ಬಿಸಿ ಬಿಸಿ ಸುದ್ದಿ

ಜೈಕನ್ನಡಿಗರ ಸೇನೆ ನೆತೃತ್ವದಲ್ಲಿ ಪಾಲಿಕೆ ಆಯುಕ್ತರಿಗೆ ಮನವಿ

ಕಲಬುರಗಿ: ಮಹಾನಗರ ಪಾಲಿಕೆಯಲ್ಲಿ ಕಸ ಗೂಡಿಸುವ ಮತ್ತು ಸೆಕ್ಯೂರಿಟಿಗಾರ್ಡ್‍ಗಳಿಗೆ ವೇತನ ಪಾವತಿ ಮಾಡದ ಹೊರಗುತ್ತಿಗೆ ಸೆಕ್ಯೂರಿಟಿ ಕಂಪನಿ ವಿರುದ್ಧ ಸೂಕ್ತಕ್ರಮ ಕೈಗೊಂಡು ಕಾರ್ಮಿಕರ ಬಾಕಿ ವೇತನ ಪಾವತಿಸುಬೇಕು ಹಾಗೂ ಸರಕಾರದ ಆದೇಶದಂತೆ ಕಲಬುರಗಿ ಮಹಾನಗರ ಪಾಲಿಕೆಯಿಂದ ಬೆರೆಡೆಗೆ ವರ್ಗಾವಣೆಗೊಂಡು ಎರಡು ತಿಂಗಳಾದರು ವರ್ಗಾವಣೆಗೊಂಡ ಸ್ಥಳಕ್ಕೆ ಕರ್ತವ್ಯಕ್ಕೆ ಹಾಜರಾಗದೆ ಪಾಲಿಕೆಯಲ್ಲಿವೆ ಕೆಲಸ ನಿರ್ವಹಿಸುತ್ತಿರುವ ಬಾಬು ಸುಭಾಷ ಅವರನ್ನು ವರ್ಗಾವಣೆಗೊಂಡ ಸ್ಥಳಕ್ಕೆ ಹೋಗಲು ಆದೇಶಿಸಬೇಕೆಂದು ಜೈಕನ್ನಡಿಗರ ಸೇನೆ ನೆತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ಕೈಗೊಂಡು ನಂತರ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕಸ ಹೊಡೆಯುವ ಮತ್ತು ಸೆಕ್ಯೂರಿಟಿ ಗಾರ್ಡ್‍ಗಳಿಗೆ ಸರಿಯಾದ ರೀತಿಯಲ್ಲಿ ಇಎಸ್‍ಐ ಹಾಗೂ ಪಿಎಫ್ ಪಾವತಿ ಮಾಡಿರುವುದಿಲ್ಲ.ಹೊರಗುತ್ತಿಗೆ ಕಂಪನಿ ವಿಜಯಪುರ ಮೂಲದ ಜೈ ಜವಾನ ಸೆಕ್ಯೂರಿಟಿ ಮ್ಯಾನಪವರ್ ???ಂಡ್ ಸರ್ವಿಸ್ ಮಾಲೀಕರು ಕಳೆದ 2023ರ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಪಾಲಿಕೆಯಲ್ಲಿ ಕಸ ಗೂಡಿಸುವ ಮತ್ತು ಸೆಕ್ಯೂರಿಟಿ ಗಾರ್ಡ್‍ಗಳ ಸಂಬಳದ ಜೊತೆ ಇಎಸ್‍ಐ ಹಾಗೂ ಪಿಎಫ್ ಭರಿಸುವ ಮಾಹಿತಿ ನೀಡಿ ಪಾಲಿಕೆಯಿಂದ ಹಣ ಪಡೆದಿರುತ್ತಾರೆ. ಆದರೆ ಕಾರ್ಮಿಕರಿಗೆ ಕಳೆದ 2 ತಿಂಗಳುಗಳಿಂದ ಇಎಸ್‍ಐ ಹಾಗೂ ಪಿಎಫ್ ಭರಿಸಿಲ್ಲ.

ಈ ಕುರಿತು ವಿಚಾರಣೆ ನಡೆಸಿದರೂ ಕೂಡ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಪಾಲಿಕೆ ಅಧಿಕಾರಿಗಳು ‘ಮ್ಯಾನಪವರ್’ ಏಪ್ಸನಿಯವರವಿರುದ್ಧ ಬ್ರಹ್ಮಪೂರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ. ಕಾರ್ಮಿಕರ ವೇತನ ಪಾವತಿ ಮಾಡಲು ಹೊಲಮೂಲ ಸಂಸ್ಥೆಗಳನ್ನು ನೇಮಕ ಮಾಡುವುದನ್ನು ಬಿಟ್ಟು ಸ್ಥಳೀಯರನ್ನು ನೇಮಕ ಮಾಡಿದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ಕೂಡಲೇ ವಿಜಯಪುರ ಮೂಲದ ಜೈಜವಾನ ಸೆಕ್ಯೂರಿಟಿ ಮ್ಯಾನಪವರ್ ಆಂಡ್ ಸರ್ವಿಸ್ ಕಂಪನಿ ಮಾಲೀಕರ ವಿರುದ್ಧ ಸೂಕ್ತಕ್ರಮ ಕೈಗೊಂಡು ಸದರಿ ಕಾರ್ಮಿಕರಿಗೆ ವೇತನ ಪಾವತಿ ಮಾಡಿಸಬೇಕು’ ಎಂದು ಜೈ ಕನ್ನಡಿಗರ ಸೇನೆ ಬೇಡಿಕೆಯ ಮನವಿ ಪತ್ರಪ್ರದರ್ಶನದೊಂದಿಗೆ ಆಗ್ರಹಿಸಿದೆ. ಕಾರ್ಮಿಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸದಿದ್ದಲ್ಲಿ ಮಹಾನಗರ ಪಾಲಿಕೆ ಎದುರು ಜೈ ಕನ್ನಡಿಗರ ಸೇನೆ ಉಗ್ರವಾದ ಹೋರಾಟ ಮಾಡುವುದಾಗಿ ಮನವಿಯಲ್ಲಿ ಎಚ್ಚರಿಸಿದೆ.

ಈ ಸಂಧರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ದತ್ತುಭಾಸಗಿ, ರಾಮಾ ಪೂಜಾರಿ, ಅನೀಲ ತಳವಾರ, ಮಲ್ಲು ಆಲಗೂಡ, ಆನಂದ ಕೊಳ್ಳೂರ, ಅಮರ ಯಾದವ್, ಹಣಮಂತ ಗಂಜ್ ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

20 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago