ಬಿಸಿ ಬಿಸಿ ಸುದ್ದಿ

ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೈಬರ್ ಸುರಕ್ಷತೆಯ ಒಂದು ದಿನದ ವಿಚಾರ ಸಂಕಿರಣ

ಕಲಬುರಗಿ: ಮಾಹಿತಿ ಸುರಕ್ಷತೆ ಮತ್ತು ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಮುಂದಿನ ದಿನಗಳಲ್ಲಿ ಜಗತ್ತನ್ನು ಆಳುತ್ತವೆ, ಮಾಹಿತಿಯನ್ನು ಕ್ರೂಢಿಕರಿಸುವುದು ಅದನ್ನು ಸುರಕ್ಷಿತವಾಗಿ ನಿಭಾಯಿಸುವುದೇ ಒಂದು ದೊಡ್ಡ ಸವಾಲಾಗಿದೆ ಪ್ರತಿಯೊಂದು ರಂಗದಲ್ಲೂ ಮಾಹಿತಿಗೆ ಹೆಚ್ಚಿನ ಮಹತ್ವವಿದೆ. ಸೈಬರ ಲೋಕದಲ್ಲಿ ಸುಳಿದಾಡುವ ಮಾಹಿತಿಯನ್ನು ಮಹತ್ವಪೂರ್ಣವಾಗಿದ್ದು ಅದನ್ನು ಸಂರಕ್ಷಿಸುವ ವಿವಿಧ ಪರಿಯ ಸಂಶೋಧನಾಕಾರ್ಯ ಪ್ರಸ್ತುತ ನಡೆದೇ ಇದೆ. ವಾಸ್ತವ ಜಗತ್ತಿನ ಆಧುನಿಕ ಸೌಲಭ್ಯಗಳಾದ ಅನ್ ಲಾಯಿನ್ ವ್ಯವಹಾರಗಳು, ಬ್ಯಾಂಕಿಂಗ್ ವ್ಯವಹಾರಗಳು ಜನತೆಗೆ ಅನುಕೂಲತೆಗಳ ಜೊತೆಗೆ ಆತಂಕಗಳನ್ನು ಕೂಡ ತಂದೊಡ್ಡುತ್ತಿವೆ. ಸೈಬರಲೋಕದಲ್ಲಿ ನಡೆಯುವ ಅಗೋಚರ ಅವ್ಯವಹಾರ ಹಾಗೂ ಅಪರಾಧಗಳ ಬಗ್ಗೆ ಸಾಮಾನ್ಯ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ. ಜನತೆಗೆ ಸೈಬರ ಲೋಕದ ಅಪರಾಧದ ಜ್ಞಾನ ಅತೀ ಮುಖ್ಯ ಎಂದು ಬೆಂಗಳೂರಿನ ಹೆಚ್ಚುವರಿ ಪೋಲಿಸ ಉಪ ಜನರಲ್ ಸಂಜಯ್ ಸಹಾಯ ಐ.ಪಿ.ಎಸ್. ಇವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಇಂದು ಇಲ್ಲಿನ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೈಬರ್ ಸುರಕ್ಷತೆ ಮತ್ತು ವಿಧಿವಿಜ್ಞಾನ ಎಂಬ ವಿಷಯ ಕುರಿತು ನಡೆದ ಒಂದು ದಿನದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಸೈಬರ ಸುರಕ್ಷತೆ ಮತ್ತು ವಿಧಿವಿಜ್ಞಾನ ವಿಷಯ ಕುರಿತು ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಮುಟ್ಟಿಸುವ ನಿಟ್ಟಿನಲ್ಲಿ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಪ್ರಾರಂಭಿಸುವ ಹಾಗೂ ಸೈಬರ ಸುರಕ್ಷತೆ ಮತ್ತು ವಿಧಿವಿಜ್ಞಾನ ಕೇಂದ್ರವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದ್ದೇವೆ ಹಾಗೂ ಆ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಗಳು ಕೂಡ ನಡೆದಿವೆ ಮತ್ತು ಮುಂಬರುವ ದಿನಗಳಲ್ಲಿ ಈ ವಿಷಯದ ಮೇಲೆ ಸರ್ಟಿಫಿಕೇಟ್ ಕೋರ್ಸುಗಳು ಪ್ರಾರಂಭಿಸಲಾಗುವುದು ಹಾಗೂ ಸೈಬರ ಸುರಕ್ಷತೆಯ ಸಂಪೂರ್ಣ ಮಾಹಿತಿಯನ್ನು ಪಡೆಯಲು ವಿವಿಧ ಸಾಫ್ಟ್ ವೇರ್ ಗಳನ್ನು ಕೂಡ ಖರಿದೀಸಲಾಗುವುದು ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಸಿ. ಬಿಲಗುಂದಿಯವರು ನುಡಿದರು.

