ಕಲಬುರಗಿ: ಇದೇ 25ರಂದು ನಗರದ ಎನ್.ವಿ.ಮೈದಾನದಲ್ಲಿ ನಡೆಯಲಿರುವ ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ ಮತ್ತು ಮೊಗವೀರ ಸಮಾಜದ ರಾಜ್ಯ ಮಟ್ಟದ ಬೃಹತ್ ಸಮಾವೇಶಕ್ಕೆ ನಗರದ ವಿವಿಧ ಬಡಾವಣೆಗಳ ಸಮಾಜ ಮುಖಂಡರು ಒಕ್ಕೂರಲಿನ ಬೆಂಬಲ ಸೂಚಿಸಿದರು.
ಕಲ್ಬುರ್ಗಿಯ ಗಂಗಾ ನಗರದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ಬುಧವಾರ ಗಂಗಾ ನಗರದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜೀಣೋದ್ದಾರ ಸಂಘ, ಶ್ರೀ ಮಾತಾ ಮಾಣಿಕೇಶ್ವರಿ ಟ್ರಸ್ಟ್, ಗಂಗಾನಗರದ ಕರ್ನಾಟಕ ಕೋಲಿ ಸೈನ್ಯ, ಗಂಗಾನಗರದ ಅಂಬಿಗರ ಸೇವಾ ದಳ, ಗಂಗಾನಗರದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಸತ್ಸಂಗ ಸೇವಾ ಸಮಿತಿ, ಮಾಣಿಕೇಶ್ವರಿ ಕಾಲೋನಿಯ ನಿಜಶರಣ ಅಂಬಿಗರ ಚೌಡಯ್ಯ ಸ್ನೇಹಿತರ ಬಳಗದ ಸಂಯುಕ್ತಾಶ್ರಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಹಲವಾರು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿ ಇದೇ 25 ರಂದು ನಡೆಯುವ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರನ್ನು ಕರೆದುಕೊಂಡು ಬರಲು ನಿರ್ಣಯ ಕೈಗೊಂಡರು.
ಸಮಾಜದ ಮುಖಂಡರಾದ ಬಸವರಾಜ್ ಹರವಾಳ ಮತ್ತು ರಮೇಶ ನಾಟಿಕರ ಮಾತನಾಡಿ, ಇದೇ 25ರಂದು ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ನಡೆಯುವ ರಾಜ್ಯಮಟ್ಟದ ಸಮಾವೇಶಕ್ಕೆ ಸಮಾಜದ ಎಲ್ಲಾ ಮುಖಂಡರು ಪಕ್ಷಬೇಧ ಮರೆತು ಭಾಗವಹಿಸಬೇಕು. ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಅವರ ನೇತೃತ್ವದಲ್ಲಿ ಈ ಸಮಾವೇಶ ನಡೆಯುತ್ತಿದ್ದು, ಇದು ಏಕ ಪಕ್ಷೀಯ ನಿರ್ಣಯವಲ್ಲ, ಕಾಂಗ್ರೆಸ್ ಪಕ್ಷದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಕಲಬುರಗಿಗೆ ಬಂದಿರುವುದರಿಂದ ಅವರ ಗಮನಕ್ಕೆ ತರುವ ಉದ್ದೇಶದಿಂದ ಕಮಕನೂರ ಅವರು ತುರ್ತು ಸುದ್ದಿಗೋಷ್ಠಿ ನಡೆಸಿದರು.
ಹೊರತು ಯಾವುದೇ ಬೇರೆ ಉದ್ದೇಶ ಇರಲಿಲ್ಲ ಆ ಸುದ್ದಿಗೋಷ್ಠಿಯಲ್ಲಿ ಅವರು ಸಹ ಬರುವ ದಿನಗಳಲ್ಲಿ ಈ ಸಮಾವೇಶಕ್ಕೆ ಪೂರ್ವಭಾವಿಯಾಗಿ ಸಭೆ ನಡೆಸಿ ಸಮಾಜದ ಎಲ್ಲಾ ಮುಖಂಡರ ಆಹ್ವಾನಿಸಿ ಅವರ ಸಲಹೆ ಸೂಚನೆ ಅಭಿಪ್ರಾಯಪಡೆದು ಸಮಾವೇಶ ನಡೆಸಲು ನಿರ್ಣಯ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದರು. ಆದರೂ ಕೆಲವರು ಅವರ ಉದ್ದೇಶ ತಿಳಿದುಕೊಳ್ಳದೆ ಏಕ ಪಕ್ಷೀಯ ನಿರ್ಣಯವೆಂದು ಇಲ್ಲಸಲ್ಲದ ಪತ್ರಿಕೆಗಳಿಗೆ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ದಯವಿಟ್ಟು ಎಲ್ಲರೂ ಇದೇ 9ರಂದು ನಡೆಯುವ ಪೂರ್ವಭಾವಿ ಸಭೆಗೆ ಭಾಗವಹಿಸಿ ಸಲಹೆ ಸೂಚನೆ ನೀಡಿ ಸಮಾವೇಶ ಯಶಸ್ವಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಸಂತೋಷ ಬೆಣ್ಣೂರ, ನಿಂಗಪ್ಪ ಕುಳಕುಮಟಗಿ ಮಾತನಾಡಿ, ಸಮಾಜದ ಮುಖಂಡರು ಹಾಗೂ ಸಮಾಜ ಬಾಂಧವರು ಎಲ್ಲರೂ ಒಗ್ಗೂಡಿ 25 ರಂದು ನಡೆಯುವ ಸಮಾವೇಶಕ್ಕೆ ಎಲ್ಲರೂ ಭಾಗವಹಿಸಬೇಕು ಅನಗತ್ಯವಾಗಿ ಹೇಳಿಕೆ ನೀಡಿ ಸಮಾಜ ಒಡೆಯುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.
ಶಿವಕುಮಾರ್ ಹನುಗುಂಟಿ ಮಾತನಾಡಿ, ತಿಪ್ಪಣ್ಣಪ್ಪ ಕಮಕನೂರ ಅವರು ತುರ್ತು ಸುದ್ದಿಗೋಷ್ಠಿ ನಡೆಸಿ ದೊಡ್ಡ ಪ್ರಮಾದ ಮಾಡಿಲ್ಲ. ಸಮಾಜ ಮುಖಂಡರನ್ನು ಏಕೆ ಆಹ್ವಾನ ಮಾಡಿಲ್ಲವೆಂದು ಪ್ರಶ್ನೆ ಕೇಳಿದರೆ ಅವರು ಉತ್ತರ ನೀಡುತ್ತಿದ್ದರು. ಆದರೆ ಅವರನ್ನು ಪ್ರಶ್ನೆ ಮಾಡದೆ ಪ್ರತ್ಯೇಕ ಸಭೆ ನಡೆಸಿ ಏಕ ಪಕ್ಷಿಯ ನಿರ್ಣಯವೆಂದು ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದು ಸರಿಯಲ್ಲ. ಕಮಕನೂರ ಅವರು ಸಮಾಜದಲ್ಲಿಯೇ ಒಬ್ಬ ಪ್ರತಿಷ್ಠಿತ ನಾಯಕರಾಗಿ, ವಿಧಾನ ಪರಿಷತ್ ಸದಸ್ಯರಾಗಿದ್ದು ಈ ಸಮಾವೇಶ ಸಂಘಟಿಸುವುದರಿಂದ ನಮ್ಮ ಸಮಾಜ ಎಸ್ಟಿಗೆ ಸೇರುವ ಸಾಧ್ಯತೆ ಹೆಚ್ಚಾಗಿದೆ ಹೀಗಾಗಿ ಮುಖಂಡರು ಅನ್ಯತಾ ಭಾವಿಸದೆ ಇದೆ 9ರಂದು ನಡೆಯುವ ಪೂರ್ವಭಾವಿ ಸಭೆಗೆ ಭಾಗವಹಿಸಿ ನಿಮ್ಮ ಸಲಹೆ ಸೂಚನೆ ನೀಡಿ ಸಮಾವೇಶ ಯಶಸ್ವಿಗೊಳಿಸಲು ಸಹಕರಿಸಬೇಕು. ಈ ಸಮಾವೇಶದಿಂದ ನಮ್ಮ ಸಮಾಜ ಒಗ್ಗಟ್ಟು ಪ್ರದರ್ಶನ ಮಾಡಿದೆ ಎಂಬ ಸಂದೇಶ ಹೋದರೆ ನಮ್ಮ ಸಮಾಜ ಎಸ್ಟಿಗೆ ಸೇರಲಿದೆ ಮತ್ತು ತಿಪ್ಪಣ್ಣಪ್ಪ ಕಮಕನೂರ ಅವರು ಭವಿಷ್ಯದಲ್ಲಿ ಸಚಿವರಾಗುವ ಸಾಧ್ಯತೆ ಹೆಚ್ಚಾಗಿದೆ ಹೀಗಾಗಿ ಎಲ್ಲರೂ ಒಗ್ಗೂಡಿ ಸಮಾವೇಶ ಯಶಸ್ವಿಗೊಳಿ ಸಬೇಕೆಂದು ಮನವಿ ಮಾಡಿದರು.
ಅರ್ಜುನ್ ಜಮಾದಾರ್ ಮತ್ತು ಶ್ರೀಕಾಂತ್ ಆಲೂರು ಅವರು ಮಾತನಾಡಿ, 25ರಂದು ನಡೆಯುವ ಸಮಾವೇಶ ಯಶಸ್ವಿಗೊಳಿಸಲು ಸಮಾಜದ ಮುಖಂಡರು ಮತ್ತು ಸಮಾಜ ಬಾಂಧವರು ಇದೇ 9ರ ಪೂರ್ವಭಾವಿ ಸಭೆಯ ಬಳಿಕ ಜಿಲ್ಲೆಯ ಪ್ರತಿಯೊಂದು ತಾಲೂಕು ಮತ್ತು ಹಳ್ಳಿಗಳಿಗೆ ಹೋಗಿ ಕರಪತ್ರ ಬ್ಯಾನರ್ ಗಳನ್ನು ವಿತರಿಸಿ ಪ್ರಚಾರಪಡಿಸಿ ಸಮಾವೇಶಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಅಮೃತ ಡಿಗ್ಗಿ ಅವರು ಮಾತನಾಡಿ, ಈ ಸಮಾವೇಶ ಏಕ ಪಕ್ಷೀಯ ನಿರ್ಣಯವಲ್ಲ ಸಮಾಜದ ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಿದವರನ್ನು ಮತ್ತು ಅಸಮಾಧಾನ ಗೊಂಡವರನ್ನು ಮನವೊಲಿಸಿ 9ರಂದು ನಡೆಯುವ ಪೂರ್ವಭಾವಿ ಸಭೆಗೆ ಆಹ್ವಾನಿಸಲಾಗುವುದು ಎಂದರು.
ಸಭೆಯಲ್ಲಿ ಜಗನ್ನಾಥ ಭೀಮನಳ್ಳಿ, ಅರ್ಜುನ ಜಮಾದಾರ, ಅನೀಲ ಎನ್.ಕೂಡಿ, ಸಂತೋಷ ಹಳಿಗೋದಿ, ರಾಯಪ್ಪ ಹೊನಗುಂಟಿ, ರಮೇಶ ಭಾದನಳ್ಳಿ, ಪ್ರಶಾಂತ ನಂದಳ್ಳಿ, ಕೋಲಿ ಸಮಾಜದ ಯುವ ನಾಯಕರಾದ ಪ್ರಕಾಶ ಕಮಕನೂರ, ರಮೇಶ ಫಿರೋಜಾಬಾದ, ಶಿವಕುಮಾರ ಹೊನಗುಂಟಿ, ನಾಗು ಜಮಾದಾರ ಆಜಾದಪುರ, ಬಾಪುಗೌಡ ಮಾಲಿಪಾಟೀಲ, ನಟರಾಜ ಕಟ್ಟಿಮನಿ, ರಾಜೇಶ್ವರ ಅಂಬರಾಯ, ರವಿ ಡೊಂಗರಗಾಂವ, ಬಸವರಾಜ ಹರವಾಳ, ರಮೇಶ ನಾಟಿಕರ, ವಿಜಯಕುಮಾರ್ ಹದಗಲ, ಸಂದೇಶ ಕಮಕನೂರ, ಪ್ರಕಾಶ ಕಮಕನೂರ, ಶರಣು ಎಸ್. ಕವಲಗಿ, ಅಶೋಕ ಬಿದನೂರು, ಮಲ್ಲು ಕೂಡಿ, ಬಾಬಾಸಾಹೇಬ ಸೇರಿದಂತೆ ಸಮಾಜದ ಹಲವಾರು ಮುಖಂಡರು ಭಾಗವಹಿಸಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…