ಬಿಸಿ ಬಿಸಿ ಸುದ್ದಿ

ಶಕುಂತಲಾ ಮನೋಹರ ಹಡಗಲಿ ಸೇವಾ ನಿವೃತ್ತಿ ನಿಮಿತ್ತ ಸನ್ಮಾನ

ಶಹಾಪುರ; ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ರಾಷ್ಟ್ರದ ವಿವಿಧ ಕ್ಷೇತ್ರದಲ್ಲಿಯ ವಿಜ್ಞಾನ, ತಂತ್ರಜ್ಞಾನ ಹಾಗೂ ನೈಪುಣ್ಯತೆಯ ಕೊಡುಗೆ ಶಿಕ್ಷಕರದೇ ಆಗಿದೆ. ಶಿಕ್ಷಕರು ಸಮಾಜ ಪರಿವರ್ತನೆ ಹಾಗೂ ನವರಾಷ್ಟ್ರ ನಿರ್ಮಾಣದ ರೂವಾರಿಗಳಾಗಿದ್ದಾರೆ ಎಂದು ಎನ್ಎಸ್ಎಸ್ ವಿಭಾಗೀಯ ಅಧಿಕಾರಿಗಳಾದ ಡಾ. ಚಂದ್ರಶೇಖರ್ ದೊಡ್ಡಮನಿ  ಹೇಳಿದರು.

ತಾಲೂಕಿನ ಭೀಮರಾಯನಗುಡಿಯಲ್ಲಿ ಕೆಂಭಾವಿ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರಿ ಪ್ರಾಚಾರ್ಯರಾದ ಶಕುಂತಲಾ ಮನೋಹರ ಹಡಗಲಿ ಅವರ ಸೇವಾ ನಿವೃತ್ತಿ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು ಸರಕಾರಿ ಸೇವೆಯಲ್ಲಿ 60 ವರ್ಷಕ್ಕೆ ವಯೋನಿವೃತ್ತಿ ಹೊಂದಿದರೂ ಬದುಕನ್ನು ಮರಳಿ ಅರಳಿಸಿಕೊಂಡು ಸಮಾಜಕ್ಕೆ ದಿಕ್ಸೂಚಿಯಾಗಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ  ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಚನ್ನಬಸಪ್ಪ ಕುಳಗೇರಿ ಮಾತನಾಡಿ, ಶಕುಂತಲಾ ಎಂ ಹಡಗಲಿ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಅನುಪಮ ಸೇವೆಯನ್ನು ಶ್ಲಾಘಿಸಿದರು. ಯಾದಗಿರಿ ಜಿಲ್ಲಾ ಪ್ರಾಂಶುಪಾಲರ  ಸಂಘದ ಅಧ್ಯಕ್ಷ ರುದ್ರಗೌಡ ಪಾಟೀಲ್ ಸೇವಾ ನಿವೃತ್ತರಾದ ಶಕುಂತಲಾ ಎಂ ಹಡಗಲಿ ಅವರ ಸಾರ್ಥಕ ಬದುಕು ಮತ್ತು ಸಮರ್ಥ ಆಡಳಿತ ಸೇವೆಯನ್ನು ಕೊಂಡಾಡಿದರು. ರಾಜಶೇಖರ ಗಣಾಚಾರಿ, ಡಾ. ನೀಲಕಂಠ ಬಡಿಗೇರ್, ಸೈದಾಬಿ ಮತ್ತು ಚನ್ನಪ್ಪ ಆನೆಗುಂದಿ ಮುಂತಾದವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬುದ್ಧ ಘೋಷ್ ದೇವೇಂದ್ರ ಹೆಗ್ಗಡೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೆಬಿಜೆಎನ್ಎಲ್ ರೆಜಿಸ್ಟರರ್ ನಿಂಗಪ್ಪ, ಹೋಮಿಯೋಪತಿ ವೈದ್ಯ ಡಾ. ಕೃಷ್ಣಮೂರ್ತಿ, ಡಾ.ರವೀಂದ್ರನಾಥ ಹೊಸಮನಿ, ಡಾ. ಚಂದ್ರಶೇಖರ್ ಸುಭೇದಾರ್, ಮಲ್ಲಿಕಾರ್ಜುನ್ ಎಂ. ಎಸ್, ಡಾ.ನಾಗರತ್ನ, ಮಹಾಲಿಂಗ, ಶಂಕರ್ ರೆಡ್ಡಿ, ಎಂ ಎಸ್. ಸಜ್ಜನ್, ದೇವಿಂದ್ರಪ್ಪ ಎಂ, ಸಿದ್ರಾಮಪ್ಪ ಅನವಾರ, ದೌಲಸಾಬ್ ನದಾಫ್ ಹಾಗೂ ಎನ್ ಸಿ. ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.

ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ರಾಷ್ಟ್ರದ ವಿವಿಧ ಕ್ಷೇತ್ರದಲ್ಲಿಯ ವಿಜ್ಞಾನ, ತಂತ್ರಜ್ಞಾನ ಹಾಗೂ ನೈಪುಣ್ಯತೆಯ ಕೊಡುಗೆ ಶಿಕ್ಷಕರದೇ ಆಗಿದೆ. ಶಿಕ್ಷಕರು ಸಮಾಜ ಪರಿವರ್ತನೆ ಹಾಗೂ ನವರಾಷ್ಟ್ರ ನಿರ್ಮಾಣದ ರೂವಾರಿಗಳಾಗಿದ್ದಾರೆ ಎಂದು ಎನ್ಎಸ್ಎಸ್ ವಿಭಾಗೀಯ ಅಧಿಕಾರಿಗಳಾದ ಡಾ. ಚಂದ್ರಶೇಖರ್ ದೊಡ್ಡಮನಿ  ಹೇಳಿದರು.

ಶಹಪುರ ತಾಲೂಕಿನ ಭೀಮರಾಯನಗುಡಿಯಲ್ಲಿ  ಕೆಂಭಾವಿ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರಿ ಪ್ರಾಚಾರ್ಯರಾದ ಶಕುಂತಲಾ ಮನೋಹರ ಹಡಗಲಿ ಅವರ ಸೇವಾ ನಿವೃತ್ತಿ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು ಸರಕಾರಿ ಸೇವೆಯಲ್ಲಿ 60 ವರ್ಷಕ್ಕೆ ವಯೋನಿವೃತ್ತಿ ಹೊಂದಿದರೂ ಬದುಕನ್ನು ಮರಳಿ ಅರಳಿಸಿಕೊಂಡು ಸಮಾಜಕ್ಕೆ ದಿಕ್ಸೂಚಿಯಾಗಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ  ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಚನ್ನಬಸಪ್ಪ ಕುಳಗೇರಿ ಮಾತನಾಡಿ, ಶಕುಂತಲಾ ಎಂ ಹಡಗಲಿ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಅನುಪಮ ಸೇವೆಯನ್ನು ಶ್ಲಾಘಿಸಿದರು. ಯಾದಗಿರಿ ಜಿಲ್ಲಾ ಪ್ರಾಂಶುಪಾಲರ  ಸಂಘದ ಅಧ್ಯಕ್ಷ ರುದ್ರಗೌಡ ಪಾಟೀಲ್ ಸೇವಾ ನಿವೃತ್ತರಾದ ಶಕುಂತಲಾ ಎಂ ಹಡಗಲಿ ಅವರ ಸಾರ್ಥಕ ಬದುಕು ಮತ್ತು ಸಮರ್ಥ ಆಡಳಿತ ಸೇವೆಯನ್ನು ಕೊಂಡಾಡಿದರು. ರಾಜಶೇಖರ ಗಣಾಚಾರಿ, ಡಾ. ನೀಲಕಂಠ ಬಡಿಗೇರ್, ಸೈದಾಬಿ ಮತ್ತು ಚನ್ನಪ್ಪ ಆನೆಗುಂದಿ ಮುಂತಾದವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬುದ್ಧ ಘೋಷ್ ದೇವೇಂದ್ರ ಹೆಗ್ಗಡೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕೆಬಿಜೆಎನ್ಎಲ್ ರೆಜಿಸ್ಟರರ್ ನಿಂಗಪ್ಪ, ಹೋಮಿಯೋಪತಿ ವೈದ್ಯ ಡಾ. ಕೃಷ್ಣಮೂರ್ತಿ, ಡಾ.ರವೀಂದ್ರನಾಥ ಹೊಸಮನಿ, ಡಾ. ಚಂದ್ರಶೇಖರ್ ಸುಭೇದಾರ್, ಮಲ್ಲಿಕಾರ್ಜುನ್ ಎಂ. ಎಸ್, ಡಾ.ನಾಗರತ್ನ, ಮಹಾಲಿಂಗ, ಶಂಕರ್ ರೆಡ್ಡಿ, ಎಂ ಎಸ್. ಸಜ್ಜನ್, ದೇವಿಂದ್ರಪ್ಪ ಎಂ, ಸಿದ್ರಾಮಪ್ಪ ಅನವಾರ, ದೌಲಸಾಬ್ ನದಾಫ್ ಹಾಗೂ ಎನ್ ಸಿ. ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

10 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago