ಬಿಸಿ ಬಿಸಿ ಸುದ್ದಿ

ಹಳೆಯ ಹಾದಿಯನ್ನು ಬದಲಾಯಿಸದ ಬಜೆಟ್; ಸಿಪಿಐಎಂ ಕೆ ನೀಲಾ

ಕಲಬುರಗಿ: ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅವರ 15 ನೆ ಹಾಗೂ 2024-25 ರ ಸಾಲಿಗೆ 1.05 ಲಕ್ಷ ಕೋಟಿ ಸಾಲದ ಹೊರೆಯನ್ನೊತ್ತ 3.71 ಲಕ್ಷ ಕೋಟಿರೂಗಳ ಬಜೆಟ್ ಮಂಡಿಸಿದ್ದಾರೆ ಎಂದು ಸಿಪಿಐಎಂ ಕಾರ್ಯದರ್ಶಿ ಕೆ ನೀಲಾ ಟೀಕಿಸಿದ್ದಾರೆ.

ಈ ಬಜೆಟ್ ನಲ್ಲಿ ಕೂಡಾ ಕಾಂಗ್ರೆಸ್ ಪಕ್ಷ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದ ಜನತೆಗೆ ನೀಡಿದ ವಾಗ್ದಾನದಂತೆ ಐದು ಗ್ಯಾರಂಟಿಗಳ ಜಾರಿಗೆ ಆದ್ಯತೆ ನೀಡಿದ್ದಾರೆ. ಬರಗಾಲದಲ್ಲಿ ಬೆರಯುತ್ತಿರುವ ಕೃಷಿಕರಿಗೆ, ಒಕ್ಕೂಟ ಸರಕಾರ ಅಸಹಕಾರ ಮತ್ತು ತಾರತಮ್ಯದ ನೀತಿ ಅನುಸರಿಸುತ್ತಿರುವಾಗ, ತಲಾ 2 ಸಾವಿರ ರೂಗಳ ಪರಿಹಾರ, ಸಾಲದ ಬಡ್ಡಿ ಹಾಗೂ ಸುಸ್ತಿ ಬಡ್ಡಿ ಮನ್ನಾ, ಸಹಕಾರ ರಂಗದಲ್ಲಿ ಹೆಚ್ಚುವರಿ ಸಾಲ ನೀಡಲು, ಏಪಿಎಂಸಿಗಳನ್ನು ಪುನರುಜ್ಜೀವನಗೊಳಿಸಲು, 5000 ಸರೋವರಗಳ ನಿರ್ಮಾಣ, ಭದ್ರ ಮೇಲ್ದಂಡೆ ಯೋಜನೆ ಜಾರಿಗೆ ಕ್ರಮ, ಹಾಲು ಹಾಗೂ ರೇಷ್ಮೆ ಉತ್ಪಾದಕರಿಗೆ ಸಹಾಯಧನದ ಹೆಚ್ಚಳ, ದೇವದಾಸಿ ಮಹಿಳೆಯರು, ಮಂಗಳ ಮುಖಿಯರ ಮಾಸಿಕ ಸಹಾಯಧನದ ಹೆಚ್ಚಳ, ಅಂಗನವಾಡಿ ನೌಕರರಿಗೆ ಪ್ತೋತ್ಸಾಹಧನ, ಗ್ರಾಚ್ಯೂಯಿಟಿ ಮುಂತಾಗಿ ಕ್ರಮವಹಿಸಿದ್ದಾರೆ. ಅಲ್ಪ ಸಂಖ್ಯಾತರು ಹಾಗೂ ದಲಿತರಿಗೆ ಅವರ ಅನುದಾನ ಒದಗಿಸಿದ್ದಾರೆ. ಇದೆಲ್ಲವೂ ಸ್ವಾಗತಾರ್ಹವಾಗಿದೆ.

ದುಡಿವ ಜನ‌ ವಿಷೇಶವಾಗಿ ಅಸಂಘಟಿತ ಕಾರ್ಮಿಕರ ಕಲ್ಯಾಣ ಕ್ಕೆ ನೀಡಬೇಕಾದ. ಮಹತ್ವ.ಮತ್ತು ಪಾಲು ನೀಡದೆ ಇರುವುದು.
ಸ್ಕಿಮ್ ನೌಕರರಲ್ಲಿ ಬಿಸಿಯೂಟ .ಅಂಗವಾಡಿ. ಅಶಾ, ಅಕ್ಷರ ದಾಸೋಹ, ಹಾಸ್ಟೆಲ್ ನೌಕರರು, ಸಂಜೀವಿನಿ ನೌಕರರಿಗೆ‌ ನೀಡಿದ ಭರವಸೆಯಂತ ಹಾಗೂ ಅವರ ಹಕ್ಕೊತ್ತಾಯದಂತೆ ತೀವ್ರ ಬೆಲೆ ಏರಿಕೆಯ ಈ ಕಾಲದಲ್ಲಿ ವೇತನ ಹೆಚ್ಚಳಕ್ಕೆ ಗಮನ ನೀಡದಿರುವುದು
ಎಲ್ಲಾ ಗುತ್ತಿಗೆ ಮುನಿಸಿಪಲ್ ಕಾರ್ಮಿಕರ ನೇರಪಾವತಿ ಸಮಾನ ವೇತನದ ಪ್ರಶ್ನೆಗಳನ್ನು ನಿರ್ಲಕ್ಷಿಸಿರುವುದು ‌ಸಹ ಸರಿಯಾದ ನಡೆ ಅಗದು .ಈ ಬಗ್ಗೆ ರಾಜ್ಯ ಸರ್ಕಾರ ಮರು ಪರಿಶೀಲನೆ ನಡೆಸುವಂತೆ ಒತ್ತಾಯಿಸಿದ್ದಾರೆ.

ರೈತರು ಒಕ್ಕೂಟ ಹಾಗೂ ರಾಜ್ಯ ಸರಕಾರಗಳಿಂದ ರಾಜ್ಯದ ರೈತರು, ಕೂಲಿಕಾರರು, ಮಹಿಳೆಯರು, ತಮ್ಮ ಸಾಲ ಮನ್ನಾವನ್ನು ನಿರೀಕ್ಷಿಸಿದ್ದರು. ಅದೂ ಎರಡೂ ಬಜೆಟ್ ಗಳಲ್ಲು ದೊರೆತಿಲ್ಲ. ಒಕ್ಕೂಟ ಹಾಗೂ ರಾಜ್ಯ ಸರಕಾರಗಳು ಎರಡೂ ಸೇರಿ, ಬಡ ರೈತರ ಸಾಲ ಮನ್ನಾ ಕ್ಕೆ ಸಂಬಂದಿಸಿ ಕ್ರಮವಹಿಸಬೇಕಿದೆ. ಕೃಷಿ ಉತ್ಪನ್ನಗಳ ಬೆಲೆಗಳ ಏರಿಳಿತ ಮಾಡುವ ಮಾರುಕಟ್ಟೆ ಶಕ್ತಿಗಳಿಂದ ಹಾಗೂ ಬರ ಹಾಗೂ ಅತೀವೃಷ್ಟಿ, ಕಳಪೆ ಬೀಜ, ಕ್ರಿಮಿನಾಶಕಗಳಿಂದಾಗುವ ನಷ್ಠ. ದಿಂದ ರೈತರನ್ನು ರಕ್ಷಿಸಲು ಕೇರಳ ಮಾದರಿಯ ಋಣಮುಕ್ತ ಕಾಯ್ದೆಗೆ ಕ್ರಮವಹಿಸಬೇಕು. ಬರದ ಭವಣೆಯಿಂದ ಹಾಗೂ ವಲಸೆಯಿಂದ ರಕ್ಷಿಸಲು ರಾಜ್ಯ ಸರಕಾರ ಉದ್ಯೋಗ ಖಾತ್ರಿ ಯೋಜನೆ ವಿಸ್ತರಣೆಗೆ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯ ಹಾಗೂ ಒಕ್ಕೂಟ ಸರಕಾರ ಗಳು ರಾಜ್ಯವನ್ನು ಆರ್ಥಿಕ ಸಂಕಷ್ಟ ಹಾಗೂ ಬಿಕ್ಕಟ್ಟಿನಿಂದ ಪಾರು ಮಾಡಲು ಅವು ಇದಕ್ಕೆ ಕಾರಣವಾದ ಜಾಗತೀಕರಣ ಹಾಗೂ ಉದಾರೀಕರಣ, ಖಾಸಗೀಕರಣದ ಪರವಾದ ತಮ್ಮ ನೀತಿಗಳಿಂದ ಹೊರ ಬರಬೇಕಾಗಿದೆ. ಆದರೆ ಎರಡೂ ಸರಕಾರಗಳು ನವ ಉದಾರವಾದದ ನೀತಿಗಳಿಗೆ ತಮ್ಮನ್ನು ಬಲವಾಗಿ ಅಂಟಿಸಿಕೊಂಡು ಅವುಗಳ ಜಾರಿಗೆ ಕ್ರಮವಹಿಸುತ್ತಿರುವುದರಿಂದ ಖಂಡಿತಾ ರಾಜ್ಯವು ಮತ್ತಷ್ಠು ಸಂಕಷ್ಠಕ್ಕೀಡಾಗಲಿದೆ. ಇದೇ ದಿಶೆಯಲ್ಲಿಯೇ ಬಜೆಟ್ ನಡೆದಿದೆಯೆಂಬುದನ್ನು ಗಮನಿಸಬಹುದಾಗಿದೆ.

ಒಕ್ಕೂಟ ಸರಕಾರದ ವಿದ್ಯುತ್ ತಿದ್ದುಪಡಿ ಮಸೂದೆಯು ದೇಶದ ರಾಜ್ಯದ ಅಭಿವೃದ್ಧಿಗೆ ಮಾರಕವಾಗಿದ್ದು ಅದನ್ನು ರಾಜ್ಯದಲ್ಲಿ ಜಾರಿಗೆ ತರಲಾಗುವುದಿಲ್ಲವೆಂದು ಬಜೆಟ್ ನಲ್ಲಿ ಪ್ರಕಟಿಸಬೇಕೆಂದು ರಾಜ್ಯದ ಜನತೆ ಒತ್ತಾಯಿಸುತ್ತಿದ್ದರೂ, ಆ ಕುರಿತಂತೆ ಮೌನ ವಹಿಸಿದೆ. ಮಾತ್ರವಲ್ಲಾ, ಅದನ್ನು ಬೇರೊಂದು ಮಾರ್ಗದಲ್ಲಿ ಜಾರಿಗೊಳಿಸಲು ರಾಜ್ಯದ ದಶ ಲಕ್ಷಾಂತರ ನೀರಾವರಿ ಪಂಪ್ ಸೆಟ್ ಬಳಕೆದಾರರಿಗೆ ಸೋಲಾರ್ ವಿದ್ಯುತ್ ಅಳವಡಿಸಲು ಯತ್ನಿಸುತ್ತಿದೆ. ಅದಕ್ಕಾಗಿ ಶೇ 50 ಸಹಾಯಧನ ನೀಡುವುದಾಗಿ ಘೋಷಿಸಿದೆ‌.

ಬಹುತೇಕ ಸಾಲದ ಬಂಡವಾಳದಾರರಿಗೆ ನೀಡುವ ಭಾರೀ ರಿಯಾಯಿತಿಗಳ ಭಾಗವಾಗಿ ರಾಜ್ಯದ ಜನತೆಯ ಹೆಗಲೇರಿದೆ ಎಂದು ಸಿಪಿಐಎಂ ಠೀಕಿಸಿದೆ ಹಾಗೂ ವಿದ್ಯುತ್ ತಿದ್ದುಪಡಿ ಕಾಯ್ದೆಯ ಜಾರಿಯನ್ನು ತಡೆಯುವ ಮೂಲಕ ಅದರಿದ ತೊಂದರೆಗೊಳಗಾಗುವ ರಾಜ್ಯದ 80 ಲಕ್ಷ ನೀರಾವರಿ ಪಂಪ್ ಸೆಟ್ ದಾರರು ಹಾಗೂ 1.6 ಕೋಟಿ ಗೃಹ ಜ್ಯೋತಿ ಬಳಕೆದಾರರು ಸುಲಾರು ಐದು ಲಕ್ಷ ಕಾರ್ಮಿಕ ಕುಟುಂಬಗಳು ಜೀವನೋಪಾಯ ಮಾಡುತ್ತಿರುವ ಸುಮಾರು 80 ಸಾವಿರ ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳ ನಾಶವನ್ನು ತಡೆಯುವಂತೆ ಸಿಪಿಐಎಂ ಮರಳಿ ರಾಜ್ಯದ ಮುಖ್ಯಮಂತ್ರಿಗಳನ್ನು ಬಲವಾಗಿ ಒತ್ತಾಯಿಸಿದೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

5 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

5 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

5 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

24 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago