ಬಿಸಿ ಬಿಸಿ ಸುದ್ದಿ

ಅಯೋಧ್ಯೆಯಿಂದ ಬಂದ ಅಕ್ಷತಾಕಲಶ ವಿತರಣಾ ಕಾರ್ಯಕ್ರಮ

ಶಹಾಬಾದ: ದೇಶ, ಧರ್ಮ, ಸಂಸ್ಕøತಿ ವಿಷಯ ಬಂದಾಗ ಅದಕ್ಕಾಗಿ ಕಂಕಣ ಬದ್ಧರಾಗಿ ನಿಲ್ಲಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ರಾವೂರ ಗ್ರಾಮದ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು ಹೇಳಿದರು.

ಅವರು ಗುರುವಾರ ನಗರದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಜ.22 ರಂದು ನಡೆಯಲಿರುವ ಅಯೋಧ್ಯೆಯ ಶ್ರೀರಾಮ ಪ್ರಾಣ ಪ್ರತಿμÁ್ಠಪನೆ ಹಿನ್ನೆಲೆಯಲ್ಲಿ ಅಯೋಧ್ಯೆಯಿಂದ ಬಂದ ಅಕ್ಷತಾ ಕಳಶ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಮರಾಜ್ಯ ಸ್ಥಾಪನೆಯ ಪೂರಕವಾಗಿ ಅಯೊಧ್ಯೆಯಲ್ಲಿ ರಾಮಮಂದಿರವು ಸ್ಥಾಪಿತವಾಗುತ್ತಿದೆ, ಬಹು ವರ್ಷದ ಬಳಿಕ ನಮ್ಮ ಹಿಂದೂ ಸಮಾಜದ ಬಹುವರ್ಷದ ಕನಸು ನನಸಾಗುತ್ತಿದೆ. ರಾಷ್ಟ್ರಕ್ಕಾಗಿ ಏನಾದರೂ ಮಾಡಲು ಸಿದ್ಧರಿದ್ದೇವೆ ಎಂದು ವಿಶ್ವಕ್ಕೆ ತೋರಿಸಿಕೊಡಬೇಕಾಗಿದೆ. ದೇಶ, ಧರ್ಮ, ಸಂಸ್ಕøತಿ ವಿಷಯ ಬಂದಾಗ ಕಂಕಣ ಬದ್ಧರಾಗಿ ನಿಲ್ಲಬೇಕು.ಈ ಹಿಂದಿನ ಹಲವರ ತ್ಯಾಗದ ಫಲವಾಗಿ ಇಂದು ನಮ್ಮ ಯೋಗವಾಗಿದೆ. ಅಯೊಧ್ಯೆಯಂದು ಪ್ರತಿμÁ್ಟಪನೆಯ ಕಾರ್ಯಕ್ರಮಕ್ಕೆ ಶಾರೀರಿಕವಾಗಿ ತಲುಪಸಲು ಮಾನಸಿಕವಾಗಿ ಆಧ್ಯಾತ್ಮಿಕವಾಗಿ ತಲುಪಲು ಪ್ರತಿ ಮನೆಗೆ ಅಕ್ಷತೆ ತಲುಪಿಸುವ ಕಾರ್ಯ ನಡೆಯಲಿ ಎಂದರು.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಜಿಲ್ಲಾ ಸಂಯೋಜಕರಾದ ಪ್ರಹ್ಲಾದ ವಿಶ್ವಕರ್ಮ ಮಾತನಾಡಿ, ಜನವರಿಯಲ್ಲಿ ರಾಮಮಂದಿರ ಲೋಕಾರ್ಪಣೆಯ ಸಮಾರಂಭ ಜರುಗಲಿದ್ದು ಆ ನಿಮಿತ್ತ ಕಳೆದ ಹಲವಾರು ದಿನಗಳಿಂದ ಅಕ್ಷತ ಪೂಜೆ’ಯೊಂದಿಗೆ ಆಚರಣೆಗಳು ಪ್ರಾರಂಭವಾಗಿವೆ. ಸುಮಾರು ಕ್ವಿಂಟಾಲ್ ಅಕ್ಕಿಯನ್ನು ಅರಿಶಿನ ಮತ್ತು ದೇಸಿ ತುಪ್ಪದೊಂದಿಗೆ ಬೆರೆಸಿ ದೇವಾಲಯದಲ್ಲಿ ‘ಅಕ್ಷತ ಪೂಜೆ’ ನಡೆಸಲಾಗಿದೆ, ಪ್ರತಿμÁ್ಠಪನೆಯ ದಿನದಂದು ಸಂಜೆ ಐದು ಎಣ್ಣೆಯ ದೀಪವನ್ನು ಬೆಳಗಿಸುವಂತೆ ಪ್ರತಿಯೊಬ್ಬ ಹಿಂದೂ ಹಾಗೂ ರಾಮ ಭಕ್ತರಿಗೆ ಮನವಿ ಬೆಳಿಗ್ಗೆ ಭಾರತ ಚೌಕ ಹನುಮಾನ ಮಂದಿರದಿಂದ ಪಲ್ಲಕ್ಕಿ ಉತ್ಸವ, ರಾಮ ಜಪ, ಭಜನೆ ಕೀರ್ತನೆ, ಸಂಕೀರ್ತನ ಯಾತ್ರೆಯಲ್ಲಿ ವಿಎಚಪಿಯ ಸದಸ್ಯರು ಮತ್ತು ರಾಮ ಭಕ್ತರು ಭವ್ಯ ಮೆರವಣಿಗೆ ಮೂಲಕ ಶ್ರೀರಾಮ ಚೌಕನವರೆಗೆ ಅಕ್ಷತಾ ಕಳಸ ಯಾತ್ರೆ ನಡೆಯಿತು.

ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷ ಕನಕಪ್ಪ ದಂಡಗುಲಕರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಜರಂಗದಳದ ಜಿಲ್ಲಾ ಸಂಯೋಜಕ ಅಜಯ ಬಿದರಿ ಪ್ರಸ್ತಾವಿಕವಾಗಿ ಮಾತನಾಡಿದರು, ಶರಣು ವಸ್ತ್ರದ್ ನಿರೂಪಿಸಿದರು, ಬಸವರಾಜ ಬಿರಾದಾರ ವಂದಿಸಿದರು.

ಗಣ್ಯರಾದ ರಾಜೇಶ ವರ್ಮ, ಅನಿಲ ಹಿಬಾರೆ, ಸಿದ್ದರಾಮ ಕುಸಾಳೆ, ಅರುಣ ಪಟ್ಟಣಕರ, ಭೀಮರಾವ ಸಾಳುಂಕೆ, ಚಂದ್ರಕಾಂತ ಗೊಬ್ಬುರ, ಬಸವರಾಜ ಸಾತ್ಯಾಳ, ಮೋಹನ ಗಂಟ್ಲಿ, ಶರಣಬಸಪ್ಪ ನಂದಿ, ಸಾಯ್ಬಣ್ಣ ಬೆಳಗುಂಪಿ, ರಾಜು ಕೋಬಾಳ, ಸತೀಶ ರ್ಯಾಪನೂರ, ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

9 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

19 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

19 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

19 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago