ಬಿಸಿ ಬಿಸಿ ಸುದ್ದಿ

ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ 19 ರಿಂದ ರಾಷ್ಟ್ರೀಯ ಸಮ್ಮೇಳನ

ಭಾರತದಲ್ಲಿನ ಹಣಕಾಸು ಕ್ಷೇತ್ರದ ಸುಧಾರಣೆಗಳು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ವಾಣಿಜ್ಯ ಅಧ್ಯಯನ ಹಾಗೂ ನಿರ್ವಹಣಾ ಅಧ್ಯಯನ ವಿಭಾಗದ ಸಹಯೋಗದಲ್ಲಿ ‘ಫೈನಾನ್ಸಿಯಲ್ ಸೆಕ್ಟರ್ ರಿಫಾರ್ಮ್ಸ ಇನ್ ಇಂಡಿಯಾ’ ವಿಷಯ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಜ. 19 ಮತ್ತು 20 ರಂದು ವಾಣಿಜ್ಯ ಅಧ್ಯಯನ ವಿಭಾಗದಲ್ಲಿ ಆಯೋಜಿಸಲಾಗಿದೆ.

ಔರಂಗಬಾದನ ಡಾ. ಬಾಬಾಸಾಹೇಬ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದ ಡೀನ್ ಪ್ರೊ. ಡಬ್ಲೂ. ಕೆ. ಸರ್ವಾಡೆ ಇವರು ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಜ. 19 ರಂದು ಬೆಳಿಗ್ಗೆ 10.30 ಗಂಟೆಗೆ ಸಮ್ಮೇಳನ ಉದ್ಘಾಟಿಸಲಿದ್ದು, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಅಧ್ಯಕ್ಷತೆ ವಹಿಸುವರು.

ಹಿರಿಯ ಶಿಕ್ಷಣ ತಜ್ಞ ಹಾಗೂ ಬೆಂಗಳೂರು ಎಂಕ್ಯೂಐ ಕಾಲೇಜ್ ಆಪ್ ಮ್ಯಾನೇಜಮೆಂಟ್‌ನ ನಿರ್ದೇಶಕ ಡಾ. ವಿ. ಪ್ರಭುದೇವ್ ಮುಖ್ಯ ಭಾಷಣ ಮಾಡುವರು.

ಅತಿಥಿಗಳಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಶ್ರೀ. ರಾಘವೇಂದ್ರ ಎಂ. ಬೈರಪ್ಪ, ವಿದ್ಯಾ ವಿಷೇಯಕ ಪರಿಷತ್ತ ಸದಸ್ಯ ಡಾ. ಬಾಬಣ್ಣ ಹೂವಿನಬಾವಿ, ಕುಲಸಚಿವ ಡಾ. ಬಿ. ಶರಣಪ್ಪ ಭಾಗವಹಿಸುವರು.

ಸಮ್ಮೇಳನದ ಅಧ್ಯಕ್ಷ ಡಾ. ಬಿ. ವಿಜಯ್, ಸಮ್ಮೇಳನದ ಉಪಾಧ್ಯಕ್ಷ ಡಾ. ರಾಜನಾಳ್ಕರ್ ಲಕ್ಷ್ಮಣ, ಸಂಘಟನಾ ಕಾರ್ಯದರ್ಶಿ ಡಾ. ವಾಘ್ಮೋರೆ ಶಿವಾಜಿ, ಜಂಟಿ ಸಂಘಟನಾ ಕಾರ್ಯದರ್ಶಿ ಡಾ. ಎ.ಪಿ. ಹೊಸಮನಿ ಉಪಸ್ಥಿತರಿರುವರು.

ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ಸೇರಿದಂತೆ ನೆರೆಯ ಮಹರಾಷ್ಟ, ತೆಲಂಗಾಣ, ಆಂಧ್ರಪ್ರದೇಶ, ರಾಜಸ್ತಾನ, ಕೇರಳ ತಮಿಳುನಾಡು ಹಾಗೂ ಮಣಿಪುರ ರಾಜ್ಯಗಳಿಂದ ವಿದ್ಯಾರ್ಥಿಗಳು, ಸಂಶೋಧಕರು, ಪ್ರಾಧ್ಯಾಪಕರು ಸೇರಿದಂತೆ ಸುಮಾರು 300 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಸಮ್ಮೇಳನದಲ್ಲಿ 121 ಸಂಶೋಧನಾ ಪ್ರಬಂಧಗಳು ಮಂಡನೆಯಾಗಲಿವೆ. ಈಗಾಗಲೇ ಸುಮಾರು 150ಕ್ಕು ಹೆಚ್ಚು ಸಂಶೋಧನಾ ಸಾರಾಂಶಗಳು ಸಲ್ಲಿಕೆಯಾಗಿವೆ.

‘ಭಾರತದಲ್ಲಿ ಹಣಕಾಸು ಕ್ಷೇತ್ರದ ಸುಧಾರಣೆಗಳು’ ಸಮ್ಮೇಳನದ ಪ್ರಧಾನ ವಿಷಯವಾಗಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಧಾರಣೆಗಳು,
ವಿಮಾ ವಲಯದಲ್ಲಿ ಸ್ಥಿತಿಸ್ಥಾಪಕತ್ವ, ಬಂಡವಾಳ ಮಾರುಕಟ್ಟೆಯಲ್ಲಿ ಇತ್ತೀಚಿನ ಪ್ರವೃತ್ತಿಗಳು ಹಾಗೂ ಹಣದ ಮಾರುಕಟ್ಟೆಯಲ್ಲಿನ ಇತ್ತೀಚಿನ ಸುಧಾರಣೆಗಳು ಎಂಬ ಉಪವಿಷಯಗಳ ಮೇಲೆ ಪ್ರಬಂಧಗಳನ್ನು ಒಳಗೊಂಡಂತೆ ನಾಲ್ಕು ಉಪ ವಿಷಯಗಳ ಮೇಲೆ ಸಂಶೋಧಕರು ವಿಷಯ ಮಂಡಿಸಲಿದ್ದಾರೆ.

ಮೊದಲನೇ ಗೋಷ್ಠಿ ಜ.19 ರಂದು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದ್ದು, ‘ರಿಫಾರ್ಮ್ಸ್ ಇನ್ ಬ್ಯಾಂಕಿಂಗ್ ಸೆಕ್ಟರ್’ ಕುರಿತ ಗೋಷ್ಠಿಯಲ್ಲಿ ತುಮಕೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಪಿ. ಪರಮಶಿವಯ್ಯ ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಎಸ್.ಬಿ. ಆಕಾಶ್ ಭಾಷಣ ಮಾಡುವರು. ಕೊಲ್ಲಾಪುರ ಶಿವಾಜಿ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥ ಡಾ. ಎ.ಎಂ. ಗುರವ್ ಅಧ್ಯಕ್ಷತೆ ವಹಿಸುವರು.

ಎರಡನೇ ಗೋಷ್ಠಿ ಸಾಯಂಕಾಲ 3.45 ಗಂಟೆಗೆ ‘ರಿಸಿಲೆನ್ಸ್ ಇನ್ ಇನ್ಸೂರೆನ್ಸ್ ಸೆಕ್ಟರ್’ ಕುರಿತ ಉಸ್ಮಾನಿಯಾ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಡಿ. ಚೆನ್ನಪ್ಪ ಹಾಗೂ ಕಲಬುರಗಿಯ ಎಲ್‌ಐಸಿ-ಸಿಬಿ-2 ಶಾಖೆಯ ಮುಖ್ಯ ವ್ಯವಸ್ಥಾಪಕ ಶ್ರೀ. ಐ. ಪ್ರಭಾಕರನ್ ವಿಷಯ ಮಂಡಿಸುವರು.ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಪಿ. ಈಶ್ವರ ಅಧ್ಯಕ್ಷತೆ ವಹಿಸುವರು.

ಮೂರನೇ ಗೋಷ್ಠಿ ಜ.20 ರಂದು ಬೆಳಿಗ್ಗೆ 10 ಗಂಟೆಗೆ ‘ರಿಸೆಂಟ್ ಟ್ರೆಂಡ್ಸ್ ಇನ್ ದಿ ಕ್ಯಾಪಿಟಲ್ ಮಾರ್ಕೆಟ್’ ಕುರಿತು ಕರ್ನಾಟಕ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಆರ್.ಎಲ್. ಹೈದ್ರಾಬಾದ್, ಹೈದ್ರಾಬಾದಿನ ಸೆಕ್ಯೂರಿಟಿ ಮಾರ್ಕೆಟ್ ಟ್ರೈನರ್ ಸಂಸ್ಥೆ (ಎಸ್‌ಇಬಿಐ ಅಂಗೀಕೃತ ಸಂಸ್ಥೆ) ಯ ಸಿ. ವಿಜಯರಾವ್ ಭಾಷಣ ಮಾಡುವರು. ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಕೆ. ಪದ್ಮಶ್ರೀ ಅಧ್ಯಕ್ಷತೆ ವಹಿಸುವರು.

ನಾಲ್ಕನೇ ಗೋಷ್ಠಿ ಮಧ್ಯಾಹ್ನ 11.45 ಗಂಟೆಗೆ ‘ಮನಿ ಮಾರ್ಕೆಟಿನ ಇತ್ತೀಚಿನ ಸುಧಾರಣೆಗಳು’ ಕುರಿತು ಕರ್ನಾಟಕ ವಿಶ್ವವಿದ್ಯಾಲಯದ ಕೋಶಾಲಿ ಇನ್ಸಟಿಟ್ಯೂಟ್ ಆಪ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ಪ್ರಾಧ್ಯಾಪಕ ಡಾ. ಎನ್. ರಾಮಾಂಜನೇಯಲು ಹಾಗೂ ಮಂಗಳೂರು ವಿಶ್ವವಿದ್ಯಾಲಯದ ನಿರ್ವಹಣಾ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನಪ್ಪ ವಿಷಯ ಮಂಡಿಸುವರು. ಉಸ್ಮನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ನರೇಶ ರೆಡ್ಡಿ ಅಧ್ಯಕ್ಷತೆ ವಹಿಸುವರು.

ಸಮಾರೋಪ ಸಮಾರಂಭ : ಗುಲಬರ್ಗಾ ವಿಶ್ವವಿದ್ಯಾಲಯದ ವಾಣಿಜ್ಯ ಅಧ್ಯಯನ ವಿಭಾಗ ಮತ್ತು ನಿರ್ವಹಣಾ ಅಧ್ಯಯನ ವಿಭಾಗದ ಸಹಯೋಗದಲ್ಲಿ ‘ಫೈನಾನ್ಸಿಯಲ್ ಸೆಕ್ಟರ್ ರಿಫಾಮರ್ಸ್ ಇನ್ ಇಂಡಿಯಾ’ ವಿಷಯ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಜ.20 ರಂದು ಮಧ್ಯಾಹ್ನ 2:30 ಗಂಟೆಗೆ ವಾಣಿಜ್ಯ ಅಧ್ಯಯನ ವಿಭಾಗದಲ್ಲಿ ಸಮಾರೋಪಗೊಳ್ಳಲಿದೆ.

ಕರ್ನಾಟಕ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಆರ್.ಎಲ್. ಹೈದ್ರಾಬಾದ್ ಇವರು ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಅತಿಥಿಗಳಾಗಿ ಸಿಂಡಿಕೇಟ್ ಸದಸ್ಯೆ ಪ್ರೊ. ಸಿ. ಸುಲೋಚನಾ, ವಿದ್ಯಾ ವಿಷೇಯಕ ಪರಿಷತ್ತ ಸದಸ್ಯ ಪ್ರೊ. ಜಿ. ಶ್ರೀರಾಮುಲು, ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ಧಮ್ಮ ಪ್ರಕಾಶ್, ವಿತ್ತಾಧಿಕಾರಿ ಪ್ರೊ. ರಾಜನಾಳ್ಕರ್ ಲಕ್ಷ್ಮಣ ಉಪಸ್ಥಿತರಿರುವರು. ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದ ಡೀನ್ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಬಿ. ವಿಜಯ ಅಧ್ಯಕ್ಷತೆ ವಹಿಸುವರು. ಸಂಘಟನಾ ಕಾರ್ಯದರ್ಶಿ ಡಾ. ವಾಘ್ಮೋರೆ ಶಿವಾಜಿ, ಜಂಟಿ ಸಂಘಟನಾ ಕಾರ್ಯದರ್ಶಿ ಡಾ. ಎ.ಪಿ. ಹೊಸಮನಿ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಡಾ. ಬಿ. ಶರಣಪ್ಪ ಭಾಗವಹಿಸುವರು.

emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

1 hour ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

1 hour ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

1 hour ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

2 hours ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

3 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

6 hours ago