-
ರಾಜು ಕುಂಬಾರ ಸುರಪುರ
ಸುರಪುರ: ಕಳೆದ ಕೆಲ ದಿನಗಳ ಹಿಂದೆ ಮಹಾರಾಷ್ಟ್ರ ಮತ್ತು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೃಷ್ಣಾ ನದಿ ಪ್ರವಾಹದಿಂದ ಸಾವಿರಾರು ಕುಟುಂಬಗಳು ಸಂತ್ರಸ್ತಗೊಂಡು.ಅನೇಕ ಜಿಲ್ಲೆಗಳ ಜನರು ಅಲ್ಲಲ್ಲಿ ತೆರೆಯಲಾದ ಗಂಜಿ ಕೇಂದ್ರಗಳಲ್ಲಿ ವಾರಗಟ್ಟಲೆ ಆಶ್ರಯ ಪಡೆದು,ನಂತರ ಪ್ರವಾಹದ ಅರ್ಭಟ ಕಡಿಮೆಯಾದನಂತರ ತಮ್ಮ ಮನೆಗಳಿಗೆ ಮರಳಿದ ಸುದ್ದಿ ಎಲ್ಲರಿಗು ತಿಳಿದಿದೆ.
ಆದರೆ ನೆರೆಯಿಂದ ತಮ್ಮ ಮನೆಗಳನ್ನು ಕಳೆದುಕೊಂಡು,ವಾಸಿಸಲು ಮನೆಯಿಲ್ಲದೆ,ದೈನಂದಿನ ಬದುಕಿಗೆ ಅವಶ್ಯವಾಗಿರುವ ವಸ್ತುಗಳಿಲ್ಲದೆ ಅನೇಕ ಕುಟುಂಬಗಳು ಇಂದಿಗೂ ಸಂಕಷ್ಟು ಹೆದರಿಸುತ್ತಿವೆ.ಇದನ್ನು ಮನಗಂಡಿರುವ ನಾಡಿನ ಅನೇಕ ಪ್ರಜ್ಞಾವಂತ ಜನತೆ ತಮ್ಮ ಉದಾರ ಮನಸ್ಸಿನಿಂದ ಹಲವು ರೀತಿಯ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ಸದರಂತೆ ಸುರಪುರ ತಾಲ್ಲೂಕಿನಲ್ಲಿಯೂ ನೆರೆಯ ಹಾವಳಿಗೆ ನಲುಗಿದ್ದ ಜನರ ಸಂಕಷ್ಟಕ್ಕೆ ಅನೇಕ ಸಂಘ ಸಂಸ್ಥೆಗಳು ನೆರವಾಗಿವೆ.
ನೆರೆಯ ಸಂತ್ರಸ್ತರಿಗಾಗಿ ತೆರೆಯಲಾಗಿದ್ದ ಗಂಜಿ ಕೇಂದ್ರಗಳು ನಿಜವಾಗಿಯೂ ಸಂತ್ರಸ್ತರಿಗೆ ನೆರವಾದವೆ ಎಂಬುದು ಸದ್ಯ ಮೂಡುತ್ತಿರುವ ಯಕ್ಷ ಪ್ರಶ್ನೆಯಾಗಿದೆ.ಕಾರಣ ಸುರಪುರ ನಗರದ ಎಪಿಎಂಸಿ ಗಂಜ್‌ನಲ್ಲಿ ತೆರೆಯಲಾಗಿದ್ದ ಗಂಜಿ ಕೇಂದ್ರಕ್ಕೆ ದೇಣಿಗೆ ನೀಡಿದ್ದ ಲಕ್ಷಾಂತರ ರೂಪಾಯಿಗಳ ದಿನಸಿ ಹಾಗು ಮತ್ತಿತರೆ ಅಗತ್ಯ ವಸ್ತುಗಳು ಗಂಜೀ ಕೇಂದ್ರದಲ್ಲಿ ಅನಾಥವಾಗಿ ಬಿದ್ದಿದ್ದು,ಅವುಗಳನ್ನು ಕಳ್ಳ ಕಾಕರು ಅನಾಯಾಸವಾಗಿ ಕಿಟಕಿಯಿಂದ ಕದ್ದು ಹೊಯ್ಯುವಂತೆ ಅನುಕೂಲ ಮಾಡಿಕೊಡಲಾಗಿದೆ.ಅಲ್ಲದೆ ಗಂಜಿ ಕೇಂದ್ರ ಬಂದ್ ಮಾಡುವಾಗ ಬಾಗಿಲು ಮುಚ್ಚಿ ಬೀಗ ಹಾಕಿ ಅದನ್ನು ತಾಲ್ಲೂಕು ಆಡಳಿತ ಶೀಲ್ ಹಾಕಿದೆ.ಆದರೆ ಹಾಕಿದ ಶೀಲನ್ನು ಕಿಡಿಗೇಡಿಗಳು ಹರಿದಿದ್ದು,ಅಲ್ಲದೆ ಕಿಟಕಿಯಿಂದ ಗೃಹುಪಯೋಗಿ ವಸ್ತುಗಳಾದ ಬ್ರಸ್,ಟೂತ್ ಪೇಸ್ಟ್,ಸಾಬೂನು,ಬಟ್ಟೆ,ದವಸ ದಾನ್ಯಗಳು ಹಾಗು ಇನ್ನುತರೆ ಹಾಸಿಗೆಯಂತ ವಸ್ತುಗಳನ್ನು ಕದ್ದಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.
ಗಂಜಿ ಕೇಂದ್ರದ ಎರಡೂ ಬದಿಯ ಕಿಟಕಿಗಳು ತೆಗೆದಿದ್ದು,ಕಿಟಕಿಗಳಿಗೆ ಅಂಟಿಯೇ ಅನೇಕ ವಸ್ತುಗಳು ಮೂಟೆಗಳು ಹಾಗು ಡಬ್ಬಿಗಳನ್ನು ಇಡಲಾಗಿದೆ.ಇದರಿಂದ ಕಿಡಿಗೇಡಿಗಳಿಗೆ ವಸ್ತುಗಳ ಕದಿಯಲು ಅನುಕೂಲ ಮಾಡಿ ಕೊಟ್ಟಂತಾಗಿದ್ದು,ಅನೇಕ ವಸ್ತುಗಳು ಕದ್ದಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಗಂಜಿ ಕೇಂದ್ರದ ಬಳಿಯಲ್ಲಿ ಯಾವೊಬ್ಬ ಸಿಬ್ಬಂದಿಯೂ ಇಲ್ಲದೆ ಕಳ್ಳರಿಗೆ ಯಾವುದೆ ಅಳುಕು ಅಂಜಿಕೆಯಿಲ್ಲದೆ ಕದಿಯಲು ಅವಕಾಶ ಮಾಡಿ ಕೊಟ್ಟಂತಾಗಿದೆ.
ದೂರದ ಬೆಂಗಳೂರು ಸೇರಿದಂತೆ ನಾಡಿನ ಅನೇಕ ಭಾಗಗಳಿಂದ ನೂರಾರು ಸಂಘ ಸಂಸ್ಥೆಗಳು ಸಂತ್ರಸ್ತರ ನೆರವಿಗಾಗಿ ತಂದು ಕೊಟ್ಟಿರುವ ಮಾಲನ್ನು ಕಾಳಜಿಯಿಲ್ಲದೆ ಬೇಕಾ ಬಿಟ್ಟಿಯಾಗಿ ಬಿಸಾಡಿರುವುದು ಹಾಗು ದೇಣಿಗೆ ನೀಡಿದ ವಸ್ತುಗಳನ್ನು ಗಂಜಿ ಕೇಂದ್ರದ ಬದಲು ಖಾಸಗಿಯವರ ಗೋದಾಮಿನಲ್ಲಿ ಇಟ್ಟಿರುವುದು ಎಲ್ಲರ ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ.ಮುಂದಾದರೂ ತಾಲ್ಲೂಕು ಆಡಳಿತ ಗಂಜಿ ಕೇಂದ್ರದತ್ತ ಗಮನ ಹರಿಸಿ ವಸ್ತುಗಳ ಸಂರಕ್ಷಣೆಗೆ ಮುಂದಾಗುವುದೆ ಕಾದು ನೋಡಬೇಕಿದೆ.