ಕಲಬುರಗಿ: ಯಡ್ರಾಮಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ವಿವಿಧ ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಯನ್ನು ಪೋಲಿಸರು ಬಂಧಿಸಿ ಆತನಿಂದ ಸುಮಾರು 4.31.500 ರೂ.ಗಳ ಮೌಲ್ಯದ ನಗ, ನಾಣ್ಯ ಜಪ್ತಿ ಮಾಡಿದ್ದಾರೆ.
ಬಂಧಿತನಿಗೆ ಯಡ್ರಾಮಿ ತಾಂಡಾದ ನಿವಾಸಿ ಸುನೀಲ್ ತಂದೆ ಪರಶುರಾಮ್ ಪವಾರ್ (24) ಎಂದು ಗುರುತಿಸಲಾಗಿದೆ. ಬಂಧಿತನು ಯಡ್ರಾಮಿ ಠಾಣೆಯ ಐದು ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನು ತನಿಖೆಯ ವೇಳೆ ಒಪ್ಪಿದ್ದಾನೆ. ಬಂಧಿತನಿಂದ ಸುಮಾರು 4.25 ಲಕ್ಷ ರೂ.ಗಳ ಮೌಲ್ಯದ 85 ಗ್ರಾಮ್ ತೂಕದ ಚಿನ್ನಾಭರಣಗಳು ಹಾಗೂ 6,500ರೂ.ಗಳ ನಗದು ಸೇರಿ ಒಟ್ಟು 4,31,500ರೂ.ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಯಡ್ರಾಮಿಯ ಮುರಗರಾಜೇಂದ್ರ ಅಲಿಯಾಸ್ ಪ್ರಭು ತಂದೆ ಲಿಂಗಣ್ಣಗೌಡ ಪೋಲಿಸ್ ಪಾಟೀಲ್ ಅವರು ಕಳೆದ 12ರಂದು ಠಾಣೆಗೆ ದೂರು ಸಲ್ಲಿಸಿ, ತಮ್ಮ ಮನೆಯ ಬೀಗ ಹಾಕಿಕೊಂಡು ಹೋದ ಸಂದರ್ಭದಲ್ಲಿ ಅಲಮಾರಿಯಲ್ಲಿ ಇಟ್ಟಿದ್ದ ನಗದು 52000ರೂ.ಗಳು, 25000ರೂ.ಗಳ ಮೌಲ್ಯದ ಅರ್ಧ ತೊಲೆ ಚಿನ್ನದ ಉಂಗುರ, 48,000ರೂ.ಗಳ ಮೌಲ್ಯದ ಒಂದು ತೊಲೆ ಬಂಗಾರದ ನೆಕ್ಲೇಸ್ ಕಳ್ಳತನವಾಗಿದ ಕುರಿತು ತಿಳಿಸಿದ್ದರು. ಅದೇ ರೀತಿ ಯಡ್ರಾಮಿ ಪಟ್ಟಣದಲ್ಲಿಯೂ ಸಹ ವಿವಿಧ ಮನೆಗಳ ಕಳ್ಳತನ ಪ್ರಕರಣಗಳು ಸಹ ವರದಿಯಾಗಿದ್ದವು.
ಪಿಎಸ್‍ಐಗಳಾದ ಸುಖಾನಂದ್ ಸಿಂಗೆ, ರಾಜಶೇಖರ್ ಗಡ್ಡದ್ ಅವರ ನೇತೃತ್ವದಲ್ಲಿ ಎಎಸ್‍ಐಗಳಾದ ಚಂದ್ರಕಾಂತ್, ಸುರೇಶಕುಮಾರ್, ಸಿಬ್ಬಂದಿಗಳಾದ ದೊಡ್ಡಬಸಪ್ಪ, ಉಮೇಶ್, ಶಂಕ್ರಣ್ಣ, ಮೌಲಪ್ಪ, ಬಸಲಿಂಗ್, ಸಿದ್ದಣ್ಣ, ಚಂದ್ರಾಮ್ ಹಾಗೂ ಪಿಎಸ್‍ಐ ಶ್ರೀಮತಿ ಪದ್ಮಾ ಹಾಗೂ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಕಾರ್ಯಾಚರಣೆಯನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಶ್ಲಾಘಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…