ಬಿಸಿ ಬಿಸಿ ಸುದ್ದಿ

ಕಲಬುರಗಿ ಕುರಹಿನಶೆಟ್ಟಿ ಸಮಾಜದಿಂದ ಕ್ಯಾಲೆಂಡರ್ ಲೋಕಾರ್ಪಣೆ

ಕಲಬುರಗಿ: ನೇಕಾರ ಸಮುದಾಯಗಳಲ್ಲಿ ಒಂದಾದ ಜಿಲ್ಲಾ ಕುರಹಿನಶೆಟ್ಟಿ ಸಮಾಜದ ವತಿಯಿಂದ ಹಮ್ಮಿಕೊಂಡ ಸಪ್ತ ನೇಕಾರರಲ್ಲಿ ಒಂದು ಜನಾಂಗವಾದ (ಮೂಲ ರುದ್ರಸಾಲಿ)  2024ನೇ ಸಾಲಿನ ವರ್ಷದ ತೂಗು ದಿನದರ್ಶಿಕೆ (ಕ್ಯಾಲೆಂಡರ್) ಲೋಕಾರ್ಪಣೆ ಕಾರ್ಯಕ್ರಮ ಜರುಗಿತು.

ಜಿಲ್ಲಾ ಕುರಹಿನಶೆಟ್ಟಿ ಸಮಾಜದ ಮುಖ್ಯ ಕಾರ್ಯಲಯದ ಆವರಣದಲ್ಲಿ ಹಾಕಿದ ಮಂಟಪದಲ್ಲಿ  31 ರಂದು ಬೆಳ್ಳೆಗ್ಗೆ 11.30 ರಿಂದ ಮಧ್ಯಾಹ್ನ 1 ರವರೆಗೆ ಗಾಜಿಪೂರ್ ನ ಎಸ್.ಎಸ್ ರಾಜಪೂರ್ ಸಂಕೀರ್ಣದ ಆವರಣದಲ್ಲಿ, ಗದ್ದುಗೆ ಮಠದ ಶ್ರೀ ಚರಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ,  ಬಿಜೆಪಿಯ ರಾಜ್ಯ ಕಾರ್ಯದರ್ಶಿ ಹಾಗೂ ಗ್ರಾಮೀಣ ಮತ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮುಡು ರವರ ಪ್ರತಿನಿಧಿಯಾಗಿ ಪಾಲಗೊಂಡದರು.

ಈ ವೇಳೆಯಲ್ಲಿ ಗೋರಕನಾಥ  ಮಾತನಾಡಿ ಮಾನವನ ಮಾನ ಮುಚ್ಚುವ ಸಮುದಾಯದ ಬಗ್ಗೆ ನಮಗೆ ಅತಿಯಾದ ಕಾಳಜಿ ಇದೆ, ರೈತರ ಸಮುದಾಯಕ್ಕೆ ನೀಡುವ ಗೌರವದಷ್ಟೇ ನೇಕಾರರ ಕುರಿತು ಕಳಕಳಿ ವಹಿಸಬೇಕು ಎಂದು ನಮ್ಮ ಬಿಜೆಪಿ ಪಕ್ಷದ ನಿಲುವು ಹೊಂದಿರುವ ಕಾರಣವೇ ನಾನು ಈ ವೇದಿಕೆ ಮೇಲೆ ಇರಲು ಬಿಜೆಪಿಯ ರಾಜ್ಯ ಕಾರ್ಯದರ್ಶಿಗಳ ಸೂಚನೆ ಮುಖ್ಯ ಕಾರಣವಾಗಿದೆ ಎಂದು ಶ್ರೀಗಳ ಉಪಸ್ಥಿತಿಯಲ್ಲಿ 2024ರ ದಿನದರ್ಶಿಕೆ ಲೋಕಾರ್ಪಣೆ ಗೊಳಿಸಲಾಯಿತು.

ಜಿಲ್ಲಾ ಅಧ್ಯಕ್ಷ ಬಸವರಾಜ ಕರದಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಶ್ರೀ ಪ್ರದೀಪ್ ಸಂಗಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಕೇವಲ ರಾಜಕಾರಣಿಗಳ ಮೇಲೆ ಅವಲಂಬಿತರಾಗಿ ಕೂಡದೆ ನಮ್ಮ ಸ್ವಂತ ಬಲದ ಮೇಲೆ ಅಭಿವೃದ್ಧಿ ಹೊಂದಲು ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ್ದ ಶ್ರೀ ಗಳು ಆಶೀರ್ವಚನ ನೀಡುತ್ತಾ ಸ್ವಂತ ಕಾಯಕದಲ್ಲಿ ದುಡಿದು ಸಮಾಜ ಸಂಘಟನೆ ಮಾಡುತ್ತಾ ಉಳಿದ ಸಮಾಜಕ್ಕೆ ಮಾಧರಿ ರೀತಿಯಲ್ಲಿ ಸಮಾಜಕಾರ್ಯ ಮಾಡುತ್ತಾ ಬರುತ್ತಿರುವ ನಿಮ್ಮ ಸಮಾಜ ಸೇವೆ ಸ್ಲಾಘನೀಯ ಎಂದು ತಿಳಿಸಿದರು.

ನೇಕಾರರಲ್ಲಿ ಬಡ ಜನರ ಕಷ್ಟ ಸುಖದಲ್ಲಿ ಭಾಗವಹಿಸುವ ನಿಮ್ಮ ತುಡಿತಕ್ಕೆ ನಮ್ಮ ಬೆಂಬಲ ಸದಾ ಇರುತದೆ ಎಂದು ಆಶೀರ್ವಾದದ ನುಡಿಗಳಾಡಿದರು, ಮೊದಲಿಗೆ ಶ್ರೀಮತಿ ರಾಜಪುರ ವಚನ ಪ್ರಾಥನೆಗೈದರು, ನಿರೂಪಣೆ ಯನ್ನು ಸಮಾಜದ ಉಪಾಧ್ಯಕ್ಷ ಹಾಗೂ ಶಿಕ್ಷಕರಾದ ಶ್ರೀ ಕುಶಾಲ ಯಡವಳ್ಳಿ ಮಾಡಿದರು, ಕೊನೆಯಲ್ಲಿ ನ್ಯಾಯವಾದಿ ಜೇ. ವಿನೋದ ಕುಮಾರ ವಂದಿಸಿದರು.

ಕಾರ್ಯಕ್ರಮದಲ್ಲಿ ದಿನದರ್ಶಿಕೆ ಮುದ್ರಣಕ್ಕೆ ಹಣ ಸಹಾಯ ವಾಡಿದ ದಾನಿಗಳಿಗೆ ಗೌರವಿಸಲಾಯಿತು, ಸಪ್ತ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗಪ್ಪಾ ಅಷ್ಟಗಿ, ಮುನ್ನೋಳ್ಳಿ,(ಸಿಂಫೋನಿ ಖಿexಣiಟe)  ತೊಗಟವೀರ ಅಧ್ಯಕ್ಷ ಶ್ರೀನಿವಾಸ ಬಲಪೂರ್, ಸ್ವಕುಳ ಸಾಲಿಯ ನಾರಾಯಣ ಸಿಂಘಾಡೆ, ದೇವಾಂಗದ ಸಂತೋಷ ಗುರುಮಿಟಕಲ, ಹಣಮಂತ ಕಣ್ಣಿ,  ಜಿಲ್ಲೆಯ ಸಮಸ್ತ ನೇಕಾರ ಸಮುದಾಯದ ಜನರು ಮತ್ತು  ಮಹಾನಗರದ ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು,  ಆಗಮಿಸಿದ ಎಲ್ಲರಿಗೂ ದಿನದರ್ಶಿಕೆ ವಿತರಿಸಲಾಯಿತು.

ಕಾರ್ಯಕ್ರಮ ದಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ಕುರಹಿನಶೆಟ್ಟಿ ಸಮಾಜದ ಪಧಾದಿಕಾರಿಗಳು ಭಾಗವಹಿಸಿ ಕಾರಣ ಕಾರ್ಯಕ್ರಮದ ಕಳೆ ಹೆಚ್ಚಾಗ್ಗಿತ್ತು, ಜಿಲ್ಲಾ ಕುರಹಿನಶೆಟ್ಟಿ ಸಮಾಜದ ಕಾರ್ಯಕಾರಿಣಿ ಸದಸ್ಯರಾದ ಸಾಗರ ನಂದಿ  ಮತ್ತು ಸಮಾಜ ಸೇವಕ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಚಂದ್ರಶೇಖರ್ ಮ್ಯಾಳಗಿ ಯವರ ನೈತೃತ್ವದಲ್ಲಿ ಕಿಕ್ಕಿರಿದ ಜನರಿಂದ ಕಾರ್ಯಕ್ರಮ ಯೇಶಸ್ವಿಯಾಯಿತು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

2 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

13 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

13 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

15 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

15 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

15 hours ago