ಕಲಬುರಗಿ: ಬೀದರ್ ಜಿಲ್ಲೆಯು ಕರ್ನಾಟಕದ ಶಿಖರ ಪ್ರಾಯವಾದ ಜಿಲ್ಲೆ, ಬೀದರ ಜಿಲ್ಲಾ ಕೇಂದ್ರ ಸ್ಥಾನದಿಂದ ದಕ್ಷಿಣಕ್ಕೆ 10 ಕೀ.ಮೀ. ಅಂತರದಲ್ಲಿ ಮನ್ನಾಎಖೇಳ್ಳಿ ಗ್ರಾಮಕ್ಕೆ ಹೋಗುವ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಕಮಠಾಣಾ ಗ್ರಾಮವಿದ್ದು ಇಲ್ಲಿ 1100 ವರ್ಷ ಹಳೆಯದಾದ ಶ್ರೀ 1008 ಪಾಶ್ರ್ವನಾಥ ಭಗವಾನರÀ ಮಂದಿರವಿದ್ದು, ಇದು ಅತಿಶಯ ಕ್ಷೇತ್ರವೆಂದು ಹೆಸರು ವಾಸಿಯಾಗಿದೆ. ಎಂದು ಶ್ರೀ ಪಾಶ್ರ್ವ ಪ್ರಭು ದಿಗಂಬರ್ ಜೈನ್ ಕಲ್ಯಾಣ ಮತ್ತು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ನರಸಿಂಹರಾಜು ಜಿನೇಂದ್ರ ಟಿಕ್ಕೆ ಅವರು ಹೇಳಿದರು.
ಇಲ್ಲಿ ಪಾಶ್ರ್ವನಾಥ ಭಗವಾನರ ಪದ್ಮಾಸನದ ಕಪ್ಪು ಶಿಲೆಯ ನಯನ ಮನೋಹರ ಮೂರ್ತಿ ಇದ್ದು, ನೋಡುಗರ ಕಣ್ಮನ ಸೆಳೆಯುವಂತಿದೆ. ಇದು 1100 ವರ್ಷದ ಹಿಂದೆ ರಟ್ಟ ಅರಸರ ಕಾಲದಲ್ಲಿ ಸ್ಥಾಪಿಸಲಾದ ಮೂರ್ತಿ ಈ ಮೂರ್ತಿಯ ಕೆಳಗೆ ಕೆತ್ತಿದ ಹಳೆಗನ್ನಡದ ಲಿಪಿಯ ಬರವಣಿಗೆಯೇ ಸಾಕ್ಷಿಯಾಗಿದೆ. ಇಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ 14 ಬುಧವಾರದಿಂದ 16 ಶುಕ್ರವಾರದವರೆಗೆ ಯಾತ್ರಾ ಮಹೋತ್ಸವ ಆಯೋಜಿಸಲಾಗಿರುತ್ತದೆ. ಈ ಮೂರು ದಿನದ ಕಾರ್ಯಕ್ರಮಗಳು ದಕ್ಷಿಣ ಮತಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀಯುತ ಡಾ. ಶೈಲೇಂದ್ರ ಬೆಲ್ದಾಳೆ ಇವರ ಘನ ಉಪಸ್ತಿತಿಯಲ್ಲಿ ನೆರವೇರುವವು.
ಈ ಕ್ಷೇತ್ರವು ಬಾಲಬ್ರಹ್ಮಚಾರಿ, ತಪೋನಿಧಿ, ಪ್ರವಚನ ಪ್ರಭಾಕರ, ಗ್ರಾಮೀಣ ಜಿನಮಂದಿರ ಜೀರ್ಣೋದ್ಧಾರ ಶಿರೋಮಣಿ, ಶಾದ್ವಾದ ಕೇಸರಿ ಪರಮ ಪೂಜ್ಯ 108 ಆಚಾರ್ಯ ಶ್ರೀ ಶುೃತಸಾಗರ ಮುನಿ ಮಹಾರಾಜರಿಂದ 1989 ರಲ್ಲಿ ಜೀಣೋದ್ಧಾರಗೊಂಡು ನೆಲಮಾಳಿಗೆಯಲ್ಲಿದ್ದ ಈ ಮಹಿಮಾನ್ವಿತ ಮೂರ್ತಿಯನ್ನು ಹೊಸ ಅಮೃತ ಶಿಲೆಯ ವೇದಿನಿರ್ಮಿಸಿ ಪ್ರತಿಷ್ಠಾಪಿಸಲಾಯಿತು. ಅಂದಿನಿಂದ ಇಂದಿನವರೆಗೆ ವಾರ್ಷಿಕ ರಥಯಾತ್ರಾ ಮಹೋತ್ಸವವು ಜರಗುತ್ತ ಬಂದಿದೆ.
ಈ ನಿಮಿತ್ಯ ಈ ಮೂರು ದಿವಸ ಮಂದಿರದ ಪರಿಸರದಲ್ಲಿ ಧ್ವಜಾರೋಹಣ, ಚಡಾವು, ಪಂಚಾಮೃತ ಮಹಾಭೀಷೇಕ, ಕ್ಷೇತ್ರ ಶುದ್ಧಿ ಹೋಮ, ಣಮೋಕಾರಮಹಾಮಂತ್ರ ವಿಧಾನ, ಸಾಧಕರಿಗೆ ಸನ್ಮಾನ, ವಿವಿಧ ಸ್ಪರ್ಧೆಗಳು, ಧಾರ್ಮಿಕ ಗೋಷ್ಟಿಗಳು, ಗೀತ ಗಾಯನ, ತ್ಯಾಗಿಗಳಿಂದ ಪ್ರವಚನ ಮುಂತಾದ ಕಾರ್ಯಕ್ರಮಗಳು ನಡೆಯುವವು. ಸಾಯಂಕಾಲದಲ್ಲಿ ನವನಿರ್ಮಿತ ರಥದ ಹಾಗೂ ಪಲ್ಲಕ್ಕಿಯ ಶೋಭಾಯಾತ್ರೆಯ ಗ್ರಾಮಭ್ರಮಣೆ ನಡೆಯುವುದು.
ಈ ಸಂದರ್ಭದಲ್ಲಿ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ತೆಲಂಗಾಣದಿಂದ ಅನೇಕ ಭಕ್ತಾದಿಗಳು ಉಪಸ್ಥಿತರಿರುವರು. ಜೈನ ಸ್ವಾಧ್ಯಾಯ ಮಹಿಳಾಮಂಡಳದಿಂದ ರಾತ್ರಿಯಲ್ಲಿ ಅನೇಕ ಸಾಂಸ್ಕøತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ 3 ದಿವಸ ಉಚಿತ ಆವಾಸ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಆದುದ್ದರಿಂದ ಧರ್ಮಾಭಿಮಾನಿಗಳು ಈ ಉತ್ಸವದಲ್ಲಿ ಭಾಗಿಗಳಾಗಿ ಪುಣ್ಯಪ್ರಾಪ್ತಿ ಮಾಡಿಕೊಳ್ಳಬೇಕೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೋ.ನಂ.9886285650 ನರಸಿಂಹರಾಜು ಜಿನೇಂದ್ರ ಟಿಕ್ಕೆ ಇವರನ್ನು ಸಂಪರ್ಕಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…