ಕಲಬುರಗಿ; ಗ್ರಾಮದ ಮುಖ್ಯ ದ್ವಾರ ಗ್ರಾಮದ ಶಿಸ್ತು, ಮೌಲ್ಯಗಳ, ಸಂಸ್ಕಾರದ, ಹಾಗೂ ಉತ್ತಮ ಬಾಂಧವ್ಯಗಳ ಭದ್ರತೆಯ ಸಂಕೇತವಾಗಿದೆ ಎಂದು ರಟಗಲ ಪೂಜ್ಯರಾದ ರೇವಣಸಿದ್ದ ಶಿವಾಚಾರ್ಯರು ಹೇಳಿದರು.
ತಾಲೂಕಿನ ಅವರಾದ (ಬಿ) ಗ್ರಾಮದ ಶ್ರೀ ವೀರಭದ್ರೇಶ್ವರ ದ್ವಾರ ಬಾಗಿಲು ಲೋಕಾರ್ಪಣೆ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತ ಯಾವ ವ್ಯಕ್ತಿ ಹತ್ತು ಜನರ ಕಣ್ಣೀರನ್ನು ಒರೆಸುವ ಕಾರ್ಯ ಮಾಡುತ್ತಾನೋ ಆ ವ್ಯಕ್ತಿಗೆ ಯಾವ ಸಂದರ್ಭದಲ್ಲಿಯು ಕಷ್ಟ ಬರದಂತೆ ದಿವ್ಯ ಶಕ್ತಿ ಕಾಪಾಡುತ್ತದೆ. ತನಗಾಗಿ ಬದುಕುವುದು ಸಿಮಿತ ಜೀವನವಾದರೆ, ಇತರರಿಗಾಗಿ ಬದುಕುವುದು ಉಸಿರು ನಿಂತ ಮೇಲೆಯು ಜನರ ಮನದಲ್ಲಿ ಜೀವಂತವಾಗಿರುತ್ತಾರೆ. ಒಳ್ಳೆಯ ಆರೋಗ್ಯ, ಮಾಡಬೇಕೆಂಬ ಮನಸು ಇರುವಾಗಲೆ, ಉತ್ತಮವಾದ ಕಾರ್ಯ ಮಾಡಬೇಕೆಂದು ಮಾರ್ಮಿಕವಾಗಿ ನುಡಿದರು.
ಅವರಾದ ಪೂಜ್ಯರಾದ ಮರಳಸಿದ್ದ ಶಿವಾಚಾರ್ಯರು ನೇತೃತ್ವ ವಹಿಸಿ ಮಾತನಾಡುತ್ತಾ ಇಂದಿನ ಸಂದರ್ಭದಲ್ಲಿ ಸಮಾಜ ಸೇವೆ ಮಾಡಿದರೆ ನಮಗೇನು ಲಾಭ ಸಿಗುತ್ತದೆ ಎನ್ನುವ ಸಂದರ್ಭದಲ್ಲಿ ನಾಯ್ಕೋಡಿ ಕುಟುಂಬ ಒಳ್ಳೆಯ ಕಾರ್ಯ ಮಾಡಿ ಸಮಾಜಕ್ಕೆ ಆದರ್ಶವಾದ ಕುಟುಂಬವಾಗಿದೆ ಎಂದು ಹೇಳಿದರು.
ಬಬಲಾದ ಪೂಜ್ಯರಾದ ಗುರುಪಾದಲಿಂಗ ಮಹಾಶಿವಯೋಗಿಗಳು ದ್ವಾರಬಾಗಿಲು ಲೋಕಾರ್ಪಣೆಗೊಳಿಸಿದರು. ಗಣಜಲಖೇಡ ಪೂಜ್ಯರಾದ ನಾಗೇಶ ಪಂಚಾಳ, ನಿಂಗಪ್ಪ ಪೂಜಾರಿ,ಚಿಂತಕರಾದ ರಮೇಶ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವೀರಣ್ಣಾ ಡೋಣಿ, ಜಗನ್ನಾಥ ಹರಸೂರ, ಅಮೃತರಾವ ಪಾಟೀಲ, ಲಿಂಗರಾಜ ಮಾಲಿ ಪಾಟೀಲ, ಧನವಂತ ಸಿಂಘೆ, ದೇವೇಂದ್ರಪ್ಪ ಕಿವಡೆ,ಬಾಬುರಾವ ನಾಯ್ಕೋಡಿ, ರೇವಣಸಿದ್ದಪ್ಪ ಮುಕರಂಬಿ, ಸೂರ್ಯಕಾಂತ ತೆಗನೂರ, ಬಾಬುರಾವ ಚೌಡಶೆಟ್ಟಿ, ಮೈಬುಸಾಬ ಗುರಮಿಟಕಲ, ಸಿರಾಜುದ್ದೀನ್ ಮೆವಡಿ, ಬಸ್ಸಮ್ಮಾ ನಾಯ್ಕೋಡಿ,ಶಿವರಾಜ ಹಿಚಗೇರಿ, ತಿಪ್ಪಣ್ಣ ಎಸ್ ಬಿ. ಸೇರಿದಂತೆ ಗ್ರಾಮದ ಅನೇಕ ಜನ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದ್ವಾರಬಾಗಿಲು ನಿರ್ಮಿಸಿದ ಮಂಜುನಾಥ ನಾಯ್ಕೋಡಿ ಕುಟುಂಬದವರಿಗೆ ಗ್ರಾಮದ ಪರವಾಗಿ ವಿಶೇಷವಾಗಿ ಸನ್ಮಾನಿಸಲಾಯಿತು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…