ಕಲಬುರಗಿ: ಜಾತಿಗ್ರಸ್ತ ಜಗತ್ತಿಗೆ ಅಂಬೇಡ್ಕರ್ ಅರಿವಿನ ಜರೂರತ್ತಿದೆ. ಮನ-ಮನೆಕ್ಕೆ ಅಂಬೇಡ್ಕರ್ ತಲುಪಬೇಕಾಗಿದೆ. ಮೂಢನಂಬಿಕೆಗಳ ತವರೂರಾದ ಭಾರತವು ಮುಂದುವರೆದ ಪ್ರಗತಿ ಕಾಣಬೇಕಾದರೆ ಅಂಬೇಡ್ಕರ್ ಅರಿವು ಆಗಬೇಕು ಎಂದು ಸಹ ಪ್ರಾಧ್ಯಾಪಕರಾದ ಡಾ.ಜಯದೇವಿ ಗಾಯಕವಾಡ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಮಾನವ ಬಂಧುತ್ವ ವೇದಿಕೆ ಹಾಗೂ ಗುವಿವಿ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಸಹಯೋಗದಲ್ಲಿ ನಗರದ ಸುವರ್ಣ ಭವನದಲ್ಲಿ ಭಾನುವಾರ ನಡೆದ ಲೇಖಕ ಮಲ್ಕುಂಡಿ ಮಹದೇವಸ್ವಾಮಿ ಅವರ ಅಂಬೇಡ್ಕರ್ ಅರಿವು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶ ಸ್ವತಂತ್ರಗೊಂಡು 75 ವರ್ಷ ಕಳೆದರೂ ಇಲ್ಲಿ ಜಾತಿ ರಾರಾಜಿಸುತ್ತಿದೆ. ಕೆಳವರ್ಗದ ಯುವಕನ ಮದುವೆ ಆದ ಕಾರಣಕ್ಕಾಗಿ ಮೇಲ್ವರ್ಗದ ಯುವತಿಯ ಪೆÇೀಷಕರು ಅವಮರ್ಯಾದೆ ಎಂದು ಭಾವಿಸಿ ಆಕೆಯ ತಾಯಿಯನ್ನು ಬೆತ್ತಲೆಯ ಮಾಡಿ ಹೊಡೆಯುವುದು. ವಿಧವಾ ದಲಿತ ಮಹಿಳೆ ಬಿಸಿಯೂಟ ಮಾಡಲು ಬಿಡದಿರುವಂತಹ ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಘಟನೆಗಳು ಇಂದಿಗೂ ವರದಿಯಾಗುತ್ತಿವೆ. ಇಂತಹ ಘಟನೆಗಳನ್ನು ನೋಡಿದಾಗ ನಾವು ಯಾವ ಶತಮಾನದಲ್ಲಿ ಇದ್ದೇವೆ ಎಂಬುದು ಅರ್ಥವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಲಿಯುಗದಲ್ಲಿ ದೇವರುಗಳು, ಗುಡಿ ಗುಂಡಾರಗಳಿಗೆ ಹೆಚ್ಚಾಗುತ್ತಿವೆ. ಆದರೆ ಹೆಣ್ಣಿನ ಮೇಲೆ ಶೋಷಣೆ ಹಾಗೂ ದೌರ್ಜನ್ಯಗಳು ಮಾತ್ರ ನಿಂತಿಲ್ಲ. ಮಾತ್ರ ಹೆಣ್ಣು ಮಕ್ಕಳಿಗೆ ಘನತೆಯ ಬದುಕು ಕಟ್ಟಿಕೊಟ್ಟಿದ್ದು ಮಾತ್ರ ಭಾರತದ ಸಂವಿಧಾನದಿಂದ ಸಾಧ್ಯವಾಗಿದೆ ಎಂದು ಹೇಳಿದರು.
ಸಿಯುಕೆ ಸಹಾಯಕ ಕುಲಸಚಿವ ಡಾ.ಅಜೀಂ ಪಾಶಾ ಮಾತನಾಡಿ, ಅಗಾಧ ಪಾಂಡಿತ್ಯ, ಉತ್ತಮ ಜ್ಞಾನಿಯಾಗಿದ್ದರಿಂದ ಅಂಬೇಡ್ಕರ್ ಅವರಿಗೆ ಸಂವಿಧಾನ ಬರೆಯಲು ಅವಕಾಶ ದೊರೆಯಿತು. ಅವರ ಶ್ರಮದಿಂದ ನಾವೆಲ್ಲರೂ ತಲೆ ಎತ್ತಿ ನಿಲ್ಲುವಂತಾಗಿದೆ. ಅಂಬೇಡ್ಕರ್ ಅವರನ್ನು ಮಾನವನ ಉದ್ದಾರಕ್ಕಾಗಿ ಹುಟ್ಟಿದ ಪ್ರವಾದಿ ಎಂದು ಭಾವಿಸಬೇಕು. ಇಂದಿನ ರಾಜಕೀಯ ಸಂದಿಗ್ದ ಪರಿಸ್ಥಿತಿಯಲ್ಲಿ ನಾವು ಎಚ್ಚರಿಕೆಯಿಂದ ಬದುಕಬೇಕಿದೆ ಎಂದು ಹೇಳಿದರು.
ಡಾ.ಅಪ್ಪಗೆರೆ ಸೋಮಶೇಖರ್ ಮಾತನಾಡಿ, ಮುಂಬರುವ ನಮ್ಮ ನಾಳೆಯ ದಿನಗಳು ಕಠಿಣವಾಗಿವೆ. ಅದಕ್ಕಾಗಿ ಹೊಸ ಪರಿಭಾμÉಗಳ ಮೂಲಕ ಬಾಬಾ ಸಾಹೇಬರನ್ನು ಸಮಾಜಕ್ಕೆ ತಲುಪಿಸುವ ಕೆಲಸ ಮಾಡಬೇಕಿದೆ. ಲೇಖಕ ಮಹದೇವಸ್ವಾಮಿ ಅವರ ಕೃತಿಯು ಹೊಸ ಮಾರ್ಗವನ್ನು ತೋರಿಸಿಕೊಟ್ಟಿದೆ. ಕೃತಿಯಲ್ಲಿ ಹೊಸತನವಿದೆ. ಭಿನ್ನತೆ ಇದೆ. ಇದನ್ನು ನಾಡಿನ ಮೂಲೆ-ಮೂಲೆಗೆ ತಲುಪಬೇಕಿದೆ ಎಂದು ಹೇಳಿದರು.
ಮಲ್ಕುಂಡಿ ಮಹದೇವಸ್ವಾಮಿ ಅವರು ಸೂಕ್ಷ್ಮ ಬರಹಗಾರರು. ತಮಿಳು ನಿರ್ದೇಶಕ ಪ.ರಂಜಿತ್ ರಂತಹ ಹೊಸತನದ ನಿರ್ದೇಶಕರಂತೆ ಅಂಬೇಡ್ಕರ್ ಅವರನ್ನು ಸಮಾಜಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಮಹದೇವಸ್ವಾಮಿ ಅವರು ರಚನಾತ್ಮಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಲೇಖಕ ಮಲ್ಕುಂಡಿ ಮಹದೇವಸ್ವಾಮಿ ಮಾತನಾಡಿ, ಮಕ್ಕಳ ಮನೋಭಾವ ಇಟ್ಟುಕೊಂಡು ಕೃತಿ ಬರೆಯಲಾಗಿದೆ. ಅಂಬೇಡ್ಕರ್ ಅರಿವು ಮೂಡಿಸಲಾಗುತ್ತಿದೆ. ನಮ್ಮ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಅಂಬೇಡ್ಕರ್ ಆಲೋಚನೆಗಳನ್ನು ಬಿತ್ತುವ ಕ್ರಿಯೆ ಆರಂಭ ಆಗಬೇಕು. ಬಿತ್ತದೆ ಫಲ ಬಯಸಲು ಸಾಧ್ಯವಿಲ್ಲ. ಅಂಬೇಡ್ಕರ್‍ವಾದ ಸದ್ಯ ಅಪಾಯದಲ್ಲಿದೆ. ನೀಲಿ– ಕೇಸರಿ ಎಲ್ಲವೂ ಒಂದೇ ಅಂತ ಹೊರಟಿದೆ. ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಕ್ರಿಯೆಗೆ ಇಳಿಯಬೇಕು ಎಂದರು.
ಚಿಂತಕ ವಿಠಲ್ ವಗ್ಗನ್ ಮಾತನಾಡಿ, ಅಂದು ನಮ್ಮನ್ನು ಕಾಪಾಡಿದ್ದು ಅಂಬೇಡ್ಕರ್. ಈಗ ಅವರು ಕೊಟ್ಟ ಸಂವಿಧಾನ ನಮ್ಮನ್ನು ಕಾಪಾಡುತ್ತಿದೆ. ಮೀಸಲಾತಿಯ ಇಂದ ಗೆದ್ದವರಿಂದ ನಮ್ಮ ರಕ್ಷಣೆ ಆಗುತ್ತಿಲ್ಲ. ಅವರ ವಿಚಾರಗಳು ಸದ್ಯ ಉಸಿರುಗಟ್ಟಿ ಸಾಯುತ್ತಿವೆ. ಅವರವರ ಜಾತಿಯ ಜನರಿಂದಲೇ ಶರಣರ ಚಿಂತನೆಗಳು ನಾಶವಾಗುತ್ತಿವೆ ಎಂದು ವಿμÁದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಅಧ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ, ಜಿಲ್ಲಾ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ನಾಗೇಂದ್ರ ಜವಳಿ, ಚಂದ್ರಕಾಂತ ನೇರಳೆ, ಬೋರಯ್ಯ, ಅಲ್ಲಮಪ್ರಭು ನಿಂಬರ್ಗಾ, ಕಪಿಲದೇವ ಚಕ್ರವರ್ತಿ, ಚಿದಾನಂದ ಕುಡ್ಡನ್, ಅನಿಲ್ ಟೆಂಗಳಿ,ಪಂಡಿತ ಮದಗುಣಕಿ ಹಾಜರಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…