ಬಿಸಿ ಬಿಸಿ ಸುದ್ದಿ

ನೆರೆ ಸಂತ್ರಸ್ತರಿಗೆ ದಾನಿಗಳು ನೀಡಿದ ಮಾಲು ಆಗುತ್ತಿದೆಯೇ ಕಳ್ಳರ ಪಾಲು?

  • ರಾಜು ಕುಂಬಾರ ಸುರಪುರ

ಸುರಪುರ: ಕಳೆದ ಕೆಲ ದಿನಗಳ ಹಿಂದೆ ಮಹಾರಾಷ್ಟ್ರ ಮತ್ತು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೃಷ್ಣಾ ನದಿ ಪ್ರವಾಹದಿಂದ ಸಾವಿರಾರು ಕುಟುಂಬಗಳು ಸಂತ್ರಸ್ತಗೊಂಡು.ಅನೇಕ ಜಿಲ್ಲೆಗಳ ಜನರು ಅಲ್ಲಲ್ಲಿ ತೆರೆಯಲಾದ ಗಂಜಿ ಕೇಂದ್ರಗಳಲ್ಲಿ ವಾರಗಟ್ಟಲೆ ಆಶ್ರಯ ಪಡೆದು,ನಂತರ ಪ್ರವಾಹದ ಅರ್ಭಟ ಕಡಿಮೆಯಾದನಂತರ ತಮ್ಮ ಮನೆಗಳಿಗೆ ಮರಳಿದ ಸುದ್ದಿ ಎಲ್ಲರಿಗು ತಿಳಿದಿದೆ.

ಆದರೆ ನೆರೆಯಿಂದ ತಮ್ಮ ಮನೆಗಳನ್ನು ಕಳೆದುಕೊಂಡು,ವಾಸಿಸಲು ಮನೆಯಿಲ್ಲದೆ,ದೈನಂದಿನ ಬದುಕಿಗೆ ಅವಶ್ಯವಾಗಿರುವ ವಸ್ತುಗಳಿಲ್ಲದೆ ಅನೇಕ ಕುಟುಂಬಗಳು ಇಂದಿಗೂ ಸಂಕಷ್ಟು ಹೆದರಿಸುತ್ತಿವೆ.ಇದನ್ನು ಮನಗಂಡಿರುವ ನಾಡಿನ ಅನೇಕ ಪ್ರಜ್ಞಾವಂತ ಜನತೆ ತಮ್ಮ ಉದಾರ ಮನಸ್ಸಿನಿಂದ ಹಲವು ರೀತಿಯ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ಸದರಂತೆ ಸುರಪುರ ತಾಲ್ಲೂಕಿನಲ್ಲಿಯೂ ನೆರೆಯ ಹಾವಳಿಗೆ ನಲುಗಿದ್ದ ಜನರ ಸಂಕಷ್ಟಕ್ಕೆ ಅನೇಕ ಸಂಘ ಸಂಸ್ಥೆಗಳು ನೆರವಾಗಿವೆ.

ನೆರೆಯ ಸಂತ್ರಸ್ತರಿಗಾಗಿ ತೆರೆಯಲಾಗಿದ್ದ ಗಂಜಿ ಕೇಂದ್ರಗಳು ನಿಜವಾಗಿಯೂ ಸಂತ್ರಸ್ತರಿಗೆ ನೆರವಾದವೆ ಎಂಬುದು ಸದ್ಯ ಮೂಡುತ್ತಿರುವ ಯಕ್ಷ ಪ್ರಶ್ನೆಯಾಗಿದೆ.ಕಾರಣ ಸುರಪುರ ನಗರದ ಎಪಿಎಂಸಿ ಗಂಜ್‌ನಲ್ಲಿ ತೆರೆಯಲಾಗಿದ್ದ ಗಂಜಿ ಕೇಂದ್ರಕ್ಕೆ ದೇಣಿಗೆ ನೀಡಿದ್ದ ಲಕ್ಷಾಂತರ ರೂಪಾಯಿಗಳ ದಿನಸಿ ಹಾಗು ಮತ್ತಿತರೆ ಅಗತ್ಯ ವಸ್ತುಗಳು ಗಂಜೀ ಕೇಂದ್ರದಲ್ಲಿ ಅನಾಥವಾಗಿ ಬಿದ್ದಿದ್ದು,ಅವುಗಳನ್ನು ಕಳ್ಳ ಕಾಕರು ಅನಾಯಾಸವಾಗಿ ಕಿಟಕಿಯಿಂದ ಕದ್ದು ಹೊಯ್ಯುವಂತೆ ಅನುಕೂಲ ಮಾಡಿಕೊಡಲಾಗಿದೆ.ಅಲ್ಲದೆ ಗಂಜಿ ಕೇಂದ್ರ ಬಂದ್ ಮಾಡುವಾಗ ಬಾಗಿಲು ಮುಚ್ಚಿ ಬೀಗ ಹಾಕಿ ಅದನ್ನು ತಾಲ್ಲೂಕು ಆಡಳಿತ ಶೀಲ್ ಹಾಕಿದೆ.ಆದರೆ ಹಾಕಿದ ಶೀಲನ್ನು ಕಿಡಿಗೇಡಿಗಳು ಹರಿದಿದ್ದು,ಅಲ್ಲದೆ ಕಿಟಕಿಯಿಂದ ಗೃಹುಪಯೋಗಿ ವಸ್ತುಗಳಾದ ಬ್ರಸ್,ಟೂತ್ ಪೇಸ್ಟ್,ಸಾಬೂನು,ಬಟ್ಟೆ,ದವಸ ದಾನ್ಯಗಳು ಹಾಗು ಇನ್ನುತರೆ ಹಾಸಿಗೆಯಂತ ವಸ್ತುಗಳನ್ನು ಕದ್ದಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.

