ಬಿಸಿ ಬಿಸಿ ಸುದ್ದಿ

ಜಗಜ್ಯೋತಿ ಬಸವಣ್ಣ ಒಂದು ವರ್ಗ- ಜಾತಿಗೆ ಸಿಮೀತವಾಗಿಲ್ಲ: ಶಾಸಕ ಎಂ.ವೈ. ಪಾಟೀಲ್

ಕಲಬುರಗಿ: ಜಗಜ್ಯೋತಿ ಬಸವಣ್ಣನವರು ಯಾವುದೇ ಜಾತಿ ಹಾಗೂ ವರ್ಗಕ್ಕೆ ಸಿಮೀತವಾಗಿಲ್ಲ ಎಂದು ಅಫಜಲಪುರ ಕ್ಷೇತ್ರದ ಶಾಸಕ ಎಂ.ವೈ.ಪಾಟೀಲ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಡಾ.ಎಸ್.ಎಂ ಪಂಡಿತರಂಗ ಮಂದಿರದಲ್ಲಿ ವಿಶ್ವ ಗುರುಬಸವಣ್ಣ ಸಾಂಸ್ಕೃತಿಕ ನಾಯಕ ಭಾವಚಿತ್ರ ಅನಾವರಣ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಸಮಾನತೆಯ. ಕಾಯಕ, ತತ್ವ ಮೂಲಕ ಬಸವಣ್ಣನವರು ತೋರಿಸಿ ಕೊಟ್ಟಿದ್ದಾರೆ. ಸಿದ್ದಾಂತ ವ್ಯಾಪಕ ಪ್ರಚಾರಗೊಳಿಸಲು ಅನೇಕ ಅಡ್ಡಿಗಳನ್ನು ಬಂದರೂ ಲೆಕ್ಕಿಸದೇ ಪ್ರಚುರಪಡಿಸಿದ್ದರು. ವಚನ ಸಾಹಿತ್ಯ ನಿತ್ಯ ಎಂದೆಂದಿಗೂ ನೂತನವಾಗಿವೆ. ಬಸವಣ್ಣನವರ ವಚನ ಸಾಹಿತ್ಯ ಅಧಾರದ ಮೇಲೆ ಸಂವಿಧಾನ ರೂಪುಗೊಂಡಿರುವುದನ್ನು ನಾವು ಕಾಣಬಹುದಾಗಿದೆ ಎಂದರು.

ರಾಜ್ಯ ಸರ್ಕಾರ ಬಸವಣ್ಣನವರು ಸಾಂಸ್ಕೃತಿಕ ನಾಯಕ ಎಂಬುದಾಗಿ ಘೋಷಣೆ ಮಾಡಿರುವುದು ನಾಡೇ ಹೆಮ್ಮೆ ಪಡುವಂತಾಗಿದೆ ಪ್ರಥಮ ವಾಗಿ ನಾವೆಲ್ಲರೂ ಬಸವ ತತ್ವ ಮನೆ-ಮನೆ ಮುಟ್ಟಿಸೋಣ ಎಂದರು.

ಮಳಖೇಡದ ಸೈಯದ ಶಾಹಾ ಮುಸ್ತಪಾ ಖಾದ್ರಿ ಅವರು ಮಾತನಾಡಿ, ಬಸವಣ್ಣನವರು ಲಿಂಗಾಯತರಿಗೆ ಮಾತ್ರ ಮೀಸಲು ಇಲ್ಲ. ಬಸವಣ್ಣನವರ ತತ್ವಗಳು ಸಾರ್ವಕಾಲಿಕವಾಗಿದೆ. ಬದುಕಿನ ತತ್ವಗಳು ಬಸವಣ್ಣನವರ ವಚನಗಳಲ್ಲಿ ಅಡಕವಾಗಿವೆ. ಬಸವಣ್ಣನವರ ವಚನ ಓದಿ ಅವರ ತತ್ವದಂತೆ ಮುನ್ನಡೆಯಲಾಗುತ್ತಿದೆ.

ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ದಾವಣಗೆರೆಯಲ್ಲಿ ನಡೆದ ವೀರಶೈವ ಲಿಂಗಾಯತ ಸಮಾಜದ ಸಮಾವೇಶದಲ್ಲಿ ವಿಶ್ವ ಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂಬ ನಿರ್ಣಯ ಕೈಗೊಂಡಿರುವುದನ್ನು ರಾಜ್ಯ ಸರ್ಕಾರ ಅನುಷ್ಢಾನ ತಂದಿರುವುದು ಸ್ವಾಗತಾರ್ಹವಾಗಿದೆ ಎಂದರು.

ಮೀನಾಕ್ಷಿ ಬಾಳಿ ವಿಶೇಷ ಉಪನ್ಯಾಸ ನೀಡುತ್ತಾ, ರಾಜಸತ್ಯ ಮತ ಹಾಗೂ ಪುರುಷ ಸತ್ಯ ಜನ ಸತ್ಯ ಮುನ್ನೆಲೆಗೆ ತರಲು ಯತ್ ಬಸವಣ್ಣ ಶ್ರಮ ಸಂಸ್ಕೃತಿ ನಾಯಕ ಎಲ್ಲ ಶರಣರ ಸಂಕೇತವಾಗಿರುವುದರಿಂದ ವ್ಯಕ್ತಿಯಲ್ಲ ಅವರೊಳಗೆ ಎಲ್ಲ ಶರಣರು ಸೇರಿದ್ದಾರೆ.

ವರ್ಣ ಬೇಧ, ಲಿಂಗಬೇಧ ಅಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತೀಯ ಅಧ್ಯಾತ್ಮ ದಿಕ್ಕನ್ನೇ ಬದಲಾಯಿಸಿದ ನಾಯಕ. ಹಸಿವು ವೇ ಆಧ್ಯಾತ್ಮಿಕ ಬಸವಣ್ಣನವರ ಎಷ್ಟು ಅಪ್ಪಿಕೊಂಡಿದ್ದೇವೆ ಎಲ್ಲಶರಣರ ವಚನಗಳಲ್ಲಿ ಬಸವಣ್ಣನವರನ್ನು ನೆನಪು ಮಾಡಿಕೊಂಡಿರುವುದು ಇದೇ ಮೇಲು- ಕೀಳು ತತ್ವ ಹಾಗೂ ಆದರ್ಶವಾಗಿತ್ತು. ದೇವರು ಇಲ್ಲ ಜನರ ನಂಬಿಕೆಯೇ ದೇವರು. ಆದರೆ ದೇವರು ನಿಮ್ಮ ಕೈಯಲ್ಲಿ ದ್ದಾನೆ. ದೇವಸ್ಥಾನ ಶೋಷಣೆ ಕೇಂದ್ರಗಳಾಗಿವೆ.

ಯಾರೂ ವಚನ ಸಾಹಿತ್ಯ ಬಗ್ಗೆ ಯಾರೂ ಮಾತನಾಡಿಲ್ಲ. ವಚನಕಾರರು ಶಾಪ ವಿಮೋಚನಾಗಿ ಬಂದವರೆAದು ಬಿಂಬಿಸಲಾಯಿತು ಬಸವಣ್ಣನವರು ಎಂದರೆ ಎತ್ತಿನ ಸಿಮೀತಗೊಳಿಸಲಾಗಿತ್ತು. ಆದರೆ ಇಂದು ಬಸವ ಅಚಾತುಚಾರ್ಯ ಸ್ವಲ್ಪ ಎಚ್ಚರ ವಹಿಸಬೇಕಿತ್ತು. ಮುಂದಿನ ದಿನಗಳಲ್ಲಿ ಎಚ್ಚರಿಕೆ ವಹಿಸಲಿ ಎಂದು ಬಾಳಿ ಖಡಕ್ ಎಚ್ಚರಿಕೆ ನೀಡಿದರು. ದಕ್ಷಿಣ ಕರ್ನಾಟಕದ ವರೆಗೆ ಬಸವಣ್ಣನವರ ವಿವಿ ವಚನ ಅಧ್ಯನ, ಸಿಲೇಬಸ್ ದಲ್ಲಿಸೇರಲಿ ಅಂದಾಗ ಬಸವಣ್ಣ ಜಾಗತಿಕ ವಾಗಲು ಮತ್ತಷ್ಟು ಪ್ರೇರಣೆ ಸಿಗುತ್ತದೆ. ಸರ್ಕಾರ ಕಾರ್ಯಕ್ರಮಗಳಲ್ಲಿ ಒಂದು ವಚನ ಹಾಡಲಿ ಫೋಟೋ ಜತೆಗೆ ಸರ್ಕಾರಿ ಕಚೇರಿಗಳಲ್ಲಿ ಭೃಷ್ಟಾಚಾರ ಕಡಿವಾಣ ಹಾಕಲಿ. ಸಂಸ್ಕೃತಿ ನಾಯಕ ಎಂದರೆ ಫೋಟೋ ಅನಾವರಣ ಕ್ಕೆ ಸಿಮೀತವಾಗಬಾರದು.ಅಧ್ಯಯನ ನಡೆಯಲಿ ಎಂದು ಹೇಳಿದರು.

ಲಿಂಗಾಯತ ಜಾತಿ ಸೂಚ್ಯಕವಲ್ಲ.ಜಾತಿಯಿಂದ ಋಷಿ ಅಲ್ಲ ನಾವು ಕೃಷಿ ಸಂಸ್ಕೃತಿಯಾಗಿದೆ. ಕೃಷಿಯಲ್ಲಿ ಎಲ್ಲರಿಗೂ ಸ್ಥಾನವಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಬಸವಣ್ಣನವರನ್ನು ಪ್ರಚಾರ ಮಾಡಲು ಶಾಲೆಯ ಪಠ್ಯ ದಲ್ಲಿ ಇಲ್ಲ.ಕನ್ನಡ ಮತ್ತು ಸರ್ಕಾರಿ ಪಠ್ಯದಲ್ಲಿಇದೆ. ಸರ್ಕಾರಿ ಕಾರ್ಯಕ್ರಮದಲ್ಲಿ ವಚನೊಂದು ಕಡ್ಡಾಯವಾಗಿ ಹಾಡುವಂತಾಗಲಿ.
ಫೋಟೋ ಅಳವಡಿಕೆ ಜತೆಗೆ ಭೃಷ್ಟಾಚಾರ ನಿಲ್ಲಲಿ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸ್ವಾಗತಿಸಿದರು.

ಕಾರ್ಯಕ್ರಮಗಲ್ಲಿ ಧರ್ಮಗುರುಗಳಾದ ಆಳಂದ ಶ್ರೀ ತೋಂಟದಾರ್ಯ ಅನುಭವ ಮಂಟಪದ ಕೋರಣೇಶ್ವರ ಸ್ವಾಮಿಗಳು, ಗುರುನಾನಕ್ ಮಠದ ಪೂಜ್ಯ ಭಾಯ್‌ದೀಪ ಸಿಂಗ್ (ಗ್ರಂಥಿ) ಸಂತ ಮೇರಿ ಚರ್ಚಿನ ಪಾದರ್ ಲಾಜರ್ ಚೇತನ್, ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಗಳಾದ ಎಂ. ಸುಂದರೇಶ ಬಾಬು, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನಮ್, ಪೋಲಿಸ್ ಆಯುಕ್ತರಾದ ಚೇತನ್ ಅರ್, ಜಿಲ್ಲಾ ಪಂಚಾಯತ್ ಸಿ.ಇ.ಓ. ಭಂವರ್ ಸಿಂಗ್ ಮೀನಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ತಹಶೀಲ್ದಾರ ಮಧುರಾಜ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ವೀರಶೈವ ಲಿಂಗಾಯತ ಸಮಾಜದ ಮುಖಂಡರು ಮಹಿಳೆಯರು, ಸಮಾಜದ ಮುಖಂಡರುಗಳು, ಸಾಹಿತಿಗಳು, ಪ್ರಗತಿಪರ, ಚಿಂತಕರು ಸಾರ್ವಜನಿಕರು ಭಾಗವಹಿಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

7 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

7 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

7 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

24 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago