ಬಿಸಿ ಬಿಸಿ ಸುದ್ದಿ

ಜನತಾ ದರ್ಶನ ಸಕಲ ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚನೆ

ಕಲಬುರಗಿ; ಜಿಲ್ಲೆಯ ಜನತಾ ದರ್ಶನ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಗಳವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜನವರಿ 9 ರಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬೆಳಿಗ್ಗೆಯಿಂದ ಸಂಜೆ 5 ಗಂಟೆಗೆ ನಡೆಯುವ ಜನತಾ ದರ್ಶನ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ. ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಧ್ಯಕ್ಷತೆ ಕಾರ್ಯಕ್ರಮ ಜರುಗತ್ತದೆ. ಅಧಿಕಾರಿಗಳು ಸಮನ್ವತೆಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕೆಂದು ಯಾವುದೇ ತೊಂದರೆ ಇದ್ದರೆ ಅವುಗಳನ್ನು ನನ್ನ ಛೇಂಬರ್ ಬಂದು ಚರ್ಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ವೇದಿಕೆ ಪಕ್ಕದಲ್ಲಿ ಕೌಂಟರ್ ಸ್ಥಾಪಿಸಬೇಕು ಜನರಿಗೆ ಕುಂದು ಕೊರತೆಗಳ ಮಾಹಿತಿಯನ್ನು ಸ್ಥಳದಲ್ಲಿ ವಿಲೇವಾರಿ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಳಿಗೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕೆಲಸ ನಿರ್ವಹಿಸಲು ಸೂಚನೆ ನೀಡಿದರು.

10-15 ಕೌಂಟರ್ ಇರಲ್ಲಿ ಸ್ಕೀಮಗಳು ಏನು ಅರ್ಜಿ ಕೊಟ್ಟ ಆದ ಮೇಲೆ ಅವರ ಕಾರ್ಯವನ್ನು ಗುರುತಿಸಿ ರೇಷನ್ ಕಾರ್ಡ ಆಧಾರ ಕಾರ್ಡ, ಗೃಹಲಕ್ಷ್ಮಿ ನಾಲ್ಕೈದು ಮಾಹಿತಿ ನೀಡಬೇಕೆಂದರು. ಒಂದೊಂದು ಸೆಕ್ಷನ್ ವಾಯಿಸ್ ಸ್ಟಾಲ್‍ಗಳನ್ನು ಹಾಕಿ ಒಟ್ಟು 15 ಸಿಸ್ಟಂಗಳನ್ನು ಇಟ್ಟು ಯಾವ ಯಾವ ಇಲಾಖೆಗಳಿಗೆÉ ಒಂದೊಂದು ಕೆಲಸ ಒಪಿಸುವುದು ಗೃಹಲಕ್ಷ್ಮಿ ಪ್ರತಿಯೊಬ್ಬ ವ್ಯಕ್ತಿಗೂ ಸಹ ಸರಕಾರದ ಮೂಲ ಸೌಕರ್ಯಗಳನ್ನು ಒದಗಿಸುವುದೇ ಇದರ ಉದೇಶ ವಾಗಿದೆ ಎಂದು ಬಿ. ಫೌಜೀಯಾ ತರನ್ನುಮ್ ಅವರು ಹೇಳಿದರು.

ಜನವರಿ 9 ನೇ ತಾರೀಖ ಪೂರ್ವದಲ್ಲಿ ಸಿದ್ಧತೆ ಆಗಬೇಕು. ಎಷ್ಟು ಅರ್ಜಿಗಳು ವಿಲೇವಾರಿ ಆಗುತ್ತವೆ ಅಧಿಕಾರಿಗಳು ಸಮಸ್ಯೆಗಳು ಬಗೆಹರಿಸುತ್ತೇವೆ ಎಂದು ಹೇಳಿದರು.

ಪ್ರತಿ ಇಲಾಖೆಯಿಂದ ಸವಲತ್ತುಗಳು ಸಾಂಘೀಕವಾಗಿ ಮುಂಬರುವ ದಿನಗಳಲ್ಲಿ ಫಲಾನುಭವಿಗಳಿಗೆ ಸರಕಾರದ ಪ್ರತಿಯೊಂದು ಸೌಕರ್ಯ ಸಂಪೂರ್ಣವಾಗಿ ಜನರಿಗೆ ತಲುಪುತ್ತದೆ. ಎರಡು-ಮೂರು ದಿನಗಳಲ್ಲಿ ಪೆಂಡಿಗ್ ಇರುವ ಕೆಲಸಗಳನ್ನ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸಹಾಯಕ ಆಯುಕ್ತೆ ರೂಪಿಂದ್ರ ಕೌÀರ್ ಅವರಿಗೆ ಒಂದು ಪಟ್ಟಿಯನ್ನು ತಯಾರು ಮಾಡಲು ನಿರ್ದೇಶಸಿದರು.

ಪ್ರತಿಯೊಂದು ಜನತಾ ದರ್ಶನ ಮಾಡುವ ಕೊಂದು ಕೊರತೆಗಳನ್ನು ಬಿಟ್ಟು ಯಾವ ಇಲಾಖೆಗಳಿಗೆ ಎಷ್ಟೆಷ್ಟು ಅರ್ಜಿಗಳು ಬಂದಿವೆ ಮತ್ತು ಪ್ರತಿಯೊಂದು ಹಳ್ಳಿಗಳಲ್ಲಿ ಇರುವ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಅವರು ಮಾಹಿತಿ ಕಲೆ ಹಾಕಿ ಅವರ ಸಮಸ್ಯೆಗಳು ಪರಿಹರಿಸಬೇಕೆಂದು. ಆರೋಗ್ಯದ ಬಗ್ಗೆ ಎಲ್ಲವೂ ಜನರಿಗೆ ಅರಿವು ಮೂಡಿಸುವುದು ಮತ್ತು ಜನರು ಬರಿ ದೂರು ಕೂಡುವುದಿಲ್ಲ ನಾವು ಅವರಿಗೋಸ್ಕರ ಏನು ಮಾಡಬೇಕೆಂದು ತಿಳಿದುಕೊಳ್ಳಬೇಕೆಂದರು.

ಅದೇ ರೀತಿಯಾಗಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಪಾಟೀಲ ಭುವನೇಶ ಮಾತನಾಡಿದರು.

ಸಭೆಯಲ್ಲಿ ಡಿ.ಸಿ. ಕನಿಕಾ ಸಿಕ್ರಿವಾಲ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ರೂಪಿಂದ್ರ ಕೌರ್ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮ್ಮದ್ ಪಟೇಲ್, ಡಿ.ಹೆಚ್.ಓ. ಡಾ. ರಾಜಶೇಖರ ಮಾಲಿ, ಜಿ.ಪಂ. ಯೋಜನಾ ನಿರ್ದೇಶಕ ಜಗದೇವಪ್ಪ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

8 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

8 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

8 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago