ಯಾದಗಿರಿ; ಹಡಗಲಿ-ಗಾಣಗಾಪೂರ ರಾಜ್ಯ ಹೆದ್ದಾರಿ ಮೇಲೆ ಬರುವ ಕೆಂಭಾವಿ ಯಾಳಗಿ ಮಧ್ಯೆ ಇರುವ ೫ ಕಿ.ಮೀ. ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದ್ದು, ಇದರ ತನಿಖೆ ನಡೆಸಿ ಬಿಲ್ ತಡೆಹಿಡಿದು ಗುತ್ತೇದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಿ ಅಮಾನತುಗೊಳಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸುರಪೂರ ತಾಲ್ಲೂಕು ಸಮಿತಿ ಒತ್ತಾಯಿಸಿದೆ.
ಈ ಕುರಿತು ಕಾರ್ಯನಿರ್ವಾಹಕ ಅಭಿಯಂತರು ಅವರಿಗೆ ಮನವಿ ಸಲ್ಲಿಸಿರುವ ಸಮಿತಿ, ಸರ್ಕಾರದಿಂದ ೨೦೧೬ ರಲ್ಲಿ ಮಂಜೂರಾದ ಕೆಂಭಾವಿ ಯಾಳಗಿ ಗ್ರಾಮದ ರಸ್ತೆಯನ್ನು ಅಂದಾಜು ಪತ್ರಿಕೆಯ ಆಧಾರದ ಮೇಲೆ ಕಾಮಗಾರಿ ಮಾಡದೇ ಕಳಪೆಯಾಗಿ ನಿಗದಿತ ಪ್ರಮಾಣದ ಸಾಮಗ್ರಿ ಬಳಸದೇ ಮಾಡಿರುತ್ತಾರೆ. ರಸ್ತೆ ಪಕ್ಕದಲ್ಲಿ ಮರಮ್ ರೂಲಿಂಗ್, ಕ್ಯೂರಿಂಗ್ ಸರಿಯಾಗಿ ಮಾಡಿರುವುದಿಲ್ಲ. ಡಾಂಬರ್ ಕೇವಲ ೨ ಇಂಚು ಹಾಕಿದ್ದು ಕಂಕರ್ ಮೆಟಲಿಂಗ್ ಸಹ ೨ ಇಂಚು ಹಾಕಿರುವುದಿಲ್ಲ. ಕಂಕರ್ ಮೇಲೆ ಮರಮ್ ಹಾಗೂ ನೀರಿನಿಂದ ಕ್ಯೂರಿಂಗ್ ಮಾಡಿರುವುದಿಲ್ಲ.
ರಸ್ತೆ ಬದಿಗೆ ಜಂಗಲ್ ಕಟಿಂಗ್ ಮಾಡದೇ ಹಾಗೆಯೇ ಕಾಮಗಾರಿ ನಿರ್ವಹಿಸಿದ ಪರಿಣಾಮ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಅಲ್ಲದೇ ಇದೇ ರಸ್ತೆಯ ಕಾಮಗಾರಿ ವ್ಯಾಪ್ತಿಯಲ್ಲಿ ೫ ರಿಂದ ೬ ಕಿರು ಸೇತುವೆಗಳು ನಿರ್ಮಾಣವೂ ನಿಗದಿಯಂತೆ ಆಗದೇ ತಮ್ಮ ಮನಸ್ಸಿಗೆ ಬಂದಂತೆ ಮಾಡಿರುತ್ತಾರೆ. ಆದ್ದರಿಂದ ತಕ್ಷಣ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ ಕಠಿಣ ಕ್ರಮ ಕೈಗೊಂಡು ಗುತ್ತೆದಾರರ ಲೈಸೆನ್ಸ್ ರದ್ದುಗೊಳಿಸಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸಿ ಕಾಮಗಾರಿಯನ್ನು ಮತ್ತೊಮ್ಮೆ ಮಾಡಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಸುರಪೂರ ತಾಲ್ಲೂಕು ಸಂಚಾಲಕ ಶಿವಶರಣ ಎಮ್ ನಾಗರೆಡ್ಡಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಗೋಪಾಲ ವಜ್ಜಲ್, ಅಪ್ಪಣ್ಣ ಗಾಯಕವಾಡ, ರಾಮಚಂದ್ರಪ್ಪ ವಾಗಣಗೇರಾ, ಚಂದ್ರಶೇಖರ ಬಾರಿಗಿಡ, ಚನ್ನಪ್ಪ ತೀರ್ಥ, ಬಸವರಾಜ ಚಿಂಚೋಳಿ ಬಸವರಾಜ ಆರ್. ಕೆಂಭಾವಿಕರ್, ಮರೆಪ್ಪ ಮಲ್ಲಾ, ಚಂದ್ರಪ್ಪ ಯಾಳಗಿ, ಈರಪ್ಪ ಏವೂರ, ಶಿವಪ್ಪ ಕಂಬಾರ, ಮರೆಪ್ಪ ಕಟ್ಟಿಮನಿ, ಪರಶುರಾಮ ಮಾಳಳ್ಳಿಕರ್, ಪರಶುರಾಮ ಮುದ್ನೂರಕರ್ ಇನ್ನಿತರರು ಇದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…