಆರ್. ಎಲ್. ರಾಯಬಾಗಕರ್, ಗ್ರಂಥಪಾಲಕ ಡಾ. ಸುರೇಸ್ ಜಂಗೆ, ಡಾ. ಆನಂದ ನಾಯಕ್ ಉಪಸ್ಥಿತರಿದ್ದರು.
ಸಮ್ಮೇಳನದ ವಿವರಗಳಿಗಾಗಿ https://tiny.cc/rabneh24guk ಅಥವಾ ಗುಲಬರ್ಗಾ ವಿಶ್ವವಿದ್ಯಾಲಯದ www.gug.ac.in ವೆಬ್ ಸೈಟ್ ಭೇಟಿ ನೀಡಬಹುದು. ಹೆಚ್ಚಿನ ವಿವರಗಳಿಗಾಗಿ ಸಮ್ಮೇಳನದ ಸಂಘಟನಾ ಕಾರ್ಯದರ್ಶಿಗಳಾದ ಡಾ. ಜಿ.ಎಂ. ವಿದ್ಯಾಸಾಗರ್, ಸಸ್ಯಶಾಸ್ತ್ರ ವಿಭಾಗ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ, ಕರ್ನಾಟಕ, ಭಾರತ. ಇಮೇಲ್: rabneh24guk@gmail.com
ಮೊಬೈಲ್ ನಂಬರ್ :+ 91 9449258812, ಸ್ಥಳ: ಗುಲಬರ್ಗಾ ವಿಶ್ವವಿದ್ಯಾಲಯ, ಡಾ. ಬಿ. ಆರ್. ಅಂಬೇಡ್ಕರ್ ಭವನ, ಜ್ಞಾನ ಗಂಗಾ ಕ್ಯಾಂಪಸ್, ಕಲಬುರಗಿ-585106, ಕರ್ನಾಟಕ – ಭಾರತ. ಹಾಗೂ ಡಾ. ಎಸ್.ಎ. ಬೆಹ್ರುಜ್ ಖಘಾನಿ ಬಯೋಮೆಡಿಕಲ್ ಎಂಜಿನಿಯರಿಂಗ್ ಮತ್ತು ರಿಜೆನೆರೇಟಿವ್ ಮೆಡಿಸಿನ್ ಸ್ಕೂಲ್ ಆಫ್ ಇಂಜಿನಿಯರಿಂಗ್, ಬ್ರಾಡ್‌ಫೋರ್ಡ್ ವಿಶ್ವವಿದ್ಯಾಲಯ ಬ್ರಾಡ್‌ಫೋರ್ಡ್ -BD7 1DP ಯುನೈಟೆಡ್ ಕಿಂಗ್‌ಡಮ್, ಇಮೇಲ್: s.khaghani@bradford.ac.uk
ಸಮ್ಮೇಳನದಲ್ಲಿ ಭಾಗವಹಿಸುವ ಜಗತ್ತಿನ ಆಹ್ವಾನಿತ ಪ್ರಮುಖ ವಿಜ್ಞಾನಿಗಳು : ಯುನೈಟೆಡ್ ಕಿಂಗ್‌ಡಮ್ ಬ್ರಾಡ್‌ಫೋರ್ಡ್ ವಿಶ್ವವಿದ್ಯಾಲಯದ ಡಾ. ಮಾರಿಯಾ ಕಟ್ಸಿಕೋಗಿಯಾನಿ, ಮಲೇಷಿಯಾದ ಯುನಿವರ್ಷಿಟಿ ಆಪ್ ತನ್ ಹುಸೈನ್ ಒನ ವಿಶ್ವವಿದ್ಯಾಲಯದ ಡಾ. ಸೂನ್ ಚಿನ್ ಫಾಂಗ್, ಅಜೆಂಟೈನ ನ್ಯಾಸನಲ್ ಯುನಿವರ್ಸಿಟಿ ಆಪ್ ಸಾನ ಮಾರ್ಟಿನ ಸ್ಕೂಲ್ ಆಪ್ ಸೈನ್ಸ್ ಅಂಡ್ ಟೆಕ್ನಾಲಜಿಯ ಡಾ.ಎಲಿ. ಬಿ. ಹೆರ್ಮಿಡಾ, ನೆದರಲ್ಯಾಂಡಿನ ಹಡ್ಸನ್ ರಿವರ್ ಬಯೋಟೆಕ್ನಾಲಜಿಯ ಡಾ.ವಿ. ಪ್ರಸಾದ್, ಯುಕೆ ಬ್ರಾಡಫೋರ್ಡ್ನ ಡಾ. ಎಸ್. ಎ. ಬೆಹ್ರುಜ್, ಬಾಂಗ್ಲಾದೇಶದ ಯುನಿವರ್ಸಿಟಿ ಆಪ್ ರಾಜಶಾಹಿಯ ಡಾ. ವಿವಿಕ್ ಸುಶಾನಹ ರಿಟ, ಟರ್ಕಿಯ ಮಾರಿಷನ್ ಯುನಿವರ್ಸಿಟಿಯ ಡಾ.ಅಟಾ ಓಝಿಸಿಮೆನ್, ಅರ್ಜೆಂಟೈನ್ ನ್ಯಾಸನಲ್ ಯುನಿವರ್ಸಿಟಿ ಆಪ್ ಸಾನ ಮಾರ್ಟಿನನ ಡಾ. ಮರ್ಷೆಡಸ್ ಪೆರೆಜ್ ರೆಕಾಲ್ಡೆ, ಟರ್ಕಿಯ ಡಾ. ಟುರನ್ ಕೋಕ್, ಶ್ರೀಲಂಕಾದ ಡಾ. ಜೆ.ಕೆ. ದಿಸ್ಸನಾಯಕೆ, ಹರಿಯಾಣದ ಡಾ. ರಾಂಜೇಂದ್ರ ಪ್ರಸಾದ, ಮಹಾರಾಷ್ಟ್ರದ ಡಾ. ಎಂ. ವಿ. ದೇಶಪಾಂಡೆ, ಕರ್ನೂಲನ ಡಾ. ಡಿ.ವಿ.ಆರ್. ಸಾಯಿಗೋಪಾಲ್, ಉತ್ತರಪ್ರದೇಶದ ಡಾ. ಅಬ್ಸಾರ್ ಅಹಮದ್, ಕಾಶ್ಮೀರದ ಡಾ. ಎ. ರವೀಂದ್ರನಾಥ್ ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…