ಕಲಬುರಗಿ: ಸೆಪ್ಟೆಂಬರ್ ೨೯ರಂದು ಜರುಗಲಿರುವ ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾ ಘಟಕದ ಚುನಾವಣೆಯಲ್ಲಿ ಅವಿರೋಧ ಆಯ್ಕೆಗೆ ಸಂಧಾನ ನಡೆದರೆ ಅದಕ್ಕೂ ಬದ್ಧವಾಗಿರುತ್ತೇವೆ. ಇಲ್ಲವಾದಲ್ಲಿ ಚುನಾವಣೆಗೆ ಸ್ಪರ್ಧಿಸುವುದು ನಿಶ್ಚಿತ ಎಂದು ಮಹಾಸಭಾ ಜಿಲ್ಲಾಧ್ಯಕ್ಷ ಅರುಣಕುಮಾರ್ ಪಾಟೀಲ್ ಅವರು ಇಲ್ಲಿ ಹೇಳಿದರು.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಅವಿರೋಧ ಆಯ್ಕೆ ಕುರಿತಂತೆ ಸೆಪ್ಟೆಂಬರ್ ೮ರಂದು ಭಾನುವಾರ ಸಂಜೆ ೫ ಗಂಟೆಗೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸಮಾಜದ ಹಿರಿಯರ ಸಭೆ ಜರುಗಲಿದೆ. ಸಭೆಯಲ್ಲಿ ಗಣ್ಯರಾದ ಜಿ.ಡಿ. ಅಣಕಲ್, ಕರಸಿದ್ದಪ್ಪ ಪಾಟೀಲ್ ಹರಸೂರ್, ಶಿವಶರಣಪ್ಪ ಸೀರಿ, ಧರ್ಮಪ್ರಕಾಶ್ ಪಾಟೀಲ್ ಮುಂತಾದವರು ಭಾಗವಹಿಸಲಿದ್ದು, ಚುನಾವಣೆಯ ಬದಲು ಅವಿರೋಧ ಆಯ್ಕೆಯ ಕುರಿತು ಸರ್ವಾನುಮತದ ನಿರ್ಣಯ ಕೈಗೊಂಡರೆ ಅದನ್ನು ಬೆಂಬಲಿಸಲಾಗುವುದು ಎಂದರು.
ಒಂದು ವೇಳೆ ಸಂಧಾನ ಸಭೆಯಲ್ಲಿ ಅವಿರೋಧ ಆಯ್ಕೆಗೆ ಸಮ್ಮತಿ ಸಿಗದೇ ಹೋದಲ್ಲಿ ನನ್ನ ನೇತೃತ್ವದಲ್ಲಿ, ಕಾರ್ಯದರ್ಶಿ ಹುದ್ದೆಗೆ ಶ್ರೀಶೈಲ್ ಘೂಳಿ ಸೇರಿದಂತೆ ಹತ್ತು ಜನ ಮಹಿಳಾ ಪ್ರತಿನಿಧಿಗಳೂ ಒಳಗೊಂಡು ೩೦ ಸದಸ್ಯತ್ವ ಸ್ಥಾನಕ್ಕೆ ಸ್ಪರ್ಧಿಸುವುದು ಖಚಿತ ಎಂದು ಪಾಟೀಲ್ ಅವರು ಘೋಷಿಸಿದರು.
ತಮ್ಮ ವಿರುದ್ಧ ಮಹಾಸಭೆಯ ಎಂ.ಎಸ್. ಪಾಟೀಲ್ ನರಿಬೋಳ್ ಮತ್ತಿತರರು ಮಾಡಿದ ಆರೋಪಗಳನ್ನು ಹೆಸರು ಹೇಳದೇ ನಿರಾಕರಿಸಿದ ಅವರು, ಅಧ್ಯಕ್ಷರ ಅವಧಿ ಒಟ್ಟು ಆರು ವರ್ಷಗಳ ಅವಧಿಯಾಗಿದ್ದು, ಕಳೆದ ಅವಧಿಯಲ್ಲಿ ಲಿಂ. ಡಿ.ವಿ. ಪಾಟೀಲ್ ಅವರು ಮೂರು ವರ್ಷಗಳು, ಕಲ್ಯಾಣಪ್ಪ ಪಾಟೀಲ್ ಮಳಖೇಡ್ ಅವರು ಒಂದು ವರ್ಷ ಹಾಗೂ ನಾನು ಎರಡು ವರ್ಷಗಳ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದು, ಸಮಾಜದ ಎಲ್ಲ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ಜರುಗಿಸಿದ್ದೇವೆ ಎಂದರು. ವೀರಶೈವ ಕಲ್ಯಾಣ ಮಂಟಪ, ಶಿಕ್ಷಣ ಸಂಸ್ಥೆಗಳು ಡಾ. ಶರಣಬಸಪ್ಪ ಅಪ್ಪಾ ಅವರ ಅಧ್ಯಕ್ಷತೆಯಲ್ಲಿನ ಜಿಲ್ಲಾ ವೀರಶೈವ ಸಮಾಜ ಟ್ರಸ್ಟ್‌ಗೆ ಒಳಪಟ್ಟಿದೆ. ಟ್ರಸ್ಟಗೂ ಮಹಾಸಭೆಗೂ ಸಂಬಂಧವಿಲ್ಲ. ಮಹಾಸಭೆಯು ಮಹಿಳಾ ವಸತಿ ನಿಲಯ ನಿರ್ಮಾಣವನ್ನು ಕೈಗೊಂಡಿದೆ. ಪ್ರಸ್ತುತ ಬ್ಯಾಂಕ್‌ನಲ್ಲಿ ೯ ಲಕ್ಷ ರೂ.ಗಳು ಇದೆ. ಪದಾಧಿಕಾರಿಗಳ ಸ್ವಂತ ವೆಚ್ಚದಲ್ಲಿಯೇ ಸಮಾಜದ ಎಲ್ಲ ಚಟುವಟಿಕೆಗಳನ್ನು ಮಾಡಲಾಗಿದೆ. ಯಾವುದೇ ರೀತಿಯ ಅವ್ಯವಹಾರದ ಪ್ರಶ್ನೆಯೇ ಉದ್ಭವಿಸದು ಎಂದು ಅವರು ಹೇಳಿದರು.
ಬಸವೇಶ್ವರ್ ಪುತ್ಥಳಿಯ ಆವರಣದ ಅಭಿವೃದ್ಧಿಗಾಗಿ ದಿ. ಖಮರುಲ್ ಇಸ್ಲಾಂ ಅವರು ಸಚಿವರಾಗಿದ್ದಾಗ ೬೫ ಲಕ್ಷ ರೂ.ಗಳನ್ನು, ಡಾ. ಶರಣಪ್ರಕಾಶ್ ಪಾಟೀಲ್ ಅವರು ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದಾಗ ೫೦ ಲಕ್ಷ ರೂ.ಗಳನ್ನು ಒದಗಿಸಿದ್ದು, ಕಾಮಗಾರಿಯನ್ನು ನಿರ್ಮಿತಿ ಕೇಂದ್ರದವರೇ ಕೈಗೊಂಡಿದ್ದಾರೆ. ಆ ಕಾಮಗಾರಿಗೂ ಮಹಾಸಭೆಗೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ ಎಂದು ಅವರು ತಿಳಿಸಿದರು.
ರಾಜ್ಯಾಧ್ಯಕ್ಷರ ಚುನಾವಣೆ ಕದ್ದುಮುಚ್ಚಿ ಮಾಡಲಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ ಅವರು, ಚುನಾವಣೆಯು ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಜರುಗಿದ್ದು, ಜಿಲ್ಲಾ ಘಟಕದಿಂದ ಯಾವುದೇ ರೀತಿಯಲ್ಲಿ ಅನ್ಯಾಯ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಮಹಾಸಭೆಗೆ ಒಟ್ಟು 11 ಸಾವಿರ ಸದಸ್ಯರಿದ್ದು, ಅವರಲ್ಲಿ ೩೮೦೦ ಸದಸ್ಯರು ಮಾತ್ರ ಮತದಾನದ ಹಕ್ಕು ಹೊಂದಿದ್ದಾರೆ. ಸಮಾಜ ಎಂದ ಮೇಲೆ ಸದಸ್ಯತ್ವ ಇರದಿದ್ದರೂ ಸಹ ಪ್ರತಿಭಾ ಪುರಸ್ಕಾರ ಸೇರಿದಂತೆ ಎಲ್ಲ ಚಟುವಟಿಕೆಗಳಲ್ಲಿಯೂ ಸಹ ಘಟಕವು ತೊಡಗಿಸಿಕೊಳ್ಳಬೇಕಾಗುತ್ತದೆ. ಅಂತಹ ಕಾರ್ಯವನ್ನು ಮಾಡಲಾಗಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶ್ರೀಶೈಲ್ ಘೂಳಿ, ಕಲ್ಯಾಣಪ್ಪ ಪಾಟೀಲ್ ಮಳಖೇಡ್, ಸಿದ್ಧರಾಮಪ್ಪ ಪಾಟೀಲ್ ದಣ್ಣೂರ್, ಚಂದ್ರಶೇಖರ್ ತಳ್ಳಳ್ಳಿ, ಎಸ್.ವಿ. ಮಠಪತಿ, ಶ್ರೀಮತಿ ಆಶಾದೇವಿ ಖೂಬಾ ಮುಂತಾದವರು ಉಪಸ್ಥಿತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…