ಕಲಬುರಗಿ: ಇಂದಿನ ಡಿಜಿಟಲ್ ಯುಗದಲ್ಲಿ, ಜೀವನದ ವಿವಿಧ ಕಾರ್ಯಕ್ಷೇತ್ರಗಳಲ್ಲಿನ ಅಂತರಗಳನ್ನು ತುಂಬುವ ಮತ್ತು ಮಾನವ ಸಂಬಂಧಗಳನ್ನು ವರ್ಧಿಸುವ ಹಾಗೂ ಡಿಜಿಟಲ್ ಹೆಜ್ಜೆಗುರುತುಗಳನ್ನು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಸೈಬರ್ ವಲಯ ಹಾಗೂ ಸಾಮಾಜಿಕ ಜಾಲತಾಣಗಳಾದಂತಹ ಫೇಸ್ ಬುಕ್, ವಾಟ್ಸಾಪ್, ಟ್ವಿಟ್ಟರ್.. ಕೋಟಿಗಟ್ಟಲೆ ಜನರಿಗೆ ಪ್ರಯೋಜನಕಾರಿಯಾಗಿರುವುದು ಗೊತ್ತಿರುವಂಥದ್ದೇ. ಅಂಕಿ – ಅಂಶಗಳ ಪ್ರಕಾರ ಸುಮಾರು 70% ಮಹಿಳೆಯರು ಹಾಗೂ ಹೆಣ್ಣುಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಪ್ರತಿನಿತ್ಯವೂ ಉಪಯೋಗಿಸುತ್ತಿರುವದು ಗಮನಾರ್ಹ ಸಂಗತಿ ಎಂದು ದೊಡ್ಡಪ್ಪ ಅಪ್ಪ ತಾಂತ್ರಿಕ ಕಾಲೇಜಿನ ಪ್ರೊ. ಡಾ.ಗೀತಾ ಪಾಟೀಲ್ ಅವರು ಅಭಿಪ್ರಾಯ ಪಟ್ಟರು.
ಅವರು ಇನ್ಸ್ಟಿಟ್ಯೂಟ್ ಆಫ್ ಇಂಜಿನೀಯರ್ಸ, ಕಲಬುರಗಿ ಲೋಕಲ್ ಸೆಂಟರ್ ವತಿಯಿಂದ ಆಯೋಜಿಸಿದ್ದ “ಸೈಬರ್ ಅಪರಾಧಗಳು ಹಾಗೂ ಮಹಿಳಾ ಸುರಕ್ಷತೆ ” ಕುರಿತು ಮಾತನಾಡಿದ ತಂತ್ರಜ್ಞಾನದ ಅಭಿವೃದ್ಧಿಯಾದಂತೆ, ಆಧುನಿಕ ಕಂಪ್ಯೂಟರ್ಗಳು, ಕಂಪ್ಯೂಟರ್ ಸಂಬಂಧಿತ ಸಾಧನ-ಸಲಕರಣೆಗಳ ತಾಂತ್ರಿಕ ಸಾಮರ್ಥ್ಯವು, ಸೌಲಭ್ಯದ ದುರ್ಬಳಕೆಗಿರುವ ಮಾಗೋಪಾಯಗಳನ್ನು ಮಾತ್ರವಲ್ಲದೆ ಭೀಕರ ಅಪರಾಧ ಎಸಗುವ ಅವಕಾಶಗಳನ್ನೂ ಸಹ ಒದಗಿಸುತ್ತಿವೆ ಎಂಬುದು ಭಯಹುಟ್ಟಿಸುವ ವಿಷಯ, ದುರದೃಷ್ಟವಶಾತ್, ಅನೇಕ ಸಂದರ್ಭಗಳಲ್ಲಿ ಅಂತರ್ಜಾಲ ಬ್ರೌಸಿಂಗ್ ವೇಳೆಯಲ್ಲಿ, ಸಾಮಾಜಿಕ ತಾಣಗಳಲ್ಲಿ ಪೋಸ್ಟ್ಗಳನ್ನು ಅಪ್ಲೋಡ್ ಮಾಡುವಾಗ ಅಥವಾ ತೃತೀಯ ಪಕ್ಷಸ್ಥರ ಕಂಪ್ಯೂಟರ್ ಸಿಸ್ಟಂಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿಡುತ್ತಿರುವಾಗ ಯಾವೆಲ್ಲ ಅಪಾಯಗಳಿಗೆ ಒಡ್ಡಿಕೊಂಡಿದ್ದೇವೆ, ಖಾಸಗಿತನದ ಅತಿಕ್ರಮಣಕ್ಕೆ ಯಾವ ರೀತಿಯಾಗಿ ಅನುವು ಮಾಡಿಕೊಟ್ಟಿದ್ದೇವೆ ಎಂಬುದನ್ನು ಗುರುತಿಸಲು ಸಾಮಾಜಿಕ ಜಾಲತಾಣಗಳ ಬಳಕೆದಾರರು ವಿಫಲರಾಗುತ್ತಾರೆ, ಅದೇ ವೇಳೆಗೆ, ಬಳಕೆದಾರರ ವಿರುದ್ಧ ಅಪರಾಧಗಳನ್ನೆವಸಗಲು ಒಂದು ವೇದಿಕೆಯಾಗಿ ದುಷ್ಕರ್ವಿುಗಳು ಸೈಬರ್ ಕ್ಷೇತ್ರವನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬೆಲ್ಲ ವಿಷಯಗಳ ಬಗ್ಗೆ ನಾವೆಲ್ಲರೂ ಅರಿತುಕೊಳ್ಳುವ ಪ್ರಯತ್ನ ಮಾಡಬೇಕಿದೆ ಎಂದು ತಿಳಿಸಿದರು.
ಅವರು ಭಾರತದಲ್ಲಿ ಮಹಿಳೆಯರ ವಿರುದ್ಧ ಗಾಬರಿಹುಟ್ಟಿಸುವ ಪ್ರಮಾಣದಲ್ಲಿ ಸೈಬರ್ ಅಪರಾಧಗಳು ಘಟಿಸುತ್ತಿದ್ದು, ಆನ್ಲೈನ್ ವಲಯದಲ್ಲಿ ಮಹಿಳೆಯೊಬ್ಬಳ ಘನತೆ, ಖಾಸಗಿತನ ಹಾಗೂ ಭದ್ರತೆಗೆ ಭಾರಿ ಅಪಾಯ ಒದಗುವ ಸಾಧ್ಯತೆಗಳು ಕಂಡುಬರುತ್ತಿವೆ. ನಿಂದನೀಯ ಭಾಷೆಯ ಬಳಕೆ, ಮಾನಹಾನಿ ಯತ್ನ, ದ್ವೇಷಸಾಧನೆಯ ಅಶ್ಲೀಲ ಚಿತ್ರಗಳು ಹಾಗೂ ಮಹಿಳೆಯರನ್ನು ಇತರ ಸ್ವರೂಪಗಳಲ್ಲಿ ಅಸಭ್ಯವಾಗಿ ಬಿಂಬಿಸುವಿಕೆ ಇತ್ಯಾದಿಗಳು ಸೈಬರ್ ಪ್ರಪಂಚದಲ್ಲಿ ಅತಿರೇಕದ ಮಟ್ಟಕ್ಕೇರಿವೆ. ಸೈಬರ್ ಅಪರಾಧಗಳ ಆವರ್ತನೆ ಮತ್ತು ಸಂಕೀರ್ಣತೆಯಲ್ಲಿನ ಹೆಚ್ಚಳವು, ಅಂತರ್ಜಾಲ ಬಳಕೆದಾರರಲ್ಲಿ ಅದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ಹಾಗೂ ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಖಿನ್ನತೆ, ಉದ್ವೇಗಗಳನ್ನು ಮೂಡಿಸುತ್ತಿವೆ, ಸೈಬರ್ ಮಾಧ್ಯಮದಲ್ಲಿನ ಕಿರುಕುಳದಿಂದಾಗಿ ಮಹಿಳೆಯರು, ಹದಿಹರೆಯದ ಹೆಣ್ಣು ಮಕ್ಕಳು ತಲ್ಲಣಿಸುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…