ಕಲಬರಗಿ: ತೆರಿಗೆಯಲ್ಲಿ ನ್ಯಾಯಸಮ್ಮತ ಪಾಲು ಕೇಳಲು ಇದೇ ಮೊದಲ ಬಾರಿಗೆ ರಾಜ್ಯ ಸರಕಾರ ದಿುಲ್ಲಿಯಲ್ಲಿ ಪ್ರತಿಭಟನೆ ನಡೆಸಿದೆ.
ಇಂದು ದೆಹಲಿಯ ಜಂತರ್ ಮಂತರ್ನಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಪರವಾಗಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸಚಿವರು ಹಾಗೂ ಶಾಸಕ ಮಿತ್ರರೊಂದಿಗೆ ಭಾಗವಹಿಸಿ ಕೇಂದ್ರದ ತೆರಿಗೆ ವಂಚನೆ ಖಂಡಿಸಿದೆ ಎಂದು ಕಲಬುರಗಿ ದಕ್ಷಿಣ ಶಾಸಕರಾದ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.
ಜಂತರ್ ಮಂತರ್ ಪ್ರತಿಭಟನೆಯಲ್ಲಿ ಪಾಲ್ಗೊಂಡ ನಂತರ ಪತ್ರಿಕಾ ಹೇಳಿಕೆ ನೀಡಿರುವ ಅವರು ಸಿಎಂ, ಡಿಸಿಎಂ, ಸಚಿವರು, ಸಾಸಕರು ಸೇರಿದಂತೆ ಅನೇಕರಂದಿಗೆ ಪ್ರತಿಭಟನೆ ನಡೆಯಿತು. ಕೇಂದ್ರ ರಾಜ್ಯದಿಂದ ತೆರಿಗೆ ಸಂಗ್ರಹಿಸಿ ಮರಳಿಸುವಾಗ ಮನ್ಯಾಯ ಸಮ್ಮತ ಪಾಲು ನೀಡದೆ ವಂಚಿಸುತ್ತಿರೋದನ್ನ ಕಟುವಾಗಿ ಖಂಡಿಸಲಾಯ್ತು ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ಪಾವತಿಸುವ ಪ್ರತಿ 100 ರೂ ತೆರಿಗೆಗೆ ಮರಳಿ ಸಿಗುವುದು 333 ರೂ 20 ಪೈಸೆ, ಮಧ್ಯಪ್ರದೇಶಕ್ಕೆ 279 ರೂ 10 ಪೈಸೆ, ರಾಜಸ್ಥಾನಕ್ಕೆ 154 ರೂ 10 ಪೈಸೆ. ಜಾರ್ಖಂಡ್ ಗೆ 303 ರೂ 30 ಪೈಸೆ, ಛತ್ತೀಸ್ಗಢ ರಾಜ್ಯಕ್ಕೆ 282 ರೂ 80 ಪೈಸೆ, ಆದರೆ ನಮ್ಮ ಕರ್ನಾಟಕದಿಂದ 100 ತೆರಿಗೆ ಪಾವತಿ ಆದ್ರೇ ಕೇಂದ್ರದಿಂದ ಬರುವದು ಕೇವಲ 13 ರೂ 90 ಪೈಸೆ! ಇದನ್ನು ಹೇಗೆ ಸಹಿಸಬೇಕು ಹೇಳಿ? ಕೇಂದ್ರ ಈ ರೀತಿ ಹಾಡು ಹಗಲೇ ಕರುನಾಡಿಗೆ ತೆರಿಗೆ ವಂಚನೆ ಮಾಡುತ್ತಿದೆ ಎಂದು ಶಾಸಕ ಅಲ್ಲಂಪ್ರಭು ಪಾಟೀಲ್ ದೂರಿದರು.
ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ ತಾರತಮ್ಯ, ಅನುದಾನ ಹಂಚಿಕೆಯಲ್ಲಿ ಅನುಸರಿಸುತ್ತಿರುವ ಈ ತಾರತಮ್ಯ ನೀತಿಯ ವಿರುದ್ಧ, ಕನ್ನಡಿಗರಿಗೆ ಬಿಜೆಪಿ ಸರ್ಕಾರ ಮಾಡುತ್ತಿರುವ ದ್ರೋಹಗಳನ್ನು ಖಂಡಿಸಿ, ಕನ್ನಡಿಗರ ನ್ಯಾಯಯುತ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸಲಾಗಿದೆ. ಜನರ ಪರವಾಗಿ ಇಂತಹ ಹೋರಾಟಗಳು ಸದಾಕಾಲ ಕಾಂಗ್ರೆಸ್ ಪಕ್ಷ, ಜನನಾಯಕರು ನಾವೆಲ್ಲರೂ ಮಾಡುತ್ತಲೇ ಇರುತ್ತೇವೆ ಎಂದು ಶಾಸಕ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…