ಬಿಸಿ ಬಿಸಿ ಸುದ್ದಿ

ಜಂಗಮರು ಲಿಂಗಾಯತರಿಂದ ಬೇರ್ಪಟ್ಟರೆ ಒಳಿತು; ಷಣ್ಮುಖಪ್ಪ ಜೈನ್

ಶಹಾಪುರ: ಶಹಾಪುರದಲ್ಲಿ ಇದೇ 15 ರಂದು ಜಗದ್ಗುರು ಪಂಚಾಚಾರ್ಯ ವಾರ್ಷಿಕ ಮಹಾಸಭೆಯಲ್ಲಿ ನಡೆಲಾಗುತ್ತಿರುವ ಬೇಡ ಜಂಗಮರ ಸಮಾವೇಶ ಲಿಂಗಾಯತ ಧರ್ಮದ ಅಭ್ಯುದಯಕ್ಕೆ ಕಾರಣವಾಗುತ್ತದೆ ಎಂದು ರಾಷ್ಟ್ರೀಯ ಬಸವ ಸೇನೆಯ ಜಿಲ್ಲಾ ಕಾರ್ಯದರ್ಶಿ ಷಣ್ಮುಖಪ್ಪ ಜೈನ ಅಣಬಿ ಇ-ಮಿಡಿಯಾಕ್ಕೆ ತಿಳಿಸಿದ್ದಾರೆ.

ಬಸವಾದಿ ಶರಣರ ಆಶಯಗಳನ್ನು ಗಾಳಿಗೆ ತೂರಿ ಕರ್ಮಠ ಆಚರಣೆಗಳನ್ನು ಲಿಂಗಾಯತರಿಗೆ ಕಲಿಸಿ ಕುಲಗೆಡಿಸಿದವರೆ ಜಂಗಮರು ಎಂದು ಆರೋಪಿಸಿದ್ದಾರೆ. ಲಿಂಗಾಯತ ಧರ್ಮವನ್ನು ಉದ್ಧಾರ ಮಾಡುತ್ತೇವೆ ಎಂದು ಜನ ಸಾಮಾನ್ಯರನ್ನು ನಂಬಿಸಿ‌ ಮಠದಯ್ಯಗಳು ಜನರನ್ನು ವಂಚಿಸುತ್ತಿದ್ದಾರೆ. ಇಷ್ಟಲಿಂಗ ಧಾರಣೆ ಮಾಡುವುದನ್ನು ಬಿಟ್ಟು ಕರ್ಮಠರಂತೆ ತಾಯಿತ ಕಟ್ಟುವುದು, ವಾರ ದಿನ ತಿಥಿ ಮಿತಿ ಹೇಳುತ್ತಿದ್ದಾರೆ. ಹಲವಾರು ಜನ ಮಠಾಧೀಶರು ಮಟ್ಕಾ ನಂಬರ ಹೇಳುವ ಏಜೆಂಟರಾಗಿಯೂ ಕಾರ್ಯನಿರ್ವಹಿಸುತ್ತಿರುವುದು ವಿಷಾದನೀಯ ಸಂಗತಿ ಎಂದು ಖೇದ ವ್ಯಕ್ತ ಪಡಿಸಿದರು.

ಅಸಲಿಗೆ ಲಿಂಗಾಯತರೆ ಅಲ್ಲದ ಜಂಗಮರು ಅವಕಾಶವಾದಿಗಳು. ಹಿಂದೆ ತಮಗೆ ಅನುಕೂಲವಾಗುತ್ತದೆ ಎಂದು ಲಿಂಗಿ ಬ್ರಾಹ್ಮಣ ಎಂದು ಕೋರ್ಟನಲ್ಲಿ ವಾದ ಮಾಡಿ ಗೆದ್ದರು. ಈಗಲೂ ಅವಕಾಶಕ್ಕಾಗಿ ಬೇಡ ಜಂಗಮರಾಗಲು ಹೊರಟಿದ್ದಾರೆ. ಜಂಗಮರ ಮುಖಂಡರಾಗಿರುವ ಪಂಚಾಚಾರ್ಯರೆ ಕುಮ್ಮಕ್ಕು ನೀಡಿ ಬುಡ್ಗ ಜಂಗಮರ ಸೌಲತ್ತುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ, ಸರಕಾರದ ಅಧಿಕಾರಿಗಳು ಇದನ್ನು ದಿಟ್ಟತನದಿಂದ ಎದುರಿಸಬೇಕಾಗಿದೆ ಎಂದರು.

ಬಸವಾದಿ ಶರಣರು ಕಟ್ಟಿದ ಲಿಂಗಾಯತ ತತ್ವವನ್ನು ಕಡೆಗಣಿಸಿ ಆಚಾರ್ಯರ ತತ್ವ ಪ್ರಚುರಗೊಳಿಸುತ್ತಿರುವ ಜಂಗಮರು ಲಿಂಗಾಯತರಿಂದ ಬೇರ್ಪಟಷ್ಟು ಒಳ್ಳೆಯದು ಎಂದವರು ಪ್ರತಿಕ್ರಿಯಿಸಿದರು.

emedialine

View Comments

  • ಲಿಂಗಾಯತ ಜಂಗಮರೇ ಬೇಡಜಂಗಮರು.. ಇದು ಮಾನ್ಯ ಉಚ್ಛ ನ್ಯಾಯಾಲಯದ ತೀರ್ಪು. ಸಂವಿಧಾನದ ಪ್ರಾಥಮಿಕ ಅರಿವಿರದವರು, ಅಜ್ಞಾನಿಗಳು ಜಂಗಮರ ಮೀಸಲಾತಿ ಬಗ್ಗೆ ಮಾತನಾಡುತ್ತಿರುವುದು ಅತ್ಯಂತ ಹಾಸ್ಯಾಸ್ಪದ ಮತ್ತು ಅವಿವೇಕ.. ಒಮ್ಮೆ, ಸರ್ಕಾರದ ದಾಖಲಾತಿಗಳನ್ನು ಪಡೆದು, ಅಭ್ಯಸಿಸಿ ರಾಜ್ಯ ಮಟ್ಟದ ಮಾಧ್ಯಮದಲ್ಲಿ ಚರ್ಚೆಗೆ ಬನ್ನಿ.. ಇಡೀ ನಾಡಿಗೆ ಗೊತ್ತಾಗಲಿ ಬೇಡಜಂಗಮರು ಯಾರೆಂದು..
    ನಿಮ್ಮ ನಿಮ್ಮ ವೈಯಕ್ತಿಕ ಅಭಿಪ್ರಾಯಗಳಿಗೆ ಸಂವಿಧಾನದಲ್ಲಿ ಮತ್ತು ಸದ್ಧರ್ಮದಲ್ಲಿ ಜಾಗವಿಲ್ಲ ಎಂಬುದನ್ನು ಅರಿತರೆ ನಿಮ್ಮ ಆರೋಗ್ಯದ ದೃಷ್ಟಿಯಿಂದಲೂ ಒಳಿತು..!!

  • ನಿನ್ ಜಾತಿ ಯಾವುದಲೇ... ತಿಕ ಮುಚ್ಚಿ ಕೊಂಡು ಇರಲೇ.

  • ಮಿ.ಷಣ್ಮುಖಪ್ಪ,
    ನೀವು ಹೇಳುತ್ತಿರುವುದೆಲ್ಲವು ಶುದ್ಧ ಆಧಾರ ರಹಿತವಾದುದು. ನಿಮ್ಮ ನೇರ ಉದ್ದೇಶವಿರುವುದು ಜಂಗಮರ ಸಾಂವಿಧಾನಿಕ ಹಕ್ಕಿನ ಕುರಿತಾಗಿ ಇದೆಯೇ ಹೊರತು ಲಿಂಗಾಯತ ಒಂದು ನೆಪವಷ್ಟೆ. ಒಂದು ಸತ್ಯ ತಿಳಿದುಕೊಳ್ಳಿ ಸದ್ಯದ ಪರಿಸ್ಥಿತಿಯಲ್ಲಿ ಯಾರೂ ಜಾತಿ ವೃತ್ತಿ ಯಿಂದಲೇ ಜೀವನ ನಡೆಸುತ್ತಿಲ್ಲ. ಬೇಡಜಂಗಮರು ಮತ್ತು ವೀರಶೈವ/ಲಿಂಗಾಯತ ಜಂಗಮರು ಬೇರೆ ಬೇರೆ ಅಂತಾ ಸಾಧಿಸುದಾದರೆ ಅದಕ್ಕೆ ನಾವು ಸಿದ್ಧ, ಹೊರತು ಎಲ್ಲೋ ಮೂಲೆಯಲ್ಲಿ ಒಂದು ಸಮೂದಾಯದ ಹಕ್ಕನ್ನ ಕಸಿದುಕೊಳ್ಳವುದು ಎಷ್ಟು ಸರಿ?! ಅದು ನಮ್ಮ ಹಕ್ಕಲ್ಲ ಎನ್ನುದಾದರೆ ಸರಕಾವೇ ಹೇಳಲಿ/ಪ್ರಜ್ಞಾವಂತಾರಾದ ತಾವುಗಳೇ ಆ ಕೆಲಸ ಮಾಡಿಸಿ, ಅದನ್ನು ನೀವು ಶ್ರೇಷ್ಠ ರು, ಉಚ್ಛರು ಅಂತಾ ಶ್ರೇಷ್ಠ ತೆಯ ಅಮಲು ನಮಗೆ ಕುಡಿಸಬೇಡಿ, ಅದಕ್ಕೇ ನಾವು ತಯಾರಿಲ್ಲ, ಸಂವಿಧಾನದ ಪ್ರಕಾರ ನಾವು ಭಾರತೀಯರಷ್ಟೇ! ದಾಖಲೆ ಗಳನ್ನು ಮುಚ್ಚಿಟ್ಟು ಅದೆಷ್ಟು ವರ್ಷಗಳ ಕಾಲ ಮೋಸಗೈಯುತ್ತೀರಿ.enough is enough . ನೀವುಗಳೆ ಜಂಗಮರ ಈ ಕಾನೂನುಬಾಹಿರ ಬೇಡಿಕೆಯ ವಿರುದ್ಧ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿ ಸತ್ಯ ಬಯಲಿಗೆಳೆಯಿರಿ. ನಾಲ್ಕು ಜನರಿಗೆ ಅನುಕೂಲವಾದೀತು.ಅದನ್ನ ಬಿಟ್ಟು ಜಂಗಮರು ಶ್ರೇಷ್ಠರು ಎಂಬ ಭ್ರಮೆಯಿಂದ ಹೊರಬನ್ನಿ.

  • ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣ ವೇದ ಈ ನಾಲ್ಕೂ ವೇದಗಳು ಕೊಡುವುದು ಬೇರೆ ಬೇರೆ ಸಾರಾಂಶ ಇದ್ದರೂ ಸಹ ಈ ನಾಲ್ಕೂ ವೇದಗಳ ಸಾರಾಂಶ ಸೇರಿದಾಗಲೇ ಮನುಕುಲಕ್ಕೆ ಶ್ರೇಷ್ಠ ಎಂದು ಎಲ್ಲಾ ವೇದ ಉಪನಿಷತ್ತುಗಳು ಪುರಾಣಗಳು ಹೇಳುತ್ತವೆ.ಮತ್ತು ಈ ನಾಲ್ಕೂ ವೇದಗಳು ಕೊಡುವುದು ಸಮಾನ ಅರ್ಥ, ಇವು ನಮ್ಮ ಸಮಾಜದ ಎಲ್ಲಾ ವರ್ಗದ ಜಜನರಿಗೆ ಬೇಕು ಸ್ವಾಮಿ.ಹಾಗೇ ನಮ್ಮ ಮನುಕುಲಕ್ಕೆ ಸಂಬಂಧಿಸಿದ ನಾಲ್ಕೂ ವರ್ಣಗಳು ಅಂದರೆ ಬ್ರಾಹ್ಮಣ ವೈಶ್ಯ ಕ್ಷತ್ರಿಯ ಮತ್ತು ಶೂದ್ರ ಇವೆಲ್ಲವೂ ವೇದಗಳಂತೆ ಸಮಾನ, ಆದರೆ ಭಾರತ ದೇಶದ ಮನುಕುಲವೇ ಪರಕೀಯರ ದಾಳಿಗೆ ಒಳಗಾಗಿ ಒಡೆದು ಆಳುವ ನೀತಿಯಿಂದಾಗಿ ಹೀಗಾಗಿದೆ ಎಂದು ಹೇಳಬಯಸುತ್ತೇನೆ ಅಲ್ಲದೇ ಎಲ್ಲರೂ ಸಮಾನರು ಎಂಬುದನ್ನು ತಿಳಿದುಕೊಳ್ಳಿ.ಮುಸಲ್ಮಾನರ ಆಂಗ್ಲರ ಆಡಳಿತಕ್ಕೆ ಒಳಪಟ್ಟು ನಾವು ಹೀಗಾಗಿದ್ದೇವೆ ಎಂದು ಹೇಳಬಯಸುತ್ತೇನೆ.ಸತ್ತಾಗ ಹೂಳಲು ಜಂಗಮನೇ ಬರುವುದು ಬ್ರಾಹ್ಮಣನಲ್ಲ ತಿಳಿಯಿರಿ, ಜಂಗಮ ಧಾರ್ಮಿಕ ಭಿಕ್ಷುಕ, ಅಲ್ಲದೇ ಗುರುವೂ ಸಹ . ೪೫ ವರ್ಷಗಳ ಹಿಂದೆ ನಾನೂ ಒಬ್ಬ ಜಂಗನಂತೆಯೇ ಧಾರ್ಮಿಕ ಭಿಕ್ಷೆ ಬೇಡುವ ಕೆಲಸ ಮಾಡುತ್ತಿದ್ದೆ ಆಗ ನನ್ನ ಮೇಲೆ ನಾಯಿ ಛೂ ಬಿಡುತ್ತಿದ್ದರು, ಹಾಗೂ ಸುಗ್ಗಿ ಕಾಲ ಎಂದು ಕಣಕ್ಕೆ ಹೊಲಗಳಿಗೆ ಹೋದರೆ ಅಲ್ಲೂ ಕೂಡ ಅದೇ ನಾಯಿ ಛೂ ಬಿಡುತ್ತಿದ್ದರು.ಹೀಗಿರುವಾಗ ಲಿಂಗಾಯಿತರ ಹೊಲಗಳಿಗೆ ಹೋಗಿ ಕೂಲಿ ಮಾಡಿದ್ದೇನೆ.ನೀವ್ಯಾರಾದರೂ ಜಂಗಮರಿಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ.ಆ ಪರಶಿವನು ಜಂಗಮರಿಗೆ ಕರುಣಿಸಿದ ಜೋಳಿಗೆ ಮಹಾತ್ಮೆಯನ್ನು ತಿಳಿದು ಮಾತಾಡಬೇಕು, ಜಂಗಮರ ಜೋಳಿಗೆ ಅವಮಾನ ಮಾಡಿದರೆ ಅದರ ಫಲವಾಗಿ ಬೆಲೆ ತೆರಬೇಕಾಗುತ್ತದೆ ಎಂದು ಎಲ್ಲಾ ಜಂಗಮರ ಪರವಾಗಿ ಹೇಳಬಯಸುತ್ತೇನೆ.

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

3 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

3 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

3 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

3 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

4 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

5 hours ago