ಸುರಪುರ: ರಾಷ್ಟ್ರದ ಶ್ರೇಷ್ಠ ಯುವ ಸಂತ ಸ್ವಾಮಿ ವಿವೇಕಾನಂದರ ತತ್ವ, ಚಿಂತನೆ, ವಿಚಾರಗಳು ಯುವ ಜನಾಂಗಕ್ಕೆ ಸ್ಪೂರ್ತಿ ಮತ್ತು ಪ್ರೇರಣೆಯಾಗಿವೆ ಎಂದು ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಹೇಳಿದರು.
ರಂಗಂಪೇಟೆಯ ಬಸವಪ್ರಭು ತರಬೇತಿ ಕೇಂದ್ರದಲ್ಲಿ ಇಂದು ನೆಹರು ಯುವ ಕೇಂದ್ರ ಕಲಬುರಗಿ, ಸಗರನಾಡು ಯುವಕ ಸಂಘ ಕನ್ನೆಳ್ಳಿ ಸಹಯೋಗದೊಂದಿಗೆ ಆಯೋಜಿಸಿದ್ದ ರಾಷ್ಟ್ರೀಯ ಯುವದಿನ ಹಾಗೂ ಸಪ್ತಹಾ ಮತ್ತು ಸ್ವಾಮಿ ವಿವೇಕಾನಂದರ 161ನೇ ಯ ಜನ್ಮ ದಿನೋತ್ಸವ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚಿಕ್ಯಾಗೋ ಸಮ್ಮೇಳನದ ಮೂಲಕ ವಿಶ್ವದ ಗಮನ ಸೇಳೆದ ಸ್ವಾಮಿ ವಿವೇಕಾನಂದರು ಈ ರಾಷ್ಟ್ರದ ಯುವ ಜನಾಂಗಕ್ಕಾಗಿ ಅನೇಕ ವಿಚಾರಗಳನ್ನು, ಚಿಂತನೆಗಳನ್ನು, ಆಲೋಚನೆಗಳನ್ನು ತಿಳಿಸಿದ್ದಾರೆ. ಅವರ ದೇಶ ಪ್ರೇಮ, ಯುವ ಜನಾಂಗದ ಮೇಲಿನ ಅಭಿಮಾನ ರಾಷ್ಟ್ರಭಕ್ತಿ ಆದರ್ಶಪ್ರಾಯವಾಗಿತ್ತು ಇಂದಿನ ಯುವಜನಾಂಗಕ್ಕೆ ವಿವೇಕಾನಂದರ ವಿಚಾರಗಳು ಅತ್ಯಂತ ಅವಶ್ಯಕವಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ನೀಡಿದ ನಫಿಸಾ ಅವರು ಮಾತನಾಡಿ, ಬಾಲ್ಯದಲ್ಲಿದ್ದ ನರೇಂದ್ರ ರಾಮಕೃಷ್ಣ ಪರಮಹಂಸರ ಪ್ರೇರಣೆಯಿಂದ ಸ್ವಾಮಿ ವಿವೇಕಾನಂದ ಆದರು, ಅಮೇರಿಕಾದ ಚಿಕ್ಯಾಗೋ ಸಮ್ಮೇಳನದ ಮೂಲಕ ವಿಶ್ವದ ಗಮನಸೇಳೆದು ಭಾರತದ ಭವ್ಯತೆ, ಪರಂಪರೆ, ಜಾಗತಿಕಮಟ್ಟದಲ್ಲಿ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಜಾಗೃತಿ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಕಾಂತ ಮಾರ್ಗಲ್, ಶ್ರೀಗುರು ಸೇವಾ ಸಂಸ್ಥೆಯ ಅಧ್ಯಕ್ಷ ಮಲ್ಲು ಬಾದ್ಯಾಪುರ, ಮುಖಂಡರಾದ ಶಿವಶರಣಪ್ಪ ಹೆಡಿಗಿನಾಳ, ಸಿದ್ದನಗೌಡ ಹೆಬ್ಬಾಳ, ಮಹೇಂದ್ರ ಅಂಗಡಿ, ಬಸವರಾಜ ಗುಂಡಲಗೇರಿ ವೇದಿಕೆಮೇಲಿದ್ದರು. ಕಾರ್ಯಕ್ರಮವನ್ನು ಹಣಮಂತ್ರಾಯ ದೇವತ್ಕಲ್ ನಿರೂಪಿಸಿದರು, ದಿವ್ಯಾ ಪ್ರಾಥಿಸಿದರು, ರೇಣುಕಾ ಸ್ವಾಗತಿಸಿದರು.
ಅಖೀಲಾ ಜುಜಾರೆ ವಂದಿಸಿದರು. ಯುವದಿನ ಅಂಗವಾಗಿ ವಿದ್ಯಾರ್ಥಿಗಳಿಂದ ಭಾಷಣ ಸ್ಪರ್ದೆ, ಪ್ರಬಂಧ ಸ್ಪರ್ದೆ ಏರ್ಪಡಿಸಲಾಗಿತ್ತು, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…