ಬಿಸಿ ಬಿಸಿ ಸುದ್ದಿ

ಸಂಭ್ರಮದ ಎಳ್ಳು ಅಮವಾಸ್ಯೆ

ಕಲಬುರಗಿ: ನಗರದ ಔರದ (ಬಿ) ಗ್ರಾಮದ ಸಮೀಪ ಹೊಲದಲ್ಲಿ ರೈತರ ಸುಗ್ಗಿ ಹಬ್ಬ ಆರಾಧ್ಯ ದೇವತೆ ಭೂಮಿ ತಾಯಿಗೆ ವಿಶೇಷ ಎಳ್ಳ ಅಮಾವಾಸ್ಯೆ ಪ್ರಯುಕ್ತ ಹೊಲದಲ್ಲಿ ಬೆಳೆದು ನಿಂತಿರುವ ಹಿಂಗಾರು ಪೈರು ನಡುವೆ ನಿಂತ ಜೋಳದ ಐದು ದೊಂಟ್ ಕಟ್ಟಿ ಮತ್ತು ಸೀರೆ ಉಡಿಸಿ ಐದು ಕಲ್ಲು ಇಟ್ಟಿ ಅದಕ್ಕೆ ಫೂಜೆ ಸಲ್ಲಿಸುವರು ಹಾಗೆ ಮನೆಯ ಆರಾಧ್ಯ ದೇವರ ಪೋಟೋ ಇಟ್ಟು ವಿಶೇಷ ಪೂಜೆ ಭೂ ತಾಯಿಗೆ ಸಮರ್ಪಿಸುವವರು.

ಬಂಧು ಬಳಗ,ನೆರೆ ಹೊರೆಯವರು ಮತ್ತು ಸ್ನೇಹಿತರನ್ನು ಕರೆಯುವುದು ಸಂಪ್ರದಾಯ ವಿಶೇಷ ಭೋಜನ ಎಳ್ಳು ಹಚ್ಚಿದ ಸಜ್ಜೆ ರೋಟ್ಟಿ, ಜೋಳದ ರೊಟ್ಟಿ, ಚಪಾತಿ, ಶೆಂಗಾಚಟ್ನಿ ಮೊಸರು, ನಾನಾ ಬಗೆಯ ಚಟ್ನಿ ,ಕಾಳು ಪಲ್ಯ, ಎಣ್ಣಿ ಗಾಯಿ ಪಲ್ಯ, ಭಜೀ ಪಲ್ಯ, ಶೆಂಗಾ ಹೋಳಿಗೆ, ಸಿಹಿ ಪೊಂಗಲ್, ಈ ಎಳ್ಳು ಅಮಾವಾಸ್ಯೆ ಹಬ್ಬದ ಸಂಭ್ರಮ ಮನೆ ಮಾಡುತ್ತದೆ, ಜಿಲ್ಲಾ ದಂತ ಆರೋಗ್ಯ ಅಧಿಕಾರಿಗಳು. ಸಂಧ್ಯಾ ಸುರೇಶ್ ಕಾನೆಕರ್ ಅವರ ಔರದ್ (ಬಿ) ಗ್ರಾಮದ ಸ್ವಂತ ಹೋಲದಲ್ಲಿ ಭೋಜನಕೂಟದಲ್ಲಿ , ಸಹೋದ್ಯೋಗಿಗಳೊಂದಿಗೆ ಸತ್ವ ಪೂರಿತ ಸಮೃದ್ಧಿ ಭೋಜನ ಸವಿಯಲಾಯಿತು.

ಈ ಸಂಧರ್ಭದಲ್ಲಿ ಎಲ್ಲಾ ಬಂಧು ಬಳಗದವರು, ಸ್ನೇಹಿತರ ಬಳಗ, ಆತ್ಮೀಯರಿಗೆ ಕರೆಯಿಸಿ ಊಣಬಡಿಸಿದು ವಿಶೇಷವಾಗಿತ್ತು. ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲರು ಡಾ. ರವಿಕಾಂತಿ ಎಸ್ ಕ್ಯಾತನಾಳ , ಡಾ. ಸ್ವರೂಪ, ಡಾ. ಶ್ವೇತ ದೇವದುರ್ಗ, ಡಾ. ಶ್ವೇತ ರಾಜಗಿರಿ, ಡಾ. ಅಮೃತಾ ದೇಶಪಾಂಡೆ, ಪರಿವಾರದವರು, ಡಾಂಗೆ ಪರಿವಾರದವರು, ಶಿವಕಾಂತ ಸ್ವಾಮಿ, ರವೀಂದ್ರ ಠಾಕೂರ್, ಮಂಜುನಾಥ ಕಂಬಾಳಿಮಠ ಪರಿವಾರದವರು, ಇನ್ನಿತರ ಸ್ನೇಹ ಬಳಗದವರು ಸಂತಸ ವ್ಯಕ್ತಪಡಿದರು.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

13 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

13 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

14 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

15 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

15 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

15 hours ago