ಬಿಸಿ ಬಿಸಿ ಸುದ್ದಿ

ಶ್ರೀ ವೀರಾಂಜನೇಯ ಕಾರ್ತಿಕೋತ್ಸವ ಸಾಧಕರಿಗೆ ಸನ್ಮಾನ

ಸುರಪುರ :ನಗರದ ನರಸಿಂಹಪೇಟ ಬಳಿಯ ನಾಗಲಾಪುರ ಶ್ರೀ ವೀರಾಂಜನೇಯ ದೇವರ ಕಾರ್ತಿಕೋತ್ಸವ ಹಾಗೂ ವಿವಿಧ ಸಾಧಕರಿಗೆ ಸನ್ಮಾನ ಸಮಾರಂಭ ನಡೆಸಲಾಯಿತು.

ಶ್ರೀ ವೀರಾಂಜನೇಯ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ಹಾಗೂ ಶತಕೋಟಿ ಯುವ ಸ್ಪೂರ್ತಿ ಬಳಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಲಿಯುಗದಲ್ಲಿ ಕರ್ಮ ದಿಂದ ಪಾರಾಗುವ ಭಕ್ತಿ ಮಾರ್ಗ ಎನ್ನುವ ವಿಷಯದ ಕುರಿತು ಪ್ರವಚನವನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಡವಡಗಿ ನಂದಿ ಮಠದ ಶಿವಸಿದ್ಧ ಸ್ವಾಮೀಜಿ ಪ್ರವಚನ ನೀಡಿ, ಭಕ್ತಿ ಎಂಬುದು ಭರವಸೆ ಮತ್ತು ಅರಿವು. ದೇವರಲ್ಲಿ ಭಕ್ತಿ, ವಿಶ್ವಾಸ ಇರಬೇಕು. ವಿಶ್ವಾಸ ಮತ್ತು ಭಕ್ತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.ಹಿಂದಿನವರ ಭಕ್ತಿಯಲ್ಲಿ ಸ್ವಾರ್ಥ ಇರುತ್ತಿರಲಿಲ್ಲ ಆದರೆ, ಇಂದಿನ ನಮ್ಮ ಭಕ್ತಿ ಸ್ವಾರ್ಥದಿಂದ ಕೂಡಿದೆ. ಕಲಿಯುಗದ ಇಂದಿನ ದಿನಮಾನದಲ್ಲಿ ಎಲ್ಲ ವ್ಯವಸ್ಥೆಗಳ ಲಭ್ಯತೆಯಿಂದ ಭಕ್ತಿ ಕಡಿಮೆಯಾಗುತ್ತಿದೆ. ಇದು ಸರಿಯಾದ ಬೆಳವಣಿಗೆ ಅಲ್ಲ ಎಂದರು.

ಭಕ್ತಿ ಅನ್ನುವುದು ಯಾರಿಗೂ ತೋರಿಸಲಾಗದು. ಅವರ ಭಕ್ತಿ ಅವರ ಮನಸ್ಸಿಗೆ ಗೊತ್ತಿರುತ್ತದೆ. ಶರಣರು, ಸತ್ಪರುಷರು, ಮಹಾತ್ಮರು ಭಕ್ತಿ ಮಾಡಿದ್ದಾರೆ. ಅವರು ಸಮಾಜ ಸೇವೆ ಮಾಡಿ ಶಾಶ್ವತವಾಗಿ ಜನಮಾನಸದಲ್ಲಿ ಉಳಿದಿದ್ದಾರೆ. ನಾವು ಜೀವಿತಾವಧಿಯಲ್ಲಿ ಭಕ್ತಿ ಮಾಡಬೇಕು ಮತ್ತು ಯಾರಿಗೂ ಕೆಡಕು ಮಾಡಬಾರದು. ಭಕ್ತಿ ಮನುಷ್ಯನಿಗೆ ಸದಾ ರಕ್ಷಣೆ ಮಾಡುತ್ತದೆ. ದೇವರ ಮತ್ತು ಧರ್ಮದ ಮೇಲೆ ನಂಬಿಕೆ ಇರಬೇಕು. ತಂದೆ-ತಾಯಂದಿರೆ ಮೊದಲೆ ದೇವರು ಅವರಿಗೆ ಚೆನ್ನಾಗಿ ನೋಡಿಕೊಳ್ಳಬೇಕು. ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕಾರ ನೀಡಬೇಕು ಎಂದು ಸಲಹೆ ನೀಡಿದರು.

ಹಿರಿಯ ಸಾಹಿತಿ ನಬೀಲಾಕ್ ಮಕಂದಾರ್ ಮಾತನಾಡಿ, ಮಠ ಮಾನ್ಯಗಳು ಭಕ್ತಿಪಥದಲ್ಲಿ ಜ್ಞಾನ ದಾಸೋಹದ ಜತೆ ಜತೆಯಲ್ಲಿ ಅನ್ನದಾಸೋಹ ಮಾಡುತ್ತಿವೆ. ಭಕ್ತಿಪಥಕ್ಕೆ ಐತಿಹಾಸಿಕ, ಸಾಮಾಜಿಕ ಹಿನ್ನೆಲೆಯಿದೆ. ಭಕ್ತಿಪಥದಲ್ಲಿ ಸಂತರು, ಶರಣರು, ಸೂಫಿಗಳು ಬರುತ್ತಾರೆ. ಭಕ್ತಿಪಧಕ್ಕೆ ಯಾವುದೇ ಧರ್ಮದ ಲೇಪ ಇಲ್ಲ. ಮೂಲ ಭಗವಂತನನ್ನು ಸೇರುವುದು, ಪ್ರೀತಿಸುವುದು, ಆರಾಧಿಸುವುದು ಅದೇ ಮುಖ್ಯ ಎಂದರು.

ಟ್ರಸ್ಟ್ ಅಧ್ಯಕ್ಷ ಸಂಜೀವ ದರಬಾರಿ ಪ್ರಾಸ್ತಾವಿಕ ಮಾತನಾಡಿ, ಕಾರ್ತಿಕೋತ್ಸವದಲ್ಲಿ ಅನ್ನದಾಸೋಹ ಜತೆ ಜ್ಞಾನದಾಸೋಹ ನೀಡಲಾಗುತ್ತಿದೆ. ಕಳೆದ 9 ವರ್ಷಗಳಿಂದ ಪ್ರತಿ ಅಮಾವಾಸ್ಯೆ ದಿನ ಭಕ್ತರ ಸಹಕಾರದೊಂದಿಗೆ ಅನ್ನದಾಸೋಹ ನಡೆಯುತ್ತದೆ. ಮುಂದಿನ ದಿನಗಳಲ್ಲಿ ಟ್ರಸ್ಟ್ ವತಿಯಿಂದ ಯೋಗ, ಕರಾಟೆ ಶಾಲೆ, ಕೆಎಎಸ್, ಐಎಎಸ್ ಸ್ಪರ್ಧಾತ್ಮಿಕ ಪರೀಕ್ಷೆಗಳಿಗೆ ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ರವಿಕುಮಾರ ಗೋರ್ಕಾಲ ಮಾತನಾಡಿದರು. ಮಲ್ಲಯ್ಯ ಮುತ್ಯಾ ನಾಲಾಪುರ ಶ್ರೀ ವೀರಾಂಜನೇಯ ಕಾರ್ತಿಕೋತ್ಸವ ಅಧ್ಯಕ್ಷತೆ ವಹಿಸಿದ್ದರು. ಮಹಾಂತೇಶ ಮುತ್ಯಾ, ಸಿದ್ದು ಗುಡ್ಡಕಾಯಿ ವೇದಿಕೆಯಲ್ಲಿದ್ದರು. ಬಳಿಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮಹಾಂತೇಶ ಶಹಾಪುರ ಸ್ವಾಗತಿಸಿದರು. ಮಹಾದೇವಪ್ಪ ಗುತ್ತೇದಾರ್ ನಿರೂಪಿಸಿದರು. ಮುದ್ದಪ್ಪ ಅಪಾಗೋಳ ವಂದಿಸಿದರು.

ಅದ್ಧೂರಿ ಕಾರ್ತಿಕೋತ್ಸವ : ನಾಗಲಾಪುರ ಶ್ರೀ ವೀರಾಂಜನೇಯ ಕಾರ್ತಿಕೋತ್ಸವ ಭಕ್ತರ ಶ್ರದ್ಧಾ-ಭಕ್ತಿಯೊಂದಿಗೆ ಅದ್ಧೂರಿಯಾಗಿ ಜರುಗಿತು. ಕಾರ್ತಿಕೋತ್ಸವ ನಿಮಿತ್ತ ದೇವರಿಗೆ ಉಡಿ ತುಂಬು ಕಾರ್ಯಕ್ರಮ, ಸುಪ್ರಭಾತ, ಮಹಾಗಣಪತಿ ಪೂಜಾ, ಪಣ್ಯಹವಾಚನದೊಂದಿಗೆ ಗಾಯತ್ರಿ ಹೋಮ ಜರುಗಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಭಕ್ತಿ ಸಮರ್ಪಿಸಿದರು.

emedialine

Recent Posts

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

37 mins ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

46 mins ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 hour ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

12 hours ago

ಬಡವರಿಗೆ ಹಣ್ಣು-ಹಂಪಲು ವಿತರಣೆ

ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ  ಜೈ ಕನ್ನಡಿಗರ…

12 hours ago

ಕಾರಾಗೃಹದ ಬಂದಿಗಳಿಗೆ ಮನಃ ಪರಿವರ್ತನೆಗೊಳ್ಳುವ ಚಲನ ಚಿತ್ರ ಸ್ಕ್ರೀನ್

ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…

12 hours ago