ಕಲಬುರಗಿ: ವೀರ ಯೋಧರು ಹಾಗೂ ಹುತಾತ್ಮ ಯೋಧರ ನೆರವಿಗಾಗಿ ನಗರದ ಐವಾನ್ ಶಾಹಿ ರಸ್ತೆಯಲ್ಲಿರುವ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದ ಬಳಿ ಇರುವ ವಿಜಯ್ ವಿದ್ಯಾಲಯದ ಮೈದಾನದಲ್ಲಿ ಸೆಪ್ಟೆಂಬರ್ ೧೪ರಂದು ಸಂಜೆ ೬ರಿಂದ ೧೦ ಗಂಟೆಯವರೆಗೆ ಹಾಲಿವುಡ್ ಮತ್ತು ಬಾಲಿವುಡ್ ತಾರೆಯರಿಂದ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಮೇಯರ್ ಹಾಗೂ ಖ್ಯಾತ ಗಾಯಕರೂ ಆದ ನ್ಯಾಷನಲ್ ಇಂಟಿಗ್ರೇಷನ್ ಅಸೋಶಿಯೇಶನ್ಸ್ ಸಂಯೋಜಕ ಅಷ್ಟಾಕ್ ಅಹ್ಮದ್ ಚುಲಬುಲ್ ಅವರು ಇಲ್ಲಿ ಹೇಳಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಹಾಗೂ ಸಿನೇಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಗ್ರೀನ್ ಲೀಫ್ ಫಿಲ್ಮಿಸ್ ಸಂಸ್ಥೆಯ ವತಿಯಿಂದ ಯೋಧ ಹಾಗೂ ಹುತಾತ್ಮ ಯೋಧರ ಕುಟುಂಬಗಳಿಗೆ ಗೌರವ ಸಮರ್ಪಣೆ ಮತ್ತು ಸಹಾಯ ಧನ ವಇತರಣೆ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಹೈದ್ರಾಬಾದ್ ಕರ್ನಾಟಕದ ೧೦ ವೀರ ಯೋಧರ ಕುಟುಂಬಗಳಿಗೆ ಸನ್ಮಾನ ಹಾಗೂ ಸಹಾಯ ಧನ ವಿತರಣೆ ಮತ್ತು ಗಡಿ ಸೇವೆಯಲ್ಲಿ ವೈರಿಗಳೊಂದಿಗಿನ ಕಾಳಗದಲ್ಲಿ ಕೈಕಾಲುಗಳನ್ನು ಕಳೆದುಕೊಂಡ ಇಬ್ಬರು ವೀರ ಯೋಧ ಸೈನಿಕರಿಗೆ ಸನ್ಮಾನಿಸಲಾಗುವುದು ಎಂದು ಅವರು ಹೇಳಿದರು.
ಕಾರ್ಯಕ್ರಮದ ಯಶಸ್ವಿಗೆ ವಿವಿಧ ರಂಗಗಳಲ್ಲಿ ಗುರುತಿಸಿಕೊಂಡಿರುವ ಗಾಯಕರು, ಖ್ಯಾತ ತಾರೆಯರು, ರಾಷ್ಟ್ರ ಮಟ್ಟದ ಕಲಾವಿದರು ಪಾಲ್ಗೊಂಡು ಕಲಾ ರಸಿಕರನ್ನು ರಂಜಿಸುವರು. ಖ್ಯಾತ ಸಂಗೀತಗಾರರಾದ ಸಬೀರ್‌ಖಾನ್, ಶೃದ್ಧಾ ಆರ್ಯ, ದ ಗ್ರೇಟ್ ಖಲಿ, ಜೀ ಕನ್ನಡ ವಾಹಿನಿಯ ಖ್ಯಾತಿಯ ರನ್ನರ್ ಆಫ್ ಗಾಯಕ ಹಣಮಂತಪ್ಪ ಲಂಬಾಣಿ, ಜ್ಯೂನಿಯರ್ ಗಾಯಕ ಜಯಶಕುಮಾರ್, ಸಂಗೀತಗಾರ ಸೌರಿನ ಭಟ್ ಹಾಗೂ ಜ್ಯೂನಿಯರ್ ಶಾರೂಖಖಾನ್ ಖ್ಯಾತಿಯ ಪ್ರಶಾಂತ್, ಖ್ಯಾತ ಗಾಯಕ ಸುಧೀರ್ ಹಾಗೂ ಜ್ಯೂನಿಯರ್ ಸನ್ನಿ ಡಿಯೋಲ್, ಜಾಹೀದ್ ಸೇರಿದಂತೆ ಅನೇಕ ಸಂಗೀತಗಾರರು, ಕಲಾವಿದರು, ಅಂತರ್ರಾಷ್ಟ್ರೀಯ ಖ್ಯಾತಿಯ ವಿ ಅನ್ ಬಿಟೆಬಲ್ ಡ್ಯಾನ್ಸ್ ಕ್ರೀವ್ ತಂಡದ ಸದಸ್ಯರು ಭಾಗವಹಿಸಿ ಆಕರ್ಷಕ ನೃತ್ಯ ಮಾಡಲಿದ್ದಾರೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದ ಅಂಗವಾಗಿ ಹಾಡು ಹಾಗೂ ನೃತ್ಯ ಕಾರ್ಯಕ್ರಮ ಪಾರದರ್ಶಕತೆಯಿಂದ ಮುಗಿದಿದೆ. ಅದರಲ್ಲಿ ಆಯ್ಕೆಯಾದ ೧೦ ಜನ ಕಲಾವಿದರಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಗುವುದು. ಉಳಿದ ಮೂವರು ಕಲಾವಿದರಿಗೆ ವೇದಿಕೆಯಲ್ಲಿ ಕಲೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮಕ್ಕೆ ಭಾಗವಹಿಸುವರು ಮುಂಚಿತವಾಗಿ ಟಿಕೆಟ್‌ಗಳನ್ನು ಖರೀದಿಸಬೇಕು. ಅದರಲ್ಲಿ ೫೦೦ ಹಾಗೂ ೧೦೦೦ರೂ.ಗಳ ಟಿಕೆಟ್ ದರವಿದ್ದು, ನಗರದ ಗೋಲ್ಡ್ ಹಬ್, ೨ನೇ ಮಹಡಿ,ಶಾಪ್ ನಂಬರ್ ೧೧೪, ಕೆಬಿಎನ್ ಆಸ್ಪತ್ರೆ ಎದುರು, ಮುಖ್ಯ ರಸ್ತೆ, ಕಲಬುರ್ಗಿ ವಿಳಾಸಕ್ಕೆ ಇಲ್ಲವೇ ಮೊಬೈಲ್ ನಂಬರ್ ೮೪೩೧೯೧೬೨೪೧, ೮೪೩೧೯೨೭೨೬೭ಗೆ ಸಂಪರ್ಕಿಸಲು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರೊಡ್ಯೂಜರ್ ಶ್ರೀಮತಿ ಕಿರಣ್ ಸಿಂಗ್, ಸಂಘಟಕ ಶಕೀಲ್, ವರ್ಷಾ, ದೀಪಕ್ ಪಂಡಿತ್, ರಮೇಶ್ ನವಲೆ ಮುಂತಾದವರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…