ಈ ವಿಚಾರ ಸಂಕಿರಣಕ್ಕೆ ಗೌರವ ಅತಿಥಿಗಳಾಗಿ ಆಗಮಿಸಿದ ಬೆಂಗಳೂರು ಮೂಲದ ಫೆಲ್ಕ್ಸಿಟ್ರಾನ್‌ನ ವ್ಯವಸ್ಥಾಪಕ ನಿರ್ದೇಶಕರಾದ ಆರ್.ಎಸ್. ಹಿರೇಮಠ ಅವರು ಮುಖ್ಯ ಅತಿಥಿಗಳಾದ ಹೆಚ್ಚುವರಿ ಪೋಲಿಸ ಉಪ ಜನರಲ್ ಸಂಜಯ್ ಸಹಾಯ ಐ.ಪಿ.ಎಸ್. ಇವರ ಪರಿಚಯವನ್ನು ಮಾಡಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಬೆಳೆಯಿಸಿಕೊಳ್ಳಬೇಕೆಂದು ಹೇಳಿದರು.

ಮಹಾವಿದ್ಯಾಲಯದ  ಪ್ರಾಚಾರ್ಯರಾದ ಡಾ.ಎಸ್.ಎಸ್. ಹೆಬ್ಬಾಳ ಅವರು ಸರ್ವರನ್ನು ಸ್ವಾಗತಿಸಿ, ಪ್ರಸ್ತುತ ಕಾಲಿನ ಅತಿ ಪ್ರಮುಖ ವಿಷಯವಾದ ಸೈಬರ ಸುರಕ್ಷತೆಯ ಮೇಲೆ ಸಾಕಷ್ಟು ಸಂಶೋಧನೆಗಳು ನಡೆದಿದ್ದು ಯುವಕರಿಗೆ ಅದರಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಸಾಧ್ಯತೆ ಹೇರಳವಾಗಿದ್ದು ವಿದ್ಯಾರ್ಥಿಗಳು, ಶಿಕ್ಷಕರು, ವೈಧ್ಯರು, ವಕೀಲರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.

ಈ ವಿಚಾರ ಸಂಕಿರಣದಲ್ಲಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಡಾ. ಶೀವಾನಂದ ಎಸ್. ದೇವರಮನಿ, ಕಾರ್ಯದರ್ಶಿಗಳಾದ ಡಾ. ನಾಗೇಂದ್ರ ಮಂಠಾಳೆ ಹಾಗೂ ಆಡಳಿತ ಮಂಡಳಿ ಸದಸ್ಯರುಗಳಾದ ವಿಜಯಕುಮಾರ ದೇಶಮುಖ, ಡಾ. ಸಂಪತಕುಮಾರ ಲೋಯಾ, ಉದಯಕುಮಾರ ಚಿಂಚೋಳಿ, ಡಾ. ಎಸ್.ಬಿ.ಕಾಮರೆಡ್ಡಿ, ಸತೀಶ್ಚಂದ್ರ ಹಡಗಲಿಮಠ ಭಾಗವಹಿಸಿದ್ದರು ಅಲ್ಲದೇ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿವಿಧ ಅಂಗ ಸಂಸ್ಥೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕೂಡ ಭಾಗವಹಿಸಿದ್ದರು. ನಗರದ ವೈದ್ಯರು, ವಕೀಲರು, ನ್ಯಾಯಾಧೀಶರು, ಪೋಲಿಸರು, ಕೈಗಾರಿಕೋಧ್ಯಮಿಗಳು ಹಾಗೂ ವ್ಯವಹಾರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಈ ವಿಚಾರ ಸಂಕಿರಣವನ್ನು ಮಹಾವಿದ್ಯಾಲಯದ ಗಣಕಯಂತ್ರ ಮತ್ತು ಮಾಹಿತಿ ವಿಜ್ಞಾನ ವಿಭಾಗದಡಿ ಹಮ್ಮಿಕೊಳ್ಳಲಾಗಿದ್ದು ಸಂಯೋಜಕರಾಗಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್. ಎಸ್. ಹೆಬ್ಬಾಳ, ಡಾ. ಸುವರ್ಣಾ ನಂದ್ಯಾಳ, ಡಾ. ಭಾರತಿ ಹರಸುರ ಅವರು ವಹಿಸಲಿದ್ದು ಸಂಚಾಲಕರಾಗಿ ಡಾ. ವಿಶ್ವನಾಥ ಬುರಕಪಳ್ಳಿ, ಡಾ. ಸುಜಾತಾ ತರದಾಳ, ಡಾ.ಶ್ರೀದೇವಿ ಸೋಮಾ ಅವರು ತಮ್ಮ ಕಾರ್ಯವನ್ನು ನಿರ್ವಹಿಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

10 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago