ಶಹಾಪುರ: ಮಾನವತಾವಾದಿ ಬಸವಣ್ಣನವರನ್ನು ಕರ್ನಾಟಕ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಹೆಮ್ಮೆಯ ಸಂಗತಿ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಾ.ರವೀಂದ್ರನಾಥ ಹೊಸ್ಮನಿ ಹೇಳಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡ ಸರ್ಕಾರಕ್ಕೆ ಅಭಿನಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಸವಣ್ಣನವರು ಸರ್ವ ಸಮುದಾಯದ ಮಾಹಾನ್ ಚೇತನರಾಗಿದ್ದಾರೆ, ಅವರ ಸಮಾನತೆಯ ಚಿಂತನೆಗಳು ಪ್ರಸ್ತುತ ಸಮಾಜಕ್ಕೆ ತುಂಬಾ ಅಗತ್ಯವಾಗಿವೆ. ಬಸವಣ್ಣನವರ ಮನುಷ್ಯಪರ, ಜೀವಪರ ಶ್ರೇಷ್ಠ ಚಿಂತನೆಗಳ ಆಶಯಗಳ ನೆಲೆಯಲ್ಲಿ ಸರ್ಕಾರ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.
ಲೇಖಕ ವಿಶ್ವರಾಧ್ಯ ಸತ್ಯಂಪೇಟ, ಹಿರಿಯ ಸಾಹಿತಿ ಶಿವಣ್ಣ ಇಜೇರಿ, ಪ್ರಗತಿಪರ ಚಿಂತಕ ನೀಲಕಂಠ ಬಡಿಗೇರ, ಲಕ್ಷ್ಮಣ ಲಾಳಸೇರಿ, ಹಿರಿಯ ಸಾಹಿತಿ ಗುರುಬಸಯ್ಯ ಗದ್ದುಗೆ, ಸಿದ್ದಲಿಂಗಣ್ಣ ಆನೆಗುಂದಿ, ಸೈಯದ್ ಖಾಲಿದ್, ಹೊನ್ನಪ್ಪ ರಸ್ತಾಪುರ, ಬಸವರಾಜ ಆನೆಗುಂದಿ, ಅಮೃತರಾವ್ ಮುಲಗೆ, ಪ್ರಕಾಶ, ಮಾಪಣ್ಣ ಮದ್ರಿಕಿ, ನಾಗಣ್ಣ ಬಡಿಗೇರ, ಸಾಯಬಣ್ಣ ಪುರ್ಲೆ, ಹೊನ್ನಪ್ಪ ಗಂಗನಾಳ, ಸುರೇಶ ಅರುಣಿ, ಮರೆಪ್ಪ ಮುಂಡಾಸ್, ಶರಣಬಸವ ಪೋಲಿಸ್ ಬಿರಾದಾರ, ಮಡಿವಾಳಪ್ಪ ಪಾಟೀಲ್, ದೇವಿಂದ್ರಪ್ಪ ಮಡಿವಾಳಕರ್, ಭೀಮಣ್ಣಗೌಡ ಬಿರಾದಾರ, ನಿಂಗಣ್ಣ ನಾಟೇಕರ್ ತಿಪ್ಪನಳ್ಳಿ, , ತಿಪ್ಪಣ್ಣ ಕ್ಯಾತನಾಳ, ಶರಣು ನಾಯ್ಕೊಡಿ, ಶರಣರಡ್ಡಿ ಹತ್ತಿಗೂಡೂರ, ಮರೆಪ್ಪ ಜಾಲಿಮಂಚಿ, ಗುರುಲಿಂಗಪ್ಪ ಸಾಗರ್ ಮುಂತಾದವರು ಬಸವಣ್ಣನವರು ಬದುಕು ಮತ್ತು ಚಿಂತನೆಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.
ಎಲ್ಲ ಸಮುದಾಯಗಳ ಮುಖಂಡರು ಸೇರಿ ವಿಶ್ವಗುರು ಬಸವೇಶ್ವರರ ಮೂರ್ತಿಗೆ ಮಾಲಾರ್ಪಣೆ ಮಾಡಿದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…