ಕಲಬುರಗಿ: ಸಮುದಾಯ ಆರೋಗ್ಯ ಅಧಿಕಾರಿಗಳ (ಸಿಎಚ್‍ಒ) ಸೇವೆ ಕಾಯಮಾತಿ, ಬಾಕಿ ವೇತನ ಪಾವತಿ ಸೇರಿದಂತೆ ವಿವಿಧ ಬಣಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಫೆಬ್ರುವರಿ 15ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಎನ್‍ಎಚ್‍ಎಂ ಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಮಮಿತ ಗಾಯಕವಾಡ್ ತಿಳಿಸಿದ್ದಾರೆ.
ರಾಜ್ಯದ 6,192 ಸಮುದಾಯ ಆರೋಗ್ಯ ಅಧಿಕಾರಿಗಳು ಆರೋಗ್ಯ ಸೇವೆಯನ್ನು ಸ್ಥಗಿತಗೊಳಿಸಿ ಮುಷ್ಕರದಲ್ಲಿ ಪಾಲ್ಗೊಳ್ಳುವರು. ಸಮಗ್ರ ಪ್ರಾಥಮಿಕ ಆರೋಗ್ಯ ರಕ್ಷಣೆ (ಸಿಪಿಎಚ್‍ಸಿ), ಯುಎಚ್‍ಸಿ ಮಾರ್ಗಸೂಚಿ ಅನ್ವಯ ಆರು ವರ್ಷ ಸೇವೆ ಪೂರೈಸಿದ ಎಲ್ಲಾ ಸಿಎಚ್‍ಒಗಳನ್ನು ಕಾಯಂ ಮಾಡಬೇಕು. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಇತರೆ ಉದ್ಯೋಗಿಗಳಿಗೆ ನೀಡಿದ ಶೇ 15ರಷ್ಟು ವೇತನ ಹೆಚ್ಚಳವನ್ನು ಸಿಎಚ್ ಒಗಳಿಗೂ ಅನ್ವಯಿಸಬೇಕು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ. ತಡೆಹಿಡಿದಿರುವ ಶೇ 5ರಷ್ಟು ವಾರ್ಷಿಕ ವೇತನ ಮತ್ತು ಶೇ 10 ಲಾಯಲ್ಟಿ ಬೋನಸ್ ಬಿಡುಗಡೆ ಮಾಡಬೇಕು.
ವಿನಾಕಾರಣ ವಜಾಗೊಳಿಸಿದ ಸಿಎಚ್‍ಒಗಳನ್ನು ನೇಮಕ ಮಾಡಿಕೊಳ್ಳಬೇಕು. ಸಿಪಿಎಚ್‍ಸಿ- ಯುಎಚ್‍ಸಿ ಮಾರ್ಗ ಸೂಚಿ ಅನ್ವಯ ರೂ. 15 ಸಾವಿರ ಮಾಸಿಕ ಪೆÇ್ರೀತ್ಸಾಹಧನ ಪಾವತಿಸಬೇಕು. ಸಮುದಾಯ ಆರೋಗ್ಯ ಅಧಿಕಾರಿಗಳ ಕುಟುಂಬಕ್ಕೆ ಆರೋಗ್ಯ ವಿಮೆ ಹಾಗೂ ಪಿಎಫ್ ಸೌಲಭ್ಯ ಒದಗಿಸಬೇಕು ಎಂದು ಕೋರಿದ್ದಾರೆ.
ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು. ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಕುಡಿಯುವ ನೀರು, ಶೌಚಾಲಯ, ಸೇವೆಯ ಜತೆಗೆ ಉಪಕರಣಗಳು ಹಾಗೂ ಔಷಧವನ್ನು ಕಡ್ಡಾಯವಾಗಿ ಒದಗಿಸುವ ಬೇಡಿಕೆ ಇರಿಸಿಕೊಂಡು ಮುಷ್ಕರ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಕಲಬುರಗಿ: ನ.28 ಜಿಲ್ಲೆಯಾದ್ಯಂತ ಮಣ್ಣಿನಲ್ಲಿ ತೇವಾಂಶದ ಕೊರತೆ ಹಾಗೂ ಒಣ ಬೇರು ಕೊಳೆ ರೋಗದಿಂದ ತೊಗರಿ ಒಣಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರ…
ಕರ್ಜಗಿ (ಕಲಬುರಗಿ): ನ.28 ಅಫಜಲಪುರ ತಾಲ್ಲೂಕಿನ ಸುಕ್ಷೇತ್ರ ಕುಬೇರ ಕರಜಗಿ ಗ್ರಾಮದ ಹಜರತ್ ಖ್ವಾಜಾ ಸೈಫನ್ ಮುಲ್ಕ 891 ಜಾತ್ರೆ…
ಕಲಬುರಗಿ, ನ.೨೮ - ಹಿರಿಯ ಚಿತ್ರನಟ ಮದನ್ ಪಟೇಲ್ ಅವರು ನಾಯಕ ನಟರಾಗಿರುವ ಕಾದಂಬರಿ ಆಧಾರಿತ `ತಮಟೆ’ ಸಿನಿಮಾ ನವೆಂಬರ್…
ಕಲಬುರಗಿ: ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸರ್ಕಾರಿ ಪದವಿ ಸ್ವಾಯತ್ತ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಮಹಾನಗರ ಪಾಲಿಕೆ,ಸಮಾಜ ಕಲ್ಯಾಣ ಇಲಾಖೆ, ಕನ್ನಡ…
ಕಲಬುರಗಿ: ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿ ಹಾಗೂ ಸಿ.ಆರ್.ಸಿ ಸ್ನೇಹ ಬಳಗ ಕಲಬುರಗಿ ಮತ್ತು ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ…
ಕಲಬುರಗಿ: ಸುವರ್ಣ ಭವನ (ಕನ್ನಡ ಭವನ)ದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ…