ಬಿಸಿ ಬಿಸಿ ಸುದ್ದಿ

ಕಕರಸಾ ನಿಗಮದಲ್ಲಿ ಮುಂಬಡ್ತಿ ಪ್ರಕ್ರಿಯೆ ತಾತ್ಕಾಲಿಕವಾಗಿ ತಡೆಹಿಡಿಯಬೇಕೆಂದು ಮನವಿ

ಕಲಬುರಗಿ: ಕಕರಸಾ ನಿಗಮದಲ್ಲಿ ಮುಂಬಡ್ತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಬೇಕೆಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ್ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ (ನೋಂದಣಿ ಸಂಖ್ಯೆ 671/2000) ಕಲ್ಯಾಣ ಕರ್ನಾಟಕ ವಲಯ ಕೇಂದ್ರ ಸಮಿತಿ ವತಿಯಿಂದ ನಗರದಕ್ಕೆ ಆಗಮಿಸಿದ ಸಚಿವರಾದ ರಾಮಲಿಂಗರೆಡ್ಡಿ ಹಾಗೂ ಪ್ರೀಯಾಂಕ ಖರ್ಗೆ ಅವರಿಗೆ ಮನವಿ ಸಲ್ಲಿಸಲಾಯಿತು.

ಭಾರತ ಸಂವಿಧಾನದ ಅನುಚ್ಛೇಧ 371 (ಜೆ)ಯನ್ನು ಹೈದಾಬಾದ ಕರ್ನಾಟಕ ಪ್ರದೇಶದಲ್ಲಿ ವಾಸಿಸುವ ಸ್ಥಳೀಯ ವ್ಯಕ್ತಿಗಳಿಗೆ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಮೀಸಲಾತಿ ಕಲ್ಪಿಸುವುದರೊಂದಿಗೆ ಈ ಭಾಗದ ಸರ್ವತೋ ಮುಖ ಅಭಿವೃದ್ಧಿಗೆ ಪೂರಕವಾಗುವಂತೆ ಕಾಯಿದೆ ರೂಪಿಸಿ ಅನುಷ್ಠಾನಕ್ಕೆ ತರಲಾಗಿದೆ.

ಮುಂಬಡ್ತಿಯು ನೌಕರರ ವೃತ್ತಿ ಜೀವನದ ಸಾರ್ಥಕತೆಗೆ ಸಂದ ಬಹುಮೂಲ್ಯ ಬಹುಮಾನವಾಗಿರುತ್ತದೆ. ಸರ್ಕಾರದ ನಿರ್ಣಾಯಕ ನಡಾವಳಿ ಹೊರಡಿಸಿದ ನಂತರವು ಪ್ರಸ್ತುತ ಮುಂಬಡ್ತಿ ವ್ಯವಸ್ಥೆಯನ್ನು ಮುಂದುವರೆಸುವುದರಿಂದ ಸ್ಥಳೀಯ ವ್ಯಕ್ತಿಗಳಿಗೆ ಮತ್ತು ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಧಿಕಾರಿ ಮತ್ತು ನೌಕರರಿಗೆ ಮುಂಬಡ್ತಿಯಲ್ಲಿ ಬದಲಾಯಿಸಲಾಗದ ಹಾನಿ ಅನ್ಯಾಯ ಉಂಟಾಗುತ್ತದೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ, ಪ್ರಸ್ತುತ ನಿಗಮದಲ್ಲಿ ಪ್ರಗತಿಯಲ್ಲಿರುವ ಎಲ್ಲಾ ಹಂತದ ಮುಂಬಡ್ತಿ ಪ್ರಕ್ರಿಯೆಗಳನ್ನು ಕೈಬಿಟ್ಟು / ರದ್ದುಪಡಿಸಿ, ದಿನಾಂಕ:04-01-2024 ರಂದು ಸಚಿವ ಸಂಪುಟದ ಉಪ ಸಮಿತಿಯ ಸಭೆಯ ನಡವಳಿಯಂತೆ ಜೇಷ್ಠತೆಯನ್ನು ಪ್ರಕಟಿಸಿ ಬಡ್ತಿ ಪ್ರಕ್ರಿಯೆಗೆ ಮರು ಚಾಲನೆ ನೀಡುವಂತೆ ಸೂಕ್ತ ನಿರ್ದೇಶನಗಳನ್ನು ನೀಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ವಲಯ ಅಧ್ಯಕ್ಷ ರಾಜಕುಮಾರ ಎಂ ಯಕ್ಕಂಚಿ, ಪ್ರದಾನ ಕಾರ್ಯದರ್ಶಿ ಸಿದಲಿಂಗ್ ನ್ಯಾಮನ್, ಕಲಬುರ್ಗಿ ವಿಭಾಗ 1 ಅಧ್ಯಕ್ಷ ಅಂಬರಾಯ ಹಂಗರಗಿ, ಪ್ರಧಾನ ಕಾರ್ಯದರ್ಶಿ ಸುರ್ಯಾಕಾಂತ್ ಸಾಗರ್, ಕಲಬುರ್ಗಿ ವಿಭಾಗ 2 ರ ಪ್ರದಾನ್ ಕಾರ್ಯದರ್ಶಿ ನಿಂಗಪ್ಪ ಗುನ್ನಾಪುರ ಇತರರು ಹಾಜರಿದ್ದರು.

emedialine

Recent Posts

ಅಪ್ರಾಪ್ತೆ ಮೇಲೆ ಅತ್ಯಾಚಾರ, ಸಾವು ಪ್ರಕರಣ; ಬಾಲಕಿ ಕುಟುಂಬಸ್ಥರಿಗೆ ರಕ್ಷಣೆ ನೀಡಲು ಮಹ್ಮದ್ ಅಶ್ರಫ್ ಅಲಿ ಆಗ್ರಹ

ಕಲಬುರಗಿ; ನಗರದಲ್ಲಿ ಕಳೆದ ಜೂನ್ 28 ರಂದು 14 ವರ್ಷದ ಅಪ್ರಾಪ್ತ ಬಾಲಕಿ 8 ತಿಂಗಳ ಗರ್ಭಿನಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ…

14 mins ago

ವಚನ ಕಮ್ಮಟ ಪರೀಕ್ಷೆಯಲ್ಲಿ ನೇತ್ರಾ ಶಾಂತಯ್ಯ ರಾಜ್ಯಕ್ಕೆ ತೃತೀಯ ರ್ಯಾಂಕ್

ಸುರಪುರ: ಚಿತ್ರದುರ್ಗದಲ್ಲಿ ನಡೆಸಲಾದ 2022-23ನೇ ಸಾಲಿನ ವಚನ ಕಮ್ಮಟ ಪರೀಕ್ಷೆಯಲ್ಲಿ ಪಟ್ಟಣದ ಸರಕಾರಿ ಕನ್ಯಾ ಮಾಡದರಿಯ ಹಿರಿಯ ಪ್ರಾಥಮಿಕ ಶಾಲೆ…

18 mins ago

ನೇಕಾರರ ಸೌಹಾರ್ದ ಸಹಕಾರಿಗೆ ನೂತನ ಪದಾಧಿಕಾರಿಗಳ ನೇಮಕ

ಸುರಪುರ: ತಾಲೂಕ ನೇಕಾರರ ಸೌಹಾರ್ದ ಸಹಕಾರಿಗೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗಿದೆ. ನಗರದ ತಿಮ್ಮಾಪುರದ ಚೌಡೇಶ್ವರಿ ದೇವಸ್ಥಾನದಲ್ಲಿನ ಸಹಕಾರಿ ಸಂಘದ ಕಚೇರಿಯಲ್ಲಿ…

25 mins ago

ರಾಜಕೀಯಕ್ಕಾಗಿ ಮಠಾಧೀಶರು ನೀತಿ ಬಿಟ್ಟು ಜಾತಿವಂತರಾಗಿದ್ದಾರೆ; ಅರ್ಜುನ ಭದ್ರೆ

ಸುರಪುರ: ರಾಜಕೀಯಕ್ಕಾಗಿ ಇಂದು ಕೆಲವು ಮಠಾಧೀಶರು ಮುಖ್ಯಮಂತ್ರಿ ಹುದ್ದೆ ತಮ್ಮ ಜಾತಿ ಅಥವಾ ತಮ್ಮ ಸಮುದಾಯದವರಿಗೆ ನೀಡುವಂತೆ ಬಹಿರಂಗವಾಗಿ ಹೇಳಿಕೆ…

32 mins ago

ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಾಧಕ ರತ್ನ ಪ್ರಶಸ್ತಿ ಪ್ರದಾನ

ಕಲಬುರಗಿ; ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘದ ವತಿಯಿಂದ "ನಮ್ಮ ನಡಿಗೆ, ಹಳ್ಳಿಯ ಕನ್ನಡ ಸರಕಾರಿ ಶಾಲೆಯ ಕಡೆಗೆ" ಎಂಬ…

40 mins ago

ಸಿಯುಕೆಯಲ್ಲಿ ‘ಡೆಕ್ಕನ್ನಿನ ಸೂಫಿ ಸಂಗೀತ ಮತ್ತು ಕಾವ್ಯ’ ಕುರಿತು ವಿಶೇಷ ಉಪನ್ಯಾಸ

ಕಲಬುರಗಿ: “ವಿನಯ, ಉದಾರತೆ, ಪ್ರೀತಿ ಮತ್ತು ವಾತ್ಸಲ್ಯಗಳು ಸೂಫಿ ಸಂತರ ಪ್ರಮುಖ ಬೋಧನೆಗಳಾಗಿವೆ. ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ ಅವರು ಸೂರ್ಯನಂತೆ…

46 mins ago