ಬಿಸಿ ಬಿಸಿ ಸುದ್ದಿ

ಕೆಕೆಆರ್‌ಡಿಬಿ ಪ್ರಗತಿಗೆ ವೇಗ ನೀಡುವ ಹಿನ್ನೆಲೆ: ಅಧ್ಯಕ್ಷರಿಂದ ಜಿಲ್ಲಾ ಸಂಚಾರ ಆರಂಭ ನಾಳೆ

ಕಲಬುರಗಿ; ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಇಂದಿನ, ಹಿಂದಿನ ಕಾಮಗಾರಿಗಳ ಅನುಷ್ಠಾನ ತ್ವರಿತಗೊಳಿಸಲು, ಹೆಚ್ಚಿನ ಅನುದಾನ ಬಳಕೆಯಾಗುವಂತೆ ಅಗತ್ಯ ಕಮ ಕೈಗೊಳ್ಳಲು ಮಂಡಳಿ ಅಧ್ಯಕ್ಷ ಅಜಯ್‌ ಸಿಂಗ್‌ ತಾವು ಅಧ್ಯಕ್ಷರಾದ ನಂತರ ಇದೀಗ ಕೆಕೆಆರ್‌ಡಿಬಿ ವ್ಯಾಪ್ತಿಯ ಕಲ್ಯಾಣ ನಾಡಿನ ಜಿಲ್ಲೆಗಳ ಪ್ರವಾಸ, ಕಾಮಗಾರಿ ಪ್ರಗತಿ ಪರಿಶೀಲನೆಗೆ ಮುಂದಾಗಿದ್ದಾರೆ.

ಜ. 24 ರ ಬುಧವಾರ ಕಲ್ಯಾಣ ನಾಡಿನ ಗಿರಿ ಜಿಲ್ಲೆ ಯಾದಗಿರಿಯಿಂದಲೇ ಅಧ್ಯಕ್ಷ ಡಾ. ಅಜಯ್‌ ಸಿಂಗ್‌ ತಮ್ಮ ಪ್ರಗತಿ ಪರಿಶೀಲನೆ ಜಿಲ್ಲಾ ಪ್ರವಾಸಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ.

ಯಾದಗಿರಿಯಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ಸಭಾಂಗಣದಲ್ಲಿ ಜ. 24 ರ ಮಧ್ಯಾಹ್ನ 3 ಗಂಟೆಗಯಿಂದ ಪ್ರಗತಿ ಪರಿಶೀಲನೆ ಸಭೆ ನಡೆಯಲಿದ್ದು, ಅದಕ್ಕಾಗಿ ಸಕಲ ಸಿದ್ಧತೆಗಳು ಆಗಿವೆ. ಕೆಕೆಆರ್‌ಡಿಬಿ ಕಾರ್ಯದರ್ಶಿ ಸುಂದರೇಶ ಬಾಬು ಜೊತೆಯಲ್ಲಿ ಅಧ್ಕ್ಷರು ಡಾ. ಅಜಯ್‌ ಸಿಂಗ್‌ ಹಾಗೂ ಯಾದಗಿರಿ ಜಿಲ್ಲಾಡ‍ಿತದ ಅಧಿಕಾರಿಗಳು, ಅಲ್ಲಿನ ಅನುಷ್ಠಾನ ಏಜನ್ಸಿಗಳವರು ಸೇರಿದಂತೆ ಕೆಕೆಆರ್‌ಡಿಬಿ ಕಾಮಗಾರಿಗಳಿಗೆ ಸಂಬಂಧಪಟ್ಟಂತಹ ಎಲ್ಲರು ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಈಗಾಗಲೇ ಕೆಕೆಆರ್‌ಡಿಬಿ ಕಳೆದ 2 ತಿಂಗಳಲ್ಲೇ ದಾಖಲೆ ಎನ್ನುವಂತೆ 1, 600 ಕೋಟಿ ರು ಮೊತ್ತದ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಿದೆ. ಮುಂಚಿನತೆ ಕ್ರಿಯಾ ಯೋಜನೆ ಒಟ್ಟಿಗೇ ಬರಲಿ, ಅನುಮೋದನೆ ಒಟ್ಟಿಗೇ ನೀಡೋಣ ಎಂಬ ಪದ್ಧತಿಗೆ ಇತಿಶ್ರೀ ಹೇಳಿದ್ದೇವೆ. ಯಾರೇ ಶಾಸಕರು ಕ್ರಿಯಾ ಯೋಜನೆ ಒಟ್ಟಿಗೆ ನೀಡಲಿ, ಬಿಡಿಬಿಡಿಯಾಗಿ ನೀಡಿದರೂ ತಕ್ಷಣ ಅದನ್ನು ಪರಿಶೀಲಿಸಿ ಮಂಜೂರಾತಿ ನೀಡಲಾಗುತ್ತಿದೆ, ಇದರಿಂದಾಗಿ ಮಂಡಳಿಯ ಕಾಮಗಾರಿಗಳಿಗೆ ಮಂಜೂರಾತಿ ನೀಡುವ ಒಟ್ಟಾರೆ ಪ್ರಕಿಯೆಯಲ್ಲಿ ವೇಗ ಕಂಡಿದೆ ಎಂದು ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.

ಮಂಡಳಿಯಿಂದ ಮಂಜೂರಾತಿ ನೀಡಿದ ಕಾಮಗಾರಿಗಳ ಅನುಷ್ಠಾನ ಮತ್ತು ಟೆಂಡರ್‌ ಪ್ರಕ್ರಿಯೆನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ವಿಸ್ತೃತತವಾದ ಸುತ್ತೋಲೆಗಳನ್ನು ಸೂಚನೆಗಳನ್ನು ಹೊರಡಿಸಲಾಗುತ್ತಿದೆ. ಅದರಂತೆಯೇ ಕಾಮಗಾರಿಗಳ ಅನುದೋಮದನೆ, ಅನುಷ್ಠಾನಕ್ಕೆ ಗಮನ ನೀಡಲಾಗುತ್ತಿದೆ ಎಂದೂ ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.

ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಅಗತ್ಯವಿರುವ ಎಲ್ಲಾ ವಿಬಾಗೀಯ ಅನುಷ್ಠಾನಾಧಿಕಾರಿಗಳೊಂದಿಗೆ ನಿಗದಿಯಂತೆ ಸಭೆಗಳನ್ನು ನಡೆಸಲಾಗುತ್ತಿದೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಪಂ ಸಿಇಓಗಳು, ಎಲ್ಲಾ ಅನುಷ್ಠಾನ ಇಲಾಖೆಯವರೊಂದಿಗೆ ಪ್ರತಿವಾರದ ವಿಡಿಯೋ ಸಭೆ, ಚರ್ಚೆಗಳು ನಿರಂತರ ಸಾಗಿವೆ. ಇವೆಲ್ಲ ಕ್ರಮಗಳಿಂದಾಗಿ ಕಳೆದಾರು ತಿಂಗಳಲ್ಲಿ ಕೆಕೆಆರ್‌ಡಿಬಿ ಯೋಜನೆಗಳ ಅನುಷ್ಠಾನದಲ್ಲಿ ವೇಗ ಕಂಡಿದೆ ಎಂದು ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.

ಈಗಾಗಲೇ ತಾವು ಅಧ್ಯಕ್ಷರಾದ ನಂತರ ಕಲ್ಯಾಣ ನಾಡಿನ ಶಾಲೆಗಳಲ್ಲಿ ಶಿಕ್ಷರ ಕೊರತೆ ನೀಗಿಸಲು ಅಕ್ಷರ ಅವಿಷ್ಕಾರ ಯೋಜನೆಯಲ್ಲಿ ಅಕ್ಷರ ಮಿತ್ರ ಹೆಸರಲ್ಲಿ ಅತಿಥಿ ಶಿಕ್ಷಕರ ನೇಮಕಾತಿಗೆ ಆದ್ಯತೆ ನೀಡಲಾಗಿದ್ದು ಈ ಯೋಜನೆ ಯಶಸ್ಸು ಕಂಡಿದೆ.

ಇದಲ್ಲದೆ ಎಸ್ಸೆಸ್ಸಲ್ಸಿ ಫಲಿತಾಂಶ ವೃದ್ಧಿಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ, ಕಲಿಕೆಯಲ್ಲಿ ಮಂದಗತಿಯಲ್ಲಿರುವ ಮಕ್ಕಳಿಗಾಗಿ ಕಲಿಕಾ ಆಸರೆ ಪುಸ್ತಕ ಮುದ್ರಿಸಿ ಹಂಚಲಾಗುತ್ತಿದೆ. ಇದು ಹಳ್ಳಿಯಲ್ಲಿರುವ ಎಸ್ಸೆಲಸ್ಸೆಲ್ಸಿ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕ್ರಮವಾಗಿದ್ದು ಕೆಕೆಆರ್‌ಡಿಬಿ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕಲ್ಯಾಣದ ಎಲ್ಲಾ ಶಾಲೆಗಳಲ್ಲಿ ಕೈಗೊಳ್ಳುತ್ತಿದೆ ಎಂದು ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.

ಕೆಕೆಆರ್‌ಡಿಬಿ ಪ್ರಗತಿ ತ್ವರಿತಗೊಳಿಸಲು ಹಾಗೂ ಕಾಮಗಾರಿ ಅನುಷ್ಠಾನದಲ್ಲಿನ ವಿಳಂಬಕ್ಕೆ ಕಾರಣಗಳನ್ನು ಹುಡುಕಿ ಅವುಗಳ ಪರಿಹಾರಕ್ಕೆ ಮುಂದಾಗಿದ್ದೇವೆ. ಅದರ ಮೊದಲ ಪ್ರಯತ್ನ ಬಾಗವಾಗಿಯೇ ಜಿಲ್ಲಾವಾರು ಪ್ರಗತಿ ಪರಿಶೀಲನೆ, ಕಾಮಗಾರಿ ಪರಿಶೀಲನೆ ಕೈಗೊಳ್ಳಲಾಗುತ್ತಿದೆ. ಇದರಂಗವಾಗಿ ಯಾದಗಿರಿಯಿಂದ ನಮ್ಮ ಜಿಲ್ಲಾ ಪ್ರಯಾಣ ಶುರುವಾಗಲಿದೆ. ಇದು ಕೆಕೆಆರ್‌ಡಿಬಿ ಬರುವ ದಿನಗಳಲ್ಲಿ ಇನ್ನಷ್ಟು ವೇಗದಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸಹಕಾರಿಯಾಗಲಿದೆ ಎಂಬ ವಿಶ್ವಾಸ ನನಗಿದೆ. -ಡಾ. ಅಜಯ ಸಿಂಗ್‌, ಅಧ್ಯಕ್ಷರು, ಕೆಕೆಆರ್ಡಿಬಿ, ಕಲಬುರಗಿ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

6 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

6 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

6 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

23 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago