ಬಿಸಿ ಬಿಸಿ ಸುದ್ದಿ

ಜೇವರ್ಗಿ ರೈತರಿಗೆ ನೀರು: ಡಾ. ಅಜಯ್‌ ಸಿಂಗ್‌ ಹರ್ಷ

  • ನಾರಾಯಣಪುರ, ಆಲ್ಮಟ್ಟಿ ಜಲಾಶಯದಿಂದ ತಕ್ಷಣ 2.75 ಟಿಎಂಸಿ ನೀರು ಬಿಡುಗಡೆ ನಿರ್ಣಯ

  • ನೀರನ್ನು ಮೆಣಸಿನಕಾಯಿ ಸೇರಿದಂತೆ ಬೆಳೆಗಳಿಗೆ ಬಳಸಲು ಶಾಸಕ ಡಾ. ಅಜಯ್‌ ಸಿಂಗ್‌ ಮನವಿ

  • ಸಂಕಷ್ಟದಲ್ಲೂ ನೀರು ಬಿಡುಗಡೆ, ಸಿಎಂ, ಡಿಸಿಎಂ ಅ‍ರಿಗೆ ಶಾಸಕ ಡಾ. ಅಜಯ್‌ ಸಿಂಗ್‌ ಅಭಿನಂದನೆ

ಕಲಬುರಗಿ: ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿ 2023-2 4ನೇ ಸಾಲಿನಲ್ಲಿ ಬೆಳೆದು ನಿಂತಿರುವ ಮೆಣಸಿನಕಾಯಿ ಸರಿದಂತೆ ಇತರೆ ಬೆಳೆಗಳಿಗೆ ನಾರಾಯಣಪುರ ಹಾಗೂ ಆಲ್ಮಟ್ಟಿ ಜಲಾಶಯಗಳಿಂದ ಕಾಲುವೆಗಳಿಗೆ ಕೊನೆಯ ನೀರನ್ನು ಹರಿಸಲು ರಾಜ್ಯ ಸರ್ಕಾರ ನಿರ್ಣಯ ಕೈಗೊಂಡಿದೆ. ಈ ನಿರ್ಣಯದಂತೆ ಮುಂದಿನ ದಿನಗಳಲ್ಲಿ 2.75 ಟಿಎಂಸಿ ನೀರು ಜಲಾಶಯದಿಂದ ಕಾಲುವೆಗಳಿಗೆ ಹರಿದು ಬರಲಿದ್ದು ಇದು ಮೆಣಸಿನಕಾಯಿ ಬೆಳೆಗೆ ಅನುಕೂಲವಾಗಲಿದೆ.

ಉಭಯ ಜಲಾಶಯಗಳಿಂದ ನೀರು ಹರಿಸಲು ಮಹತ್ವದ ನಿರ್ಣಯ ಕೈಗೊಂಡು ಕಾಂಗ್ರೆಸ್‌ ಸರಕಾರ ನುಡಿದಂತೆ ನಡೆದಿದೆ. ಸಂಕಷ್ಟದ ಸಮಯದಲ್ಲಿಯೂ ರೈತರ ಕೈ ಹಿಡಿದಿದೆ. ಕಾಂಗ್ರೆಸ್‌ ಸರ್ಕಾರ ಸದಾಕಾಲ ರೈತ ಸ್ನೇಹಿ ಎಂಬುದಕ್ಕೆ ಈ ನಿರ್ಣಯವೇ ಕನ್ನಡಿ ಹಿಡಿದಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅದ್ಯಕ್ಷರು, ಜೇವರ್ಗಿ ಶಾಸಕರಾಗಿರುವ ಡಾ. ಅಜಯ್‌ ಧರ್ಮಸಿಂಗ್‌ ಎಂದು ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಡಾ. ಅಜಯ್‌ ಸಿಂಗ್‌ ಅವರು ಬರಗಾಲದ ಸಂಕಷ್ಟ ಸಂದರ್ಭದಲ್ಲಿಯೂ ಆಲ್ಮಟ್ಟಿ ಹಾಗೂ ನಾರಾಯಣಪೂರ ಜಲಾಶಯದಿಂದ ಕಾಲುವೆಗಳಗೆ ನೀರು ಹರಿಸುವ ನಿರ್ಣಯ ಕೈಗೊಂಡು ರೈತರ ಪರವಾಗಿ ನಿಂತಿರುವ ರಾಜ್ಯದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಮತ್ತು ಜಲಸಂಪನ್ಮೂಲ ಸಚಿವರಾಗಿರುವ ಡಿಕೆ ಶಿವಕುಮಾರ್‌ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದ್ದಾರೆ.

