ಬಿಸಿ ಬಿಸಿ ಸುದ್ದಿ

100-200 ವರ್ಷಗಳ ಹಳೆ ಮರಗಳೆಲ್ಲ ಮಾಯವಾಗುತ್ತಿವೆ

ಕಲಬುರಗಿ: ಹರಳಯ್ಯ ಭವನದಲ್ಲಿ ಮಿರಾಕಲ್ ಫಾರೆಸ್ಟ್ ಚಾಲೆಂಜ್ ಕಾರ್ಯಕ್ರಮಕ್ಕೆ ಮಹೇಶ್ ಶೆಣೈ ಸಾವಯವ ಬದುಕು ಸಂಘಟಕರು ಉದ್ಘಾಟಿಸಿದರು.

ನಂತರ ಮಾತನಾಡಿ ಬಿ ವಾಸು ಸಮಾಜ ಸೇವಕರು ಪ್ರಭವ ಕೆ. ಪಟ್ಟಣಕರ್,ಎಸ್‌ ಬಿ ವಾಡಿ ಸಂಘಟಕರು ಅನೇಕ ಜನರು ಉಪಸ್ಥಿತರಿದ್ದರು.

ನಗರೀಕರಣದ ನಾಗಾಲೋಟಕ್ಕೆ ಕಣ್ಮರೆಯಾ ಗುತ್ತಿರುವ ಹಸಿರಿನ ಹೊದಿಕೆ ಅಪಾಯದ ಕರೆಗಂಟೆ ಬಾರಿಸುತ್ತಿರುವಂತೆಯೇ ಅಲ್ಪ ಸಮಯದಲ್ಲಿಯೇ ಸಮೃದ್ಧ ಅರಣ್ಯ ಬೆಳೆಸುವ ಜಪಾನ್‌ನ ಮಿಯವಾಕಿ ಅರಣ್ಯ ವಿಧಾನ ಜನಪ್ರಿಯತೆ ಪಡೆಯುವ ಹಂತದಲ್ಲಿದೆ.ಇಂದು ಅಭಿವೃದ್ಧಿ ಎಂದರೆ ಹಸಿರಿನ ನಾಶ ಎಂಬಂತಾಗಿದ್ದು, 100-200 ವರ್ಷಗಳ ಹಳೆ ಮರಗಳೆಲ್ಲ ಮಾಯವಾಗುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಶುದ್ಧ ಗಾಳಿಯನ್ನು ಖರೀದಿಸಿ ಸೇವಿಸಬೇಕಾಗುವ ಪ್ರಮೇಯ ಬಂದೊದಗುವ ಕಾಲ ದೂರವಿಲ್ಲ. ಹೀಗಾಗಿ ಇರುವ ಸ್ವಲ್ಪ ಜಾಗದಲ್ಲಿಯೇ ಹೆಚ್ಚು ಗಿಡಮರ ಬೆಳೆಸುವ ಜಪಾನ್‌ನ ಮಿಯಾವಾಕಿ ಅರಣ್ಯ ವಿಧಾನ ಇಂದಿನ ಧಾವಂತದ ಬದುಕಿಗೆ ಹೆಚ್ಚು ಪ್ರಸ್ತುತ ಎಂದೆನಿಸ ತೊಡಗಿದೆ ಎಂದು ತಿಳಿಸಿದರು.

6ಜಪಾನ್‌ನ ಸಸ್ಯ ತಜ್ಞ ಅಕಿರಾ ಮಿಯವಾಕಿ ಅವರು ಕಂಡುಕೊಂಡ ಈ ಅರಣ್ಯ ಪದ್ದತಿ ‘ಮಿಯವಾಕಿ ಅರಣ್ಯ’ ಎಂದೇ ಜಗತ್ತಿನಾದ್ಯಂತ ಹೆಚ್ಚು ಪ್ರಚಲಿತವಾಗಿದೆ. ಈ ಪದ್ಧತಿಯಲ್ಲಿ ಕಡಿಮೆ ಜಾಗದಲ್ಲಿ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಿ ಅಲ್ಪಾವಧಿಯಲ್ಲಿಯೇ ಅರಣ್ಯವಾಗಿ ಬೆಳೆಸಲಾಗುತ್ತದೆ. ಪ್ರಕೃತಿದತ್ತವಾಗಿ ಕಾಡು ಬೆಳೆಯಲು ಬರೋಬ್ಬರಿ 100 ವರ್ಷ ಬೇಕಾದರೆ, ಈ ವಿಧಾನದಲ್ಲಿ 25-30 ವರ್ಷದಲ್ಲಿಯೇ ಸಮೃದ್ದ ಕಾಡು ನಳನಳಿಸುತ್ತದೆ. ಅಂದರೆ ಈ ಮಿಯವಾಕಿ ವಿಧಾನದಲ್ಲಿ ಬೆಳೆಯುವ ಗಿಡಗಳು ನೈಸರ್ಗಿಕವಾಗಿ ಬೆಳೆಯುವ ಗಿಡಗಳಿಗಿಂತ ಶೇ.10ರಷ್ಟು ವೇಗವಾಗಿ ಹಾಗೂ ಶೇ.30ರಷ್ಟು ದಟ್ಟವಾಗಿ ಬೆಳೆಯುತ್ತವೆ ಎಂದು ಮಾಹಿತಿ ನೀಡಿದರು.

ಗಿಡಮರಗಳ ಆಯ್ಕೆ ಹೇಗೆ?: ಮಿಯವಾಕಿ ವಿಧಾನದಲ್ಲಿ ಸ್ಥಳೀಯ ವಾತಾವರಣಕ್ಕೆ ಪೂರಕವಾದ ಗಿಡಗಳನ್ನು ಆಯ್ಕೆ ಮಾಡಿಕೊಂಡರೆ ಒಳ್ಳೆಯದು. ಚಿಕ್ಕ, ದೊಡ್ಡ ಹಾಗೂ ಬೃಹತ್ ವೃಕ್ಷಗಳಾಗಿ ಬೆಳೆಯುವ ಗಿಡಗಳನ್ನು ಆರಿಸಿ ಬೆಳೆಸಬಹುದು. ಸ್ಥಳೀಯವಾಗಿ ಬೆಳೆಯುವ ರೆಂಜ, ಹೊಳೆ ದಾಸವಾಳ, ಚಂಪಕ, ಹೊಂಗೆ, ಪುನರ್ಪುಳಿ ಮೊದಲಾದ ಗಿಡಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಮಿಯಾವಾಕಿ ತಜ್ಞ ಮಹೇಶ್ ಶೆಣೈ ಅವರ ಪ್ರಕಾರ ಹಣ್ಣು ಬಿಡುವ ಗಿಡಗಳು ಅಷ್ಟೊಂದು ವೇಗವಾಗಿ ಬೆಳೆಯಲಾ ರವು. ಹೀಗಾಗಿ ಸಾಧ್ಯವಾದಷ್ಟು ಇತರ ಗಿಡಗಳನ್ನೇ ಆಯ್ಕೆ ಮಾಡಿಕೊಂಡರೆ ಒಳ್ಳೆಯದು ಎಂದರು.

ಗಿಡಗಳನ್ನು ನೆಡುವ ಮೊದಲು ಮಣ್ಣನ್ನು ಪೋಷಕಾಂಶ ಭರಿತವಾಗಿ ಹದಗೊಳಿಸಬೇಕು. ಇಷ್ಟಪಟ್ಟ ಒಂದು ನಿರ್ದಿಷ್ಟ ಆಕಾರದಲ್ಲಿಯೂ ಮಿಯವಾಕಿ ಕಾಡನ್ನು ಬೆಳೆಸಬಹುದು. ಸಾಮಾನ್ಯವಾಗಿ ಗಿಡಗಳು ಸೂರ್ಯನ ಬೆಳಕನ್ನು ಅರಸುತ್ತಾ ಎತ್ತರೆತ್ತರವಾಗಿ ಬೆಳೆಯುತ್ತವೆ. ಹೀಗಾ ಗಿ ಇದನ್ನೇ ಗಮನದಲ್ಲಿಟ್ಟುಕೊಂಡು ಗಿಡಗಳನ್ನು ನೆಡಬೇಕಾಗುತ್ತದೆ. ನೆಟ್ಟು 3 ವರ್ಷದವರೆಗೆ ನೀರು ಕೊಟ್ಟು ಪೋಷಿಸಿದರೆ ಸುಮಾರು 25 ರಿಂದ 30 ವರ್ಷದಲ್ಲಿ ಮಿಯವಾಕಿ ಅರಣ್ಯ ರೂಪುಗೊಳ್ಳುತ್ತದೆ. ಮಿಯವಾಕಿ ವಿಧಾನದಲ್ಲಿ ಸೆಂಟ್ಸ್ಗೆ 250 ಗಿಡಗಳಂತೆ ಒಂದು ಎಕರೆಗೆ ಸು ಮಾರು 4,500 ಗಿಡಗಳನ್ನು ನೆಡಬಹುದು. ಪ್ರತಿ ಗಿಡಕ್ಕೆ ಒಂದೊಂದು ಮೀ. ಅಂತರವಿರಬೇಕು ಎಂದು ತಿಳಿಸಿದರು.

ಮಿರಾಕಲ್ ಫಾರೆಸ್ಟ್ ಚಾಲೆಂಜ್’ ಎಂಬ ಅಭಿಯಾನ ಮಿಯವಾಕಿ ಅರಣ್ಯ ಬೆಳೆಸುವ ಬಗ್ಗೆ ಆನ್ ಲೈನ್ ಮೂಲಕ ಕಾರ್ಯಾಗಾರ ಆರಂಭಿಸಿದ್ದೇನೆ. ಉಡುಪಿ ಜಿಲ್ಲೆಯಲ್ಲಿ ವಿವಿಧ ಕಡೆಗಳಲ್ಲಿ ಈಗಾಗಲೇ 5 ಮಿಯವಾಕಿ ಅರಣ್ಯಗಳನ್ನು ಬೆಳೆಸಲಾಗಿದೆ. ನಿಮ್ಮ ಕಲ್ಬುರ್ಗಿ ಜಿಲ್ಲೆಯಲ್ಲಿ ವಾಸು, ಸಿದ್ದು ವಾಡಿ ಇನ್ನು ಅನೇಕರು ಕಾರ್ಯಾಗಾರದಲ್ಲಿ ಸುಮಾರು 6ಕ್ಕೂ ಅಧಿಕ ಮಂದಿ ನಮ್ಮ ಮನೆ ಪರಿಸರದಲ್ಲಿ ಮಿಯವಾಕಿ ವನ ಬೆಳೆಸಲು ಮುಂದೆ ಬಂದಿದ್ದಾರೆ. -ಕೆ. ಮಹೇಶ್ ಶೆಣೈ, ಮಿಯವಾಕಿ ತಜ್ಞ, ಉಡುಪಿ
emedialine

Recent Posts

ಬಸವರಾಜ್ ಎಸ್ ಜಿಲಿಗೆ ಸನ್ಮಾನ ನಾಳೆ

ಕಲಬುರಗಿ; ಬಸವರಾಜ್ ಎಸ್ ಜಿಲಿ ಅಭಿಮಾನಿ ಬಳಗದ ವತಿಯಿಂದ ಡೆಪ್ಟಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಕೆ ಎಸ್ ಆರ್…

23 mins ago

ಐಆರ್‌ಎಸ್‌ಒ ಕರ್ನಾಟಕ ರಾಜ್ಯ ಕಾರ್ಯಕರ್ತರ ಸಭೆ

ರಾಯಚೂರು; ಮಾರ್ಕ್ಸ್ ಭವನದಲ್ಲಿ ಎಐಆರ್‌ಎಸ್‌ಒ ಕರ್ನಾಟಕ ರಾಜ್ಯ ಮಟ್ಟದ ಕಾರ್ಯಕರ್ತರ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಕಾರ್ಯಕರ್ತರ ಸಭೆಯಲ್ಲಿ, ಕೇಂದ್ರ ಸಂಘಟನಾ…

44 mins ago

ಶೈಲಜಾ ಶರಣಗೌಡಗೆ ಪಿಎಚ್. ಡಿ. ಡಾಕ್ಟರೇಟ್ ಪದವಿ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಶೋಧನಾ ವಿಭಾಗದ ವಿದ್ಯಾರ್ಥಿನಿ, ಶೈಲಜಾ ಶರಣಗೌಡ ಇವರು ಡಾ. ಶಾರದಾ ದೇವಿ ಎಸ್.…

46 mins ago

ಜನಪದ ಕಲಾವಿದರು ಸಮಾಜದ ಆಸ್ತಿ

ಕಲಬುರಗಿ; ಗ್ರಾಮೀಣ ಭಾಗದಲ್ಲಿ ಅನೇಕ ಜನ ಕಲಾವಿದರು ಹಗಲಿರುಳು ಸೇವೆಗೈದು ಜನಪದ ಉಳಿಸುವುದರೊಂದಿಗೆ ಸಮಾಜದ ಆಸ್ತಿಯಾಗಿದ್ದಾರೆ ಎಂದು ನ್ಯಾಯವಾದಿ ಹಣಮಂತರಾಯ…

50 mins ago

ಕಲಬುರಗಿ: ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

ಕಲಬುರಗಿ: ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ 15ರ ಫಿರದೋಸ್ ಕಾಲೋನಿ ಬಡಾವಣೆಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಸೈಯದ್ ಮಿರಾಜೊದ್ದೀನ್ ಕಾಶೀಪ್…

3 hours ago

ಸಿಯುಕೆಯಲ್ಲಿ ರಾಷ್ಟ್ರೀಯ ಅಪ್ರೆಂಟಿಸ್‍ಶಿಪ್ ತರಬೇತಿ ಯೋಜನೆ ಕುರಿತು ಜಾಗೃತಿ

ಕಲಬುರಗಿ: "ನ್ಯಾಷನಲ್ ಅಪ್ರೆಂಟಿಸ್‍ಶಿಪ್ ಟ್ರೈನಿಂಗ್ ಸ್ಕೀಮ್ (ಓಂಖಿS) ಐಟಿಐ, ಪಿಯುಸಿ, ಡಿಪೆÇ್ಲೀಮಾ ಮತ್ತು ಪದವೀಧರರು ಸೇರಿದಂತೆ ತಾಂತ್ರಿಕ ಮತ್ತು ತಾಂತ್ರಿಕೇತರ…

4 hours ago