ಚಿತ್ತಾಪುರ; ಹೂವಿನ ವ್ಯಾಪಾರಿ ಯುವಕನನ್ನು ಕೊಲೆಗೈದು, ಪೆಟ್ರೋಲ್ ಹಾಕಿ ಶವ ಸುಟ್ಟು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಚಿತ್ತಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ತಾಪುರ ಪಟ್ಟಣದ ಆಸೀಫ್ ಗಂಜ್ ನಿವಾಸಿಗಳಾದ ಆಸೀಫ್ ಪಾಶಾ ಸೈಯದ್ ಪಾಶಾ (21), ಬಾಬುಮೀಯಾ ಮಹೇಬೂಬ ಸಾಬ್ ಕೋಟಿ (20), ಅಲ್ತಾಫಶಾ ಗುಲಾಮಶಾ (23), ಮಹ್ಮದ್ ಕೈಫ್ ಶೇಖ ಸಲೀಂ ಮಾಸೂಲದಾರ (22) ಆರೋಪಿಗಳನ್ನು ಬಂದಿಸಲಾಗಿದೆ.
ಶುಕ್ರವಾರ ಚಿತ್ತಾಪೂರ ಪಟ್ಟಣದ ಆಶ್ರಯ ಕಾಲೋನಿಯ ಫಾರೇಸ್ಟ ಆಫೀಸ್ ಸಮೀಪ ಇರುವ ಇಂಡಸ್ಟ್ರೀಯಲ್ ಏರಿಯಾದ ಖುಲ್ಲಾ ಜಾಗದಲ್ಲಿ ದಾವಲಸಾಬ್ ಮಹ್ಮದ್ ಶರೀಫ್ ಗುಲ್ಫರೋಷ್ (23) ಕೊಲೆಗೈದು, ಪೆಟ್ರೋಲ್ ಹಾಕಿ ಶವ ಸುಟ್ಟು ಹಾಕಿದರು.
ಪ್ರಕರಣದ ಕುರಿತು ಕಾರ್ಯಚರಣೆ ನಡೆಸಿದ ಎಸ್ಪಿ ಅಡ್ಡೂರು ಶ್ರೀನಿವಾಸಲು ಮಾರ್ಗದರ್ಶನದಲ್ಲಿ ಶಹಾಬಾದ ಉಪಾಧೀಕ್ಷಕರ ಶೀಲವಂತ ಅವರ ನೇತೃತ್ವದಲ್ಲಿ ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್’ಐ ಶ್ರೀಶೈಲ್ ಅಂಬಾಟಿ, ಸಿಬ್ಬಂದಿಗಳಾದ ಲಾಲಹ್ಮದ್, ಚಂದ್ರಶೇಖರ, ನಾಗೇಂದ್ರ, ರಾಜಕುಮಾರ, ಷಣ್ಮೂಖ, ವೀರಭದ್ರ, ಮಂಜುನಾಥ, ಹುಸೇನ್ ಪಾಶಾ, ಮುಕ್ತುಂ ಪಟೇಲ್, ಅಯ್ಯಣ್ಣ, ಬಲರಾಮ ಅವರ ನೇತೃತ್ವದ ತಂಡವು ನಾಲ್ವರು ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಎರಡು ಬೈಕ್’ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮೃತ ದಾವಲಸಾಬ ಆಸೀಫನ ತಂಗಿಗೆ ಚುಡಾಯಿಸುವದು, ನೋಡುವದು ಮಾತನಾಡಿಸುವದು ಮಾಡುತ್ತಿದ್ದ, ಹಲವು ಬಾರಿ ಬುದ್ದಿವಾದ ಹೇಳಿದರು ಸಹ ಆತನು ಅದೇ ಚಾಳಿ ಮುಂದುವರೆಯಿಸಿದ್ದರಿಂದ ಅದೇ ವೈ ಮನಸ್ಸಿನಿಂದ ಆರೋಪಿತರೆಲ್ಲರೂ ಕೊಲೆ ಮಾಡಿ ತಲೆ ಮೇಲೆ ಪರ್ಸಿಕಲ್ಲಿನಿಂದ ಹೊಡೆದು ಸಾಕ್ಷಿ ಸಿಗದಂತೆ ಪೇಟ್ರೊಲ್ ದಿಂದ ಬೆಂಕಿ ಹಚ್ಚಿ ಸುಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಈ ಸಂದರ್ಭದಲ್ಲಿ ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್’ಐ ಶ್ರೀಶೈಲ್ ಅಂಬಾಟಿ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…