ಬಿಸಿ ಬಿಸಿ ಸುದ್ದಿ

ನೊಂದವರ ಬಾಳಿಗೆ ಬೆಳಕಾಗುವವರೇ ನೈಜ ಸಾಧಕರು

ಕಲಬುರಗಿ: ಯಾವ ವ್ಯಕ್ತಿ ಸಮಾಜದಲ್ಲಿರುವ ನೊಂದವರು, ಬಡವರು, ಅಸಹಾಯಕರ ಪರ ಕಾಳಜಿ ಹೊಂದಿ ಅವರಿಗೆ ಸಹಾಯ ಮಾಡುತ್ತಾನೆಂಯೋ, ಅವರೇ ಸಮಾಜದ ನೈಜ ಸಾಧಕರಾಗುತ್ತಾರೆ. ಹುಟ್ಟು-ಸಾವುಗಳ ಮಧ್ಯೆ ಸಮಾಜಮುಖಿ ಕಾರ್ಯಗಳು ಪ್ರಮುಖ. ಯಾರು ಸಮಾಜಕ್ಕೆ ದುಡಿದಿರುತ್ತಾರೆಯೋ, ಅವರ ಸ್ಮರಣೆ ಅಗತ್ಯವಾಗಿದೆ ಎಂದು ಮಕ್ತಂಪುರ ಗುರುಬಸವ ಮಠದ ಪೂಜ್ಯ ಶಿವಾನಂದ ಶ್ರೀಗಳು ಹೇಳಿದರು.

ಆಳಂದ ತಾಲೂಕಿನ ಗುಂಜ ಬಬಲಾದ ಗ್ರಾಮದ ಹಿರಿಯ ಮುಖಂಡ, ಸಮಾಜ ಸೇವಕ ಲಿಂ.ಬಸವಂತರಾವ ಸಿ.ಪಾಟೀಲ ಅವರ ದ್ವಿತೀಯ ಲಿಂಗೈಕ್ಯ ಸ್ಮರಣೋತ್ಸವ ‘ಬಸವೇಶ್ವರ ಸಮಾಜ ಸೇವಾ ಬಳಗ’ ವತಿಯಿಂದ ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ‘ಶರಣ ಸಂಗಮ’ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ‘ಬಸವ ಕಾಯಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಕ್ಕಳ ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ ಮಾತನಾಡಿ, ಕೌಟುಂಬಿಕ ವ್ಯವಸ್ಥೆಯ ಸಫಲತೆಯಲ್ಲಿ ತಂದೆಯ ಪಾತ್ರ ಪ್ರಮುಖವಾಗಿದೆ. ಮಕ್ಕಳಿಗೆ ಮೌಲ್ಯಗಳು, ಸಂಸ್ಕಾರ ಬೆಳೆಸಿ ಸಮಾಜಕ್ಕೆ ಮಕ್ಕಳನ್ನು ದೊಡ್ಡ ಆಸ್ತಿಯನ್ನಾಗಿಸುವುವರು ಆದರ್ಶ ತಂದೆಯಾಗುತ್ತಾರೆ. ಮೂರ್ಖ ಮಕ್ಕಳು ಸಮಾಜಕ್ಕೆ ಕಂಠಕವಾಗುತ್ತಾರೆ. ಬಸವಂತರಾವ ಸಿ.ಪಾಟೀಲ ಅವರು ಸಮಾಜಕ್ಕೆ ವಿವಿಧ ಆಯಾಮಗಳಲ್ಲಿ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಇಂಥಹ ವ್ಯಕ್ತಿಗಳ ಆದರ್ಶ, ಮೌಲ್ಯಗಳು ಸಮಾಜಕ್ಕೆ ಮಾದರಿಯಾಗುತ್ತವೆ ಎಂದರು.

ಶರಣ ಸಂಗಮದಲ್ಲಿ ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಪ್ರಾಚಾರ್ಯ, ಶರಣ ಚಿಂತಕ ವೈಜನಾಥ ಕೋಳಾರ, ಬಸವಾದಿ ಶರಣರ ಕಾಯಕ-ದಾಸೋಹ, ವಚನಗಳ ಅಳವಡಿಕೆ ಅಗತ್ಯ. ಶರಣ ತತ್ವ, ವಚನಗಳು ಸಮಸ್ತ ಮನಕುಲದ ಆಸ್ತಿ. ಮನಸ್ಸಿನ ಮೈಲಿಗೆ ತೊಳೆಯಲು ವಚನಗಳು ಪ್ರೇರಣೆ ನೀಡುತ್ತವೆ. ಹೆಣ್ಣಿ ಶೂದ್ರತ್ವವನ್ನು ಕಳೆದ ಬಸವಾದಿ ಶರಣರೇ ನಮಗೆ ಆದರ್ಶ. ಮೌಢ್ಯತೆ, ಅಂದಶೃದ್ಧೆ, ಕಂದಾಚಾರಗಳಿಂದ ಹೊರಬಂದು, ವೈಚಾರಿಕತೆ ಬೆಳೆಸಿಕೊಂಡು ಸಹ ಜೀವನ ಸಾಗಿಸಿದರೆ ಬದುಕು ಸುಂದರವಾಗುತ್ತದೆ. ಬಸವಂತರಾವ ಪಾಟೀಲ ಅವರು ಕುಟುಂಬಕ್ಕೆ ಮಾತ್ರ ತಂದೆಯಾಗಿರದೆ, ಸಮಾಜಕ್ಕೆ ತಂದೆಯಾಗಿ ಅವರು ಮಾಡಿರುವ ಅನೇಕ ಜನಪರ ಕಾರ್ಯಗಳನ್ನು ನಾನು ತುಂಬಾ ಹತ್ತಿರದಿಂದ ಕಂಡಿದ್ದೇನೆ ಎಂದು ಸ್ಮರಿಸಿದರು.

ವಿವಿಧ ಕ್ಷೇತ್ರದ ಸಾಧಕರಾದ ಬಸವತೀರ್ಥಪ್ಪ ಹೂಗಾರ ಕಾಚೂರ,ತಾ.ಸೇಡಂ(ಕೃಷಿ), ಅಸ್ಲಾಂ ಶೇಖ್ ಟಾಕಳಿ, ತಾ.ಅಫಜಲಪುರ(ಶಿಕ್ಷಣ), ಡಾ.ಸುಬ್ಬಯ್ಯ ಎಂ.ನೀಲಾ ಕಲಬುರಗಿ(ಚಿತ್ರಕಲೆ), ಗುರುಲಿಂಗಯ್ಯ ಜಿ.ಸ್ವಾಮಿ ಬಸವನ ಸಂಗೋಳಗಿ, ತಾ.ಆಳಂದ(ಸಮಾಜ ಸೇವೆ) ಮತ್ತು ಗುರಪ್ಪ ಎಸ್.ನರೋಣಾ (ಆರ್ಯುರ್ವೇದ ವೈದ್ಯಕೀಯ) ಅವರಿಗೆ ‘ಬಸವ ಕಾಯಕ ರತ್ನ’ ಪ್ರಶಸ್ತಿ ನೀಡಿ, ಅಭಿನಂದಿಸಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಹಿತಿ ಸಿ.ಎಸ್.ಮಾಲಿಪಾಟೀಲ, ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಉಪಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ, ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ಶಿವಯೋಗೆಪ್ಪಾ ಎಸ್.ಬಿರಾದಾರ, ದೇವೇಂದ್ರಪ್ಪ ಗಣಮುಖಿ, ಡಾ.ಕೆ.ಎಸ್.ಬಂಧು, ಬಸವರಾಜ ಹೆಳವರ ಯಾಳಗಿ, ಅನೀಲಕುಮಾರ, ನವಾಬಖಾನ್, ಮಲ್ಲಿಕಾರ್ಜುನ ಕಾಖಂಡಕಿ, ಪ್ರಿಯಾಂಕಾ ದೋಟಿಕೊಳ್ಳ, ಸಾನಿಯಾ ಶೇಖ್, ಶೃತಿ, ಪೂಜಾ, ಸೋಹೆಲ್ ಶೇಖ್, ನಾಗರಾಜ ನಂದೆಪ್ಪಗೋಳ್, ಪೀರಪ್ಪ ಅಯ್ಯಪ್ಪಗೋಳ್, ಓಂಕಾರ ಸೇರಿದಂತೆ ಇನ್ನಿತರರಿದ್ದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

8 mins ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

11 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

11 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

13 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

13 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

13 hours ago