ಈಗಾಗಲೇ ತಮ್ಮ ಮತಕ್ಷೇತ್ರ ಜೇವರ್ಗಿಯಲ್ಲಿನ ಮೆಣಸಿನಕಾಯಿ ಸೇರಿದಂತೆ ಇತರೆ ಬೆಳೆಗಳ ರೈತರು ನೀರನ್ನು ಸರಿಯಾಗಿ ಹಾಗೂ ಹಿತಮಿತವಾಗಿ ಬಳಸುವ ಮೂಲಕ ಇದರ ಲಾಭ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

ಇದೇ ಸಮಯದಲ್ಲಿ ಕಳೆದ ವರ್ಷಕ್ಕೆ ಜಲಾಶಯಗಳಲ್ಲಿನ ನೀರಿನ ಸಂಗ್ರಹಕ್ಕೆ ಹೋಲಿಸಿದಾಗ ಈ ವರ್ಷ ಪ್ರಸಕ್ತ ಶೇ. 50 ರಷ್ಟು ಸಂಗ್ರಹ ಕಡಿಮೆ ಇದೆ. ಮುಂಬರುವ ಬೇಸಿಗೆಯಲ್ಲಿ ಜನ- ಜಾನುವಾರು ಕುಡಿಯುವ ನೀರಿಗೆ ಜಲಾಯದಲ್ಲಿ ನೀರು ಸಂಗ್ರಹಿಸಿಡುವುದು ಅಗತ್ಯವಾಗಿದೆ.

ಇಂತಹ ಸಂಧ್ಗ್ಧ ಸಂದರ್ಭದಲ್ಲಿಯೂ ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮನಸ್ಸು ಮಾಡಿ ರೈತರ ಸಂಕಷ್ಟಕ್ಕೆ ನೆರವಾಗೋಣವೆಂದು ಕಾಲುವೆ 2. 75 ಟಿಎಂಸಿ ನೀರನ್ನು ಹರಿಸಲು ಮುಂದಾಗಿರೋದು ನೋಡದಿರೆ ನಿಜವಾಗಿಯೂ ರೈತರ ಪರವಾದ ಸರ್ಕಾರ ನಮ್ಮದು ಎದು ಹೇಳಲು ಹೆಮ್ಮೆ ಎನಿಸುತ್ತದೆ ಎಂದು ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.

ಜೇವರ್ಗಿ ಮತಕ್ಷೇತ್ರದಲ್ಲಿ ಬರುವ ಇಂಡಿ, ಜೇವರ್ಗಿ, ಮುಡಬೂಳ್‌ ಶಾಖಾ ಕಾಲುವೆಗಳಿಗೆ ಇನ್ನೇನು ಕೃಷ್ಣೆಯ ನೀರು ಹರಿದು ಬರಲಿದ್ದು ಈ ಕಾಲುವೆಗಳ ಇಕ್ಕೆಲಗಳಲ್ಲಿರುವ ರೈತರು ನೀರಿನ ಸದ್ಬಳಕೆಗೆ ಮುಂದಾಗಬೇಕು. ಪರಸ್ಪರ ಸಹಕಾರದಿಂದ ನೀರನ್ನು ಪಡೆದು ಮೆಣಸಿನಕಾಯಿ ಬೆಳೆ ಉತ್ಪನ್ನ ಪಡೆಯಬೇಕು.

ಬೆಳೆ ಸಂರಕ್ಷಣೆಗೆ ನೀರನ್ನು ಪಡೆಯಲು ರೈತರೆಲ್ಲರೂ ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ ಪರಸ್ಪರ ಸಹಕಾರದಿಂದ ವರ್ತಿಸಬೇಕು ಎಂದು ಡಾ. ಅಜಯ್‌ ಧರಂಸಿಂಗ್‌ ಅವರು ರೈತ ಸಮೂಹವನ್ನು ಕೋರಿದ್ದಾರೆ.

emedialine

Recent Posts

ವಿವಿಧ ಕ್ಷೇತ್ರದ ಸಾಧಕರಿಗೆ ಸೇವಾರತ್ನ ಪ್ರಶಸ್ತಿ ಪ್ರದಾನ ನ.24 ರಂದು

ಕಲಬುರಗಿ: ಖ್ಯಾತ ಶಿಕ್ಷಣತಜ್ಞ ದಿ: ಪೆÇ್ರ :ಶಂಕರಲಿಂಗ ಹೆಂಬಾಡಿ'ಯವರು ಸಂಸ್ಥಾಪಿತ ಡಾ.ರಾಜಕುಮಾರ ಸಾಹಿತ್ಯಿಕ ಮತ್ತು ಸಾಂಸ್ಕ್ರತಿಕ ಕಲಾ ಸಂಘ ರಾಜಾಪೂರ-ಕಲಬುರಗಿ…

2 hours ago

ಸಂವಿಧಾನ ದಿನಾಚರಣೆ ಹಿನ್ನೆಲೆ: ಚಿತ್ರಕಲಾ ಮತ್ತು ಟೈಕೋಥಾನ್ ಸ್ಪರ್ಧೇ ಆಯೋಜನೆ

ಕಲಬುರಗಿ: ನ.22 ಸಂವಿಧಾನ ದಿನಾಚರಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಡಳಿತ, ಸಮಾಜ ಕಲ್ಯಾಣ‌ ಇಲಾಖೆ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ವತಿಯಿಂದ…

3 hours ago

ಹಣ್ಣು ವಿತರಿಸಿ ಸಚಿವ ಪ್ರಿಯಾಂಕ್ ಜನ್ಮ ದಿನಾಚರಣೆ

ವಾಡಿ (ಕಲಬುರಗಿ): ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್, ಮತ್ತು ಐಟಿ/ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಕ್ ರ‍್ಗೆ…

3 hours ago

ಸರ್ವಜನರ ನಾಯಕ ಪ್ರಿಯಾಂಕ್ ಎಂ ಖರ್ಗೆ

45ನೇ ಹುಟ್ಟುಹಬ್ಬ ಆಚರಿಕೊಳ್ಳುತ್ತಿರುವ ಪ್ರಿಯಾಂಕ್ ಖರ್ಗೆಯವರ ವೈಯಕ್ತಿಕ ಪರಿಚಯ ಎಲ್ಲರಿಗೂ ತಿಳಿದಿರುವಂತೆದ್ದೆ. ಅವರ ತಂದೆಯವರಾದ ಮಲ್ಲಿಕಾರ್ಜುನ ಖರ್ಗೆಯವರ ನಿಷ್ಟುರ ಮತ್ತು…

3 hours ago

ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿಯವರ ಅದ್ಧೂರಿ ಜನ್ಮದಿನಾಚರಣೆ

ಕಲಬುರಗಿ; ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಂಗಣದಲ್ಲಿ ಶುಕ್ರವಾರದಂದು 2ನೇಯ ಎರಡು ದಿನಗಳ Iಇಇಇ ಇಂಟರ್‍ನ್ಯಾಶನಲ್ ಕಾನ್ಫರೆನ್ಸ್ ಆನ್ ಇಂಟಿಗ್ರೇಟೆಡ್…

4 hours ago

ನಿರಾಶ್ರಿತ ಕೇಂದ್ರದಲ್ಲಿ ಹಣ್ಣು ಹಂಪಲು ಅನ್ನ ಸಂತರ್ಪಣೆ

ಕಲಬುರಗಿ ; ಗ್ರಾಮೀಣಾಭಿವೃದ್ಧಿ ಪಂಚಾಯತ, ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಕ್ ಖರ್ಗೆ ಅವರ ಜನ್ಮದಿನದ ಅಂಗವಾಗಿ…

5 hours ago