ಕಲಬುರಗಿ: ಆಳಂದ ಸೈನಿಕ ಸಂಘದ ಅಧ್ಯಕ್ಷರಾಗಿ ನಿವೃತ್ತ ಸೈನಿಕ ಸಿದ್ಧಲಿಂಗ ಮಲ್ಲಶೆಟ್ಟಿ ಚಿತಲಿ ಆಳಂದ ಇವರು ನೇಮಕ ಗೊಂಡಿದಕ್ಕೆ ಇವರನ್ನು ಹೀರಾಪೂರ ಆದಿ ಬಣಜಿಗ ಸಮಾಜದ ಯುವ ವೇದಿಕೆಯ ಅಧ್ಯಕ್ಷ ಭೀಮಾಶಂಕರ ಯಳಮೇಲಿ ಇವರ ನೇತೃತ್ವದಲ್ಲಿ ನಗರದ ಖಾಸಗಿ ಸಭಾಗಂಣದಲ್ಲಿ ಸನ್ಮಾನಿಸಲಾಯಿತು.
ಅತಿಥಿಗಳಾಗಿ ಆಗಮಿಸಿದ ಆದಿ ಬಣಜಿಗ ಸಮಾಜದ ಸಾಮಾಜಿಕ ಜಾಲತಾಣ ಮುಖ್ಯಸ್ಥ ಸಾಹೇಬಗೌಡ್ರು ಮುಡಬೂಳ ಕೊಪ್ಪಳ ಇವರು ಮಾತನಾಡಿ ಸಿದ್ಧಲಿಂಗ ಮಲ್ಲಶೆಟ್ಟಿ ಯವರು ಸುಮಾರು 28 ವರ್ಷ ದೇಶಸೇವೆ ಮಾಡಿ ಇಡೀ ತಮ್ಮ ಜೀವನವನ್ನು ದೇಶಸೇವೆಗಾಗಿ ಮುಡುಪಾಗಿಟ್ಟಿದ್ದಾರೆ.
ದೇಶದ ರಕ್ಷಣಯೆ ಅವರ ಕರ್ತವ್ಯವಾಗಿ ಬೆಳೆಸಿಕೊಂಡರು. ಮತ್ತು ಕಾರ್ಗಿಲ್ ಯುದ್ಧ ಸಮಯದಲ್ಲಿ ಬಹಳ ಕಠಿಣವಾದ ಸಂದರ್ಭದಲ್ಲಿ ಜೀವದ ಮೇಲೆ ಆಸೆ ಇರದೇ, ಪ್ರಾಣದ ಭೀತಿಯಿರದೇ ದೇಶಕ್ಕಾಗಿ ಹೋರಾಡಿದ ಮಹಾನ್ ವೀರಯೋಧರಿವರು.
ಇಂಥವರಿಗೆ ಆಳಂದ ತಾಲೂಕಿನ ಸೈನಿಕ ಸಂಘಟನೆಯ ಅಧ್ಯಕ್ಷರಾಗಿ ಆಯ್ಕೆಯಾದುದಕ್ಕೆ ಆದಿ ಬಣಜಿಗ ಸಮಾಜದ ಹೆಮ್ಮೆ ಮತ್ತು ಗೌರವವನ್ನು ತಂದು ಕೊಟ್ಟಿದ್ದಾರೆ. ಈ ಕಾರಣಕ್ಕಾಗಿ ಅವರು ನಮ್ಮ ಆದಿ ಬಣಜಿಗ ಸಮಾಜದ ವೀರಯೋಧರು ನಮ್ಮವರು ಎನ್ನುವ ಗೌರವದಿಂದ ಆದಿ ಬಣಜಿಗ ಸಮಾಜದ ವತಿಯಿಂದ ಸನ್ಮಾನಿಸುತ್ತಿರುವುದು ತುಂಬಾ ಶ್ಲಾಘನೀಯ ಎಂದರು.
ಸಿದ್ಧಲಿಂಗ ಮಲ್ಲಶೆಟ್ಟಿ ಅವರು ಸನ್ಮಾನ ಸ್ವಿಕರಿಸಿ ಮಾತನಾಡಿ ನಾನು ದೇಶ ಸೇವೆ ಮೋಡಿದ್ದು ನನ್ನ ಪುಣ್ಯ, ದೇಶ ಸೇವೆಯೇ ಈ ಸೇವೆಯಂದು ಪ್ರಾಮಾಣಿಕವಾಗಿ ಸೇವೆ ಮಾಡಿದ್ದೇನೆ ಇನ್ನು ಮುಂದೆ ಈ ಸಂಘಟನೆಯ ಅಧ್ಯಕ್ಷರಾಗಿ ಮಾಡಿದ್ದಕ್ಕೆ ನನಗೆ ಜವಾಬ್ದಾರಿ ಹೆಚ್ಚಿಗೆ ಬಂದಿದೆ ನವ ಯುವಕರನ್ನು ದೇಶಸೇವೆ ಅಭಿಮಾನದ ಜೊತೆಗೆ ಸೈನಿಕರ ತರಬೇತಿ ಕೊಡುತ್ತೇನೆ, ವೀರಯೋಧರನ್ನಾಗಿ ಮಾಡಲು ಸತತ ಪ್ರಯತ್ನಿಸುತ್ತೇನೆ ಇದು ನನ್ನ ನಿಜ ಜೀವನದ ಕಾಯಕವಾಗಿ ಮಾಡಿಕೊಳ್ಳುತ್ತೇನೆ ಹಾಗೆ ನಮ್ಮ ಆದಿ ಬಣಜಿಗ ಸಮಾಜದ ಸೇವೆ ಕೂಡಾ ಮುನ್ನಡೆಸಿಕೊಂಡು ಹೋಗುತ್ತೇನೆ ಸಮಾಜದವರು ನನ್ನನ್ನು ಗುರುತಿಸಿ ಸನ್ಮಾನಿಸಿದ್ದಕ್ಕೆ ತುಂಬಾ ಧನ್ಯವಾದಗಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಿದಾನಂದ ಕೋಲಾರ, ಚಂದ್ರು ಪಾಟೀಲ ಇದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…