ಬಿಸಿ ಬಿಸಿ ಸುದ್ದಿ

ರಮಾಬಾಯಿ ಅಂಬೇಡ್ಕರವರ ಜಯಂತಿ ಅಂಗವಾಗಿ ಮಹಿಳಾ ಪೌರ ಕಾರ್ಮಿಕರಿಗೆ ಸನ್ಮಾನ

ಕಲಬುರಗಿ: ಕರ್ನಾಟಕ ಸಮತಾ ಸೈನಿಕದಳ ಕೆಎಸ್‍ಎಸ್‍ಡಿ ಕಲಬುರಗಿ ಜಿಲ್ಲಾ ಸಮಿತಿ ಹಾಗೂ ಜಿಲ್ಲಾ ಮಹಿಳಾ ಘಟಕದ ಸಂಯುಕ್ತಾಶ್ರಯದಲ್ಲಿ ಕನ್ನಡ ಭವನದಲ್ಲಿ ರಾಜಮಾತಾ ರಮಾಬಾಯಿ ಅಂಬೇಡ್ಕರವರ 126 ನೇ ಜಯಂತಿಯನ್ನು ಆಚರಿಸಲಾಯಿತು.
ಈ ಸಭೆಯಲ್ಲಿ ಅರಣ್ಯಾಧಿಕಾರಿ ಮುತ್ತಣ್ಣ ಡೆಂಗಿ ಅವರು ಕೊಳಲು ವಾದನ ಮಾಡಿ ಸಭಿಕರ ಗಮನ ಸೆಳೆದರು. ಶಿವಮೂರ್ತಿ ಬಳಿಚಕ್ರ ಇವರುಸಹ ಕೊಳಲು ನುಡಿಸಿದರು ಸುಗಂಧಾಬಾಯಿಯವರು ಅಂಬೇಡ್ಕರ ಗೀತೆಯನ್ನು ಹಾಡಿದರು.

ಸಿದ್ಧಾಥ9 ಕಾನೂನು ಮಹಾವಿದ್ಯಾಲಯದ ಉಪನ್ಯಾಸಕಿ ಶ್ರೀಮತಿ ಅಪರ್ಣಾ ಜಿ ಸಿಂಧೆ ಅವರು ಉದ್ಘಾಟಿಸಿ ಮಾತನಾಡಿ ರಮಾಬಾಯಿ ಅಂಬೇಡ್ಕರವರು ತುಂಬಾ ಕಷ್ಟ ಕಾಲದಲ್ಲೂ ಎದೆಗುಂದದೆ ಮನೆಯ ಸಮಸ್ಯಗಳನ್ನು ತಾನೇ ನೊಂದು ಉಪವಾಸವಿದ್ದು ಬಗಹರಿಸುತಿದ್ದಳು ಕಾರಣ ಡಾ” ಅಂಬೇಡ್ಕರವರ ಶಿಕ್ಷಣ ಮತ್ತು ಸಾಧನೆಯನ್ನು ಕುಂಠಿತಗೊಳ್ಳಬಾರದು ಎಂಬ ಉದ್ದೇಶದಿಂದ ಇವರ ದಾಂಪತ್ಯ ಜೀವನ ವಿಶ್ವಾಸಪೂರ್ವಕ ಮತ್ತು ಸ್ನೇಹಮಯಿಯಾಗಿ ಅನೋನ್ಯವಾಗಿದ್ದರು ” ಎಂದು ಹೇಳಿದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ ಪರ್ತಕರ್ತರು ಹಾಗೂ ತ್ಯಾಗಮಯಿ ರಮಾಬಾಯಿ ಅಂಬೇಡ್ಕರ ಪುಸ್ತಕದ ಅನುವಾದಕರಾದ ಪ್ರಭುಲಿಂಗ ನಿಲೂರೆ ಮಾತನಾಡಿ ” ರಮಾಬಾಯಿ ಅಂಬೇಡ್ಕರವರ ತ್ಯಾಗ ಮನೋಭಾವನೆಯಿಂದ ಡಾ” ಬಾಬಾ ಸಾಹೇಬ ಅಂಬೇಡ್ಕರವರು ಮುಂದುವರಿದು ಸಂವಿಧಾನ ರಚಿಸಲು ಸಾಧ್ಯವಾಯಿತು. ಬಡತನದ ಕಾರಣ ರಮಾಬಾಯಿಗೆ ಉಟ್ಟುಕೊಳ್ಳಲು ಸೀರೆ ಇಲ್ಲದ ಕಾರಣಕ್ಕಾಗಿ, ಡಾ” ಅಂಬೇಡ್ಕರವರಿಗೆ ಸನ್ಮಾನ ಮಾಡಿದ ಶಾಲನ್ನು ಸೀರೆಯನ್ನಾಗಿ ಉಪಯೋಗಿಸಿಕೊಂಡು ಜೀವನ ಸಾಗಿಸಿದ್ದು ಸತ್ಯ ಸಂಗತಿ , ಆದರೆ ನನಗೆ ಒಳ್ಳೆಯ ಸೀರೆ ಕೊಡಿಸಿ ಎಂದು ಕಾಡಿ ಬೇಡಲಿಲ್ಲ. ಭಾರತದಲ್ಲಿ ಜಾತಿ ಪದ್ಧತಿ ಕಾರಣ ಇಂದಿಗೂ ಸಹ ಮನುಷ್ಯರನ್ನು ಮನುಷ್ಯರನ್ನಾಗಿ ನೋಡಿಕೊಳ್ಳುತ್ತಾ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕವಿ, ಶಿಕ್ಷಕ ಧರ್ಮಣ್ಣ ಧನ್ನಿ ಮಾತನಾಡಿ ರಮಾಬಾಯಿ ಅಂಬೇಡ್ಕರವರ ವಿವಿಧ ರೀತಿಯ ನೋವು ಮತ್ತು ಅವರ ತ್ಯಾಗದ ಬಗ್ಗೆ ವಿವರವಾಗಿ ತಿಳಿಸಿದರು. ತಾನು ನೋವನ್ನು ಸಹಿಸಿಕೊಂಡ ಮಹಾನ್ ತ್ಯಾಗಮಯಿ ರಮಾಬಾಯಿ ಅಂಬೇಡ್ಕರವರ ತ್ಯಾಗದ ಬಲದಿಂದ ಡಾ” ಬಾಬಾ ಸಾಹೇಬ ಅಂಬೇಡ್ಕರವರು ಉನ್ನತ ಮಟ್ಟದ ಶಿಕ್ಷಣ ಪಡೆದು ಸಂವಿಧಾನ ರಚಿಸಲು ಸಾಧ್ಯವಾಯಿತು. ಸಂವಿಧಾನ ಬಲದಿಂದ ಇಂದು ನಾವು ನೀವು ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ಭಾವನೆ ವ್ಯಕ್ತಪಡಿಸಲು , ಹಾಡು ಹಾಡಲು ,ಕೊಳಲು ನುಡಿಸಲು ಅವಕಾಶ ಸಿಕ್ಕಿದೆ ” ಎಂದು ಹೇಳಿದರು.

ವೇದಿಕೆಯಲ್ಲಿ ಅದರಂತೆ ವಕೀಲರಾದ ಅನಿಲಕುಮಾರ ಕಾಂಬಳೆ ಮಾತನಾಡಿದರು. ಶ್ವೇತಾ ಶಿವಕುಮಾರ್ ಇವರ 4 ಮತ್ತು 3 ವರ್ಷದ ಮಕ್ಕಳಾದ ಸಾತ್ವಿಕ ಮತ್ತು ಶ್ರಾವ್ಯ ಬುಕ್ ಆಫ್ ರೆಕಾರ್ಡಮಾಡಿದಕ್ಕಾಗಿ ಈ ಮಕ್ಕಳಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ 6 ಜನ ಕಲಬುರಗಿಯ ಮಹಿಳಾ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ದಮ್ಮ ದೀಪ ಬಂತೇಜಿ ಬೀದರ ಇವರು ಸಾನಿಧ್ಯ ವಹಿಸಿ ಮಾತನಾಡಿದರು. ಕೆಎಸ್‍ಎಸ್‍ಡಿ ಮಹಿಳಾ ಜಿಲ್ಲಾದ್ಯಕ್ಷೆ ಶಿವಲಿಂಗಮ್ಮ ಸಾವಳಗಿ ಅದ್ಯಕ್ಷತೆಯನ್ನು ವಹಿಸಿದ್ದರು.

ವಿಭಾಗೀಯ ಅದ್ಯಕ್ಷರಾದ ಸಂಜೀವ ಟಿ ಮಾಲೆರವರು ಪ್ರಾಸ್ತಾವಿಕವಾಗಿ ಮಾತನಾಡಿದರು ಮತ್ತು ಸ್ವಾಗತ ಕೋರಿದರು. ಕವಿ , ಲೇಖಕರು ಆದ ಎಂ ಎನ್ ಸುಗಂಧಿ ರಾಜಾಪೂರ ಇವರು ಬುದ್ಧ ವಂದನೆ ಪ್ರಾಥ9ನೆ ಮಾಡಿದರು ಮತ್ತು ಕಾರ್ಯಕ್ರಮ ನಿರೂಪಣೆ ಮಾಡಿದರು. ಜಿಲ್ಲಾ ಕಾರ್ಯದರ್ಶಿ ಅಪ್ಪಾರಾವ ಎಸ್ ಭಾವಿಮನಿ ವಂದನಾರ್ಪಣೆ ಮಾಡಿದರು.

ಸಭೆಯಲ್ಲಿ ಕಾಮಿ9ಕ ಘಟಕದ ಜಿಲ್ಲಾಧ್ಯಕ್ಷ ವಿಜಯಕುಮಾರ್ ಉದ್ದಾ, ಈರಣ್ಣ ಜಾನೆ, ದೇವರಾಜ ಹೊಡಲ್, ಮಹಾದೇವ ನಾಟಿಕರ ವಕೀಲರು, ಅಮೃತ ನಾಯಕೊಡಿ, ಮಲ್ಲಿಕಾಜು9ನ ಉದಯಕರ, ಯಶೋದಾ ಕುಸನೂರ, ಕಾವೇರಿ ಬೋರಂಪಳ್ಳಿ , ಲಲಿತಾ ಬಿಲಕರ, ಸುಗಂಧಾಬಾಯಿ ಗೋಟುರ ಮಲ್ಲಮ್ಮ ಜಗತ್, ಇಂದುಬಾಯಿ ಭರತನೂರ, ಶಿಲ್ಪಾ ಕಾಂಬಳೆ, ಭಾರತಿಬಾಯಿ ಕಾಂಬಳೆ, ಖತಲಪ್ಪ ಕಟ್ಟಿಮನಿ ,ಈಶ್ವರ ಪೂಜಾರಿ, ಶಿವಮೂರ್ತಿ ಬಳಿಚಕ್ರ, ವಿಜಯಕುಮಾರ ಸಾವಳಗಿ ಮುತ್ತಣ್ಣ ಡಾಂಗೆ, ಮಾರುತಿ ಲೇಂಗಟಿ, ಸೂರ್ಯಕಾಂತ ಅಂಬಲಗಿ, ಮಲ್ಲಿಕಾರ್ಜುನ ಸಿಂಗೆ, ಲಕ್ಷ್ಮಣರಾವ ಕಡಬೂರ ಸೆರಿದಂತೆ ಇತರರು ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

5 mins ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

10 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago