ಕಲಬುರಗಿ: ಸಂಸಾರದಲ್ಲಿ ನೋವು ನಲಿವು ಒಂದಾಗಿಸಿಕೊಂಡು ಮುನ್ನಡೆಯುವ ಪರಂಪರೆ ಜವಳಿ ಕುಟುಂಬದಲ್ಲಿ ಕಾಣಬಹುದು. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಸೇರಲಿ. ಸಮಾಜ ನಿರೀಕ್ಷಿಸುವ ಸಾಹಿತ್ಯ ಹಾಗೂ ಜನರ ಮನ ತಿದ್ದುವ ಸಾಹಿತ್ಯ ಇಂದು ಅಗತ್ಯವಾಗಿದೆ ಎಂದು ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಡಾ. ದಾಕ್ಷಾಯಣಿ ಎಸ್ ಅಪ್ಪಾ ನುಡಿದರು.
ಹಿರಿಯ ಲೇಖಕಿ ಶಕುಂತಲಾ ಪಾಟೀಲ ಜಾವಳಿ ಅವರ ವಿರಚಿತ ಬೆಳಕು ತುಂಬಿದ ಭಾವ ಮತ್ತು ಅನುಭವಾಮೃತ ಎಂಬ ಎರಡು ಕೃತಿಗಳನ್ನು ಜನಾರ್ಪಣೆಗೊಳಿಸಿ ಅವರು ಮಾತನಾಡಿದ ಅವರು, ಸಾಹಿತ್ಯ ಮತ್ತು ಸಮಾಜ ವ್ಯಕ್ತಿತ್ವವನ್ನು ಕಟ್ಟಿ ಕೊಡುತ್ತವೆ. ಅಂಥ ಬದುಕು ಕವಯತ್ರಿ ಶಕುಂತಲಾ ಪಾಟೀಲ ಜಾವಳಿಯವರದ್ದಾಗಿದೆ ಎಂದು ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ಸಾಹಿತ್ಯ ಮತ್ತು ಶರಣ ಸಾಹಿತ್ಯಕ್ಕೆ ಜವಳಿ ಕುಟುಂಬದ ಸೇವೆ ಸದಾ ಸ್ಮರಣೀಯವಾಗಿದೆ. ಮಾನವೀಯ ಮೌಲ್ಯಗಳು ಕಳಚುತ್ತಿರುವ ಈ ಸಮಾಜದಲ್ಲಿ ಮಾನವೀಯ ನೆಲೆಯಲ್ಲಿ ಸಮಾಜಮುಖಿ ಚಿಂತನೆಗಳನ್ನು ಮೈಗೂಡಿಸಿಕೊಂಡು ಹೋಗಬೇಕಾಗಿದೆ ಎಂದರು.
ಮಾದನ ಹಿಪ್ಪರಗಾದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಜೀ, ಪುಸ್ತಕ ಓದುವ ಸಂಸ್ಕøತಿ ಕಡಿಮೆಯಾಗುತ್ತಿದೆ. ಇದಕ್ಕೆ ಮೊಬೈಲ್ ಸಂಸ್ಕøತಿಯೇ ಕಾರಣವಾಗಿದೆ. ಒತ್ತಡದ ಜೀವನದಲ್ಲಿ ನಾವೆಲ್ಲ ಸಾಗುತ್ತಿದ್ದೇವೆ. ನಡುವೆ ಸಮಭಾವದ ಮನಸ್ಸಿನ ಸಾಹಿತ್ಯ ಜನಮಾನಸಕ್ಕೆ ತಟ್ಟುತ್ತದೆ. ಓದುವದರಲ್ಲಿ ಸಮಯ ಮೀಸಲಿಡಬೇಕು. ಇಂದು ಖರೀದಿಸುವ ಮನೋಭಾವ ಎಲ್ಲರಲ್ಲಿ ಮೂಡಿದಾಗ ಲೇಖಕರಿಗೆ ಪ್ರೋತ್ಸಾಹಿಸಿದಂತಾಗುವುದು. ಈ ಸಂಸ್ಕಾರ ಸಮಾಜದಲ್ಲಿ ಬೆಳೆಯಲಿ ಎಂದು ಆಶಿಸಿದರು.
ಲೇಖಕಿ ಶಕುಂತಲಾ ಪಾಟೀಲ ಜಾವಳಿ, ಯಶ್ವಂತರಾವ ಪಾಟೀಲ ಗರಡಶೆಟ್ಟಿ, ಡಾ. ಕೆ ಗಿರಿಮಲ್ಲ ಮಾತನಾಡಿದರು. ಬೆಳಕು ತುಂಬಿದ ಭಾವ ಕೃತಿ ಕುರಿತು ಡಾ.ನೀಲಾಂಬಿಕಾ ಪೊಲೀಸ್ ಪಾಟೀಲ ಹಾಗೂ ಅನುಭವಾಮೃತ ಕೃತಿ ಕುರಿತು ಡಾ. ಇಂದುಮತಿ ಪಿ ಪಾಟೀಲ ಅವರು ಪರಿಚಯ ಮಾಡಿದರು.
ಹಿರಿಯ ಶರಣ ಚಿಂತಕ ಶರಣಬಸಪ್ಪ ಪಾಟೀಲ ಜಾವಳಿ ಅಧ್ಯಕ್ಷತೆ ವಹಿಸಿದ್ದರು. ರಾಜೇಶ್ವರಿ ಚಂದಾ, ಉಷಾರಾಣಿ ಪಾಟೀಲ, ಜ್ಯೋತಿ ಪಾಟೀಲ, ಪ್ರಭುಲಿಂಗ ಗರಡಶೆಟ್ಟಿ, ರಾಜಶೇಖರ ಪಾಟೀಲ ಜಾವಳಿ, ಶಿವಶಂಕರ ಪಾಟೀಲ, ಸಿದ್ಧರಾಮ ಗರಡಶೆಟ್ಟಿ, ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಯಶ್ವಂತರಾಯ ಅಷ್ಠಗಿ, ಶರಣರಾಜ್ ಛಪ್ಪರಬಂದಿ, ಕಲಾವಿದ ಸಿದ್ಧಾರ್ಥ ಚಿಮ್ಮಾಇದಲಾಯಿ ಹಾಗೂ ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಮುಖರಾದ ಎ ಕೆ ರಾಮೇಶ್ವರ, ಡಾ. ಬಿ ಎ ಪಾಟೀಲ ಮಹಾಗಾಂವ, ಧರ್ಮಣ್ಣಾ ಹೆಚ್ ಧನ್ನಿ, ಡಾ. ವಿಜಯಲಕ್ಷ್ಮೀ ಕೋಸಗಿ, ಶಾಂತಾ ಪಸ್ತಾಪುರ, ಜ್ಯೋತಿ ಕೋಟನೂರ, ವಿನೋದ ಜೇನವೇರಿ, ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಮಲ್ಲಿನಾಥ ದೇಶಮುಖ, ರೇವಣಸಿದ್ದಪ್ಪ ಜೀವಣಗಿ, ಶಿವಲಿಂಗಪ್ಪ ಅಷ್ಟಗಿ, ಲಕ್ಷ್ಮಣರಾವ ಕಡಬೂರ, ನಾಗಪ್ಪ ಸಜ್ಜನ್, ಸಂತೋಷ ಕುಡಳ್ಳಿ, ಕಲ್ಯಾಣಕುಮಾರ ಶೀಲವಂತ, ಪ್ರಭುಲಿಂಗ ಮೂಲಗೆ, ಗಣೇಶ ಚಿನ್ನಾಕಾರ, ರಾಜೇಂದ್ರ ಮಾಡಬೂಳ, ವಿಶ್ವನಾಥ ತೊಟ್ನಳ್ಳಿ, ಎಸ್ ಎಂ ಪಟ್ಟಣಕರ್, ಹೆಚ್ ಎಸ್ ಬರಗಾಲಿ, ಮಂಜುಳಾ ಸುತಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…