ಕಲಬುರಗಿ: ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ರಾಜ್ಯದಲ್ಲಿ ಕನಿಷ್ಠ 5 ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಬೇಕು ಎಂದು ಕರ್ನಾಟಕ ಮುಸ್ಲಿಂ ಪಾಲ್ಟೀಕ್ಸ್ ಫೋರ್ಮ್ ರಾಜ್ಯ ಉಪಾಧ್ಯಕ್ಷ ಸಲಾಂ ಪಾಷಾ ಆಗ್ರಹಿಸಿದ್ದಾರೆ.
ಚಿಂಚೋಳಿ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದ 28 ಲೋಕಸಭೆಯ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದವು 7 ಕ್ಷೇತ್ರದಲ್ಲಿ ನಿರ್ಣಾಯಕವಾಗಿ ಗೆಲವು ಸಾಧಿಸುವ ಕ್ಷೇತ್ರಗಳಾಗಿವೆ. ಬೀದರ,ಬೆಂಗಳೂರು ಸೆಂಟ್ರಲ್,ಹುಬ್ಬಳ್ಳಿ-ಧಾರವಾಡ,ಮಂಗಳೂರ,ಹಾವೇರಿ ಲೋಕಸಭೆಗಳಲ್ಲಿ ಟಿಕೆಟ್ ನೀಡಬೇಕು ಎಂದರು.
ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ತರಲು ಮುಸ್ಲಿಂ ಸಮುದಾಯದ ಕುಡುಗೆ ಹೆಚ್ಚಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯದ ಈ ಕೊಡೆಗೆಯನ್ನು ಗಮನದಲ್ಲಿಟ್ಟಿಕೊಂಡು ತೀರ್ಮಾನ ಕೈಗೊಂಡರೇ ಸ್ಪಷ್ಟ ಬಹುಮತದಿಂದ ಐದು ಕ್ಷೇತ್ರದಲ್ಲಿ ಗೆಲವು ಸಾಧಿಸಬುದೆಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ನಾಸೀರ ಮೌಲಾನಸಾಬ ಮಾತನಾಡಿ ಕಳೆದ 20ವರ್ಷದಿಂದ ಕಲಬುರ್ಗಿ ಬೀದರ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಮುಸ್ಲಿಂ ಸಮುದಾಯದ ವ್ಯಕ್ತಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿಸಿಲ್ಲ. ಸಕಾಷ್ಟು ಸಮಸ್ಯೆಗಳು ಬಂದರೂ ಸಹ ಯಾರು ಧ್ವನಿಯೇತ್ತುತ್ತಿಲ್ಲ. ರಾಜ್ಯದಲ್ಲಿ ಮುಸ್ಲಿಂ ಸಮಾಜದ ಮತಗಳು ಶೇ.40ಪ್ರತಿಶತಃ ಮತಗಳಿದ್ದು ಕಾಂಗ್ರೆಸ್ ಪಕ್ಷವು ಮತಗಳು ಪಡೆದು ಮುಸ್ಲಿಂರಿಗೆ ಟಿಕೆಟ್ ನೀಡದೆ ವಂಚನೆ ಮಾಡುತಿದೆ ಎಂದು ಆಕ್ರೋಶ ಹೊರಹಾಕಿದರು.
20 ವರ್ಷದಿಂದ ಕಲಬುರಗಿಯಲ್ಲಿ ಎಸ್ಸಿ ಮೀಸಲಾತಿ ನಂತರ ಬೀದರ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಕೊಡಬಹುದಿತ್ತು ಆದರೆ ಟಿಕೆಟ್ ನೀಡದೆ ಸಮುದಾಯಕ್ಕೆ ವಂಚನೆ ಮಾಡಲಾಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದ ಅವರು, ಮುಸ್ಲಿಂ ಸಮಾಜದ ಸಮಸ್ಯೆಗಳ ಪರವಾಗಿ ಧ್ವನಿಯಾಗಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ರಾಜ್ಯದಲ್ಲಿರುವ ನಿರ್ಣಯಕ ಮುಸ್ಲಿಂ ಮತಗಳಲಿರುವ ಕ್ಷೇತ್ರಗಳಲ್ಲಿ ಸಮುದಾಯದಕ್ಕೆ ಟಿಕೆಟ್ ನೀಡಿ ಗೆಲ್ಲಿಸುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಚಿಂಚೋಳಿ ಪುರಸಭಾ ಸದಸ್ಯರಾದ ಅಬ್ದುಲ್ ಬಾಷೀದ್, ಅಬ್ದುಲ್ ಹಮೀದ್ ಹಾಫೀಜ್, ಅನ್ವರ ಖತೀಬ್, ಡಾ. ಮಹ್ಮುದ್ ರಫೀ, ಅಲಿಂಸಾಬ, ಮತೀನ ಸೌದಾಗಾರ ಮಾತನಾಡಿದರು.
ಅಲೀಂ ಅಹಮದ್, ಸಂಚಾಲಕ ಸೈಯದ್ ಸಲಾಂ ಪಾಷಾ, ಗ್ರಾ.ಪಂ.ಅಧ್ಯಕ್ಷ ನಾಸೀರ್ ಮೌಲಾನಾ, ಜಿಲ್ಲಾ ಸೆ. ಅನ್ವರ್ ಸಿಲೇದಾರ್ ಮತ್ತು ಕೆಎಂಪಿಎಫ್ ಕಾರ್ಯದರ್ಶಿ ಅಫ್ಜಾಲ್ ಮಹಮೂದ್, ಮತೀನ್ ಸೌದಾಗರ, , ಶೇಖ್ ಫರೀದ್, ಮೌಲಾನಾ ನೌಮಾನ್ ಪಟೇಲ್, ಅಸ್ಲಾಂ ಸೌದಾಗರ್, ಜಹೂರ್ ಶಾ, ಹಾಸಿಂ ಹಶ್ಮಿ, ಇಸ್ಮಾಯಿಲ್ ಹಫೀಜ್, ನುಮಾನ ಪಟೇಲ,ಶೇಖ್ ಫರೀದ್,ಇಸ್ಮಾಯಿಲ್ ಹಾಫೀಜ್,ಹಸೇನ ಹಾಶ್ಮಿ,ಜಹುರಶಾ,ಅಸ್ಲಾಂ ಸೌದಾಗಾರ,ಮಖ್ದೂಮ್ಖಾನ್ ಮತ್ತಿತರರು ಉಪಸ್ಥಿತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…