ಗಂಜಿ ಕೇಂದ್ರದ ಎರಡೂ ಬದಿಯ ಕಿಟಕಿಗಳು ತೆಗೆದಿದ್ದು,ಕಿಟಕಿಗಳಿಗೆ ಅಂಟಿಯೇ ಅನೇಕ ವಸ್ತುಗಳು ಮೂಟೆಗಳು ಹಾಗು ಡಬ್ಬಿಗಳನ್ನು ಇಡಲಾಗಿದೆ.ಇದರಿಂದ ಕಿಡಿಗೇಡಿಗಳಿಗೆ ವಸ್ತುಗಳ ಕದಿಯಲು ಅನುಕೂಲ ಮಾಡಿ ಕೊಟ್ಟಂತಾಗಿದ್ದು,ಅನೇಕ ವಸ್ತುಗಳು ಕದ್ದಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಗಂಜಿ ಕೇಂದ್ರದ ಬಳಿಯಲ್ಲಿ ಯಾವೊಬ್ಬ ಸಿಬ್ಬಂದಿಯೂ ಇಲ್ಲದೆ ಕಳ್ಳರಿಗೆ ಯಾವುದೆ ಅಳುಕು ಅಂಜಿಕೆಯಿಲ್ಲದೆ ಕದಿಯಲು ಅವಕಾಶ ಮಾಡಿ ಕೊಟ್ಟಂತಾಗಿದೆ.

ದೂರದ ಬೆಂಗಳೂರು ಸೇರಿದಂತೆ ನಾಡಿನ ಅನೇಕ ಭಾಗಗಳಿಂದ ನೂರಾರು ಸಂಘ ಸಂಸ್ಥೆಗಳು ಸಂತ್ರಸ್ತರ ನೆರವಿಗಾಗಿ ತಂದು ಕೊಟ್ಟಿರುವ ಮಾಲನ್ನು ಕಾಳಜಿಯಿಲ್ಲದೆ ಬೇಕಾ ಬಿಟ್ಟಿಯಾಗಿ ಬಿಸಾಡಿರುವುದು ಹಾಗು ದೇಣಿಗೆ ನೀಡಿದ ವಸ್ತುಗಳನ್ನು ಗಂಜಿ ಕೇಂದ್ರದ ಬದಲು ಖಾಸಗಿಯವರ ಗೋದಾಮಿನಲ್ಲಿ ಇಟ್ಟಿರುವುದು ಎಲ್ಲರ ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ.ಮುಂದಾದರೂ ತಾಲ್ಲೂಕು ಆಡಳಿತ ಗಂಜಿ ಕೇಂದ್ರದತ್ತ ಗಮನ ಹರಿಸಿ ವಸ್ತುಗಳ ಸಂರಕ್ಷಣೆಗೆ ಮುಂದಾಗುವುದೆ ಕಾದು ನೋಡಬೇಕಿದೆ.

emedialine

Recent Posts

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

16 mins ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

18 mins ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

23 mins ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

27 mins ago

ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಬೇಡಿ

ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…

29 mins ago

ಸೇಡಂ: `ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭ ನಾಳೆ

ಸೇಡಂ (ಕಲಬುರಗಿ);  ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…

50 mins ago