ಬಿಸಿ ಬಿಸಿ ಸುದ್ದಿ

ಕಚೇರಿಗಳಲ್ಲಿ ಕರ್ನಾಟಕ ಸಾಂಸ್ಕøತಿಕ ನಾಯಕ ಬಸವಣ್ಣ ಭಾವಚಿತ್ರ ಹಾಕಿ: ಕೆ.ವಿಜಯಕುಮಾರ

ಸುರಪುರ: ಸರಕಾರ ಇಂದು ವಿಶ್ವಗುರು ಬಸವಣ್ಣನವರನ್ನು ಸಾಂಸ್ಕøತಿಕ ನಾಯಕ ಎಂದು ಘೋಷಣೆ ಮಾಡಿ,ಎಲ್ಲಾ ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ವಿಶ್ವಗುರು ಬಸವಣ್ಣನವರ ಕರ್ನಾಟಕ ಸಾಂಸ್ಕøತಿಕ ನಾಯಕ ಎಂದು ಬರೆಯಿಸಿರುವ ಭಾವಚಿತ್ರ ಹಾಕುವಂತೆ ಆದೇಶ ಹೊರಡಿಸಿದ್ದು,ಅದರ ಅಂಗವಾಗಿ ಇಂದು ಈ ಕಾರ್ಯಕ್ರಮ ನಡೆಸಲಾಗಿದೆ ಎಂದು ತಹಸಿಲ್ದಾರ್ ಕೆ.ವಿಜಯಕುಮಾರ ಮಾತನಾಡಿದರು.

ನಗರದ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ಸಾಂಸ್ಕøತಿಕ ನಾಯಕ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾತಿ ಭೇದವಿಲ್ಲದ, ವರ್ಗ ಮತ್ತು ಲಿಂಗ ತಾರತಮ್ಯವಿಲ್ಲದ ಸಮಾಜವನ್ನು ರೂಪಿಸುವ ಕೆಲಸ ಬಸವಣ್ಣನವರ ನೇತೃತ್ವದಲ್ಲಿ 12ನೇ ಶತಮಾನದಲ್ಲೇ ನಡೆಯಿತು.

ಸರಳ ಕನ್ನಡದಲ್ಲಿ ವಚನಗಳ ರಚನೆ ಮಾಡಿ ತಮ್ಮ ಬದುಕಿನ ಸಾರವನ್ನು ತುಂಬಿ ಸಾಮಾನ್ಯರಿಗೂ ಅರ್ಥವಾಗುವಂತೆ ಬರೆದರು. ವಚನಗಳಲ್ಲಿ ವೈಚಾರಿಕತೆ, ಸಮಾನತೆ ಪರಿಕಲ್ಪನೆ, ದೂರದೃಷ್ಟಿ, ಮಾನವೀಯ ಅಂತಃಕರಣ ತುಂಬಿಕೊಂಡಿದೆ ಎಂದರು.

ತಾಪಂ ಇಓ ಬಸವರಾಜ ಸಜ್ಜನ್ ಮಾತನಾಡಿ, ಸಮಾಜದಲ್ಲಿನ ಜಾತಿ, ವರ್ಗಗಳ ವ್ಯವಸ್ಥೆ ವಿರುದ್ಧ ಹೋರಾಟ ನಡೆಸಿದ ಬಸವಣ್ಣನವರು ಎಲ್ಲರಲ್ಲೂ ಸಮಾನತೆಯ ಬೀಜ ಮಂತ್ರವನ್ನು ಜಪಿಸುವಂತೆ ಮಾಡುವ ಮೂಲಕ ಅನುಭವ ಮಂಟಪವನ್ನು ಸ್ಥಾಪಿಸಿ, ಸಾಮಾಜಿಕ ಕ್ರಾಂತಿಯನ್ನು ಹುಟ್ಟು ಹಾಕಿದರು.

ಕಾಯಕವೇ ಕೈಲಾಸ ಎನ್ನುವ ತತ್ವದಲ್ಲಿ ಕಾಯಕ ನಿಷ್ಠೆಗೆ ಪ್ರಾಧಾನ್ಯತೆ ನೀಡಿ ಪ್ರತಿಯೊಬ್ಬರಲ್ಲೂ ವೃತ್ತಿ ಗೌರವ ಬೆಳೆಸಿದ ಕೀರ್ತಿಯೂ ಕಾಯಕ ಯೋಗಿ ಬಸವಣ್ಣನವರಿಗೆ ಸಲ್ಲುತ್ತದೆ. ಅವರು ವಚನ ಸಾಹಿತ್ಯದ ತತ್ವ ಆದರ್ಶಗಳೇ ಜಾತ್ಯತೀತ, ಸಮಾನತೆ ಹಾಗೂ ಸಹಬಾಳ್ವೆ ಎಂದರು.

ಉಪ ಖಜಾನಾಧಿಕಾರಿ ಸಣ್ಣಕೆಪ್ಪ ಉಪನ್ಯಾಸ ನೀಡಿ, ಜÁತಿ ವ್ಯವಸ್ಥೆ ನಿರಾಕರಿಸಿ ಎಲ್ಲರಲ್ಲೂ ಸಮಾನತೆ ಬಯಸಿದ ಮಹಾನ್ ವ್ಯಕ್ತಿ ಬಸವಣ್ಣ. ಅವರು ಜಾತಿ ರಹಿತ ಸಮಾಜ ಕಟ್ಟುವ ಕನಸು ಕಂಡಿದ್ದರು. ಸ್ತ್ರೀ ಸಮಾನತೆ ಅವರ ಆಶಯವಾಗಿತ್ತು. ಸರ್ವರೂ ಸಮಪಾಲು, ಸಮಬಾಳು ಎಂದು ಸಾರಿದರು. ಅವರ ವಚನಗಳಲ್ಲಿ ಅಡಕವಾಗಿರುವ ಚಿಂತನೆ, ತತ್ವ, ಮೌಲ್ಯ, ಸಿದ್ದಾಂತಗಳು ಸಾರ್ವಕಾಲಿಕ ಶ್ರೇಷ್ಠತೆ ಪಡೆದುಕೊಂಡಿವೆ ಎಂದರು. ಮಲ್ಲಿಕಾರ್ಜುನರೆಡ್ಡಿ ಅಮ್ಮಾಪುರ, ನಾಗಭೂಷಣ ಯಾಳಗಿ ಮಾತನಾಡಿದರು.
ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ವೇದಿಕೆಯಲ್ಲಿದ್ದರು.

ಶಾಸಕರ ಆಪ್ತ ಸಹಾಯಕ ಶಿವರಾಜ್ ನಾಯಕ, ಮುಖಂಡರಾದ ಮಲ್ಲಣ್ಣ ಸಾಹು ಮುಧೋಳ, ವೀರೇಶ ನಿಷ್ಠಿ ದೇಶಮುಖ, ಶಿವಶರಣ ಸಾಹು ಹೈಯಾಳ ರುಕ್ಮಾಪುರ, ಮಹೇಶ ಪಾಟೀಲ್, ಡಾ.ಎಂ.ಎಸ್.ಕನಕರಡ್ಡಿ, ಜಗದೀಶ ಪಾಟೀಲ್, ಸಿದ್ದನಗೌಡ ಹೆಬ್ಬಾಳ, ಉದಯಕುಮಾರ,ಶರಣು ಬಳಿ, ಪ್ರಕಾಶ ಬಣಗಾರ, ಗುರುನಾಥರಡ್ಡಿ,ಸಚಿನಕುಮಾರ ನಾಯಕ,ಶಿವಲಿಂಗ ಹಸನಾಪುರ,ತಿಪ್ಪಣ್ಣ ಶೆಳ್ಳಗಿ,ಡಿ.ಬಿ.ಪಾಟೀಲ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಇತರರು ಇದ್ದರು. ರವಿ ನಾಯಕ ಸ್ವಾಗತಿಸಿದರು. ಚನ್ನಬಸ್ಸು ನಿರೂಪಿಸಿ ವಂದಿಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

8 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

8 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

8 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago