ಕಲಬುರಗಿ; ರಾಷ್ಟ್ರೀಯ ಹೆದ್ದಾರಿ 150ರ ಮಧ್ಯದಲ್ಲಿ ಬರುವ ಜಿಲ್ಲೆಯ ಶಹಾಬಾದ-ವಾಡಿ ನಡುವಿನ ಕಾಗಿಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸೇತುವೆ ಕೆಲಸ ಹಿನ್ನೆಲೆಯಲ್ಲಿ ನಿರ್ಮಿಸಲಾದ ಪರ್ಯಾಯ ಕಚ್ಚಾ ರಸ್ತೆ ತುಂಬಾ ಹದಗೆಟ್ಟಿದ್ದು, ಅಲ್ಲಿನ ಸಂಚಾರ ನರಕಯಾತನೆಗೆ ಸಮವಾಗಿದೆ. ಕೂಡಲೆ ಇದನ್ನು ಸರಿಪಡಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗೆ ಸಂಸದ ಡಾ.ಉಮೇಶ ಜಾಧವ ಸೂಚನೆ ನೀಡಿದರು.
ರವಿವಾರ ಇಲ್ಲಿನ ಡಿ.ಸಿ ಕಛೇರಿ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲುಸ್ತುವಾರಿ “ದಿಶಾ” ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆ ಆರಂಭವಾಗುತ್ತಿದ್ದಂತೆ ಎ.ಎಲ್.ಸಿ. ತಿಪ್ಪಣ್ಣ ಕಮಕನೂರ ಶಹಾಬಾದ-ವಾಡಿ ರಸ್ತೆ ವಿಷಯ ಪ್ರಸ್ತಾಪಿಸಿ 58 ಕೋಟಿ ರೂ. ವೆಚ್ಚದಲ್ಲಿ ಸೇತುವ ನಿರ್ಮಿಸಲಾಗುತ್ತಿದೆ. ಪರ್ಯಾಯ ಕಚ್ಚಾ ರಸ್ತೆ ಹದಗೆಟ್ಟ ಕಾರಣ ಅನೇಕ ರಸ್ತೆ ಅಪಘಾತಗಳಾಗಿವೆ. ದ್ವಿಚಕ್ರ ಸವಾರರ ಪ್ರಯಟಣ ಸವಾಲಿನದ್ದಾಗಿದೆ. ರಸ್ತೆ ಅಪಘಾತದಿಂದ ಪ್ರಾಣ ಹಾನಿ ಸಂಭವಿಸುವ ಮುನ್ನ ರಸ್ತೆ ದುರಸ್ತಿ ಮಾಡಿ ಎಂದು ಆಗ್ರಹಿಸಿದರು.
ಇದಕ್ಕೆ ಎಂ.ಎಲ್.ಸಿ ಸುನೀಲ ವಲ್ಯಾಪುರೆ ಸಹ ಧ್ವನಿಗೂಡಿಸಿ ಎನ್.ಎಚ್. ರಸ್ತೆ ನಿರ್ಮಿಸುವಾಗ ಕೇಂದ್ರ ಸರ್ಕಾರದ ಮಾರ್ಗಸೂಚಿ ಪಾಲಿಸಿದರೆ ಈ ಸಮಸ್ಯೆ ಉದ್ಭವಿಸುವುದಿಲ್ಲ ಎಂದರು. ಕಚ್ಚಾ ರಸ್ತೆ ತುಂಬಾ ಗುಂಡಿ ಇದ್ದು, ಸಂಚಾರಕ್ಕೆ ಯೋಗ್ಯವಿಲ್ಲ. ಹೆಚ್ಚಿನ ಟ್ರಾಫಿಕ್ ಇರುವುದರಿಂದ ಮಹಿಳೆಯರು, ವೃದ್ಧರ, ಮಕ್ಕಳು ಪ್ರಯಾಣ ಮಾಡಬೇಕೆಂದರೆ ದೊಡ್ಡ ಹರಸಾಹಸವಾಗಿದೆ. ಕೂಡಲೆ ಇದನ್ನು ಸರಿಪಡಿಸಿ ಸಂಚಾರಕ್ಕೆ ಸುಗಮಗೊಳಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ಮೊಹಮ್ಮದ್ ಇಬ್ರಾಹಿಂ ಅವರಿಗೆ ಸಂಸದ ಡಾ.ಉಮೇಶ ಜಾಧವ ಅವರು ನಿರ್ದೇಶನ ನೀಡಿದರು.
ವಾಡಿಯ ಬಲರಾಮ್ ಚೌಕ್ ಬಳಿ ರೈಲ್ವೆ ಕ್ರಾಸ್ ಮೇಲೆ ಆರ್.ಓ.ಬಿ ಸೇತುವೆ (ಎಲ್.ಸಿ-3) ನಿರ್ಮಾಣ ಮಾಡದ ಕಾರಣ ಗಂಟೆಗಟ್ಟಲೆ ಪ್ರಯಾಣಿಕರು ಅಲ್ಲಿ ನಿಲ್ಲಬೇಕಿದೆ. 4 ವರ್ಷದಿಂದ ನೆನೆಗುದ್ದಿಗೆ ಬಿದ್ದಿರುವ ಕಾರಣ ಜನ ನಮಗೆ ಹಿಡಿಶಾಪ ಹಾಕುತ್ತಿದ್ದಾರೆ ಎಂದ ಸಂಸದ ಡಾ.ಉಮೇಶ ಜಾಧವ ಅಸಮಾಧಾನ ವ್ಯಕ್ತಪಡಿಸಿ ಪ್ರಗತಿ ಎಲ್ಲಿಗೆ ಬಂದಿದೆ ಎಂದು ಪ್ರಶ್ನಿಸಿದರು. ಸೊಲಾಪೂರ ರೈಲ್ವೆ ಅಧಿಕಾರಿ ಮಾತನಾಡಿ ಪ್ರಸ್ತಾವಿತ 58 ಮೀಟರ್ ಆರ್.ಓ.ಬಿ ನಿರ್ಮಾಣ ರೈಲ್ವೆ ಇಲಾಖೆ ಮಾಡಬೇಕಿತ್ತು, ಕಾರಣಾಂತರ ಆಗಿಲ್ಲದ ಕಾರಣ ವರ್ಷದ ಹಿಂದೆ ರಾಷ್ಟ್ರೀಯ ಹೆದ್ದಾರಿ ವಿಭಾಗಕ್ಕೆ ಆರ್.ಓ.ಬಿ. ನಿರ್ಮಿಸಲು ಅನುಮತಿ ನೀಡಲಾಗಿದೆ. ಇದೀಗ ಜಿ.ಎ.ಡಿ. ಅನುಮೋದನೆಗೆ ಸೆಂಟ್ರಲ್ ರೈಲ್ವೆ ವಲಯ ಕಚೇರಿಯಲ್ಲಿ ಬಾಕಿ ಇದ್ದು, ಅದು ಒಪ್ಪಿಗೆ ಪಡೆದ ತಕ್ಷಣವೆ ಆರ್.ಓ.ಬಿ. ನಿರ್ಮಿಸಬಹುದಾಗಿದೆ ಎಂದು ಮಾಹಿತಿ ನೀಡಿದರು. ರೈಲ್ವೆ ಇಲಾಖೆಯಿಂದ ಜಿ.ಎ.ಡಿ (ಜನರಲ್ ಅಲಯನ್ ಮೆಂಟ್ ಡ್ರಾಯಿಂಗ್) ಅನುಮೋದನೆ ಸಿಕ್ಕ ತಕ್ಷಣವೆ ಟೆಂಡರ್ ಕರೆದು ಕೆಲಸ ಪೂರ್ಣಗೊಳಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಇ.ಇ. ಮೊಹಮ್ಮದ್ ಇಬ್ರಾಹಿಂ ಅವರಿಗೆ ಸಂಸದ ಡಾ.ಉಮೇಶ ಜಾಧವ ಸೂಚಿಸಿದರು.
ಇದಲ್ಲದೆ ಚಿತ್ತಾಪೂರ-ಜೇವರ್ಗಿ ರಸ್ತೆ ಸಂಪರ್ಕ ಕಲ್ಪಿಸುವ ಚಾಮನೂರ-ನರಿಬೋಳ ಸೇತುವೆ ಕಾಮಗಾರಿ ವಿಳಂಬ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಡಾ.ಉಮೇಶ ಜಾಧವ ಅವರು, ಈ ಕುರಿತು ಇದೂವರೆಗಿನ ಪ್ರಗತಿ ಬಗ್ಗೆ ವರದಿ ಕೊಡಿ ಎಂದು ರಾಷ್ಟ್ರಿಯ ಹೆದ್ದಾರಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕಲಬುರಗಿ ನಗರ ಸರ್ವಿಸ್ ರಸ್ತೆಗೆ 56 ಕೋಟಿ ರೂ. ಮಂಜೂರು: ಕಲಬುರಗಿ ನಗರದ ಹುಮನಾಬಾದ-ರಾಮ ಮಂದಿರ ವರೆಗಿನ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ 12.63 ಕಿ.ಮೀ ಸರ್ವಿಸ್ ರ್ಸತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 56 ಕೋಟಿ ರೂ. ಅನುದಾನ ವಿಡುಗಡೆ ಮಾಡಿದೆ. ಕೆಲವು ಕಡೆ ರಸ್ತೆ ಅತಿಕ್ರಮಣವಾಗಿದ್ದು, ಅದರು ತೆರವುಗಳಿಗೆ ವಶಕ್ಕೆ ಪಡೆದು ಕೂಡಲೆ ಸರ್ವಿಸ್ ರಸ್ತೆ ಮಾಡಬೇಕು ಎಂದು ಎಮ್.ಎಚ್.ಎ.ಐ ಸೈಟ್ ಇಂಜಿನಿಯರ್ ಪ್ರದೀಪ ಅವರಿಗೆ ಸೂಚಿಸಿದ ಸಂಸದರು, ಜಿಲ್ಲೆಯಲ್ಲಿ ಹಾದು ಹೋಗಲಿರುವ 71 ಕಿ.ಮೀ ಸೂರತ್-ಚೆನ್ನೈ ಎಕಾನಾಮಿಕ್ ಕಾರಿಡಾರ್ ರಸ್ತೆ ಪ್ರಗತಿ ಕುರಿತು ಮಾಹಿತಿ ಪಡೆದರು. ಇದು ಸಿಂಗಾಪೂರ ಮಾದರಿ ರಸ್ತೆಯಾಗಿದ್ದು, ಇದು ನಿರ್ಮಾಣವಾದಲ್ಲಿ 50 ನಿಮಿಷದಲ್ಲಿ ಸೋಲಾಪುರ ತಲುಪಬಹುದು. ಬೆಂಗಳೂರು ಪ್ರಯಾಣ ಸಮಯ ಸಹ ಕಡಿಮೆಯಾಗಲಿದೆ ಎಂದರು.
ಆರೋಗ್ಯ ಇಲಾಖೆ ಚರ್ಚೆ ವೇಳೆ ಹಿಂದಿನ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆ ರದ್ದಾಗಿ ಆಯುಷ್ಮಾನ ಭಾರತ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ-ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಲಿಸಿದ್ದು, ಇದರಲ್ಲಿ ಇದೂವರಗೆ ಅರ್ಹ 20 ಲಕ್ಷ ಜನರಲ್ಲಿ 5.41ಲಕ್ಷ ಜನರಿಗೆ ಆರೋಗ್ಯ ಕಾರ್ಡ್ ನೀಡಲಾಗಿದೆ. ಈ ಯೋಜನೆಯಡಿ ಆರೋಗ್ಯ ಕಾರ್ಡ್ ಪಡೆದವರಿಗೆ ಬಿ.ಪಿ.ಎಲ್ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂ., ಎ.ಪಿ.ಎಲ್. ಕುಟುಂಬಕ್ಕೆ 1.50 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ ದೊರೆಯಲಿದೆ ಎಂದು ಡಿ.ಎಚ್.ಓ ಡಾ.ರತಿಕಾಂತ ಸ್ವಾಮಿ ಅವರು ತಿಳಿಸಿದಾಗ, ಇಂತಹ ಯೋಜನೆಗಳು ಶಾಸಕರಿಗೆ, ಸಂಸದರಿಗೆ ಖುದ್ದಾಗಿ ಭೇಟಿಯಾಗಿ ತಿಳಿಸಬೇಕು ಎಂದು ಸಂಸದರು ಸೂಚಿಸಿದರು.
ಆಯುಷ್ ಆಸ್ಪತ್ರೆ ಆರಂಭಿಸಿ: ಜಿಲ್ಲೆಯಲ್ಲಿ ಹೆಚ್ಚಿನ ಅರಣ್ಯ ಪ್ರದೇಶ ಹೊಂದಿರುವ ಚಿಂಚೋಳಿ ತಾಲೂಕಿನಲ್ಲಿ 20 ಹಾಸಿಗೆಯ ಆಯುಷ್ ಆಸ್ಪತ್ರೆ ಮಂಜೂರಾಗಿದೆ. ಕುಂಚಾವರಂ ಅಥವಾ ವೆಂಕಟಾಪುರದಲ್ಲಿ ಆಸ್ಪತ್ರೆ ಆರಂಭಿಸಬೇಕು. ಕೂಡಲೆ ಡಿ.ಸಿ. ಅವರನ್ನು ಕಂಡು ನಿವೇಶನ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಜಿಲಗಲಾ ಆಯುಷ್ ಅಧಿಕಾರಿ ಡಾ.ಗಿರಿಜಾ ಅವರಿಗೆ ನಿರ್ದೇಶನ ನೀಡಿದ ಸಂಸದರು, ಈ ಆಸ್ಪತ್ರೆ ಆರಂಭವಾದಲ್ಲಿ ನ್ಯಾಚುರೋಪತಿ ಚಿಕಿತ್ಸೆಗೆ ತುಂಬಾ ಅನುಕೂಲವಾಗಲಿದೆ ಎಂದರು.
ಸ್ಮಶಾನ ಪ್ರದೇಶದಲ್ಲಿ ಏಕೆ ಶಾಲೆ?: ಶಿಕ್ಷಣ ಇಲಾಖೆಯಿಂದ ಚಿತ್ತಾಪುರ ತಾಲುಕಿನ ನಾಲವಾರ ಗ್ರಾಮದ ಸ್ಮಶಾನ ಪ್ರದೇಶದಲ್ಲಿ ಶಾಲೆ ನಿರ್ಮಿಸಲಾಗಿದೆ, ಶಾಲೆಗೆ ಹೋಗಲು ರಸ್ತೆ ಇಲ್ಲ ಎಂದು ಎಂ.ಎಲ್.ಸಿ. ತಿಪ್ಪಣ್ಣ ಕಮಕನೂರ ಪ್ರಸ್ತಾಪಿಸಿದಾಗ ಸಂಸದ ಡಾ.ಉಮೇಶ ಜಾಧವ ಮಾತನಾಡಿ ಸ್ಮಸಾನ ಪ್ರದೇಶದಲ್ಲಿ ಏಕೆ ಶಾಲೆ ನಿರ್ಮಿಸಲಾಗಿದೆ. ರಸ್ತೆ ಇಲಗಲ ಎಂದರೆ ಶಾಲೆಗೆ ಮಕ್ಕಳು ಹೋಗುವುದು ಹೆಂಗೆ ಎಂದು ಪ್ರಶ್ನಿಸಿ ಮೊದಲು ರಸ್ತೆ ನಿರ್ಮಿಸಿ ಎಂದು ಡಿ.ಡಿ.ಪಿ.ಐ. ಸಕ್ರೆಪ್ಪಗೌಡ ಬಿರಾದಾರ ಅವರಿಗೆ ಸೂಚನೆ ನೀಡಿದರು.
ಐವಾನ್-ಎ-ಶಾಹಿ ಅತಿಥಿಗೃಹ ಅವ್ಯವಸ್ಥೆ: ಜಿಲ್ಲೆಗೆ ಮಂತ್ರಿಗಳು, ಮುಖ್ಯಮಂತ್ರಿಗಳು ಹಾಗೂ ಇತರೆ ಗಣ್ಯರು ಬಂದಲ್ಲಿ ತಂಗುವುದು ನಿಜಾಮ್ ಕಾಲದಲ್ಲಿ ನಿರ್ನಿಸಲಾದ ಕಲಬುರಗಿ ನಗರದ ಪ್ರತಿಷ್ಠಿತ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ. ಆದರೆ ಅತಿಥಿಗೃಹ ಆವರಣದಲ್ಲಿ ರಸ್ತೆ ಸಂಪೂರ್ಣ ಹಾಳಾಗಿದೆ. ನಿರ್ವಹಣೆ ಇಲ್ಲದ ಶೌಚಾಲಯ ಬಳಸಲು ಆಗುತ್ತಿಲ್ಲ. ಉದ್ಯಾನವನ ಭಣಗುಡುತ್ತಿದೆ, ಇದು ಅಧಿಕಾರಿಗಳ ಕಣ್ಣಿಗೆ ಕಾಣಲ್ವಾ ಎಂದು ಎಂ.ಎಲ್.ಸಿ ತಿಪ್ಪಣ್ಣಪ್ಪ ಕಮಕನೂರ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಲೋಕೋಪಯೋಗಿ ಇಲಾಖೆ ಇ.ಇ. ಸುಭಾಷ ಶಿಕ್ಷಣಕರ್ ಮಾತನಾಡಿ, ಇನ್ನೊಂದು ವಾರದೊಳಗೆ ಶೌಚಾಲಯ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಎಂ.ಎಲ್.ಸಿ ಬಿ.ಜಿ.ಪಾಟೀಲ, ಶಶೀಲ ನಮೋಶಿ, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಡಿ.ಸಿ.ಪಿ ಕನಿಕ ಸಿಕ್ರಿವಾಲ್, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಉಪ ಆಯುಕ್ತ ಮಾಧವ ಗಿತ್ತೆ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…