ಬಿಸಿ ಬಿಸಿ ಸುದ್ದಿ

ಮಾನವ ಸಂಬಂಧಕ್ಕಿಂತ ಮಾನವೀಯ ಸಂಬಂಧಗಳೇ ಮುಖ್ಯ: ಸತ್ಯಂಪೇಟೆ

ಕಲಬುರಗಿ: ದೇವರು, ಧರ್ಮದ ಹೆಸರು ಹೇಳಿ ತಮ್ಮ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಪುಜಾರಿ, ಪುರೋಹಿತರಿಂದ ದೇವರನ್ನು, ಧರ್ಮವನ್ನು ಬಿಡುಗಡೆಗೊಳಿಸುವುದಕ್ಕಾಗಿ ಬಸವಣ್ಣನವರು ಇಷ್ಟಲಿಂಗವನ್ನು ನಮ್ಮ ಕೈಯಲ್ಲಿ ಕೊಟ್ಟರು ಎಂದು ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಸಿದ್ರಾಮಪ್ಪ ಆವಂಟಿ ತಿಳಿಸಿದರು.

ಇಲ್ಲಿನ ಜಯನಗರದ ಶಿವಮಂದಿರದಲ್ಲಿ ವಚನೋತ್ಸವ ಸಮಿತಿ ಹಾಗೂ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಸಹಯೋಗದಲ್ಲಿ ೪೪ನೇ ಪಾಕ್ಷಿಕ ವಚನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ನೆರೆ ಹಾಗೂ ಬರ ಪರಿಸ್ಥಿತಿಗೆ ಪರಿಸರ ಮಾಲಿನ್ಯವೇ ಕಾರಣವಾಗಿದ್ದು, ಪರಿಸರವನ್ನು ಉಳಿಸಿ ಬೆಳೆಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

“ಶರಣರು ಮತ್ತು ಮಾನವೀಯ ಸಂಬಂಧ” ಕುರಿತು ವಿಶೇಷ ಅನುಭಾವ ನೀಡಿದ ಪತ್ರಕರ್ತ, ಸಾಹಿತಿ ಶಿವರಂಜನ್ ಸತ್ಯಂಪೇಟೆ ಮಾತನಾಡಿ, ಮಾನವ ಜೀವನದ ಧಾರ್ಮಿಕ, ಆಧ್ಯಾತ್ಮಿಕ, ಸಾಹಿತ್ಯಕ,ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಮೊದಲಾದ ಕ್ಷೇತ್ರಗಳ ಜೊತೆಗೆ ನಮ್ಮ ಬದುಕಿಗೆ ಅಂಟಿಕೊಂಡಿದ್ದ ಸ್ವರ್ಗ-ನರಕ, ದೇವಲೋಕ-ಮರ್ತ್ಯಲೋಕ, ಜಾತಿ-ಕುಲ-ಗೋತ್ರ, ದೇವರು-ದೇವಾಲಯ, ದಾನ-ದಾಸೋಹ, ಹುಣ್ಣಿಮೆ-ಅಮಾವಾಸ್ಯೆ, ದಾನ-ದಾಸೋಹ, ಶ್ರದ್ಧೆ-ಅಂಧಶ್ರದ್ದೆ, ನಂಬಿಕೆ-ಮೂಢನಂಬಿಕೆ, ಸ್ವಾಭಿಮಾನ-ದುರಭಿಮಾನ ಮುಂತಾದ ವಿಷಯಗಳೆಲ್ಲವೂ ಶರಣರ ಅನುಭವ ಮಂಟಪದಲ್ಲಿ ಚರ್ಚೆ, ಸಮಾಲೋಚನೆಯ ವಸ್ತುಗಳಾಗಿದ್ದವು ಎಂದು ಅಭಿಪ್ರಾಯಪಟ್ಟರು. ಮಾನವನ ಸಮಗ್ರ ಕಲ್ಯಾಣಕ್ಕಾಗಿ ದುಡಿದ ಶರಣರು ಮಾನವೀಯ ಸಂಬಂಧಗಳನ್ನು ಕಾಪಾಡಿಕೊಂಡು ಬರಬೇಕು ಎಂಬುದನ್ನು ತಮ್ಮ ಅನೇಕ ವಚನಗಳ ಮೂಲಕ ತಿಳಿಸಿದ್ದಾರೆ. ಈ ಚಿಂತನ-ಮಂಥನದ ಫಲವಾಗಿ ಹಳೆಯ ತತ್ವ-ಸಿದ್ಧಾಂತ, ಮೌಲ್ಯಗಳಿಗೆ ಒಂದು ನೈಜ ಅರ್ಥ ದೊರಕಿತು ಮಾತ್ರವಲ್ಲ ಹೊಸ ತತ್ವ, ಸಿದ್ಧಾಂತ, ಮೌಲ್ಯಗಳೇ ಹುಟ್ಟಿಕೊಂಡವು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ವಚನೋತ್ಸವ ಸಮಿತಿ ಸಂಸ್ಥಾಪಕ ಅಧ್ಯಕ್ಷ ಡಾ. ಬಸವರಾಜ ಮೋದಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಸಮಾಜ ಸೇವಕ ಉಮೇಶ ಶೆಟ್ಟಿ ಮಾತನಾಡಿದರು. ವಿಜಯಕುಮಾರ ಬೊಮ್ಮಣ, ವಿರೂಪಾಕ್ಷಯ್ಯ ವಾಲಿ, ಶಿವಪುತ್ರಪ್ಪ ಮರಡಿ, ಜಯರ್ಶರೀ ಕಾಂತಾ, ಸುರೇಖಾ ಸಿದ್ರಾಮಪ್ಪ, ವೀರಣ್ಣ ರಟಕಲ್, ಬಸವರಾಜ ಅನ್ವರಕರ್ ಇತರರಿದ್ದರು. ಹಣಮಂತಪ್ಪ ಕೋಳಕೂರ ನಿರೂಪಿಸಿದರು. ದಾಸೋಹಿ ಗುರುಪಾದಪ್ಪ ಕಾಂತಾ ಸ್ವಾಗತಿಸಿದರು. ಷಣ್ಮುಖಪ್ಪ ಕೊಟಗಿ ವಂದಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

5 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

14 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

15 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

15 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago