ಬಿಸಿ ಬಿಸಿ ಸುದ್ದಿ

ಕಲಬುರಗಿ ಜಿಲ್ಲಾ ಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಲೇಖಕಿ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ ಆಯ್ಕೆ

ಕಲಬುರಗಿ: ಸಮಾಜ ಸುಧಾರಣೆಗೆ 12ನೇ ಶತಮಾನದ ಬಸವಾದಿ ಶರಣರ ವಿಚಾರಗಳನ್ನು ಸಾಮಾನ್ಯರಿಗೆ ತಲುಪಸಿವುದರ ಜತೆಗೆ ಹೊಸತನ ಮೂಡಿಸುವ ಸದುದ್ದೇಶದಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇದೇ ಮೊದಲ ಬಾರಿಗೆ ನಗರದ ಕನ್ನಡ ಭವನದಲ್ಲಿ ಜ.19 ರಂದು ಆಯೋಜಿಸಲು ಉದ್ದೇಶಿಸಲಾಗಿರುವ ಒಂದು ದಿನದ ಜಿಲ್ಲಾ ಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ನಿರ್ದೇಶಕರೂ ಆದ ಹಿರಿಯ ಶರಣ ಲೇಖಕಿ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಪ್ರಸ್ತುತ ಸಂದರ್ಭದಲ್ಲಿ ಸಮಾಜ ಮತ್ತೇ ಮಲೀನಗೊಂಡಿದ್ದು, ಜಾತೀಯತೆ, ಮೂಢನಂಬಿಕೆಗಳು, ಅತ್ಯಚಾರದಂತಹ ಅನೇಕ ಘೋರ ಘಟನೆಗಳು ಜನರ ಮನಸ್ಸುಗಳನ್ನು ಮತ್ತೇ ಆಳಲು ಆರಂಭಿಸಿವೆ. ಮಲೀನಗೊಂಡ ಮನಸ್ಸುಗಳನ್ನು ತಿಳಿಗೊಳಿಸಿ ಅಂಧಕಾರ ಅಳಿಸಿ, ಮನುಷ್ಯತ್ವ ಉಳಿಸಬೇಕಿರುವುದು ಅನಿವಾರ್ಯ. ಸಮಾನತೆಯಿಂದ ಸಾಗಿ ಬಂದ ಅನುಭವ ಮಂಟಪದ ಕಾರ್ಯವೈಖರಿ ಇಂದಿನ ಯುವ ಪೀಳಿಗೆಗೆ ದಾರಿ ಮಾಡಿಕೊಡಬಲ್ಲದು ಎಂಬುದನ್ನು ಈ ಸಮ್ಮೇಳನದ ಮೂಲಕ ತೋರಿಸಲು ಆಶಯವನ್ನು ಹೊಂದಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದಲ್ಲಿ ಜರುಗಿದ ಪದಾಧಿಕಾರಿಗಳು, ವಿಶೇಷ ಆಹ್ವಾನಿತರ ಸಭೆಯಲ್ಲಿ ಗೋದುತಾಯಿ ಮಹಿಳಾ ಪದವಿ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲರೂ ಆದ ಹಿರಿಯ ಲೇಖಕಿ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ ಅವರ ಹೆಸರನ್ನು ಅಂತಿಮಗೊಳಿಸಲಾಯಿತು ಎಂದು ಜಿಲ್ಲಾ ಕಸಾಪ ಕಾರ್ಯದರ್ಶಿ ಶಿವರಾಜ ಎಸ್ ಅಂಡಗಿ ತಿಳಿಸಿದ್ದಾರೆ.

ಸಮ್ಮೇಳನಾಧ್ಯಕ್ಷೆ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲರವರ ಪರಿಚಯ: ವಚನ ಸಾಹಿತ್ಯ ಮತ್ತು ಜನಪದ ಸಾಹಿತ್ಯ ಸಾಹಿತ್ಯ ಕ್ಷೇತ್ರದ ಈ ಎರಡು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸದ್ದು ಗದ್ದಲವಿಲ್ಲದೆ ಸಂಶೋಧನೆಗೈಯ್ಯುತ್ತ, ಕೃತಿ ರಚನೆ ಮಾಡುತ್ತಿರುವ ಈ ಭಾಗದ ಹೆಮ್ಮೆಯ ಶರಣ ಸಾಹಿತಿ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ ರವರಾಗಿದ್ದಾರೆ. ಮತೀಯ ಹಿನ್ನೆಲೆಯಲ್ಲಿ ವಜುಗಳನ್ನು ಗಮನಿಸದೆ ಅವುಗಳ ವಿಶ್ವ ತತ್ವವನ್ನು ಸಂಶೋಧಿಸಿ ನಿರರ್ಗಳವಾಗಿ ಮಾತಾಡುವ ಇವರ ವಾಕ್ ಚಾತುರ್ಯ ಗಮನಿಸುವಂತಹದಾಗಿದೆ.

ಸುಮಾರು 32 ವರ್ಷಗಳಿಂದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಎಲ್ಲ ಕಾಲೇಜುಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಗಲಿಸಿ ಈಗ ಅದೇ ಸಂಘದಲ್ಲಿ ನಿರ್ದೇಶಕರಾಗಿ ಕಾರ್ಯ ಕೈಗೊಂಡಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಸುಮಾರು ಎಂಟು ಜನ ವಿದ್ಯಾರ್ಥಿಗಳು ಪಿ.ಹೆಚ್.ಡಿ., ಪದವಿ, ಇಬ್ಬರು ಎಂ.ಫಿಲ್ ಪದವಿ ಮುಗಿಸಿದ್ದಾರೆ.

ಕಲಿಸುವ ಕಾರ್ಯದೊಂದಿಗೆ ಆಡಳಿತದಲ್ಲಿ ಅಷ್ಟೇ ಭದ್ರರಾಗಿ ಸೇವೆ ಮಾಡುವ ನಿಷ್ಠುರವಾದಿಗಳೂ ಹೌದು. ಇದ್ದುದ್ದನ್ನು ಇದ್ದ ಹಾಗೇ ಹೇಳುವ ಅವರ ದಿಟ್ಟ ಪ್ರವೃತ್ತಿ ಎಲ್ಲರಿಗೂ ತಿಳಿದದ್ದೆ. ತಮ್ಮ ವೃತ್ತಿಯೊಂದಿಗೆ ಸಾಹಿತ್ಯ ರಚನೆ ಮಾಡುವ ಪ್ರವೃತ್ತಿಯಲ್ಲಿ ಒಂದಾಗಿದ್ದಾರೆ. ಅನೇಕ ಕೃತಿಗಳನ್ನು ಬರೆದು ಈ ಭಾಗದ ಹೆಮ್ಮೆಯ ಲೇಖಕಿ ಎನಿಸಿಕೊಂಡಿದ್ದಾರೆ. ಸುಮಾರು 30 ಕ್ಕಿಂತ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ, ಸಂಪಾದಿಸಿದ್ದಾರೆ.

ಬಹುರೂಪಿ ಚೌಡಯ್ಯ, ಅನುಭವ ಮಂಟಪ, ಮಹಾಮನೆ, ಮಹಾದಾಸೋಹಿ ದೊಡ್ಡಪ್ಪ ಅಪ್ಪ, ಪೂಜ್ಯ ಚನ್ನಬಸವ ಪಟ್ಟದ್ದೇವರು, ಕಲ್ಯಾಣ ಕಣ್ಮಣಿ, ಬಾಬಾಸಾಹೇಬ ವಾರದ, ನೀರತಾವರೆ ಅಕ್ಕನಾಗಮ್ಮ, ಜನಪದರು ಕಂಡ ಶರಣರು ಇನ್ನೂ ಮುಂತಾದ ಮೌಲಿಕ ಕೃತಿಗಳನ್ನು ಬರೆದಿದ್ದಾರಲ್ಲದೆ, ಅವ್ವ ಕಾಡಾದಿ ಗೌರವ ಹಾಡಿದ ಹಾಡು, ಗಿರಿ ಕೋಗಿಲೆ, ಶರಣಬಸವರ ಹಂತಿ ಪದ, ಶರಣಬಸವರ ಲಾವಣಿ ಪದ ಹೀಗೆ ಮುಂತಾದ ಕೃತಿಗಳನ್ನು  ಸಂಪಾದಿಸಿದ್ದಾರೆ. ಮಹಾದಾಸೋಹಿ ಶರಣಬಸವರ ಕುರಿತು ಸುಮಾರು 11,111 ತ್ರಿಪದಿಗಳನ್ನು ಸಂಪಾದಿಸಿ `ದಾಸೋಹ ಭಂಡಾರಿ ಶರಣಬಸವ’  ಎನ್ನುವ ಮಹಾಕಾವ್ಯ ಸಂಪಾದಿಸಿ ಪ್ರಕಟಿಸಿದ್ದು ಅವರ ಮಹಾ ಕಾರ್ಯ ಎಂದು ಭಾವಿಸಲಾಗಿದೆ.

ಕನ್ನಡದಲ್ಲಿರುವ ಬೆರಳಣಿಕೆಯ ಮಹಾಕಾವ್ಯಗಳಲ್ಲಿ ಇದು ಮುಖ್ಯವಾಗಿದೆ. 77ಪ ಅಮರಗಣಂಗಳು ಎನ್ನುವ ವಿಷಯದಲ್ಲಿ ಮಹಾಸಂಶೋಧನೆ ಮಾಡಿದ್ದಾರೆ. ಇವರ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಹಿತ್ಯಿಕ ಸೇವೆಯನ್ನು ಗಮನಿಸಿ ಅನೇಕ ಪ್ರಶಸ್ತಿಯೂ ಕೂಡ ಲಭಿಸಿವೆ. ಅದರಲ್ಲಿ ಮುಖ್ಯವಾದವುಗಳಲ್ಲಿ ಶರಣಬಸವ ವಿಶ್ವವಿದ್ಯಾಲಯದ ಡಿ.ಲಿಟ್. ಪ್ರಶಸ್ತಿ,  ಡಿ.ವಿ.ಜಿ. ಸಾಹಿತ್ಯ ಪ್ರಶಸ್ತಿ, ಹಾರಕೂಡ ಸಂಸ್ಥಾನದ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿಗಳು ತಮ್ಮದ್ದಾಗಿಸಿಕೊಂಡಿದ್ದಾರೆ.

ಬಸವಕಲ್ಯಾಣ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಆಳಂದ ತಾಲೂಕಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಖಜೂರಿಯಲ್ಲಿ ನಡೆದ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾರೆ. ರಾಷ್ಟ್ರೀಯ, ಅಂತರಾಷ್ಟ್ರೀಯ, ರಾಜ್ಯ ಜರ್ನಲ್ ಗಳಲ್ಲಿ ಕನ್ನಡ ಸಾಹಿತ್ಯ-ಸಾಂಸ್ಕøತಿಕ ಅದರಲ್ಲೂ ಕಲ್ಯಾಣ ಕರ್ನಾಟಕದ ಕುರಿತು ಸುಮಾರು 200 ಕ್ಕೂ ಹೆಚ್ಚಿನ ಲೇಖನಗಳನ್ನು ಬರೆದು ಅನೇಕರ ವಿಶೇಷ ಗಮನ ಸೆಳೆದಿವೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

32 mins ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

10 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago