ಬಿಸಿ ಬಿಸಿ ಸುದ್ದಿ

ನೇಕಾರ ಸಮುದಾಯಕ್ಕೆ ಬಜೆಟ್ ನಲ್ಲಿ ಕಡೆಗಣನೆ; ಜೇ. ವಿನೋದ ಕುಮಾರ

ಕಲಬುರಗಿ: ಶ್ರೀ ದಾಸಿಮಯ್ಯ ನವರ ತತ್ವ, ಸಿದ್ಧಾಂತ ಗಳ್ಳನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ, ಪ್ರಸಾರ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕಾರಿರುವ ರಾಜ್ಯ ಸರಕಾರ ಕಡೆಗಣಿಸಿದೆ ಎಂದು ಕಲ್ಯಾಣ ಕರ್ನಾಟಕ ನೇಕಾರ ಮಹಾಸಭಾದ ಸಂಚಾಲ ನ್ಯಾಯವಾದಿ ಜೇ. ವಿನೋದ ಕುಮಾರ ಖಂಡಿಸಿ ತ್ವರಿತವಾಗಿ ತಿದ್ದುಪಡಿ ಗೊಳಿಸಲು ಆಗ್ರಹಿಸಿದ್ದಾರೆ.

11 ನೇ ಶತಮಾನದಲ್ಲಿಯೇ ಕಾಯಕ, ದಾಸೋಹ ಮತ್ತು ಸಮಾನತೆಗಾಗಿ ಸಮಾಜೋಧಾರ್ಮಿಕ ಕ್ರಾಂತಿ ಬೀಜ ಬಿತ್ತಿ, ನೈಗೆ ಮೂಲಕ ಮೊಟ್ಟ ಮೊದಲು ಸರಳ ಕನ್ನಡದಲ್ಲಿ ವಚನ ಸಾಹಿತ್ಯದ ಜನಕ, ಕರ್ತೃ, ಹೊಸ ವೈಚಾರಿಕ ಕಲ್ಪನೆಯಡಿ ಕಲ್ಯಾಣ ರಾಜ್ಯ ಸ್ಥಾಪನೆಗಾಗಿ ಹಾಗೂ ವೈಜ್ಞಾನಿಕ ವಚನ ಸಾಹಿತ್ಯವೇ ಸಂವಿಧಾನ ವೆಂದು ಪೀಠಿಕೆ ಮತ್ತು ಮುನ್ನಡಿ ಬರೆದ ಶ್ರೇಯಸ್ಸು, ವಿಶ್ವ ಮಾನ್ಯ ಶರಣ, ಕನ್ನಡದ ಆದ್ಯ ವಚನಕಾರ, ವಿಶ್ವ ಜ್ಯೋತಿ, ಮಾನವ ಕುಲ ಕೋಟಿಗೆ ಧರ್ಮಗುರುಗಳಾದ ಸದ್ಗುರು ಶ್ರೀ ದಾಸಿಮಯ್ಯ ನವರಿಗೆ ಸಲ್ಲಬೇಕು, ಜಗತ್ತಿನಲ್ಲಿ ಪ್ರಜಾಪ್ರಭುತ್ವ ಹೇಗೆ ರಚನೆಯಾಬೇಕು ಎಂದು ಒತ್ತಾಯಿಸಿದ್ದಾರೆ.

ಕನ್ನಡದ ಆದ್ಯ ವಚನ ಸಾಹಿತ್ಯ ಕರ್ತೃ ನನ್ನು ನಿರ್ಲಕ್ಷಿಸಿ, ಮೇಧಾವಿ ವೈಕ್ತಿತ್ವ ಗುಣ ಹೊಂದಿದ ವಿಶ್ವ ಮಾನ್ಯ ಶರಣ, ವಿಶ್ವ ಜ್ಯೋತಿ, ಮಾನವ ಧರ್ಮ ಗುರು, ಸದ್ಗುರು ಶ್ರೀದಾಸಿಮಯ್ಯ ನವರನ್ನು ಮರೆತು ಸಮಸ್ತ ನೇಕಾರ ಸಮುದಾಯವನ್ನು ಸರಕಾರ ಅವಮಾನಿಸಿ, ಕಡೆಗಣಿಸಿದೆ, ಇದನ್ನು ಅರಿತುಕೊಂಡು ತತಕ್ಷಣವೇ ನೇಕಾರ ಸಮುದಾಯ ಕ್ಕೆ ಸಾಮಾಜಿಕ ನ್ಯಾಯ ಒದಗಿಸಲೇಬೇಕು. 11 ನೇ ಶತಮಾನದಲ್ಲಿಯೇ ಸಮಾನತೆಯ ಸಮಾಜ ನಿರ್ಮಾಣಕ್ಕೆ ವಚನ ಸಾಹಿತ್ಯ ರಚಿಸಿದ, ಆದ್ಯ ವಚನಕಾರ, ವಿಶ್ವ ಮಾನ್ಯ ಶರಣ, ಸದ್ಗುರು  ದಾಸಿಮಯ್ಯ ನವರ ಸಂಸಾರ, ಜೀವನ ಚರಿತ್ರೆ ಯನ್ನು ಸರಿಯಾದ ರೀತಿಯಲ್ಲಿ ಪ್ರಸ್ತುತ ಪಡಿಸಲು, ಇತಿಹಾಸ ತಜ್ಞರ ಸಮಿತಿ ಪ್ರಮುಖ ಆದ್ಯತೆ ಮೇರೆಗೆ ರಚಿಸಬೇಕು ಎಂದು ಆಗ್ರಹಿಸಿದ್ದಾರೆ.

ನೇಕಾರರ ಹಕ್ಕೊತ್ತಾಯ, ವಚನ ಸಾಹಿತ್ಯ ವನ್ನು ವಿಶ್ವ ವ್ಯಾಪಿ ಗೊಳಿಸಲು ಯಾದಗಿರಿ ಜಿಲ್ಲೆ ಯಲ್ಲಿ ವಚನ ವಿಶ್ವ ವಿದ್ಯಾಲಯ ಸ್ಥಾಪನೆ ಗಾಗಿ 1100 ಕೋಟಿ ಹಣ ಘೋಷಣೆ ಮಾಡಬೇಕು. ದಾಸಿಮಯ್ಯ ನವರ ಜನ್ಮ ಸ್ಥಳವನ್ನು ಅಭಿವೃದ್ಧಿ ಗೊಳಿಸಲು ಮುದನೂರ ಪ್ರಾಧಿಕಾರ ರಚನೆ ಮಾಡಬೇಕು. ವಚನ ಸಾಹಿತ್ಯ ವನ್ನು ವಿಶ್ವಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಶಿವಾನುಭವ ಮಂಟಪವನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಿದ್ದಾರೆ.

ದಾಸಿಮಯ್ಯ ನವರು ಸ್ಥಾಪಿಸಿದ ಸಪ್ತ ತೀರ್ಥ ಗಳು ಪುನರರಚನೆಗೆ ಯೋಜನೆ ರೂಪಿಸಬೇಕು. ದಾಸಿಮಯ್ಯ ನವರ ಜೀವನ ಕತೆ, ಬದುಕು, ಸಾಹಿತ್ಯ ಸಂದೇಶ ಗಳು ಪ್ರತಿ ಮನಕ್ಕೆ ಮುಟ್ಟುವಂತೆ ಸರ್ಕಾರ ವೇ ಒಂದು ಚಲನ ಚಿತ್ರ ನಿರ್ಮಾಣ ಮಾಡಬೇಕು. ನೇಕಾರ ಸಮುದಾಯದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿಸಿ, ಬೆಳೆಯುವ ನಿಟ್ಟಿನಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿ ಗತಿ ಗಳ ಬಗ್ಗೆ ಅಧ್ಯಯನ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಕೈಮಗ್ಗ ಗುಡಿ ಕೈಗಾರಿಕೆ ಉತ್ತೇಜಿಸುವ ಹಾಗೂ ಪ್ರೋತ್ಸಾಹದಾಯಕ ತರಬೇತಿ ಮುಖ್ಯ ಕೇಂದ್ರ ಕಲಬುರಗಿ ಯಲ್ಲಿ ಸ್ಥಾಪಿಸಬೇಕು. ದಾಸಿಮಯ್ಯ ನವರ ಸಂಜಾತರಾದ, ವಚನ ಸಾಹಿತ್ಯ ಪಿತಾಮಹ ಡಾ. ಫ. ಗು. ಹಳಕಟ್ಟಿ ಯವರ ಸ್ಮಾರಕ ಮೂರ್ತಿ ಶಕ್ತಿ ಕೇಂದ್ರ ವಿಧಾನ ಸೌಧ ಆವರಣದಲ್ಲಿ ನಿರ್ಮಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

5 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

15 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

15 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

15 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago