ಕಲಬುರಗಿ: ಕಲಿಕೆ ಮತ್ತು ಜೀವನದಲ್ಲಿ ಯಶಸ್ವಿಯಾಗಲು ಶಾರ್ಟ್‌ಕಟ್ ಮಾರ್ಗಗಳಿಲ್ಲ. ಹೀಗಾಗಿ ಹಾರ್ಡ್ ಮತ್ತು ಸ್ಮಾರ್ಟ್ ಆಗಿ ನಮ್ಮ ಹೊಣೆ ನಿರ್ವಹಿಸಬೇಕು. ಪ್ರಶ್ನಿಸುವ ಗುಣವನ್ನು ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದು ಶೈಕ್ಷಣಿಕ ಚಿಂತಕ ಮತ್ತು ಸ್ಪೂರ್ತಿದಾಯಕ ಭಾಷಣಕಾರ ರಮೇಶ ಬಲ್ಲಿದ್ ಹೇಳಿದರು.
ನಗರದ ಕೆಸರಟಗಿ ರಸ್ತೆಯಲ್ಲಿರುವ ಕಾಯಕ ಫೌಂಡೇಷನ್ ವಿಜ್ಞಾನ ಮತ್ತು ವಾಣಿಜ್ಯ ವಸತಿ ಪಿಯು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಶಾರ್ಟ್‌ಕಟ್ ಮಾರ್ಗದಿಂದ ಜೀವನದಲ್ಲಿ ಸಾಧನೆ ಮಾಡಲು ಆಗಲ್ಲ, ನಮ್ಮ ಪರಿಶ್ರಮದಿಂದಲೇ ಮೇಲೆ ಬರಬೇಕು. ಅದೇ ಸಾಧನೆ ಎಂದರು.
ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಅದರಿಂದ ಹೊಸ ವಿಷಯ ಅರಿತುಕೊಳ್ಳಲು ಮತ್ತು ತರಗತಿಯಲ್ಲಿ ಕೇಳಿದ್ದನ್ನು ಇನ್ನಷ್ಟು ಅರಿತುಕೊಳ್ಳಲು ಸಾಧ್ಯವಾಲಿದೆ. ಪ್ರಶ್ನೆ ಮಾಡದೆ ಯಾವುದನ್ನು ಒಪ್ಪಿಕೊಳ್ಳಬೇಡಿ, ಜ್ಞಾನದ ಕ್ಷೀತಿಜ ವಿಸ್ತರಿಸಿಕೊಳ್ಳಲು ಓದುವುದೊಂದೆ ಮಾರ್ಗ,ಹೀಗಾಗಿ ಅಧ್ಯಯನದಲ್ಲಿಯೇ ಹೆಚ್ಚಿನ ಕಾಲ ಕಳೆಯಬೇಕು. ಅನಗತ್ಯ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳ ಜೀವನದಲ್ಲಿ ಪಿಯುಸಿ ಬಹುಮುಖ್ಯ ಘಟ್ಟ. ಇಲ್ಲಿನ ಹೆಚ್ಚಿನ ಅಂಕಗಳನ್ನು ಪಡೆದುಕೊಂಡು ಉತ್ತಮ ಕೋರ್ಸ್‌ಗಳಿಗೆ ಸೇರ್ಪಡೆಯಾಗುವ ಮೂಲಕ ಸಾಧನೆ ಮಾಡಲು ಕಾರಣವಾಗಲಿದೆ. ಹೀಗಾಗಿಯೇ ಪಿಯುಸಿಯನ್ನು ವಿದ್ಯಾರ್ಥಿ ಜೀವನದ ತಿರುವಿನ ಕಲಿಕೆ ಎನ್ನಲಾಗುತ್ತದೆ. ಹೆಚ್ಚಿನ ಅಂಕಗಳನ್ನು ಗಳಿಸುವ ಮೂಲಕ ಹೆತ್ತವರಿಗೆ ಮತ್ತು ಕಲಿತ ಕಾಲೇಜಿಗೆ ಕೀರ್ತಿ ತರಬೇಕು ಎಂದು ರಮೇಶ ಬಲ್ಲಿದ್ ಸಲಹೆ ನೀಡಿದರು.
ಕಾಯಕ ಫೌಂಡೇಷನ್ ಏಜುಕೇಷನ್ ಟ್ರಸ್ಟ್ ಸಂಸ್ಥಾಪಕ ಶಿವರಾಜ ಟಿ.ಪಾಟೀಲ್ ಮತ್ತು ಅಧ್ಯಕ್ಷರಾದ ಸಪ್ನಾರೆಡ್ಡಿ ಪಾಟೀಲ್ ಸಮಾರಂಭವನ್ನು ಉದ್ಘಾಟಿಸಿ, ಪ್ರಥಮ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ ಮಾದರಿಯಾಗಿ ಓದುವ ಮೂಲಕ ಕೀರ್ತಿ ಗಳಿಸಬೇಕು ಎಂದು ಹಾರೈಸಿದರು. ಸಂಸ್ಥೆಯ ಕಾನೂನು ಸಲಹೆಗಾರರಾದ ಖ್ಯಾತ ನ್ಯಾಯವಾದಿ ಬಸವರಾಜ ಬಿರಾದಾರ ಸೊನ್ನ, ಕಾಲೇಜಿನ ಪ್ರಾಚಾರ್ಯ ಗುರುಬಸಯ್ಯ ಸಾಲಿಮಠ, ಕಾಯಕ ಪ್ರಾಥಮಿಕ ಶಾಲೆಯ ಪ್ರಾಚಾರ್ಯರಾದ ವೈಶಾಲಿ ಗೋಟಗಿ ವೇದಿಕೆಯಲ್ಲಿದ್ದರು.
ಹೈಸ್ಕೂಲ್ ಪ್ರಾಚಾರ್ಯ ಗೋವಿಂದ ಕುಲಕರ್ಣಿ, ಆಡಳಿತಾಧಿಕಾರಿಗಳಾದ ಮಹಾಂತೇಶ ಪಾಟೀಲ್, ಗುರುರಾಜ ಕುಲಕರ್ಣಿ, ಶಿಕ್ಷಕರಾದ ರೇವಣಸಿದ್ದಪ್ಪ ಬಾವಿ, ಪ್ರವೀಣ, ಗೋಪಾಲ, ಡಾ.ಆಶೀಸ್, ಮಹ್ಮದ ಅಜಮ್, ಅರವಿಂದ, ಪ್ರಿಯದರ್ಶಿನಿ, ರೇಣುಕಾ ಎಸ್.ಪೂಜಾರಿ, ಬಸವರಾಜ, ಕೇಶವಲು ಸ್ವಾಮಿ, ಸುನಂದಾ ಸೇರಿದಂತೆ ಕಾಯಕ ಫೌಂಡೇಷನ್ ಪ್ರಾಥಮಿಕ, ಹೈಸ್ಕೂಲ್ ಮತ್ತು ಕಾಲೇಜಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಜ್ಞಾ ತೊನ್ನಶೆಟ್ಟಿ ಸ್ವಾಗತಿಸಿದರು. ರೋಷನಿ ಗೋಟಗಿ ಕಾರ್ಯಕ್ರಮ ನಿರೂಪಿಸಿದರು. ಮಲ್ಲಮ್ಮ ರಡ್ಡಿ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ಸ್ಮರಣಿಕೆ ನೀಡುವ ಮೂಲಕ ಸ್ವಾಗತಿಸಿಕೊಳ್ಳಲಾಯಿತು.
====== ಸಂಸ್ಥಾಪಕರ ಹೇಳಿಕೆ====
ಸಾಧನೆಗೆ ಮೀರಿದ್ದು ಯಾವುದು ಇಲ್ಲ ಎಂಬುದು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ೧೬ ವರ್ಷವಾಗುವವರೆಗೂ ಶಾಲೆಯ ಮುಖ ನೋಡದ, ದನ ಕಾಯುತ್ತಿದ್ದ ರಮೇಶ ಬಲ್ಲಿದ್ ಇಂದು ೪.೫ಲಕ್ಷ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ತರಬೇತಿ ನೀಡುತ್ತಿರುವುದು ನೋಡಿದಾಗ ಸಾಧಿಸುವ ಛಲ ಮತ್ತು ಮಾನಸಿಕ ಸಾಮರ್ಥ್ಯವಿದ್ದರೆ ಏನು ಬೇಕಾದರೂ ಸಾಧಿಸಬಹುದು. ಹೀಗಾಗಿ ಸದಾ ಜಾಗೃತರಾಗಿದ್ದು ಒದಿಗೆ ಹೆಚ್ಚಿನ ಸಮಯ ನೀಡುವ ಮೂಲಕ ಎಲ್ಲರು ನಿಮ್ಮ ಕಡೆಗೆ ಬೆರಗಿನಿಂದ ನೋಡುವಂತ ಸಾಧಕ ವ್ಯಕ್ತಿಗಳಾಗಬೇಕು.
| ಶಿವರಾಜ ಟಿ.ಪಾಟೀಲ್
ಕಾಯಕ ಫೌಂಡೇಷನ್ ಏಜುಕೇಷನ್ ಟ್ರಸ್ಟ್ ಸಂಸ್ಥಾಪಕ
****************************************************************************
ವಂದನೆಗಳೊಂದಿಗೆ
೧೧-೯-೨೦೧೯
***********
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…