ಕಲಬುರಗಿ: ಮಾನವನು ಸಂಪಾದಿಸಿದ ದ್ರವ್ಯ ಅಥವಾ ಸಂಪತ್ತು ಕೇವಲ ನಮಗಾಗಿ ಅಲ್ಲ ಅದು ಎಲ್ಲರಿಗೂ ಎಂಬ ತತ್ವದಲ್ಲಿ ವ್ಯಕ್ತಿ ಹಾಗು ಸಮಾಜದ ಕಲ್ಯಾಣ ಅಡಗಿದೆ. ಸಮಾಜದ ಒಳತಿಗಾಗಿ ಹಾಗೂ ಅಭ್ಯುದಯಕ್ಕೆ ಮಾಡಬಹುದಾದ ತ್ಯಾಗ,ದಾನ,ಹಂಚಿಕೆ ಹಾಗೂ ಸಂಪೂರ್ಣ ಶರಣಾಗತಿ ಎಂಬುವುದು ಮಹಾ ದಾಸೋಹದ ಲಕ್ಷಣಗಳು ಎಂದು ಶ್ರೀ ಶರಣಬಸವೇಶ್ವರ ಸಂಸ್ಥಾನದ ಮುಖ್ಯಸ್ಥೆ, ಮಾತೋಶ್ರೀ ಪೂಜ್ಯ ಡಾ ದಾಕ್ಷಾಯಿಣಿ ಎಸ್ ಅಪ್ಪಾ ರವರು ನುಡಿದರು.
ಸುಭಾಶ್ಚಂದ್ರ ಪಾಟೀಲ್ ಜನಕಲ್ಯಾಣ ಸ್ಮಾರಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಪೂಜ್ಯ ಡಾ ಶರಣಬಸವಪ್ಪ ಅಪ್ಪಾ ಜಿ ಯವರಿಗೆ ೨೦೨೩ ಸಾಲಿನ ೭ ನೇ ವರ್ಷದ ರಾಜ್ಯ ಮಟ್ಟದ ಚಿನ್ನದ ಪದಕದೊಂದಿಗೆ ಗೌಡ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಲ್ಯಾಣ ಕರ್ನಾಟಕದ ಕಲಬುರಗಿಯನ್ನು ಕರ್ಮಭೂಮಿಯನ್ನಾಗಿಸಿಕೊಂಡು ವಿಶ್ವಾತ್ಮಕ ನೆಲೆಗಟ್ಟಿನಲ್ಲಿ ಶ್ರೀ ಶರಣಬಸವೇಶ್ವರ ಸಂಸ್ಥಾನವನ್ನು ಬೆಳೆಸಿದ ಕೀರ್ತಿ ಪೂಜ್ಯ ಡಾ.ಶರಣಬಸಪ್ಪ ಅಪ್ಪಾ ರವರಿಗೆ ಸಲ್ಲುತ್ತದೆ ಎಂದು ಜಗದ್ಗುರು ಡಾ ಶ್ರೀ ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಸ್ವಾಮೀಜಿ ರವರು ಗೌಡ ಪ್ರಶಸ್ತಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಉದ್ಯಮಿ ನೀಲಕಂಠರಾವ ಮೂಲಗೆ ವಹಿಸಿದ್ದರು. ಬಸವರಾಜ ದೇಶಮುಖ, ಡಾ.ನೀದೀಶ ನಿಷ್ಠಿ, ಡಾ ಅಲ್ಲಂಪ್ರಭು ದೇಶಮುಖ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಹಾಗೂ ಚಿಂತಕರ ಪ್ರೊ ಯಶವಂತರಾಯ ಅಷ್ಠಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಲಿಂ ಶ್ರೀ ಸುಭಾಶ್ಚಂದ್ರ ಪಾಟೀಲ್ ಜನಕಲ್ಯಾಣ ಸ್ಮಾರಕ ಟ್ರಸ್ಟ್ ನ ಅಧ್ಯಕ್ಷರೂ ಹಾಗೂ ಪತ್ರಕರ್ತ ಶರಣಗೌಡ ಪಾಟೀಲ್ ಪಾಳಾ ಮಾತನಾಡಿದರು.ಈ ಸಂದರ್ಭದಲ್ಲಿ ಸಾಹಿತ್ಯ ಸೇವೆಗಾಗಿ ಹಿರಿಯ ಸಾಹಿತಿ ಧರ್ಮಣ್ಣ ಧನ್ನಿ ಹಾಗೂ ಸಾಮಾಜಿಕ ಸೇವೆಗಾಗಿ ಸುವರ್ಣ ಎಸ್ ಛಪ್ಪರಬಂದಿ ಅವರಿಗೆ ಬೆಳ್ಳಿ ಪದಕದೊಂದಿಗೆ ಗೌಡ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮವನ್ನು ಡಾ ಆನಂದ ಸಿದ್ದಮಣಿ ನಿರೂಪಿಸಿದರು ಡಾ. ಕೆ ಗಿರಿಮಲ್ಲ ವಂದಿಸಿದರು.
ಈ ಸಂದರ್ಭದಲ್ಲಿ ಶರಣಗೌಡ ಪಾಟೀಲ್ ಪಾಳಾ, ಶಿವರಾಜ ಅಂಡಗಿ,ಬಿ ಎಚ್ ನಿರಗೂಡಿ, ಸುರೇಶ್ ನಂದಗಾಂವ, ಶಿವರಾಜ ಶಾಸ್ತ್ರಿ ಹೇರೂರ, ಕಲ್ಯಾಣಕುಮಾರ ಶೀಲವಂತ, ಸಾಹಿತಿ ಕಲ್ಯಾಣರಾವ ಪಾಟೀಲ್ ಶರಣರಾಜ ಛಪ್ಪರಬಂದಿ, ಡಾ ಶರಣಬಸಪ್ಪ ವಡ್ಡನಕೇರಿ, ಅಂಬಾರಾಯ ಕೋಣೆ, ಮಾಲಾ ಕಣ್ಣಿ, ಜಗದೀಶ್ ಮರಪಳ್ಳಿ, ರಾಜೇಂದ್ರ ಝಳಕಿ ಬಸವಂತರಾಯ ಕೋಳಕೂರ್, ಶಿವಯೋಗಿ ಭಜಂತ್ರಿ, ಗುಂಡಪ್ಪ ನಾಟಿಕರ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…