ಆಳಂದ: ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಶಾಂತಲಿಂಗೇಶ್ವರ ವೀರಗಾಸೆ ಪುರವಂತಿಕೆ ಜಾನಪದ ಕಲಾ ಸಂಘ ಸುಂಟನೂರ ಜಂಟಿಯಾಗಿ ಮಂಗಳವಾರ ಆಳಂದ ತಾಲೂಕಿನ ಗಡಿಗ್ರಾಮ ಖಜೂರಿ ಗ್ರಾಮದಲ್ಲಿ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದೆ.
ಗ್ರಾಮದ ಕರಿಬಸವೇಶ್ವರ ಮಠದ ಆವರಣದಲ್ಲಿ ಸಾಯಂಕಾಲ ೫ ಗಂಟೆಗೆ ಜರುಗುವ ಕಾರ್ಯಕ್ರಮದ ಸಾನಿಧ್ಯವನ್ನು ಮುರುಘೇಂದ್ರ ಕೋರಣೇಶ್ವರ ವಹಿಸಿಲಿದ್ದು. ಶಾಸಕ ಸುಭಾಷ್ ಆರ್ ಗುತ್ತೇದಾರ ಉದ್ಘಾಟಿಸಲಿದ್ದಾರೆ. ಜಿ. ಪಂ ಸದಸ್ಯ ಹರ್ಷಾನಂದ ಗುತ್ತೇದಾರ ಜ್ಯೋತಿ ಬೆಳಗಿಸಲಿದ್ದು, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ ಅಧ್ಯಕ್ಷತೆ ವಹಿಸಲಿದ್ದಾರೆ. ಗ್ರಾ. ಪಂ ಅಧ್ಯಕ್ಷೆ ಜಗದೇವಿ ಕೋಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೋಟ್ರೇಶ, ತಾ. ಪಂ ಸದಸ್ಯ ಶಿವಪ್ಪ ವಾರಿಕ, ವಿಎಸ್‌ಎಸ್‌ಎನ್ ಅಧ್ಯಕ್ಷ ಉದಯಕುಮಾರ ಕಂದಗೂಳೆ, ಅಶೋಕ ಹೊಸಮನಿ, ಭೀಮರಾವ ಢಗೆ, ಕರಬಸಪ್ಪ ಸುಲ್ತಾನಪುರೆ, ಬಾಬು ಚಂಗಳೆ, ಮಲ್ಲಿನಾಥ ಅವುಟೆ, ಶರಣಪ್ಪ ಢಗೆ, ಶ್ರೀಶೈಲ ಬಂಡೆ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕಲಾವಿದರಾದ ಗುರುಶಾಂತಯ್ಯ ಸ್ಥಾವರಮಠ, ಸೂರ್ಯಕಾಂತ ಶಾಸ್ತ್ರೀ, ಕಲ್ಲಿನಾಥ ಶಾಸ್ತ್ರೀ, ಗುರುಲಿಂಗಯ್ಯ ಸ್ವಾಮಿ ವಾಡಿ, ಪವಿತ್ರಾ ಸ್ಥಾವರಮಠ, ಶಿವಶರಣಯ್ಯ ಮಠ, ರಾಚಯ್ಯಸ್ವಾಮಿ ರಠಕಲ್, ಚೆನ್ನಯ್ಯಸ್ವಾಮಿ ಮಠ, ಶ್ರೀದೇವಿ ಬಟಗೇರಿ, ಮಂಗಲಾಬಾಯಿ ಕಾರಭಾರಿ, ವಿಠಲರಾವ ನಾಯ್ಕೋಡಿ, ಶರಣಬಸಪ್ಪ ಬಿಲಗುಂದಿ, ಶರಣಬಸಪ್ಪ ಕಟ್ಟಿಮನಿ, ಸಂಜೀವನ ದೇಶಮುಖ, ಸುಧಾಕರ ಭೋಸಗಾ, ಶಿವಶರಣಯ್ಯ ಬೀದಿಮನಿ, ಸೋಮಯ್ಯ ಹಿರೇಮಠ, ವೀರಭದ್ರಯ್ಯ ಸ್ಥಾವರಮಠ, ಜಗದೀಶ ಹೂಗಾರ ಮೌನೇಶ ಪಂಚಾಳ, ಅಶೋಕ ಆಳಂದ, ಬಸವರಾಜ ಆಳಂದ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…