ಕೊಪ್ಪಳ : ಸ್ವಾಮಿ ವಿವೇಕಾನಂದರ ವಿಚಾರ ಧಾರೆಗಳು ಯುವ ಮನಸ್ಸುಗಳಲ್ಲಿ ಆತ್ಮಸ್ಥೈರ್ಯ ತುಂಬುತ್ತವೆ. ಅಲ್ಲದೇ ಉತ್ತಮ ಮಾರ್ಗದರ್ಶನವನ್ನು ಮಾಡುತ್ತವೆ. ಉತ್ತಮ ಸಮಾಜವನ್ನು ನಿರ್ಮಿಸುವ ಯುವಕರನ್ನು ಸೃಷ್ಟಿಸುವ ಶಕ್ತಿ ಸ್ವಾಮಿ ವಿವೇಕಾನಂದರ ಚಿಂತನೆ ಹಾಗೂ ವಿಚಾರಗಳಲ್ಲಿ ಅಡಗಿದೆ . ಅವರ ವಿಚಾರ ಧಾರೆಗಳು ಇಂದಿನ ಸಮಾಜಕ್ಕೆ ಮತ್ತು ಯುವ ಪೀಳಿಗೆಗೆ ಅಗತ್ಯವಾಗಿದೆಯೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೆಶಕ ವಿಠ್ಠಲ ಜಾಬಗೌಡರ ಅಭಿಪ್ರಾಯಪಟ್ಟರು .
ಅವರು ನಗರದ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಸ್ವಾಮಿ ವಿವೇಕಾನಂದ ರ 161ನೇ ಜಯಂತಿ ಹಾಗೂ ರಾಷ್ಟಿಯ ಯುವ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
ದೇಶದ ಶಕ್ತಿಯೇ ಯುವಕರ ಶಕ್ತಿ ಆಗಿದೆ. ಯುವಕರಿಂದ ದೇಶ ಸದೃಡವಾಗುತ್ತದೆ. ಇವರ ವಿಚಾರಗಳಿಂದ ನಾಯಕತ್ವ ಗುಣ, ಸಮಾಜ ಸೇವಾ ಮನೋಭಾವ ಹಾಗೂ ದೇಶಪ್ರೇಮ ಬೆಳೆಯುತ್ತದೆ. ಆತ್ಮಸ್ಥೈರ್ಯ ಹೆಚ್ಚುತ್ತದೆ. ಆದ್ದರಿಂದ ವಿವೇಕಾನಂದರ ವಿಚಾರ ಧಾರೆಗಳು ಎಂದಿಗೂ ಆದರ್ಶವಾಗಲಿ ಎಂದು ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿದರು.
ಬೆಂಗಳೂರಿನ ನಿಮಾನ್ಸ ಆಸ್ಪತ್ರೆಯ ಕ್ಷೇತ್ರ ಸಂಪರ್ಕ ಆಧಿಕಾರಿ ನಾಗರತ್ನಾ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆತ್ಮ ಸ್ಟೈರ್ಯ ತುಂಬಲು ವಿವೇಕಾನಂದರ ವಿಚಾರ ಧಾರೆಯ ವಿಷಯ ಕುರಿತು ಮಾತನಾಡುತ್ತಾ ಸಕಾರಾತ್ಮಕ ವಿಚಾರಗಳು ಸ್ಫೂರ್ತಿ ತುಂಬುತ್ತವೆ. ಅಂತಹವುಗಳನ್ನು ತುಂಬುವ ಶಕ್ತಿ ವಿವೆಕಾನಂದರ ಚಿಂತನೆಗಳಿಗೆ ಇವೆ. ಆವರ ಆದರ್ಶಗಳನ್ನು ತಾವು ವಿದ್ಯಾರ್ಥಿಗಳು ಬೆಳೆಸಿಕೊಳ್ಳ ಬೇಕು ಸದೃಡ ಬದುಕನ್ನ ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಆಧ್ಯಕ್ಷತೆ ಕಾಲೇಜಿನ ಪ್ರಾಂಶುಪಾಲ ಡಾ.ಚೆನ್ನಬಸವ ಮಾತನಾಡಿದರು. ಕಾರ್ಯಕ್ರಮದ ಸಂಯೋಜಕ ಮತ್ತು ಎನ್.ಎಸ್.ಎಸ್ ಅಧಿಕಾರಿ ಡಾ.ನಾಗರಾಜ ದಂಡೋತಿ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಆನಂದ ಹಳ್ಳಿಗುಡಿ ಅತಿಥಿಗಳಾಗಿ ಆಗಮಿಸಿದ್ದರು. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಜ. 5ರಿಂದ ರಿಂದ ಜ.11ರವರೆಗೆ ಹಮ್ಮಿಕೊಂಡ ರಾಷ್ಟಿಯ ಭಾವೈಕ್ಯತೆಯ ಶಿಬಿರದಲ್ಲಿ ಭಾಗವಹಿಸಿದ ಸ್ವಯಂ ಸೇವಕಿ ಮೇಘಾ, ರಂಜಿತಾ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ವಿದ್ಯಾರ್ಥಿನಿ ಶರಣಮ್ಮ ಸಂಗಡಿಗರು ಎನ್.ಎಸ್.ಎಸ್ ಗೀತೆ ನೆರವೇರಿಸಿದರು. ವಿದ್ಯಾರ್ಥಿನಿ ಭಾಗ್ಯ ನಿರೂಪಿಸಿದರು. ಡಾ. ರಾಜು ಹೊಸಮನಿ ವಂದಿಸಿದರು. ಎನ್.ಎಸ್.ಎಸ್ ಎ ಮತ್ತು ಬಿ ಘಟಕದ ಸ್ವಯಂ ಸೇವಕರು ಭಾಗವಹಿಸಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…