ಕಲಬುರಗಿ, ಚಿತ್ತಾಪೂರ ತಾಲೂಕಿನಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚಾರ

ಸಂವಿಧಾನ ಜಾಗೃತಿ ಜಾಥಾಗೆ ಎಲ್ಲೆಡೆ ಭಕ್ತಿ ಪೂರ್ವಕ ಸ್ವಾಗತ

ಕಲಬುರಗಿ; ಸಮಾನತೆ, ಸಹಬಾಳ್ವೆ, ಭಾತೃತ್ವ ಭಾವನೆ ನಾಡಿನ ಪ್ರಜೆಗಳಲ್ಲಿ ಪಸರಿಸಲು ಹೊರಟಿರುವ ಸಂವಿಧಾನ ಜಾಗೃತಿ ಜಾಥಾ ಸ್ಥಬ್ದಚಿತ್ರಗಳು ಸೋಮವಾರ ಪ್ರತ್ಯೇಕ ಮಾರ್ಗದಲ್ಲಿ ಜಿಲ್ಲೆಯ ಕಲಬುರಗಿ, ಚಿತ್ತಾಪೂರ ತಾಲೂಕಿನಲ್ಲಿ ಸಂಚರಿಸಿ ಸಂವಿಧಾನ ಕುರಿತು ಜಾಗೃತಿ ಮೂಡಿಸಿದವು.

ಗ್ರಾಮೀಣ ಭಾಗದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್, ಸಂವಿಧಾನ ಪೀಠಿಕೆ ನೋಡಿದ ಜನರು ಭಕ್ತಿ ಪೂರ್ವಕವಾಗಿ ಜಾಥಾಗೆ ಬರಮಾಡಿಕೊಳ್ಳುತ್ತಿರುವ‌ ದೃಶ್ಯ ಸಾಮಾನ್ಯವಾಗಿತ್ತು. ಮಕ್ಕಳು, ಸಾರ್ವಜನಿಕರು, ಮಹಿಳೆಯರು, ಸ್ವ-ಸಹಾಯ‌ ಸಂಘಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಎನ್ನದೆ ಪ್ರತಿಯೊಬ್ಬರು ಜಾಗೃತಿ ಜಾಥಾವನ್ನು ಬರಮಾಡಿಕೊಂಡರು.

ಕಲಬುರಗಿ ತಾಲೂಕಿನ ಫಿರೋಜಾಬಾದ್, ಸರಡಗಿ, ಹೊನ್ನಕಿರಣಗಿ, ಖಣದಾಳ, ಫರತಾಬಾದ್ ಹಾಗೂ ಚಿತ್ತಾಪೂರ ತಾಲೂಕಿನ ಐತಿಹಾಸಿಕ‌‌‌‌ ಸನ್ನತ್ತಿ, ಕೊಲ್ಲೂರ, ರಾಮಪೂರಹಳ್ಳಿ, ಲಾಡ್ಲಾಪುರ ಹಾಗೂ ನಾಲವಾರ ಗ್ರಾಮದಲ್ಲಿ ಜಾಥಾ ಸಂಚರಿಸಿ‌ ಸಂವಿಧಾನದ ಮೂಲಾಶಯಗಳನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಲಾಯಿತು.

ಗ್ರಾಮಕ್ಕೆ ಅಗಮಿಸಿದ ಜಾಗೃತಿ ಜಾಥಕ್ಕೆ ಮಹಿಳೆಯರು ಆರತಿ ಬೆಳಗಿ ಕುಂಭ ಮೇಳದಿಂದ ಸ್ವಾಗತಿಸಿದ್ದು ಎಲ್ಲೆಡೆ‌ ಕಂಡುಬಂತು. ಇನ್ನು ಸಂವಿಧಾನ ಕುರಿತು ಶಾಲಾ ಹಂತದಲ್ಲಿ ಆಯೋಜಿಸಿದ ರಸಪ್ರಶ್ನೆ, ಪ್ರಬಂಧ, ಭಾಷಣ ಸ್ಪರ್ಧೆ ವಿಭಾಗದಲ್ಲಿ ವಿಜೇತರಾದ ತಲಾ ಮೂವರು ಅಗ್ರರಿಗೆ ಕ್ರಮವಾಗಿ ಸಂವಿಧಾನ ಪೀಠಿಕೆ, ಸಂವಿಧಾನ ಓದು ಪುಸ್ತಕ ಹಾಗೂ ಮೂಲಭೂತ ಕರ್ತವ್ಯಗಳ ಪುಸ್ತಕ ವಿತರಣೆ ಕಾರ್ಯಕ್ರಮ ಎಲ್ಲೆಡೆ ಸಾಗಿತ್ತು. ಒಟ್ಟಾರೆಯಾಗಿ ಜಾಗೃತಿ ಜಾಥಾಗೆ ಜಿಲ್ಲೆಯ ಎಲ್ಲೆಡೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ಕೊಲ್ಲೂರು ಗ್ರಾಮದಲ್ಲಿ ಶಾಲಾ ಮಕ್ಕಳು, ಮಹಿಳೆಯರ ಪ್ರಭಾತ ಫೇರಿ ಗಮನ ಸೆಳೆಯಿತು. ಫಿರೋಜಾಬಾದನಲ್ಲಿ ಸಂತೋಷ‌ ಹೂಗಾರ ಅವರು ಅಂಬೇಡ್ಕರ್ ಮತ್ತು ಸಂವಿಧಾನ ಪೀಠಿಕೆ ಕುರಿತು ಉಪನ್ಯಾಸ ನೀಡಿದರು. ಎಲ್ಲೆಡೆ ಸಂವಿಧಾನ ಪೀಠಿಕೆ ವಾಚನ, ಪ್ರತಿಜ್ಞೆ ಬೋಧನೆ ಮಾಡಿಸಲಾಯಿತು.

ಚಿತ್ತಾಪೂರ ತಾಲೂಕಿನಲ್ಲಿ ಜಾಥಾ ಸಂಚಾರ ಕಾರ್ಯಕ್ರಮ ಸುಗಮ ನಿರ್ವಹಣೆಗೆ ತಾಲೂಕ ಪಂಚಾಯತ್ ಇ.ಓ ನೀಲಗಂಗಾ ಬಬಲಾದ,‌ ಸಮಾಜ‌ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚೇತನ‌ ಗುರಿಕರ್ ಉಸ್ತುವಾರಿ ವಹಿಸಿದ್ದರು. ಇತ್ತ ಕಲಬುರಗಿ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಎ.ಡಿ. ಗಿರೀಶ ರಂಜೋಳಕರ ನೇತೃತ್ವ ವಹಿಸಿದ್ದರು. ಇದೇ ಸಂದರ್ಭದಲ್ಲಿ‌ ಸಂವಿಧಾನ ಪ್ರತಿ ಹಂಚಲಾಯಿತು.

emedialine

Recent Posts

ಅಜ್ಞಾನವೆಂಬ ಕತ್ತಲಿನಿಂದ ಜ್ಞಾನದ ಬೆಳಿಕಿನಡೆಗೆ ಕರೆದೊಯ್ಯುವ ಜ್ಯೋತಿಯೇ ಶಿಕ್ಷಕ

ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಕೆ.ಹೆಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ಶಿಕ್ಷಕರ ದಿನಾಚರಣೆಯ ನಿಮಿತ್ತವಾಗಿ ಬುಧವಾರ ಗೆಳೆಯರ ಬಳಗದ ವತಿಯಿಂದ…

4 hours ago

ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಗಮನ ಸೆಳೆದ ಚೇತನ ಬಿ.ಕೋಬಾಳ್ ಸಂಗೀತ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ( ಸಮಾಜ ಕಲ್ಯಾಣ ಇಲಾಖೆ…

13 hours ago

15ರಂದು ಮಾನವ ಸರಪಳಿ: ನಾಳೆ ಪೂರ್ವ ಭಾವಿ ಸಭೆ

ಶಹಾಬಾದ :ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 15ರಂದು ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ತಾಲೂಕಿನ ಪ್ರೌಢಶಾಲಾ ಮುಖ್ಯ…

14 hours ago

ಸೆಪ್ಟೆಂಬರ್ 17ರಂದು ವಿಮೋಚನಾ ದಿನ ರದ್ದುಪಡಿಸಿ, ಪ್ರಜಾಸತ್ತಾತ್ಮಕ ದಿನ ಆಚರಿಸಿ: ಕೆ ನೀಲಾ

ಕಲಬುರಗಿ: ಹೈದ್ರಾಬಾದ್ ಕರ್ನಾಟಕದಲ್ಲಿ ಸೆಪ್ಟೆಂಬರ್ 17 ರಂದು ಆಚರಿಸಲಾಗುತ್ತಿರುವ ವಿಮೋಚನಾ ದಿನವಲ್ಲ, ಅದು ವಿಲೀನಿಕರಣದ ಅಥವಾ ಪ್ರಜಾಸತ್ತಾತ್ಮಕ ದಿನವಾಗಿದ್ದು, ವಿಮೋಚನಾ…

14 hours ago

ಸಮಿತಿಗಳ ಕಾರ್ಯ ಪರಾಮರ್ಶಿಸಿದ ಕಲಬುರಗಿ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ

ಕಲಬುರಗಿ; ಕಲಬುರಗಿಯಲ್ಲಿ ಇದೇ ಸೆ.17 ರಂದು ರಾಜ್ಯ ಸಚಿವ ಸಂಪುಟ ಸಭೆ ನಿಗದಿಯಾಗಿದ್ದರಿಂದ ಸಭೆ ಯಶಸ್ಸಿಗೆ ರಚಿಸಲಾಗಿರುವ ವಿವಿಧ ಸಮಿತಿಗಳ…

17 hours ago

SC/STಗೆ ಪಾಲಿಕೆಯಿಂದ ವಿತರಣೆಯಾಗದ ಸಂಸ್ಕೃತಿ ಸಮಾಗ್ರಿ: ಸಚಿನ ಶಿರವಾಳ ಬೇಸರ

ಕಲಬುರಗಿ: ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸಮುದಾಯದ ಫಲಾನುಭವಿಗಳಿಗೆ ವಿತರಿಸಬೇಕಾಗಿರುವ ಸಾಮಗ್ರಿಗಳಾದ ಕ್ರಿಕೆಟ್ ಸೈಟ್‍ ಗಳಾದ, ಬ್ಯಾಂಡ್ ಸೆಟ್‍ಗಳು ಮತ್ತು…

17 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420