ಬಿಸಿ ಬಿಸಿ ಸುದ್ದಿ

ಸರ್ವಜಾತಿಯವರಿಗೆ ಶರಣಬಸವರು ದೇವರು: ಪ್ರೊ.ನಿರ್ಮಲಾ ದೋರೆ

ಮಹಾದಾಸೋಹಿ ಶರಣಬಸವೇಶ್ವರರು ಸರ್ವ ಜಾತಿಯವರಿಗೆ ದೇವರಾಗಿದ್ದರು ಎಂದು ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಸಹ ಪ್ರಾಧ್ಯಾಪಕಿ ಪ್ರೊ.ನಿರ್ಮಲಾ ದೋರೆ ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಗುರುವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು.

ದಾಸೋಹ ಮಹಾಮನೆಗೆ ಹಸಿವೆಯಾಗದೆ ಇಬ್ಬರು ಪ್ರಸಾದಕ್ಕೆ ಬಂದರು. ಎಡೆಮಾಡಿದ ತಾಟಿನಲ್ಲಿ ಒಂದಗುಳ ಕೂಡಾ ಬಿಡಬಾರದೆಂಬ ಕಟ್ಟುನಿಟ್ಟಿನ ನಿಯಮವನ್ನು ಶರಣಬಸವರು ಪಾಲಿಸಿಕೊಂಡು ಬಂದಿದ್ದರು. ಅದು ಕಡ್ಡಾಯವಾಗಿತ್ತು. ಆ ಗೆಳಯರು ತಮ್ಮ ಪ್ರಸಾದ ಬಟ್ಟಲಿನಲ್ಲಿ ಅರ್ಧದಷ್ಟು ಬಿಟ್ಟು ಏಳತೊಡಗಿದರು. ಅಲ್ಲಿರುವವರು ’ ಅಷ್ಟು ಸೇವಿಸಿರಪ್ಪಾ ಶರಣರ ಆಜ್ಞೆಯಿದು’ ಎಂದು ಹೇಳಿದ್ದರೂ ಕೇಳದೆ ಅದರಲ್ಲಿ ನೀರು ಹಾಕಿ ಎದ್ದುಬಿಟ್ಟರು. ಶರಣರಿಗೆ ಇದು ಗೊತ್ತಾಯಿತು. ’ ಆ ತಾಟುಗಳು ಹಾಗೇ ಇರಲಿ’ ಎಂದು ಹೇಳಿದ್ದರು. ಒಂದು ಮೂಲೆಯಲ್ಲಿ ಆ ತಾಟುಗಳನ್ನು ಇಟ್ಟು ಬಿಟ್ಟರು. ಅವರಿಬ್ಬರೂ ಮನೆಗೆ ಹೋಗುವಷ್ಟರಲ್ಲಿ ಹೊಟ್ಟೆ ಉಬ್ಬಿ ನಿಂತಿದೆ. ಬಹಳಷ್ಟು ನೋವು. ಮರುದಿನ ನೀರು ಕುಡಿಯಲು ಹೋಗುತ್ತಾರೆ ಅದರಲ್ಲಿ ಹುಳಗಳು. ಅನ್ನ ತಿನ್ನಬೇಕೆನ್ನುತ್ತಾರೆ ಅದು ವಿಷದಂತೆ ಕಹಿ. ಹೀಗೆ ಎರಡು ಮೂರು ದಿನ ನಡೆದು ಅವರಿಗೆ ಪಶ್ಚಾತ್ತಾಪವಾಯಿತು. ತಂದೆ ತಾಯಿಗಳ ಜೊತೆ ಶರಣರಲ್ಲಿಗೆ ಬಂದು ಕ್ಷಮೆ ಕೇಳಿದರು. ಆಗ ಶರಣರು ಮೂರು ದಿನಗಳಿಂದ ಮೂಲೆಯಲ್ಲಿಟ್ಟಿದ್ದ ಆ ತಾಟುಗಳನ್ನು ತರಿಸಿ ಅದೇ ಪ್ರಸಾದವನ್ನು ಪಡೆಯಲು ತಿಳಿಸಿದರು. ಆ ಪ್ರಸಾದ ತಾಜಾ ಪ್ರಸಾದಂತಿತ್ತು. ಆ ಹುಡುಗರು ಬಹುಭಕ್ತಿಯಿಂದ ಪ್ರಸಾದ ಸ್ವೀಕರಿಸಿ ಶರಣರ ಭಕ್ತರಾದರು.

ಕಲಬುರಗಿ ಸಮೀಪದ ಕಮಲಾಪುರದಲ್ಲಿ ಬಾಳೆಹಣ್ಣು ಬಹಳ ಪ್ರಸಿದ್ಧ. ಅಲ್ಲಿಯ ಜನರು ಬಾಳೆಹಣ್ಣು ಮಾರುತ್ತಿರಲಿಲ್ಲ. ಬೆಳೆದುದರಲ್ಲಿ ಒಂದು ಭಾಗ ಪುಕ್ಕಟೆಯಾಗಿ ಕೊಡುತ್ತಿದ್ದರು. ಆದರೆ ಆ ಊರಿನಲ್ಲಿ ಒಬ್ಬ ದುರ್ದೈವಿ ಯಾಕೆ ಕೊಡಬೇಕು ಇದೇನೂ ಶರಣರ ದಾಸೋಹವೇ ಎಂಬ ಅಹಂಕಾರದಿಂದ ಎಲ್ಲವನ್ನು ಮಾರತೊಡಗಿದ. ಒಂದು ಸಲ ಜೋರಾಗಿ ಮಳೆ ಬಂದಿದ್ದರಿಂದ ಆತನ ಬಾಳೆಗೊನೆಯಿಂದ ತುಂಬಿ ನಿಂತ ಗಿಡಗಳೆಲ್ಲ ಧರೆಗುಳಿದವು. ಊರಲ್ಲಿ ಯಾರ ತೋಟದಲ್ಲಿ ಈ ಹಾನಿಯಾಗಿರಲಿಲ್ಲ. ಆಗ ಅವನಿಗಿದ್ದ ಗರ್ವವೆಲ್ಲ ಇಳಿಯಿತು. ಅದೇ ತೋಟದಲ್ಲಿ ನಿಂತು ’ ಯಪ್ಪಾ ಶರಣಾ ತಪ್ಪಾಯಿತು ನಿಮ್ಮ ಹೆಸರು ತೆಗೆದು ಅಪಹಾಸ್ಯ ಮಾಡಿದ್ದೆ ಇನ್ನೊಮ್ಮೆ ಹೀಗೆ ಮಾಡುವದಿಲ್ಲವೆಂದು’ ಪ್ರಶ್ಚಾತ್ತಪಪಟ್ಟ. ಮುಂದಿನ ದಿನಗಳಲ್ಲಿ ಮತ್ತೆ ಅದೇ ತೋಟದಲ್ಲಿ ಬಾಳೆಯ ಗಿಡಗಳು ಬೆಳೆದು ನಿಂತವು. ಶರಣರ ದಾಸೋಹ ಮನೆಗೂ ತಂದನಲ್ಲದೆ ಅರ್ಧ ಭಾಗದಷ್ಟು ಪುಕ್ಕಟೆಯಾಗಿ ಕೊಟ್ಟ.

ಶರಣಬಸವರು ಒಂದು ಫರತಾಬಾದಿನ ರೈತನ ಹೊಲಕ್ಕೆ ಹೋಗಿದ್ದರು. ಹೋಲದಲ್ಲಿ ಆ ರೈತ ಬಹಳ ಸಮೃದ್ಧಿಯಾಗ ಬೆಳೆದುದ್ದನ್ನು ನೋಡಿ ಅವನ ಗುಣಗಾನ ಮಾಡಿದರು. ಇದನ್ನು ಸಹಿಸದ ಕೆಲವರು ಆ ರೈತನ ಹೊಲವನ್ನು ಬೆಂಕಿ ಹಚ್ಚಲು ನೋಡಿದರು. ಇದು ಶರಣರಿಗೆ ತಿಳಿಯತು. ಶರಣರು ಅವರ ಹತ್ತಿರ ಹೋಗಿ ’ ನಿಮ್ಮ ವಿಚಾರ ಬಹಳ ತಪ್ಪು ತಮ್ಮಾ, ಅದನ್ನು ಸುಡುವುದರಿಂದ ಪರಮಾತ್ಮ ನಿಮ್ಮನ್ನು ಬಿಡುವುದಿಲ್ಲ, ಎಚ್ಚರಿಕೆಯಿಂದ ಇರಿ’ ಎಂದು ಎಚ್ಚರಿಸುತ್ತಾರೆ. ಈ ವಿಷಯ ಇವರಿಗ್ಹೇಗೆ ತಿಳಿಯಿತು ಎಂಬ ಯೋಚನೆಯಿಂದ ಶರಣರ ಹತ್ತಿರ ಓಡಿ ಬಂದು ಪಾದವಿಡಿದು ತಪ್ಪನ್ನು ಒಪ್ಪಿಕೊಳ್ಳುತ್ತಾರೆ. ಆಗ ಶರಣರು ’ಕಷ್ಟಪಟ್ಟು ನಿಮ್ಮ ಹೊಲದಲ್ಲಿ ನೀವು ದುಡಿಯಿರೆಪ್ಪಾ, ನೀವು ನಿಮ್ಮ ತೋಟಗಳನ್ನು ಹಾಗೆ ಮಾಡಬಹುದು’ ಎಂದಾಗ ’ ಯಪ್ಪಾ ನಮ್ಮ ತೋಟಕ್ಕೆ ಬನ್ನಿ’ ಎಂದು ಕರೆದುಕೊಂಡು ಹೋದರು. ಶರಣರು ಹೇಳಿದಂತೆ ಅವರು ಮಾಡಿದಾಗ ತಮ್ಮ ಹೊಲದಲ್ಲಿ ಅದ್ಭುತವಾಗಿ ಬೆಳೆಯಿಸಿಕೊಂಡರು. ಹೀಗೆ ಶರಣಬಸವರು ತಮ್ಮ ಮಹಿಮೆಯಿಂದ ಎಲ್ಲರ ಆರಾಧ್ಯ ದೇವರು ಎಂದು ಹೇಳಿದರು.

ಪ್ರೊ.ನಿರ್ಮಲಾ ದೋರೆ, ಸಹ ಪ್ರಾಧ್ಯಾಪಕಿ

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago