ಕಲಬುರಗಿ: ಅಮಾವಾಸ್ಯೆ ನಿಮಿತ್ತ ನೇಕಾರರ ಧರ್ಮಗುರು ಶ್ರೀ ಜೇಡರ ದಾಸಿಮಯ್ಯ ನವರ ಸ್ಮರಣೋತ್ಸವ ಕಾರ್ಯಕ್ರಮ ಮಹಾನಗರದ ಸದ್ಗುರು ಶ್ರೀ ದಾಸಿಮಯ್ಯಲಾ ಸಂಸ್ಥೆಯ ಕಚೇರಿಯಲ್ಲಿ ಜಿಲ್ಲಾ ಖಾದಿ ಗ್ರಾಮೋದ್ಯೋಗದ ವ್ಯವಸ್ಥಾಪಕರಾದ ಯಶವಂತ ಗೌಡ ಮಾಲಿಪಾಟೀಲ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಜೇಡರ ದಾಸಿಮಯ್ಯ ನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿ, ರಾಜ್ಯ ಹಟಗಾರ ಸಮಾಜ, ದಾಸಿಮಯ್ಯ ನವರ ಭಾವಚಿತ್ರ ಉಚಿತವಾಗಿ ನೀಡಿ ದಶಕವಾದ ನಂತರ ಈಗ ಸ್ವಲ್ಪ ಕಲ್ಯಾಣ ಕರ್ನಾಟಕ ಭಾಗದ ಜನರಲ್ಲಿ ಪ್ರಜ್ಞೆ ಮೂಡುತ್ತಿದೆ, 1995 ರಲ್ಲಿ ಅಕ್ಕಲಕೋಟ ಶ್ರೀಗಳ ನೈತೃತ್ವದಲ್ಲಿ ಮೊಟ್ಟ ಮೊದಲು ಪಾದ ಯಾತ್ರೆಯಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದ ಅನುಭವ ತಾಯಿಯಿಂದ ಕೇಳಿದೆ. ಅಂದಿನಿಂದ ಪ್ರತಿ ವರ್ಷ ಒಂದು ದಿನ ದಾಸಿಮಯ್ಯ ನವರ ಐಕ್ಯ ಮಂಟಪ ಮತ್ತು ದೇವಸ್ಥಾನ ದರ್ಶನಕ್ಕೆ ಮೂದನೂರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದು ಬರುವ ರೂಢಿ ಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.
ಹಟಗಾರ ಯುವ ಜನಾಂಗ ಕೂಡಾ ಪ್ರತಿ ವರ್ಷ ಒಂದು ದಿನ ಅಂದರೆ ಈ ದಿನ ಭೇಟಿ ನೀಡಲು ಕೋರುತ್ತೇನೆ ಅಲ್ಲದೆ ತಮ್ಮ ಮನೆಯಲ್ಲಿ ನಮ್ಮ ಧರ್ಮ, ಸಂಸ್ಕಾರ, ಸಂಸ್ಕೃತಿ ಇನ್ನೊಬ್ಬರು ತಿಳಿಯುವಂತೆ ಅಗಲು, ಆದ್ಯ ವಚನಕಾರ ಶ್ರೀ ದಾಸಿಮಯ್ಯ ನವರ ಮತ್ತು ಸ್ವ ಜಾತಿ ಸಂಜಾತ ಶ್ರೀ. ಫ.ಗು.ಹಳಕಟ್ಟಿ ಯವರ ಭಾವಚಿತ್ರಗಳು ಮನೆಯ ಮುಖ್ಯ ಕೋಣೆಯಲ್ಲಿ ಹಾಕಬೇಕು ಎಂದು ಮನವಿ ಮಾಡಿದರು.
ಸ್ಮರಣೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನುಸಲ್ಲಿಸಿದರು.ರ ಸಮಾಜ ಸಂಘದ ಅಧ್ಯಕ್ಷ ಶ್ರೀನಿವಾಸ ಬಲಪೂರ್ ವಹಿಸಿದ್ದರು. ಸಪ್ತ ನೇಕಾರ ಸೇವಾ ಸಂಘದ ಅಧ್ಯಕ್ಷರಾದ ಶಿವಲಿಂಗಪ್ಪಾ ಅಷ್ಟಗಿ ಸ್ವಾಗತಿಸಿದರು. ನ್ಯಾಯವಾದಿ ಜೇ. ಎಸ. ವಿನೋದಕುಮಾರ ವಂದಿಸಿದರು. ಡಾ. ಬಸವರಾಜ ಚನ್ನಾ ಹಾಗೂ ಇತರರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…